Belagavi: ಜಿಲ್ಲೆಯಲ್ಲಿ ಚಿರತೆಗಳ ಚೆಲ್ಲಾಟ, ಜನರಿಗೆ ಪ್ರಾಣ ಸಂಕಟ; ಫಲ ನೀಡದ 7 ದಿನಗಳ ಕಾರ್ಯಾಚರಣೆ

ಹನುಮಾನ ನಗರ, ಜಾಧವ ನಗರ, ಕುವೆಂಪು ನಗರ, ವಿಶ್ವೇಶ್ವರಯ್ಯ ನಗರ, ಸದಾಶಿವ ನಗರದಲ್ಲಿ ಜನ ಓಡಾಡಲು ಭಯ ಪಡುವ ಸ್ಥಿತಿ ನಿರ್ಮಾಣವಾಗಿದೆ. ಇನ್ನೂ ಚಿರತೆ ಭಯದಿಂದ ಗಾಲ್ಪ್ ಕ್ಲಬ್ ಸುತ್ತಮುತ್ತ ಇರೋ 22 ಶಾಲೆಗಳಿಗೆ ಕಳೆದ ನಾಲ್ಕು ದಿನಗಳಿಂದ ರಜೆ ಸಹ ಘೋಷಣೆ ಮಾಡಲಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬೆಳಗಾವಿ ಜಿಲ್ಲೆಯ (Belagavi District) ನಿರಂತರ ಮಳೆ (Rain) ಅಷ್ಟೇ ಅಲ್ಲದೇ ಜನರಿಗೆ ಚಿರತೆಗಳ (Leopard) ಹಾವಳಿ ಸಹ ದೊಡ್ಡ ಸಂಕಟವನ್ನು ತಂದೊಡ್ಡಿದೆ. ಜಿಲ್ಲೆಯಲ್ಲಿ  ಮೂರು ಕಡೆಗಳಲ್ಲಿ ಚಿರತೆ ಪ್ರತ್ಯಕ್ಷವಾಗಿದ್ದು, ಜನರಿಗೆ ಭಯ ಹುಟ್ಟಿಸಿದ್ದು, ಅರಣ್ಯ ಇಲಾಖೆಯ ಸಿಬ್ಬಂದಿ (Forest Department Staff) ಎಷ್ಟೇ ಪ್ರಯತ್ನ ಮಾಡಿದರೂ ಪತ್ತೆ ಆಗಿಲ್ಲ. ಇನ್ನೂ ಬೆಳಗಾವಿ ಜಿಲ್ಲೆಯಲ್ಲಿ ಚಿರತೆ ಹಾವಳಿಯಿಂದ 25 ಶಾಲೆಗಳಿಗೆ ಜಿಲ್ಲಾಡಳಿತ ರಜೆ (School Holiday) ಘೋಷಣೆ ಮಾಡಿದೆ. ನೂರಾರು ಸಿಬ್ಬಂದಿ, 20ಕ್ಕೂ ಹೆಚ್ಚು ಬೋನ್, ಟ್ರ್ಯಾಪ್ ಕ್ಯಾಮೆರಾ ಸೇರಿ ಅನೇಕ ರೀತಿಯಲ್ಲಿ ಪ್ರಯತ್ನ ಮಾಡಿದ್ರು ಚಿರತೆಗಳು ಮಾತ್ರ ಸಿಗುತ್ತಿಲ್ಲ. ಅರಣ್ಯ ಸಚಿವರ ಜಿಲ್ಲೆಯಲ್ಲಿ ಚಿರತೆಗಳು ಅಧಿಕಾರಿಗಳಿಗೆ ಚಳ್ಳೆಹಣ್ಣು ತಿನ್ನುಸುತ್ತಿರೋದು ಪ್ರಾಣ ಸಂಕಟ ತಂದೊಡ್ಡಿದೆ.

ಬೆಳಗಾವಿ ನಗರದ ಜಾಧವ ನಗರದಲ್ಲಿ ಆಗಸ್ಟ್ 5ರಂದು ಮಧ್ಯಾಹ್ನ ಚಿರತೆ ಕಾಣಿಸಿಕೊಂಡಿತ್ತು. ಕಟ್ಟಡ ಕಾರ್ಮಿಕ ಸಿದ್ದರಾಯಿ ಎಂಬವರ ಮೇಲೆ ದಾಳಿ ಮಾಡಿತ್ತು. ಬಳಿಕ ಅಲ್ಲಿಂದ ಗಾಲ್ಫ ಕ್ಲಬ್ ಸೇರಿಕೊಂಡಿದ್ದು, 7 ದಿನಗಳಿಂದ ಚಿರತೆ ಸೆರೆಗೆ ಅರಣ್ಯ ಇಲಾಖೆಯ ಅಧಿಕಾರಿಗಳು ಎಷ್ಟೇ ಪ್ರಯತ್ನ ಮಾಡಿದರೂ ಸಾಧ್ಯವಾಗುತ್ತಿಲ್ಲ.

ಚಿರತೆ ಸೆರೆಗೆ ಹಗಲು ರಾತ್ರಿ ಕಾರ್ಯಚರಣೆ

ಚಿರತೆ ಸೆರೆಗೆ 8 ಬೋನ್, 16 ಟ್ರ್ಯಾಪ್ ಕ್ಯಾಮೆರಾ ಹಾಗೂ ಐವತ್ತು ಹೆಚ್ಚು ಸಿಬ್ಬಂದಿ ಹಗಲು, ರಾತ್ರಿ ಪ್ರಯತ್ನ ಮಾಡುತ್ತಿದ್ದಾರೆ. ಎರಡು ದಿನಗಳ ಹಿಂದೆ ಟ್ರ್ಯಾಪ್ ಕ್ಯಾಮೆರಾದಲ್ಲಿ ಚಿರತೆ ಓಡಾಟದ ಫೋಟೋಗಳು ಸೆರೆಯಾಗಿದ್ದವು. ಇದರ ಜತೆಗೆ ಗಾಲ್ಪ್ ಕ್ಲಬ್​ನ 3 ಕಡೆಗಳಲ್ಲಿ ಡ್ರೋನ್ ಕ್ಯಾಮೆರಾ ಹಾರಿಸಲಾಗಿದ್ದು, ಚಿರತೆ ಪತ್ತೆ ಕಾರ್ಯ ಆಗಿಲ್ಲ.

Leopard not found in Belagavi csb mrq
ಚಿರತೆ ಪತ್ತೆ ಕಾರ್ಯ


ಇದನ್ನೂ ಓದಿ: Hubballi: ಈದ್ಗಾ ಮೈದಾನದಲ್ಲಿ ಗಣೇಶೋತ್ಸವಕ್ಕೆ ಆಗ್ರಹ; ಮತ್ತೆ ವಿವಾದ ಮುನ್ನೆಲೆಗೆ ಸಾಧ್ಯತೆ!

ಬೆಳಗಿನ ವಾಯು ವಿಹಾರಕ್ಕೆ ಬ್ರೇಕ್, 22 ಶಾಲೆಗಳಿಗೆ ರಜೆ

ಬೆಳಗಾವಿ ನಗರದ ಹೃದಯ ಭಾಗವಾಗಿರೋ ಪ್ರದೇಶದಲ್ಲಿ ಚಿರತೆ ಭಯ ಜನರನ್ನು ಬಿಟ್ಟು ಬಿಡದೇ ಕಾಡುತ್ತಿದೆ. ಈ ಹಿನ್ನೆಲೆಯಲ್ಲಿ ಹನುಮಾನ ನಗರ, ಜಾಧವ ನಗರ, ಕುವೆಂಪು ನಗರ, ವಿಶ್ವೇಶ್ವರಯ್ಯ ನಗರ, ಸದಾಶಿವ ನಗರದಲ್ಲಿ ಜನ ಓಡಾಡಲು ಭಯ ಪಡುವ ಸ್ಥಿತಿ ನಿರ್ಮಾಣವಾಗಿದೆ. ಇನ್ನೂ ಚಿರತೆ ಭಯದಿಂದ ಗಾಲ್ಪ್ ಕ್ಲಬ್ ಸುತ್ತಮುತ್ತ ಇರೋ 22 ಶಾಲೆಗಳಿಗೆ ಕಳೆದ ನಾಲ್ಕು ದಿನಗಳಿಂದ ರಜೆ ಸಹ ಘೋಷಣೆ ಮಾಡಲಾಗಿದೆ. ಜನರಿಗೆ ಬೆಳಗ್ಗೆ ವಾಯುವಿಹಾರಕ್ಕೆ ತೆರಳದಂತೆ ಸಹ ಸೂಚನೆ ನೀಡಲಾಗಿದೆ.

ಕರು ಹೊತ್ತೊಯ್ದ ಚಿರತೆ

ಮೂಡಲಗಿ ತಾಲೂಕಿನ ಧರ್ಮಟ್ಟಿ ಗ್ರಾಮದಲ್ಲಿ ಮತ್ತೊಂದು ಚಿರತೆ ಪತ್ತೆಯಾಗಿದ್ದು, ಕರುವನ್ನು ಹೊತ್ತೊಯ್ದ ಘಟನೆ ನಡೆದಿದೆ. ಈ ಭಾಗದಲ್ಲಿ ಆತಂಕ ಸೃಷ್ಠಿಯಾಗಿದ್ದು, ಧರ್ಮಟ್ಟಿ ಗ್ರಾಮದ ಸುತ್ತಮುತ್ತಲಿನ 1 ಕಿ ಮೀ ವ್ಯಾಪ್ತಿಯಲ್ಲಿರೋ 3 ಶಾಲೆಗಳಿಗೆ ಸಹ ರಜೆ ಘೋಷಣೆ ಮಾಡಲಾಗಿದೆ.

15 ದಿನಗಳಿಂದ ಕಾರ್ಯಾಚರಣೆ

ಚಿಕ್ಕೋಡಿ ತಾಲೂಕಿನ ಯಡೂರವಾಡಿ ಗ್ರಾಮದಲ್ಲಿ ಕಳೆದ 15 ದಿನಗಳಿಂದ ಚಿರತೆ ಕಾರ್ಯಾಚಾರಣೆ ಸಾಧ್ಯವಾಗಿಲ್ಲ. ಅರಣ್ಯ ಇಲಾಖೆ ಸಿಬ್ಬಂಧಿ ಅಷ್ಟೇ ಅಲ್ಲದೇ ಜನರಲ್ಲಿಯೂ ಆತಂಕ ಸೃಷ್ಠಿಯಾಗಿದೆ. ಅರಣ್ಯ ಸಚಿವರ ಜಿಲ್ಲೆಯಲ್ಲಿ ಚಿರತೆ ಕಾಟ ಎಲ್ಲರ ನಿದ್ದೆಗೆಡಿಸಿದೆ.

ಇದನ್ನೂ ಓದಿ: Karnataka Anti Corruption Bureau: ಎಸಿಬಿ ರಚನೆ ರದ್ದುಗೊಳಿಸಿದ ಹೈಕೋರ್ಟ್; ಎಲ್ಲ ಭ್ರಷ್ಟಾಚಾರ ಪ್ರಕರಣಗಳೂ ಲೋಕಾಯುಕ್ತಕ್ಕೆ ಶಿಫ್ಟ್

ಮಗನ ಮೇಲೆ ಚಿರತೆ ದಾಳಿಯ ಸುದ್ದಿ ಕೇಳಿ ಹೃದಯಾಘಾತದಿಂದ ತಾಯಿ ಸಾವು

ಮಗನ ಮೇಲೆ ಚಿರತೆ ದಾಳಿ ಸುದ್ದಿಯನ್ನು ಕೇಳಿ ಹೃದಯಾಘಾತದಿಂದ ತಾಯಿ ಸಾವನ್ನಪ್ಪಿದ ಹೃದಯ ವಿದ್ರಾವಕ ಘಟನೆಯೂ ನಡೆದಿದೆ. ಇಂದು ಮಧ್ಯಾಹ್ನ ಜಾಧವ್ ನಗರದಲ್ಲಿ ಕಟ್ಟಡ ಕಾರ್ಮಿಕನ ಮೇಲೆ ಚಿರತೆ ದಾಳಿ ಮಾಡಿತ್ತು‌. ಚಿರತೆ ದಾಳಿಯಿಂದ ಸಿದರಾಯಿ ಮಿರಜಕರ್‌ಗೆ ಸಣ್ಣಪುಟ್ಟ ಗಾಯ ಆಗಿತ್ತು.

Leopard not found in Belagavi csb mrq
ಕ್ಯಾಮೆರಾದಲ್ಲಿ ಸೆರೆಯಾದ ಚಿರತೆ


ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ವಾಪಸ್ ಆಗುತ್ತಿದ್ದಾಗ ಮಗ ಸಿದರಾಯಿ ಮೇಲೆ ಚಿರತೆ ದಾಳಿಯ ಸುದ್ದಿಯನ್ನು ಕೇಳಿ ಸಿದರಾಯಿ ತಾಯಿ ಶಾಂತಾ ಮಿರಜಕರ್(65) ಸ್ಥಳದಲ್ಲೇ ಸಾವನ್ನಪ್ಪಿದ್ದರು.
Published by:Mahmadrafik K
First published: