• Home
  • »
  • News
  • »
  • state
  • »
  • Leopard Attack: ರಸ್ತೆಯಲ್ಲಿ ಸಿಕ್ಕ ಸಿಕ್ಕವರ ಮೇಲೆ ಚಿರತೆ ದಾಳಿ! ಇಲ್ಲಿದೆ ಭಯಾನಕ ವಿಡಿಯೋ

Leopard Attack: ರಸ್ತೆಯಲ್ಲಿ ಸಿಕ್ಕ ಸಿಕ್ಕವರ ಮೇಲೆ ಚಿರತೆ ದಾಳಿ! ಇಲ್ಲಿದೆ ಭಯಾನಕ ವಿಡಿಯೋ

ಚಿರತೆ ದಾಳಿ

ಚಿರತೆ ದಾಳಿ

ಬೈಕ್ ಮೇಲೆ ಹೋಗುತ್ತಿದ್ದ ವ್ಯಕ್ತಿಯ ಮೇಲೆ ಚಿರತೆ ದಾಳಿ ನಡೆಸಿದೆ. ಪರಿಣಾಮ ಚಿರತೆ ದಾಳಿಯಿಂದ ಬೈಕ್ ಮೇಲಿಂದ ಬಿದ್ದ ಸವಾರನಿಗೆ ಸಣ್ಣುಪುಟ್ಟ ಗಾಯಗಳಾಗಿವೆ.

  • News18 Kannada
  • Last Updated :
  • Karnataka, India
  • Share this:

ಮೈಸೂರು (ನ.05 ): ಕಾಡಿನಿಂದ ಪ್ರಾಣಿಗಳು (Wild Animal) ನಾಡಿಗೆ ಬಂದ್ರೆ ಏನೆಲ್ಲಾ ಅವಾಂತರವಾಗುತ್ತೆ ನೋಡಿ, ಕೆ. ಆರ್ ನಗರದಲ್ಲಿ(K.R Nagar) ಆಹಾರವನ್ನು ಅರಸಿ ಕಾಡಿನಿಂದ ನಾಡಿಗೆ ಬಂದ ಚಿರತೆಯೊಂದು ಸಿಕ್ಕ ಸಿಕ್ಕವರ ಮೇಲೆ  ದಾಳಿ ಮಾಡಿದೆ. ಮೈಸೂರು ಜಿಲ್ಲೆಯ ಕೆ.ಆರ್ ನಗರ ತಾಲೂಕಿನ ಕನಕ ಗ್ರಾಮದಲ್ಲಿ (Kanaka Village) ಈ ಘಟನೆ ನಡೆದಿದೆ. ಕೆ.ಆರ್‌ ನಗರದಿಂದ ಮುಳ್ಳೂರಿಗೆ ಹೋಗುವ ರಸ್ತೆಯಲ್ಲಿ ಚಿರತೆ (Leopard) ಪ್ರತ್ಯಕ್ಷವಾಗಿದ್ದು, ಮನೆ ಮೇಲೆ ಹತ್ತಲು ಯತ್ನಿಸಿದೆ ಬಳಿಕ ರಸ್ತೆಯಲ್ಲಿ ಕಂಡ ಕಂಡವರ ಮೇಲೆ ದಾಳಿ ಮಾಡಿದೆ. ನಾಯಿ, ಬೈಕ್‌ ಸವಾರ (Bike Rider) ಹಾಗೂ ಅರಣ್ಯ ಇಲಾಖೆ (Forest Department) ಸಿಬ್ಬಂದಿ ಮೇಲೆ ಚಿರತೆ ದಾಳಿ ಮಾಡಿದೆ.


ಹಲ್ಲೆ ದೃಶ್ಯ ಮೊಬೈಲ್​ನಲ್ಲಿ ಸೆರೆ


ಕೆ ಆರ್​ ನಗರದಲ್ಲಿ ಚಿರತೆ ಕಂಡಕಂಡವರ ಮೇಲೆ ದಾಳಿ ನಡೆಸಿದೆ. ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ವಾಹನ ಸವಾರನೊಬ್ಬನಿಗೆ ಗಾಯಗಳಾಗಿವೆ. ಚಿರತೆ ದಾಳಿ ಮಾಡುತ್ತಿರುವ ದೃಶ್ಯವನ್ನು ಸ್ಥಳೀಯರು ತಮ್ಮ ಮೊಬೈಲ್‍ನಲ್ಲಿ ಸೆರೆ ಹಿಡಿದಿದ್ದಾರೆ.


ಚಿರತೆ ಕಂಡು ಭಯಭೀತರಾದ ಜನ


ಗುರುವಾರ (ನ.05) ರಾತ್ರಿಯೇ ಕೆ.ಆರ್ ನಗರಕ್ಕೆ ಚಿರತೆ  ಬಂದಿದೆ. ರಸ್ತೆ ಮಧ್ಯೆ ಕುಳಿತುಕೊಂಡಿದ್ದ ಚಿರತೆಯನ್ನು ಕಂಡು ಸ್ಥಳೀಯರು ಭಯಭೀತರಾಗಿದ್ದರು. ಶುಕ್ರವಾರ ಮತ್ತೆ ಕಾಣಿಸಿಕೊಂಡ ಚಿರತೆ ಸುತ್ತಮುತ್ತಲ ಪ್ರದೇಶಗಳಲ್ಲಿ ಓಡಾಡಿ ಸಿಕ್ಕ ಸಿಕ್ಕವರ ಮೇಲೆ ದಾಳಿ ನಡೆಸಿದೆ.


ಬೈಕ್​ನಲ್ಲಿ ಹೋಗ್ತಿದ್ದ ವ್ಯಕ್ತಿಯ ಮೇಲೆ ಚಿರತೆ ದಾಳಿ


ಬೈಕ್ ಮೇಲೆ ಹೋಗುತ್ತಿದ್ದ ವ್ಯಕ್ತಿಯ ಮೇಲೆ ಚಿರತೆ ದಾಳಿ ನಡೆಸಿದೆ. ಪರಿಣಾಮ ಚಿರತೆ ದಾಳಿಯಿಂದ ಬೈಕ್ ಮೇಲಿಂದ ಬಿದ್ದ ಸವಾರನಿಗೆ ಸಣ್ಣುಪುಟ್ಟ ಗಾಯಗಳಾಗಿವೆ. ಇದೇ ವೇಳೆ ಸ್ಥಳಕ್ಕೆ ಬಂದಿದ್ದ ಅರಣ್ಯ ಸಿಬ್ಬಂದಿಯ ಮೇಲೂ ಚಿರತೆ ದಾಳಿ ನಡೆಸಿ ಗಾಯಗೊಳಿಸಿದೆ.


ಇದನ್ನೂ ಓದಿ: JDS Party: ವಿಧಾನಸಭೆ ಚುನಾವಣೆಗೆ ಜೆಡಿಎಸ್​ ರಣತಂತ್ರ, ಅಭ್ಯರ್ಥಿಗಳಿಗೆ ರಹಸ್ಯ ಸ್ಥಳದಲ್ಲಿ ತರಬೇತಿ!


ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಚಿರತೆ ಸೆರೆ ಹಿಡಿಯಲು ಕಾರ್ಯಾಚರಣೆ ನಡೆಸಿತು. ಸತತ 3 ಗಂಟೆಗಳ ಕಾರ್ಯಾಚರಣೆ ನಡೆಸಿದ ಅರಣ್ಯ ಸಿಬ್ಬಂದಿ ಕೊನೆಗೂ ಚಿರತೆ ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.



ಇದನ್ನೂ ಓದಿ: JDS Party: ವಿಧಾನಸಭೆ ಚುನಾವಣೆಗೆ ಜೆಡಿಎಸ್​ ರಣತಂತ್ರ, ಅಭ್ಯರ್ಥಿಗಳಿಗೆ ರಹಸ್ಯ ಸ್ಥಳದಲ್ಲಿ ತರಬೇತಿ!


ಮೈಸೂರು ಮೃಗಾಲಯದಲ್ಲಿ ಚಿರತೆಗೆ ಚಿಕಿತ್ಸೆ


ಸತತ 3 ಗಂಟೆಗಳ ಕಾರ್ಯಾಚರಣೆ ನಡೆಸಿದ ಅರಣ್ಯ ಸಿಬ್ಬಂದಿಗೆ ಅರವಳಿಕೆ ನೀಡಲು ಚಿರತೆ ಗುರಿಗೆ ಸಿಗದೆ ಅಡ್ಡಾಡಿಸಿತು. ಕೊನೆಗೆ‌ ಬಲೆ ಬೀಸಿ ಚಿರತೆ ಸೆರೆ ಹಿಡಿದಿದ್ದಾರೆ. ಚಿರತೆಯನ್ನು ಮೈಸೂರು ಮೃಗಾಲಯದ ಕಡೆಗೆ ರವಾನೆ ಮಾಡಲಾಗಿದೆ. ಚಿರತೆಗೆ ಸಣ್ಣಪುಟ್ಟ ಗಾಯಗಳಾಗಿರುವ ಹಿನ್ನೆಲೆ ಚಿಕಿತ್ಸೆ ಬಳಿಕ ಅರಣ್ಯಕ್ಕೆ ಬಿಡಲಿರುವ ಅರಣ್ಯ ಇಲಾಖೆ ನಿರ್ಧರಿಸಿದೆ.

Published by:ಪಾವನ ಎಚ್ ಎಸ್
First published: