• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Leopard Attack: ಕಬ್ಬಿನ ಗದ್ದೆಗೆ ತೆರಳುತ್ತಿದ್ದ ರೈತನ ಮೇಲೆ ಚಿರತೆ ದಾಳಿ; 15 ನಿಮಿಷ ಹೋರಾಡಿ ಪ್ರಾಣ ಉಳಿಸಿಕೊಂಡ ವ್ಯಕ್ತಿ

Leopard Attack: ಕಬ್ಬಿನ ಗದ್ದೆಗೆ ತೆರಳುತ್ತಿದ್ದ ರೈತನ ಮೇಲೆ ಚಿರತೆ ದಾಳಿ; 15 ನಿಮಿಷ ಹೋರಾಡಿ ಪ್ರಾಣ ಉಳಿಸಿಕೊಂಡ ವ್ಯಕ್ತಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಸುಮಾರು 15 ನಿಮಿಷಗಳ ಕಾಲ ಚಿರತೆ ಹೋರಾಡಿ ರೈತ ಜಗದೀಶ್ ಪ್ರಾಣ ಉಳಿಸಿಕೊಂಡಿದ್ದಾರೆ. ಸದ್ಯ ಜಗದೀಶ್ ಗಂಭೀರವಾಗಿ ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಯಲ್ಲಿ (Private Hospital) ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ

  • Share this:

ಕಬ್ಬಿನ ಗದ್ದೆಗೆ ತೆರಳಿದ್ದ ರೈತನ ಮೇಲೆ ಚಿರತೆ ದಾಳಿ (Leopard Attack) ಮಾಡಿರುವ ಘಟನೆ ಮಂಡ್ಯ (Mandya) ಜಿಲ್ಲೆಯ ಮದ್ದೂರು ತಾಲೂಕಿನ ಹೆಚ್.ಹೊಸರು (H Hosaru, Madduru) ಗ್ರಾಮದಲ್ಲಿ ನಡೆದಿದೆ. ರೈತ (Farmer) ಜಗದೀಶ್ ಮೇಲೆ ಚಿರತೆ ದಾಳಿ ನಡೆದಿದೆ. ಜಗದೀಶ್ ಅವರು ಬೈಕ್ ನಲ್ಲಿ ತೆರಳುತ್ತಿದ್ದಾಗ ಹಿಂದಿನಿಂದ ಬಂದು ಚಿರತೆ ದಾಳಿ ನಡೆಸಿದೆ. ಸುಮಾರು 15 ನಿಮಿಷಗಳ ಕಾಲ ಚಿರತೆ ಹೋರಾಡಿ ರೈತ ಜಗದೀಶ್ ಪ್ರಾಣ ಉಳಿಸಿಕೊಂಡಿದ್ದಾರೆ. ಸದ್ಯ ಜಗದೀಶ್ ಗಂಭೀರವಾಗಿ ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಯಲ್ಲಿ (Private Hospital) ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಕಳೆದ ಮೂರು ದಿನಗಳಿಂದ ಮದ್ದೂರು ತಾಲೂಕಿನ ಹೊಸಳ್ಳಿ, ಕೆಂಬೂತನಗೆರೆ ಭಾಗದಲ್ಲಿ ಚಿರತೆ ಕಾಣಿಸಿಕೊಂಡಿದೆ ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ. ಅಧಿಕಾರಿಗಳು ಬೋನ್ ಇರಿಸಿ ಚಿರತೆ ಸೆರೆ ಹಿಡಿಯುವಂತೆ ಆಗ್ರಹಿಸಿದ್ದಾರೆ.


ತಂದೆ ತಾಯಿಯನ್ನು ಕಳೆದುಕೊಂಡ ಅನಾಥ ಕಳ್ಳನಾದ ಕಥೆ ಇದು..!


ಮಂಗಳೂರಿನಿಂದ‌ ಬೆಂಗಳೂರಿಗೆ ಬಂದು ಕಳ್ಳನಾಗಿದ್ದವ ಅಂದರ್ ಆಗಿದ್ದಾನೆ. ಬಸವನಗುಡಿ ಪೊಲೀಸರು ಮೊಹಮದ್ ಸಾದಿಕ್‌ (31) ಎಂಬಾತನನ್ನು ಬಂಧಿಸಿದ್ದಾರೆ. 18 ವರ್ಷಗಳ ಹಿಂದೆ ಸಾದಿಕ್ ತಂದೆ ತಾಯಿ ತೀರಿಕೊಂಡಿದ್ರು. ಆಗ ಮಂಗಳೂರಿನಿಂದ‌ ಬೆಂಗಳೂರಿಗೆ ಕೆಲಸ ಅರಸಿ ಬಂದು, ಸಿಟಿ ಮಾರ್ಕೆಟ್ ನ ನಂದಿನಿ ಹೋಟೆಲ್ ನಲ್ಲಿ ಕ್ಲೀನಿಂಗ್ ಕೆಲಸಕ್ಕೆ ಸೇರಿದ್ದನು.


ಹೋಟೆಲ್ ಬರೋ ಹೈಪೈ ಜನರನ್ನು ನೋಡಿ ತಾನೂ ಹಾಗೆ ಆಗಬೇಕು ಅಂತ ಸಾದಿಕ್ ಆಸೆಪಟ್ಟಿದ್ದನು. ಅದ್ರಂತೆ ರಾತ್ರಿ ವೇಳೆ ಮನೆಕಳ್ಳತನ ಮಾಡಲು ಶುರು ಮಾಡಿದ್ದನು. ಮೊದಲಿಗೆ ಒಂದೆರಡು ಮನೆ ಸಕ್ಸಸ್ ಕಂಡು ಮನೆಕಳ್ಳತನವನ್ನೇ ಖಾಯಂ ಕೆಲಸ‌ ಮಾಡಿಕೊಂಡಿದ್ದನು.


ಇದನ್ನೂ ಓದಿ:  Anubhava Mantapa: ಯಾವ ಆಧಾರದಲ್ಲಿ ಲಿಂಗಾಯತರು ಮುಸ್ಲಿಂರು ಅಣ್ತಮ್ಮಂದಿರು ಅಂತಾ ಹೇಳಿದ್ದರಿ? ಶ್ರೀರಾಮಸೇನೆ ರಾಜ್ಯಾಧ್ಯಕ್ಷ ಪ್ರಶ್ನೆ


ನಾಲ್ಕೈದು ಬಾರಿ ಜೈಲು ಕಂಡಿರುವ ಸಾದಿಕ್


ಬಂಧಿತ ಕಳ್ಳ ಸಾಧಿಕ್ ಇದುವರೆಗೂ ನಾಲ್ಕೈದು ಬಾರಿ ಜೈಲಿಗೆ ಹೋಗಿ ಬಂದಿದ್ದಾನೆ. ಈ ಹಿಂದೆ ಕುಮಾರಸ್ವಾಮಿ ಲೇ ಔಟ್, ಕೆ.ಆರ್ ಮಾರುಕಟ್ಟೆ, ಬನಶಂಕರಿ ಹಾಗೂ ಬಸವನಗುಡಿ ಪೊಲೀಸರು ಬಂಧಿಸಿದ್ದರು. ಈ‌ಗ‌ ಮತ್ತೆ ಬಸವನಗುಡಿ ಪೊಲೀಸರ ಕೈಗೆ ತಗ್ಲಾಕ್ಕೊಂಡಿದ್ದಾನೆ. ಎರಡು ದಿನಗಳ ಹಿಂದೆ ರೆಜೆನ್ಸಿ ಅಪಾರ್ಟ್ಮೆಂಟ್ ನ ಫ್ಲಾಟ್ ನಲ್ಲಿ ಕಳ್ಳತನ ಪ್ರಕರಣದಲ್ಲಿ ಸಾದಿಕ್ ನನ್ನು ಬಂಧಿಸಲಾಗಿದೆ.


ಸಾದಿಕ್ 18 ಲಕ್ಷ ಮೌಲ್ಯದ ಚಿನ್ನ, ಬೆಳ್ಳಿ, ದೋಚಿ ಎಸ್ಕೇಪ್ ಆಗಿದ್ದನು. ಸದ್ಯ ಆರೋಪಿಯನ್ನು ಬಂಧಿಸಿರುವ ಬಸವನಗುಡಿ ಪೊಲೀಸರು ಆತನನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.


ಅಂಬೇಡ್ಕರ್ ಕಂಚಿನ ಪುತ್ಥಳಿ ಅನಾವರಣ


ಸಂವಿಧಾನ ಶಿಲ್ಪಿ ಡಾ ಬಿ ಆರ್ ಅಂಬೇಡ್ಕರ್ ರ ಕಂಚಿನ ಪುತ್ಥಳಿಯನ್ನು ರಾಜ್ಯಪಾಲ ಥಾವರ್ ಚೆಂದ್ ಗೆಹ್ಲೋಟ್ ಅವರು ಅನಾವರಣ ಮಾಡಿದರು. ರಾಜಭವನದಲ್ಲಿ ನೂತನವಾಗಿ ಅಂಬೇಡ್ಕರ್ ಅವರ ಕಂಚಿನ ಪುತ್ಥಳಿ ಪ್ರತಿಷ್ಠಾಪಿಸಲಾಗಿದೆ.


ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಗೃಹ ಸಚಿವರಾದ ಆರಗ ಜ್ಞಾನೇಂದ್ರ, ಹಂಗಾಮಿ ಸಭಾಪತಿ ರಘುನಾಥರಾವ್ ಮಲ್ಕಾಪುರೆ, ರಾಜ್ಯ ಸರ್ಕಾರದ ನಿಯೋಜಿತ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ, ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಮಂಜುನಾಥ ಪ್ರಸಾದ್,  ಲೋಕೋಪಯೋಗಿ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಅನಿಲ್ ಕುಮಾರ್  ಮತ್ತು ಇತರರು ಉಪಸ್ಥಿತರಿದ್ದರು.


ಇದನ್ನೂ ಓದಿ:  Nayanthara: ಪೆ ಪೆ ಪೆ - ಡುಂ ಡುಂ! ಶೀಘ್ರದಲ್ಲೇ ಹಸೆಮಣೆ ಏರ್ತಿದ್ದಾರೆ ಲೇಡಿ ಸೂಪರ್​ಸ್ಟಾರ್, ಮದುವೆ ದಿನಾಂಕ ಕೂಡ ಫಿಕ್ಸ್


ರಾಜ್ಯಸಭೆಗೆ ಕಾಂಗ್ರೆಸ್ ನಿಂದ ಎರಡನೇ ಅಭ್ಯರ್ಥಿ


ರಾಜ್ಯಸಭೆಗೆ ಕಾಂಗ್ರೆಸ್ ನಿಂದ ಎರಡನೇ ಅಭ್ಯರ್ಥಿಯಾಗಿ ಮನ್ಸೂರ್ ಅಲಿ ಖಾನ್ ಅವರ ಹೆಸರನ್ನು ಅಂತಿಮಗೊಳಿಸಿದೆ. ಕುಪೇಂದ್ರ ಅವರು ಬೆಂಬಲಕ್ಕೆ ಸಿದ್ದರಾಮಯ್ಯ ವಿರೋಧ ವ್ಯಕ್ತವಾದ ಹಿನ್ನೆಲೆ ಮನ್ಸೂರ್ ಅಲಿ ಖಾನ್ ಅವರಿಗೆ ಟಿಕೆಟ್ ನೀಡಲಿದೆ. ಇತ್ತ ನಿರ್ಮಲಾ ಸೀತಾರಾಮನ್, ಜಗ್ಗೇಶ್ ಇಂದು ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ.

Published by:Mahmadrafik K
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು