Chamundeshwari: ಆಷಾಢದಲ್ಲಿ ಚಾಮುಂಡೇಶ್ವರಿಗೆ ನಿಂಬೆಹಣ್ಣಿನ ದೀಪ ಹಚ್ಚೋದ್ಯಾಕೆ? ಏನಿದರ ವಿಶೇಷತೆ?

ಈಶ್ವರ ಅಭಿಷೇಕ ಪ್ರಿಯನಾದರೆ, ವಿಷ್ಣು ಅಲಂಕಾರ ಪ್ರಿಯ ಆದೇ ರೀತಿ ಚಾಮುಂಡೇಶ್ವರಿ ಸ್ತೋತ್ರ ಪ್ರಿಯಳಾಗಿದ್ದಾಳೆ. ಆಷಾಢ ಮಾಸದಲ್ಲಿ ದೇವಿಯನ್ನ ಸ್ಮರಿಸಿ ಸ್ತೋತ್ರ ಹೇಳಿದರೆ ಕರುಣೆ ತೋರುತ್ತಾಳೆ ಮತ್ತು ಅರಸುತ್ತಾಳೆ ಎಂಬ ನಂಬಿಕೆಯಿದೆ.

ನಿಂಬೆಹಣ್ಣಿನ ದೀಪ

ನಿಂಬೆಹಣ್ಣಿನ ದೀಪ

  • Share this:
ಚಾಮರಾಜನಗರ (ಜು. 1): ಆಷಾಢ ಮಾಸದಲ್ಲಿ (Ashada Masa) ಶುಭ ಕಾರ್ಯಗಳು ನಿಷಿದ್ಧ. ಆದರೆ ದೇವತೆಗಳಿಗೆ ಇದು ಪ್ರಿಯವಾದ ಮಾಸ ಎಂಬ ನಂಬಿಕೆಯಿದೆ. ಅದರಲ್ಲೀ  ಆಷಾಢ ಶುಕ್ರವಾರಗಳಂದು ದೇವತೆಗಳಿಗೆ ಪ್ರಿಯವಾದ ನಿಂಬೆ ಹಣ್ಣಿನ  ದೀಪದಿಂದ (Lemon Light) ಆರತಿ ಬೆಳಗಿದರೆ ಮುತ್ತೈದೆ ಸ್ಥಾನ ಗಟ್ಟಿಯಾಗಿರುತ್ತದೆ. ಅಲ್ಲದೆ ಅವಿವಾಹಿತ ಹೆಣ್ಣು ಮಕ್ಕಳಿಗೆ (Women) ಕಂಕಣ ಭಾಗ್ಯ ಕೂಡಿ ಬರುತ್ತದೆ ಸಕಲ ಇಷ್ಟಾರ್ಥಗಳು ಸಿದ್ದಿಸುತ್ತವೆ ಎಂಬ ನಂಬಿಕೆಯಿದೆ. ಹಾಗಾಗಿಯೆ ಆಷಾಢ ಶುಕ್ರವಾರಗಳಂದು  ಚಾಮುಂಡೇಶ್ವರಿ (Chamundeshwari) , ಕಾಳಿಕಾಂಬ, ದುರ್ಗೆ ಸೇರಿದಂತೆ ಶಕ್ತಿದೇವತೆಗಳ ದೇವಾಲಯಗಳಲ್ಲಿ ಮಹಿಳೆಯರು ನಿಂಬೆ ಹಣ್ಣಿನ ದೀಪ ತಯಾರಿಸಿ  ಪೂಜೆ ಸಲ್ಲಿಸುವ ದೃಶ್ಯ ಸಾಮಾನ್ಯವಾಗಿರುತ್ತದೆ.

ದೇವಸ್ಥಾನಗಳಲ್ಲಿ ಆಷಾಢ ಪೂಜೆ

ಆಷಾಢ ಶುಕ್ರವಾರ ಬಂತೆಂದೆರೆ ಚಾಮುಂಡೇಶ್ವರಿ ಸೇರಿದಂತೆ ವಿವಿಧ ದೇವಾಲಯಗಳಲ್ಲಿ  ವಿಶೇ಼ಷ ಪೂಜೆ ಪುನಸ್ಕಾರಗಳು ನಡೆಯುತ್ತವೆ. ಪ್ರತಿ ವರ್ಷ ಆಷಾಡ ಮಾಸದ ಪ್ರತಿ ಶುಕ್ರುವಾರ ಮಹಿಳೆಯರು ನಿಂಬೆ ಹಣ್ಣಿನಿಂದ ದೀಪ ತಯಾರಿಸಿ ಚಾಮುಂಡೇಶ್ವರಿಗೆ ಆರತಿ ಮಾಡುವುದು ಸಾಮಾನ್ಯವಾಗಿದೆ. ದೇವತೆಗಳಿಗೆ ಪ್ರಿಯವಾದ ನಿಂಬೆ ಹಣ್ಣಿನ ದೀಪದಿಂದ ಪೂಜೆ ಸಲ್ಲಿಸಿದರೆ ಸಕಲ ಇಷ್ಟಾರ್ಥಗಳು ಸಿದ್ದಿಸುತ್ತವೆ ಎಂಬ ನಂಬಿಕೆ ಇದೆ.

ಇದನ್ನೂ ಓದಿ:  Karwar: ಮತ್ತೆ ಕಾರವಾರದಲ್ಲಿ ಕೊಂಕಣಿ, ಕನ್ನಡ ಭಾಷಾ ವಿವಾದ; ನಗರಸಭೆಯಲ್ಲಿ ಮಾತಿನ‌ ಚಕಮಕಿ

ವಿವಾಹಿತ ಮಹಿಳೆಯರು ತಮ್ಮ ಮುತ್ತೈದೆ ಭಾಗ್ಯ ದೀರ್ಘಕಾಲ ಉಳಿಯಲಿ ಎಂದು ನಿಂಬೆ ಹಣ್ಣಿನ ದೀಪದ ಆರತಿ ಮಾಡಿದರೆ, ಯುವತಿಯರು ಆದಷ್ಟು ಬೇಗ ಕಂಕಣಭಾಗ್ಯ ಕೂಡಿ ಬರಲಿ ಎಂದು ಭಕ್ತಿಯಿಂದ ಪೂಜೆ ಸಲ್ಲಿಸುತ್ತಾರೆ. ಇನ್ನೂ ಕೆಲವರು ತಮ್ಮ ಕುಟುಂಬದ ಶ್ರೇಯೋಭಿವೃದ್ಧಿಗೆ ಪ್ರಾರ್ಥಿಸುತ್ತಾರೆ.

ಚಾಮುಂಡೇಶ್ವರಿ ಸ್ತೋತ್ರ ಪ್ರಿಯಳಾಗಿದ್ದಾಳೆ

ಈಶ್ವರ ಅಭಿಷೇಕ ಪ್ರಿಯನಾದರೆ, ವಿಷ್ಣು ಅಲಂಕಾರ ಪ್ರಿಯ ಆದೇ ರೀತಿ ಚಾಮುಂಡೇಶ್ವರಿ ಸ್ತೋತ್ರ ಪ್ರಿಯಳಾಗಿದ್ದಾಳೆ. ಆಷಾಡ ಮಾಸದಲ್ಲಿ ದೇವಿಯನ್ನ ಸ್ಮರಿಸಿ ಸ್ತೋತ್ರ ಹೇಳಿದರೆ ಕರುಣೆ ತೋರುತ್ತಾಳೆ ಮತ್ತು ಅರಸುತ್ತಾಳೆ ಎಂಬ ನಂಬಿಕೆಯಿದೆ . ಈ ಹಿನ್ನೆಲೆಯಲ್ಲಿ ಚಾಮುಂಡೇಶ್ವರಿ ದೇವಾಲಯಕ್ಕೆ  ಮಹಿಳೆಯರು ಆಗಮಿಸಿ ಸ್ತೋತ್ರ ಪಠಿಸಿ, ಇಷ್ಟಾರ್ಥ ಈಡೇರಲಿ ಎಂದು ನಿಂಬೆಹಣ್ಣಿನ ಆರತಿ ಮಾಡುತ್ತಾರೆ. ಇನ್ನೂ ಕೆಲವರು ಸೇಬು, ನಿಂಬೆ, ಕಿತ್ತಳೆ ಸೇರಿದಂತೆ ವಿವಿಧ ಬಗೆಯ ಹಣ್ಣಿನ ಹಾರ ತಯಾರಿಸಿ ದೇವರಿಗೆ ಆರ್ಪಿಸುತ್ತಾರೆ.

ದೀಪದಿಂದ ಆರತಿ ಮಾಡಿದರೆ ಸಂಕಲ್ಪ ಈಡೇರುತ್ತದೆ

ನಿಂಬೆಹಣ್ಣನ್ನು ಜಂಭೀರ ಫಲ  ಎಂದೂ ಕರೆಯುತ್ತಾರೆ. ನಿಂಬೆಹಣ್ಣಿಗೆ ಆಕರ್ಷಣಾ ಶಕ್ತಿ ಹೆಚ್ಚಾಗಿರುತ್ತದೆ ಇದರ ರಸವನ್ನು ದೇವರ ಅಭಿಷೇಕಕ್ಕೆ ಬಳಸುತ್ತಾರೆ. ನಿಂಬೆಹಣ್ಣನ್ನು ಕೊಟ್ಟು ಅತಿಥಿಗಳನ್ನು ಬರಮಾಡಿಕೊಳ್ಳುತ್ತಾರೆ,  ಅಂಗಡಿ ಮುಂಗಟ್ಟುಗಳಿಗೆ ದೃಷ್ಟಿ ಆಗದಿರಲಿ ಎಂದು ಅಂಗಡಿಗಳ ಮುಂದೆ ನಿಂಬೆಹಣ್ಣು ಕಟ್ಟುತ್ತಾರೆ, ವ್ಯಾಪಾರ ವೃದ್ಧಿಯಾಗಿಲಿ ಎಂದು ನಿಂಬೆ ಹಣ್ಣನ್ನು ಅಂಗಡಿಗಳ ಗಲ್ಲಾಪೆಟ್ಟಿಗೆಯಲ್ಲಿ ಇಡುತ್ತಾರೆ. ನಿಂಬೆಹಣ್ಣನ್ನು ದೇವರ ಪಾದಕ್ಕೆ ಹಿಂಡಿ ಅದರೆ ಸಿಪ್ಪೆಯಿಂದ ದೀಪ ತಯಾರಿಸಿ ಅದರಿಂದ ಆರತಿ ಮಾಡಿದರೆ ದೇವಿ ಕಣ್ಣುಬಿಟ್ಟು ನೋಡುತ್ತಾಳೆ ಎಂಬ ನಂಬಿಕೆ ಇದೆ ಹೀಗೆ ನಿಂಬೆಹಣ್ಣಿನ ದೀಪದಿಂದ ಆರತಿ ಮಾಡಿದರೆ ಮನಸ್ಸಿನ ಸಂಕಲ್ಪ ಈಡೇರುತ್ತದೆ ಎನ್ನುತ್ತಾರೆ ಚಾಮರಾಜನಗರದ ಜನಾರ್ಧನಸ್ವಾಮಿ  ದೇವಾಲಯದ ಅರ್ಚಕ ಅನಂತಪ್ರಸಾದ್.

ಇದನ್ನೂ ಓದಿ: Lakshmi Blessings: ಲಕ್ಷ್ಮಿ ಆರಾಧನೆ ಮಾಡದಿದ್ರೂ ಈ ರಾಶಿಯವರ ಮೇಲಿರತ್ತೆ ಆಶೀರ್ವಾದ

ಈ ವರ್ಷದ ಮೊದಲ ಆಷಾಡ ಶುಕ್ರವಾರವಾದ ಇಂದು ಶಕ್ತಿದೇವತೆಗಳ ದೇವಾಲಯಗಳಲ್ಲಿ  ಭಕ್ತರ ದಂಡೆ ನೆರೆದಿತ್ತು. ದೇವಾಲಯದ ಅಂಗಳದ ತುಂಬಾ ಮಹಿಳೆಯರು ನಿಂಬೆ ಹಣ್ಣಿನಿಂದ ದೀಪ ತಯಾರಿಸಿ ದೇವಿಗೆ ಆರತಿ ಬೆಳಗುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು

ಎಸ್.ಎಂ.ನಂದೀಶ್ ನ್ಯೂಸ್ 18 ಕನ್ನಡ ಚಾಮರಾಜನಗರ
Published by:Mahmadrafik K
First published: