HOME » NEWS » State » LEKHAKAR KATTE IS ATTRACTING PLACE OF KANNADA SAHITYA SAMMELANA HK

ಕನ್ನಡ  ಸಾಹಿತ್ಯ ಸಮ್ಮೇಳನದಲ್ಲಿ ಗಮನ ಸೆಳೆಯುತ್ತಿರುವ ಲೇಖಕರ ಕಟ್ಟೆ 

ಇದೇ ಪ್ರಥಮ ಬಾರಿಗೆ ಅಸ್ತಿತ್ವಕ್ಕೆ ತರಲಾಗಿರುವ ಲೇಖಕರ ಕಟ್ಟೆಯಲ್ಲಿ ಸಾಹಿತ್ಯ, ಕನ್ನಡ ಭಾಷೆ ಉಳಿವು ಇತ್ಯಾದಿಗಳ ಕುರಿತು ಬಿಸಿ ಬಿಸಿ ಚರ್ಚೆ ನಡೆಯಿತು. ಸಮ್ಮೇಳನದ ಸರ್ವಾಧ್ಯಕ್ಷ ಡಾ.ಎಚ್.ಎಸ್.ವೆಂಕಟೇಶಮೂರ್ತಿ ಲೇಖಕರ ಕಟ್ಟೆಯಲ್ಲಿ ಕುಳಿತು ಓದುಗರು, ಯುವ ಸಾಹಿತಿಗಳು, ವಿದ್ಯಾರ್ಥಿಗಳ ಜೊತೆ ಬೆರೆತರು.

news18-kannada
Updated:February 6, 2020, 9:20 PM IST
ಕನ್ನಡ  ಸಾಹಿತ್ಯ ಸಮ್ಮೇಳನದಲ್ಲಿ ಗಮನ ಸೆಳೆಯುತ್ತಿರುವ ಲೇಖಕರ ಕಟ್ಟೆ 
ಓದುಗರು, ಯುವಕರೊಂದಿಗೆ ಚರ್ಚೆಯಲ್ಲಿ ತೊಡಗಿರುವ ಸಮ್ಮೇಳನಾಧ್ಯಕ್ಷ ಎಚ್​ ಎಸ್ ವೆಂಕಟೇಶಮೂರ್ತಿ
  • Share this:
ಕಲಬುರ್ಗಿ(ಫೆ.06) :  ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಲೇಖಕರ ಕಟ್ಟೆ ಗಮನ ಸೆಳೆಯುತ್ತಿದೆ. ಹೊಸ ಪರಿಕಲ್ಪನೆಯೊಂದಿಗೆ ಇದೇ ಪ್ರಥಮ ಬಾರಿಗೆ ಲೇಖಕರ ಕಟ್ಟೆ ಅಸ್ತಿತ್ವಕ್ಕೆ ತರಲಾಗಿದೆ. ಲೇಖಕರ ಕಟ್ಟೆಗೆ ಮೆಚ್ಚುಗೆ ಮಹಾಪೂರವೇ ಹರಿದುಬಂದಿದ್ದು, ಮುಂದಿನ ಸಮ್ಮೇಳನಗಳಲ್ಲಿಯೂ ಇದನ್ನು ಮುಂದುವರೆಸಬೇಕೆಂಬ ಅಭಿಪ್ರಾಯ ಕೇಳಿಬಂದಿದೆ.

ಲೇಖಕರ ಕಟ್ಟೆಗೆ ಭೇಟಿ ನೀಡಿದ ಸಮ್ಮೇಳನದ ಸರ್ವಾಧ್ಯಕ್ಷ ಎಚ್.ಎಸ್.ವೆಂಕಟೇಶಮೂರ್ತಿ, ಯುವ ಲೇಖಕರು, ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಅವರು ಕೇಳಿ ಪ್ರಶ್ನೆಗಳಿಗೆ ಉತ್ತರಿಸುತ್ತಲೇ, ಕನ್ನಡ ಉಳಿವಿಗೆ ಶ್ರಮಿಸುವಂತೆ ಕರೆ ಮಾಡಿದರು. ಲೇಖಕರ ಕಟ್ಟೆ ಪರಿಕಲ್ಪನೆಗೆ ಮೆಚ್ಚುಗೆಯನ್ನೂ ವ್ಯಕ್ತಪಡಿಸಿದರು.

ಕಲಬುರ್ಗಿಯ ಗುಲ್ಬರ್ಗಾ ವಿಶ್ವವಿದ್ಯಾಲಯದ ಆವರಣದಲ್ಲಿ 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಮುಂದುವರಿದಿದೆ. ಎರಡನೆಯ ದಿನವಾದ ಇಂದು ವಿವಿಧ ಗೋಷ್ಠಿಗಳನ್ನು ಆಯೋಜಿಸಲಾಗಿತ್ತು. ಮುಖ್ಯ ವೇದಿಕೆಯಲ್ಲಿ ಒಂದು ಕಡೆ ಗೋಷ್ಠಿಗಳು ನಡೆಯುತ್ತಿದ್ದರೆ, ಅದರ ಪಕ್ಕದಲ್ಲಿಯೇ ಇದ್ದ ಪುಸ್ತಕ ಮಳಿಗೆ ಟೆಂಟ್ ನಲ್ಲಿ ಹಿರಿಯ ಲೇಖಕರೊಂದಿಗೆ ಕಿರಿಯ ಲೇಖಕರು, ಸಾಹಿತ್ಯಾಸಕ್ತರು ನಡೆಸಿದ ಚರ್ಚೆ ಜೋರಾಗಿತ್ತು. ಇದೇ ಪ್ರಥಮ ಬಾರಿಗೆ ಅಸ್ತಿತ್ವಕ್ಕೆ ತರಲಾಗಿರುವ ಲೇಖಕರ ಕಟ್ಟೆಯಲ್ಲಿ ಸಾಹಿತ್ಯ, ಕನ್ನಡ ಭಾಷೆ ಉಳಿವು ಇತ್ಯಾದಿಗಳ ಕುರಿತು ಬಿಸಿ ಬಿಸಿ ಚರ್ಚೆ ನಡೆಯಿತು. ಸಮ್ಮೇಳನದ ಸರ್ವಾಧ್ಯಕ್ಷ ಡಾ.ಎಚ್.ಎಸ್.ವೆಂಕಟೇಶಮೂರ್ತಿ ಲೇಖಕರ ಕಟ್ಟೆಯಲ್ಲಿ ಕುಳಿತು ಓದುಗರು, ಯುವ ಸಾಹಿತಿಗಳು, ವಿದ್ಯಾರ್ಥಿಗಳ ಜೊತೆ ಬೆರೆತರು.

ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಹರಿದು ಬಂದ ಜನಸಾಗರ; ಈ ಬಾರಿ ಪುಸ್ತಕ ಮಾರಾಟ ಸೂಪರ್…!

ಪುಸ್ತಕ ಖರೀದಿಗೆಂದು ಬಂದಿದ್ದ ಹಲವಾರು ಜನ ಎಚ್.ಎಸ್.ವಿ. ಅವರೊಂದಿಗೆ ಸಂವಾದ ನಡೆಸಿದರು. ಅವರ ಸಾಹಿತ್ಯ, ಕನ್ನಡ ಸಾಹಿತ್ಯ, ಕನ್ನಡ ಭಾಷೆ ಇತ್ಯಾದಿಗಳ ಮೇಲೆ ಬೆಳಕುಚೆಲ್ಲುವ ಪ್ರಶ್ನೆಗಳನ್ನು ಕೇಳಲಾಯಿತು. ಎಲ್ಲ ಪ್ರಶ್ನೆಗಳಿಗೂ ಸಮಾಧಾನದಿಂದಲೇ ಉತ್ತರಿಸಿದ ಎಚ್.ಎಸ್.ವಿ., ಲೇಖಕರ ಕಟ್ಟೆ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು. ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಇಂಥದ್ದೊಂದು ಕಟ್ಟೆ ಮಾಡಿರೋದು ನಿಜಕ್ಕೂ ಶ್ಲಾಘನೀಯ. ಹೊಸ ಪರಿಕಲ್ಪನೆಯಿಂದಾಗಿ ಲೇಖಕರು ಮತ್ತು ಓದುಗರ ನಡುವೆ ಬಾಂಧವ್ಯ ಬೆಸೆಯಲಿದೆ. ಇಂತಹ ಲೆಖಕರ ಕಟ್ಟೆ ಪ್ರತಿ ಸಮ್ಮೇಳನಗಳಲ್ಲಿಯೂ ಅಸ್ತಿತ್ವಕ್ಕೆ ತರಬೇಕೆಂದು ಎಚ್.ಎಸ್.ವೆಂಕಟೇಶಮೂರ್ತಿ ಅಭಿಪ್ರಾಯಪಟ್ಟರು.

ಸರ್ವಾಧ್ಯಕ್ಷರೊಂದಿಗೆ ಸಂವಾದ ನಡೆಸಿದ ವಿದ್ಯಾರ್ಥಿಗಳು, ಯುವ ಸಾಹಿತಿಗಳು ಧನ್ಯತಾ ಭಾವ ವ್ಯಕ್ತಪಡಿಸಿದರು. ಸಮ್ಮೇಳನದ ಮುಖ್ಯ ವೇದಿಕೆ ಬಳಿ ಜನಸಾಮಾನ್ಯರನ್ನು ಬಿಡುವುದಿಲ್ಲ. ಹೀಗಾಗಿ ಸಮ್ಮೇಳನಾಧ್ಯಕ್ಷರು, ಹೆಸರಾಂತ ಸಾಹಿತಿಗಳನ್ನು ಹತ್ತಿರದಿಂದ ನೋಡುವುದಕ್ಕೆ, ಮಾತನಾಡಿಸುವುದಕ್ಕೆ ಆಗಲ್ಲ. ಆದರೆ ಲೇಖಕರ ಕಟ್ಟೆ ಕಾರಣದಿಂದಾಗಿ ಸಮ್ಮೇಳನಾಧ್ಯಕ್ಷರಿಂದ ಹಿಡಿದು ಹಲವಾರು ಸಾಹಿತಿಗಳನ್ನು ಹತ್ತಿರದಿಂದ ನೋಡಿ, ಮಾತನಾಡಿಸುವ ಅವಕಾಶ ಸಿಕ್ಕಿತೆಂದು ವಿದ್ಯಾರ್ಥಿಗಳು ಸಂತಸ ವ್ಯಕ್ತಪಡಿಸಿದರು.

ಬೇರೆಯವರು ಇಲ್ಲಿ ಬಂದು ನೆಲೆಸಿದರೂ ಕನ್ನಡವೇ ವ್ಯವಹಾರ ಭಾಷೆಯಾಗಬೇಕು ; ಎಚ್.ಎಸ್.ವೆಂಕಟೇಶಮೂರ್ತಿಒಟ್ಟಾರೆ ಲೇಖಕರ ಕಟ್ಟೆ ಈ ಬಾರಿಯ ಸಮ್ಮೇಳನದಲ್ಲಿ ವಿಶೇಷವಾಗಿ ಗಮನ ಸೆಳೆಯಲಾರಂಭಿಸಿದೆ. ಕಲಬುರ್ಗಿಯಲ್ಲಿ ಹುಟ್ಟಿಕೊಂಡ ಹೊರ ಪರಿಕಲ್ಪನೆಯ ಲೇಖಕರ ಕಟ್ಟೆ, ಮುಂದಿನ ದಿನಗಳಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ತಪ್ಪದೇ ಸ್ಥಾನ ಪಡೆದುಕೊಳ್ಳಲಿ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
Youtube Video
First published: February 6, 2020, 9:19 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories