ಸಿದ್ದರಾಮಯ್ಯ ಮೂಲೆಗುಂಪು ಮಾಡಲು ಹೊರಟಿದ್ದ ಜೋಡೆತ್ತುಗಳ ಯೋಜನೆ ಸಂಪೂರ್ಣ ವಿಫಲ ; ಯತ್ನಾಳ

ಉಪ ಚುನಾವಣೆಯಲ್ಲಿ ಗೆದ್ದು ಮತ್ತೆ ಅಧಿಕಾರ ನಡೆಸಬೇಕು ಎಂದು ಕನಸು ಕಂಡಿದ್ದರು. ಕಳೆದ ಮೂರ್ನಾಲ್ಕು ದಿನಗಳಲ್ಲಿ ಅವರಿಗೆ ಚಿತ್ರಣ ಗೊತ್ತಾಗಿದೆ. ಹೀಗಾಗಿ ದಿನೇಶ್ ಗುಂಡೂರಾವ್​​​ ಸೇರಿದಂತೆ ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ಹತಾಶರಾಗಿದ್ದಾರೆ.

news18-kannada
Updated:December 4, 2019, 3:47 PM IST
ಸಿದ್ದರಾಮಯ್ಯ ಮೂಲೆಗುಂಪು ಮಾಡಲು ಹೊರಟಿದ್ದ ಜೋಡೆತ್ತುಗಳ ಯೋಜನೆ ಸಂಪೂರ್ಣ ವಿಫಲ ; ಯತ್ನಾಳ
ಬಸನಗೌಡ ಪಾಟೀಲ ಯತ್ನಾಳ
  • Share this:
ವಿಜಯಪುರ(ಡಿ.04): ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಮೂಲೆಗುಂಪು ಮಾಡಲಾಗುತ್ತಿದ್ದು, ಈ ಬಗ್ಗೆ ಮೊನ್ನೆ ಜೋಡೆತ್ತುಗಳು ಸಭೆಯನ್ನು ನಡೆಸಿವೆ. ಜೋಡೆತ್ತಿನ ಸಭೆಯ ಉದ್ದೇಶವೇ ಸಿದ್ದರಾಮಯ್ಯ ಅವರನ್ನು ಪಕ್ಕಕ್ಕೆ ಸರಿಸಿ ತಾವು ಅಧಿಕಾರಕ್ಕೆ ಬರಬೇಕು ಎನ್ನುವುದಾಗಿದೆ. ಇವರ ಕುತಂತ್ರ ಸಿದ್ದರಾಮಯ್ಯ ಅವರ ಗಮನಕ್ಕೆ ಬಂದಿದೆ. ಹೀಗಾಗಿ ಜೋಡೆತ್ತುಗಳ ಯೋಜನೆ ಸಂಪೂರ್ಣವಾಗಿ ವಿಫಲವಾಗಲಿದೆ ಎಂದು ಶಾಸಕ ಬಸನಗೌಡ  ಪಾಟೀಲ್ ಯತ್ನಾಳ ಹೇಳಿದ್ದಾರೆ.

ವಿಜಯಪುರದಲ್ಲಿ ಮಾತನಾಡಿದ ಅವರು, ಸಿದ್ಧರಾಮಯ್ಯ ಅವರು ತಾವು ಸುಮ್ಮನೆ ಇದ್ದು ಕಾಂಗ್ರೆಸ್ಸಿಗರು ಸೋಲುವಂತೆ ನಡುವಳಿಕೆ ತೋರಿಸಬೇಕು. ಇದರಿಂದ ನಿಮಗೆ ಅನುಕೂಲ ಆಗಲಿದೆ. ದಿನೇಶ ಗುಂಡೂರಾವ್ ಅವರಲ್ಲಿ ಭಯವಿದೆ, ಅವರ ಕೈಯಲ್ಲಿ ಶಾಸಕರುಗಳು ಉಳಿದಿಲ್ಲ. ಮಾಜಿ ಸಿಎಂ ಕುಮಾರಸ್ವಾಮಿ ಅವರ ಕೈಯಲ್ಲೂ ಸಹ ಅವರ ಶಾಸಕರು ಉಳಿದಿಲ್ಲ ಎಂದರು.

ಉಪ ಚುನಾವಣೆಯಲ್ಲಿ ಗೆದ್ದು ಮತ್ತೆ ಅಧಿಕಾರ ನಡೆಸಬೇಕು ಎಂದು ಕನಸು ಕಂಡಿದ್ದರು. ಕಳೆದ ಮೂರ್ನಾಲ್ಕು ದಿನಗಳಲ್ಲಿ ಅವರಿಗೆ ಚಿತ್ರಣ ಗೊತ್ತಾಗಿದೆ. ಹೀಗಾಗಿ ದಿನೇಶ್ ಗುಂಡೂರಾವ್​​​ ಸೇರಿದಂತೆ ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ಹತಾಶರಾಗಿದ್ದಾರೆ. ಡಿ. 9 ರ ಬಳಿಕ ಸಂಪೂರ್ಣ ಬಿಜೆಪಿ ಸರಕಾರ ಅಧಿಕಾರಕ್ಕೆ ಬರುವ ಚಿತ್ರಣವಿದೆ. ಮುಂದಿನ ಮೂರೂವರೆ ವರ್ಷ ಬಿ. ಎಸ್. ಯಡಿಯೂರಪ್ಪ ಅವರೇ ಸಿಎಂ‌ ಆಗಿರುತ್ತಾರೆ ಎಂದು ತಿಳಿಸಿದರು.

ಇದನ್ನೂ ಓದಿ :  ಸಿದ್ದರಾಮಯ್ಯ ಹೊರಗಿಟ್ಟು ಮೈತ್ರಿಕೂಟ ರಚಿಸಲು ಎಚ್​​ಡಿಕೆ- ಡಿಕೆಶಿ ಭೇಟಿಯಾಗಿದ್ದಾರೆ ; ಮಹೇಶ್ ಟೆಂಗಿನಕಾಯಿ

ಪಕ್ಷದಲ್ಲಿ ಅಸಮಾಧಾನ ಆಗುವ ವಿಚಾರವಾಗಿ ಮಾತನಾಡಿದ ಅವರು, ಮಂತ್ರಿ ಆಗಬೇಕು ಎಂದು ಅಸಮಾಧಾನ ಆಗುವವರೇ ನಾವು. ನಾವೇ ಆಗೋದಿಲ್ಲ ಅಂದಮೇಲೆ ಯಾರೂ ಅಸಮಾಧಾನ ಆಗಲ್ಲ. ಸರಕಾರ ಉಳಿಯಬೇಕು ಎಂದು ನಾವೇ ಮುಖ್ಯಮಂತ್ರಿಗಳಿಗೆ ಫ್ರೀ ಹ್ಯಾಂಡ್ ಕೊಟ್ಟಿದ್ದೇವೆ. ನಮ್ಮ ಅಭಿಮಾನಿಗಳ ಭಾವನೆ ಮಂತ್ರಿ ಆಗಬೇಕು ಎಂಬುದು ಸಹಜ. ಅದನ್ನು ನಾನು ದೊಡ್ಡದು ಮಾಡೋದಿಲ್ಲ. ಉಪಚುನಾವಣೆಯಲ್ಲಿ ಬಿಜೆಪಿಗೆ ಅತೀ ಹೆಚ್ಚು ಸ್ಥಾನ ಸಿಗಲಿವೆ. ಬಿ. ಎಸ್. ಯಡಿಯೂರಪ್ಪ ಅವರ ನೇತ್ರತ್ವದಲ್ಲಿ ಸುಭದ್ರ ಸರಕಾರ ನಡೆಯಲಿದೆ  ಎಂದು ಹೇಳಿದರು.

 
First published:December 4, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading