ಚಿತ್ರದುರ್ಗ(ಜೂ.12): ಕಾಂಗ್ರೆಸ್ (Congress) ಪಕ್ಷಕ್ಕೆ ದಿಕ್ಕು ದೆಸೆ ಇಲ್ಲದಂತಾಗಿ ಕುಸಿದಿದೆ. ಬೇರೆ ಬೇರೆ ಪಕ್ಷದ ನಾಯಕರು ಬಿಜೆಪಿ (BJP) ಸೇರುತ್ತಿದ್ದಾರೆ. ಬಿಜೆಪಿ ದೊಡ್ಡ ಪಕ್ಷ. ಎ ಟೀಮ್ ಅಂದರೆ ಬಿಜೆಪಿ ಅಷ್ಟೇ, ಬಿ ಟೀಮ್ ಎಂಬುದು ಕಾಂಗ್ರೆಸ್ ಅಲ್ಲ, ಜೆಡಿಎಸ್ (JDS) ಅಲ್ಲ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ (Siddaramaiah) ಹಾಗೂ ಮಾಜಿ ಸಿಎಂ ಹೆಚ್.ಡಿ.ಕೆ (HD Kumaraswamy)ಸಹಕಾರ ಬಿಜೆಪಿಗೆ ಬೇಕಿಲ್ಲ ಎಂದು ಚಿತ್ರದುರ್ಗದಲ್ಲಿ (Chitradurga) ಸಾರಿಗೆ ಇಲಾಖೆ ಸಚಿವ ಬಿ. ಶ್ರೀರಾಮುಲು (Minister B Sriramulu) ಹೇಳಿದ್ದಾರೆ. ಚಿತ್ರದುರ್ಗದಲ್ಲಿ ಲೋಕಸಭಾ ಕ್ಷೇತ್ರದ ಬೂತ್ ಬಿಜೆಪಿ ಸಶಕ್ತಿಕರಣ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಬಳಿಕ ಮಾತನಾಡಿದ್ದಾರೆ.
ಶ್ರೀರಾಮುಲು ಜೂನ್ 18ಕ್ಕೆ ಬಿಜೆಪಿ ಅದ್ಯಕ್ಷ ಜೆ.ಪಿ.ನಡ್ಡಾ ಚಿತ್ರದುರ್ಗಕ್ಕೆ ಭೇಟಿ ನಿಡುತ್ತಿದ್ದಾರೆ. ಅಂದು ಮುರುಘಾಮಠದ ಅನುಭವ ಮಂಟಪದಲ್ಲಿ ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿ ಬಿಜೆಪಿ ಬೆಂಬಲಿತ ಗ್ರಾ.ಪಂ ಅಧ್ಯಕ್ಷ, ಉಪಾಧ್ಯಕ್ಷರ ಸಭೆ ಮಾಡಲಾಗುವುದು.
ಪಕ್ಷ ಸಂಘಟನೆ ದೃಷ್ಟಿಯಿಂದ ಕಾರ್ಯಕ್ರಮ
ರಾಜ್ಯದಲ್ಲಿ ಬಿಜೆಪಿ ಪಕ್ಷ ಸಂಘಟನೆ ದೃಷ್ಟಿಯಿಂದ ಕಾರ್ಯಕ್ರಮ ನಡೆಸಲು ತೀರ್ಮಾನ ಮಾಡಿದ್ದು, ಈ ಕಾರ್ಯಕ್ರಮದಲ್ಲಿ ರಾಜ್ಯದ ಬಿಜೆಪಿ ರಾಜ್ಯಾಧ್ಯಕ್ಷರಾದ ನಳೀನ್ ಕುಮಾರ್ ಕಟೀಲ್, ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ , ಸಿಎಂ ಬಸವರಾಜ್ ಬೊಮ್ಮಾಯಿ ಹಾಗೂ ಸಚಿವ ಸಂಪುಟದ ಹಲವು ಸಚಿವರು ಭಾಗಿ ಆಗುತ್ತಾರೆ ಎಂದು ಹೇಳಿದ್ದಾರೆ.
ಹಿಂಸೆ ಮಾಡುವ ಕೆಲಸ ಬೇಡ
ಬಳಿಕ ಪ್ರವಾದಿ ಬಗ್ಗೆ ಅವಹೇಳನ ಹಿನ್ನೆಲೆ ದೇಶದ್ಯಂತ ಪ್ರತಿಭಟನೆ ಮಾಡುತ್ತಿರುವ ವಿಚಾರ ಕುರಿತು ಪ್ರತಿಕ್ರಿಯೆ ನೀಡಿ, ಪಕ್ಷದ ನಾಯಕರು ಸಿಎಂ ಈ ಬಗ್ಗೆ ತೀರ್ಮಾನ ಕ್ರಮ ಕೈಗೊಂಡಿದ್ದಾರೆ. ನಾನು ಈ ಬಗ್ಗೆ ಮಾತಾಡುವುದು ಸರಿಯಲ್ಲ. ಆದರೇ ಈ ವಿಚಾರದಲ್ಲಿ ಯಾರೂ ಸಹ ಜನರಿಗೆ ಪ್ರಚೋದನೆ ಮಾಡಬಾರದು. ಹಿಂಸೆ ಮಾಡುವ ಕೆಲಸ ಮಾಡಬಾರದು ಎಂದಿದ್ದಾರೆ.
ಇದನ್ನೂ ಓದಿ: Terrorist Activity: ಮಂಗಳೂರು-ಕೇರಳ ಹೆದ್ದಾರಿಯಲ್ಲಿ ಬಳಿ ಗೂಡಂಗಡಿ ಮೂಲಕ ನಡೀತಿದೆ ಉಗ್ರ ಚಟುವಟಿಕೆ
ಇತಿಹಾಸಕಾರರ ಬಗ್ಗೆ ಕೆಣುಕುವುದು ಬೇಡ
ಅಲ್ಲದೇ ಯಾವುದೇ ಇತಿಹಾಸ, ಇತಿಹಾಸಕಾರರ ಬಗ್ಗೆ ಕೆಣಕುವ ಕೆಲಸ ಆಗಬಾರದು ಎಂದು ಹೇಳಿದ್ದಾರೆ. ಇನ್ನೂ ರಾಜ್ಯದಲ್ಲಿ ಪಠ್ಯಪುಸ್ತಕ ಪರಿಷ್ಕರಣೆ ಕುರಿತು ಸಾಕಷ್ಟು ಪರ, ವಿರೋಧದ ಚರ್ಚೆಗಳು ನಡೆದು ಹೋಗಿವೆ.
ವಿವಾದ ಸೃಷ್ಟಿ ಏಕೆ?
ಈಗಾಗಲೇ ಪಠ್ಯ ಪುಸ್ತಕ ಪರಿಷ್ಕರಣೆ ಸಮಿತಿ ವಿಸರ್ಜನೆ ಆಗಿದೆ. ಆದರೇ ಸಮಿತಿ ವಿಸರ್ಜನೆ ಬಳಿಕವೂ ವಿವಾದ ಸೃಷ್ಠಿ ಏಕೆ? ಪಠ್ಯ ಪರಿಷ್ಕರಣೆ ಬಗ್ಗೆ ಸಿಎಂ ಮುಕ್ತ ಚರ್ಚೆಗೆ ಚಿಂತನೆ ಮಾಡಿದ್ದಾರೆ. ಕಾಂಗ್ರೆಸ್ ರಾಜಕಾರಣಕ್ಕಾಗಿ ವಿವಾದ ಸೃಷ್ಠಿಸುತ್ತಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಸಿದ್ಧಗಂಗಾ ಶ್ರೀ ಭೇಟಿ ಮಾಡಿದ ಮಾಗಡಿ ಬಾಲಕೃಷ್ಣ! BJP ಸೇರುವ ಮುನ್ಸೂಚನೆ?
ಸಿಎಂ ಅಭ್ಯರ್ಥಿ ಯಾರು?
ಇನ್ನೂ ರಾಜ್ಯದಲ್ಲಿ ಮತ್ತೆ ಬಿ.ವೈ.ವಿಜಯೇಂದ್ರ ಸಿಎಂ ಅಭ್ಯರ್ಥಿ ಎಂಬ ವಿಚಾರ ಚರ್ಚೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, ಸಿಎಂ ಯಾರಾಗಬೇಕೆಂಬ ಬಗ್ಗೆ ರಾಷ್ಟ್ರೀಯ ನಾಯಕರಿಂದ ನಿರ್ಧಾರ ಆಗುತ್ತದೆ ಎಂದಿದ್ದಾರೆ. ಇನ್ನೂ ವಾಲ್ಮೀಕಿ ಸಮುದಾಯಕ್ಕೆ ಕಾನೂನು ತೊಡಕಿನಿಂದ ಎಸ್ಟಿ ಮೀಸಲಾತಿ ಹೆಚ್ಚಳ ವಿಳಂಬ ಆಗುತ್ತಿದೆ. ಆದರೇ ಸಮುದಾಯಕ್ಕೆ ಶೇ.7.5ಮೀಸಲಾತಿ ನೀಡಲು ಸರ್ಕಾರ ಸಿದ್ಧವಿದೆ ಎಂದಿದ್ದಾರೆ.
ಈಗಾಗಲೇ ಬಹಳಷ್ಟು ಜನ ಮುಖಂಡರು ಬಿಜೆಪಿ ಸೇರಿಕೊಳ್ಳುತ್ತಿದ್ದು ಇತ್ತೀಚೆಗೆ ಯುವ ನಾಯಕ ಹಾರ್ದಿಕ್ ಪಟೇಲ್ ಕೂಡಾ ಬಿಜೆಪಿ ಸೇರಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ