ಬೆಳಗಾವಿ: ಬಿಜೆಪಿ ಎಂಎಲ್ಸಿ ಬಸವರಾಜ್ ಹೊರಟ್ಟಿ (BJP MLC Basavaraj Horatti) ಅವರು ಇಂದು ವಿಧಾನಪರಿಷತ್ ಸಭಾಪತಿ (VidhanaParishat Speaker) ಸ್ಥಾನಕ್ಕೆ ನಾಮಪತ್ರ ಸಲ್ಲಿಕೆ ಮಾಡಿದರು. ನಾಳೆ ಅಂದ್ರೆ ಬುಧವಾರ (ಡಿಸೆಂಬರ್ 21) ವಿಧಾನ ಪರಿಷತ್ ಸಭಾಪತಿ ಸ್ಥಾನಕ್ಕೆ ಚುನಾವಣೆ ನಡೆಯಲಿದೆ. ಚುನಾವಣೆ ಹಿನ್ನೆಲೆ ಇಂದು ಸಿಎಂ ಬಸವರಾಜ್ ಬೊಮ್ಮಾಯಿ (CM Basavaraj Bommai) ಜೊತೆ ಆಗಮಿಸಿದ ಬಸವರಾಜ್ ಹೊರಟ್ಟಿ ಅವರು ವಿಧಾನ ಪರಿಷತ್ ಕಾರ್ಯದರ್ಶಿ ಕೆ.ಆರ್. ಮಹಾಲಕ್ಷ್ಮಿ ಅವರಿಗೆ ನಾಮಪತ್ರ ಸಲ್ಲಿಸಿದರು. ಪರಿಷತ್ ಸಭಾಪತಿ ಸ್ಥಾನಕ್ಕೆ ನಾಮಪತ್ರ ಸಲ್ಲಿಸಲು ಇಂದು ಕೊನೆ ದಿನವಾಗಿದೆ. ಜೆಡಿಎಸ್ ತೊರೆದು ಬಿಜೆಪಿ ಸೇರ್ಪಡೆ ವೇಳೆಯೇ ಕಮಲ ನಾಯಕರು ಪರಿಷತ್ ಸಭಾಪತಿ ಮಾಡುವ ಭರವಸೆಯನ್ನು ನೀಡಿದ್ದರು.
ಭರವಸೆ ನೀಡಿದ ಹಿನ್ನೆಲೆಯಲ್ಲಿ ಯಾವುದೆ ಗೊಂದಲಗಳು ಇಲ್ಲದಂತೆ ಸಭಾಪತಿ ಸ್ಥಾನಕ್ಕೆ ಆಯ್ಕೆ ಮಾಡಲು ಬಿಜೆಪಿ ನಿರ್ಧಾರ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಆದರೆ ಸಭಾಪತಿಯಾಗಿ ತಮ್ಮನ್ನೇ ಮುಂದುವರಿಸುವಂತೆ ರಘುನಾಥ್ ರಾವ್ ಮಲಕಾಪೂರೆ ಒತ್ತಡ ಹಾಕಲು ಪ್ರಯತ್ನಿಸಿದ್ದರು.
ಒಗ್ಗಟ್ಟು ಪ್ರದರ್ಶಿಸುವಂತೆ ಸೂಚನೆ
ವಲಸಿಗರಿಗೆ ಮಣೆ ಹಾಕಿದ್ರೆ ನಾವೇನು ಮಾಡಬೇಕೆಂಬ ಪ್ರಶ್ನೆ ಮಾಡಿದ್ದ ಮಲಕಾಪೂರೆ, ಸಭಾಪತಿ ವಿಚಾರವಾಗಿ ಹೈಕಮಾಂಡ್ ನಾಯಕರ ಜೊತೆ ಚರ್ಚೆ ಮಾಡಿದ್ದರು. ಆದ್ರೆ ಹೈಕಮಾಂಡ್ ಒಗ್ಗಟ್ಟು ಪ್ರದರ್ಶನ ಮಾಡುವಂತೆ ಸೂಚನೆ ನೀಡಿತ್ತು ಎನ್ನಲಾಗಿದೆ.
ಹೈಕಮಾಂಡ್ ಸೂಚನೆ ಹಿನ್ನೆಲೆ ಮಲಕಾಪೂರೆ ಅವರ ಮನವೊಲಿಸಲು ರಾಜ್ಯ ಬಿಜೆಪಿ ನಾಯಕರು ಸಾಕಷ್ಟು ಕಸರತ್ತು ಮಾಡಿದ್ದರು. ಬಸವರಾಜ್ ಹೊರಟ್ಟಿ ಹೊರತುಪಡಿಸಿ ಬೇರೆ ಯಾರೂ ನಾಮಪತ್ರ ಸಲ್ಲಿಕೆ ಮಾಡಲ್ಲ ಎನ್ನಲಾಗಿದೆ. ಬಸವರಾಜ್ ಹೊರಟ್ಟಿ ಅವರೇ ಅವಿರೋಧವವಾಗಿ ಆಯ್ಕೆಯಾಗುವ ಸಾಧ್ಯತೆಗಳಿವೆ.
ಅಸಮಾಧಾನ ಹೊರ ಹಾಕಿದ ಮಲಕಾಪೂರೆ
ನ್ಯೂಸ್ 18 ಕನ್ನಡದ ಜೊತೆ ಮಾತನಾಡಿದ ಪರಿಷತ್ ಸಭಾಪತಿ ಹಾಗೂ ಸಭಾಪತಿ ಸ್ಥಾನದ ಆಕಾಂಕ್ಷಿ ರಘುನಾಥ್ ಮಲಕಾಪೂರೆ, ರಾಜ್ಯಪಾಲರ ಸೂಚನೆಯಂತೆ ಇವತ್ತು ಪರಷತ್ ಸಭಾಪತಿ ಸ್ಥಾನಕ್ಕೆ ನಾಮಪತ್ರ ಸಲ್ಲಿಸಲಾಗುತ್ತಿದೆ. ರಾಜ್ಯಪಾಲರ ಸೂಚನೆಯಂತೆ ಚುನಾವಣೆ ನಡೆಸುತ್ತಿದ್ದೇನೆ. ನಾನು ಆಕಾಂಕ್ಷಿಯೆ ಆದರೆ ಪಕ್ಷದ ಸೂಚನೆ ಪಾಲಿಸಲೇಬೇಕು. ನಾನು ಕಾರ್ಯಕರ್ತನಾಗಿದ್ದು, ಈ ಸ್ಥಾನವನ್ನು ಯಾರಿಂದಲೂ ಕಿತ್ತುಕೊಳ್ಳಲು ಸಾಧ್ಯವಿಲ್ಲ ಎಂದು ಪರೋಕ್ಷವಾಗಿ ತಮ್ಮ ಅಸಮಾಧಾನವನ್ನು ಹೊರ ಹಾಕಿದರು.
ಬಸವರಾಜ್ ಹೊರಟ್ಟಿಯವರಿಗೆ ಪಕ್ಷ ಸಭಾಪತಿ ಮಾಡಲು ನಿರ್ಧರಿಸಿದೆ. ನಾನು ಬಸವರಾಜ್ ಹೊರಟ್ಟಿಯವರಿಗೆ ಅಭಿನಂದಿಸುತ್ತೇನೆ. ಪಕ್ಷದ ತೀರ್ಮಾನಕ್ಕೆ ಬದ್ಧನಾಗಿರುತ್ತೇನೆ ಎಂದರು.
ಬೆಳಗಾವಿ ಸದನ-ಕದನ
ಬೆಳಗಾವಿ ಸುವರ್ಣಸೌಧದಲ್ಲಿ ಇಂದು 2ನೇ ದಿನದ ಚಳಿಗಾಲದ ಅಧಿವೇಶನ (Belgavi Winter Session) ನಡೆಯಲಿದೆ. ಆಡಳಿತ ಪಕ್ಷದ ವಿರುದ್ಧ ಮುಗಿಬೀಳಲು ಕಾಂಗ್ರೆಸ್ (Congress) ಸಜ್ಜಾಗಿದೆ. ಇತ್ತ ಸರ್ಕಾರದ ವಿರುದ್ಧ ವಿವಿಧ ಸಂಘಟನೆಗಳಳು ಪ್ರತಿಭಟನೆಗೆ ರೆಡಿಯಾಗಿವೆ. ಸರ್ಕಾರಕ್ಕೆ ಸದನದ ಒಳಗೆ ಹಾಗೂ ಸದನದ ಹೊರಗೆ ಪ್ರತಿಭಟನೆ ಬಿಸಿ ತಟ್ಟೋದು ಗ್ಯಾರಂಟಿ. ರೈತರು ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಹೆಚ್.ಆರ್ ಬಸವರಾಜಪ್ಪ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಲಿದ್ದಾರೆ.
ಬಾಗಲಕೋಟೆ ಸೇರಿ ರಾಜ್ಯದ ವಿವಿಧ ಕಡೆಯಿಂದ ರೈತರು ಪ್ರತಿಭಟನೆಯಲ್ಲಿ ಭಾಗಿಯಾಗಲಿದ್ದಾರೆ. 2A ಮೀಸಲಾತಿ ನೀಡಲು ಆಗ್ರಹಿಸಿ ಕರ್ನಾಟಕ ಕ್ಷತ್ರಿಯ ಮರಾಠ ಸಮುದಾಯವೂ ಪ್ರತಿಭಟನೆಗೆ ಕರೆ ನೀಡಿವೆ. ಒಟ್ಟು ವಿವಿಧ 9 ಸಂಘಟನೆಗಳು ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲು ಸಜ್ಜಾಗಿದೆ.
ಇದನ್ನೂ ಓದಿ: Belagavi Border Dispute: ಕಿರಿಕ್ ಎಂಇಎಸ್ಗೆ ಬೆಳಗಾವಿ ಪೊಲೀಸರ ಶಾಕ್, ಮಹಾಮೇಳವ್ ಉದ್ಧಟತನಕ್ಕೆ ಬ್ರೇಕ್!
ರೆಬೆಲ್ ಆದ ಈಶ್ವರಪ್ಪ
ರಾಜ್ಯ ಬಿಜೆಪಿಯಲ್ಲಿ ಅಸಮಾಧಾನದ ಹೊಗೆ ಆಡುತ್ತಿದೆ. ಸಚಿವ ಸಂಪುಟ ವಿಸ್ತರಣೆ ವಿಳಂಬ ಹಿನ್ನೆಲೆ ಕೆಲ ಬಿಜೆಪಿ ನಾಯಕರು ಮುನಿಸಿಕೊಂಡಿದ್ದಾರೆ. ಸಚಿವ ಸ್ಥಾನ ವಂಚಿತರಾಗಿರೋ ರಮೇಶ್ ಜಾರಕಿಹೊಳಿ, ಕೆ.ಎಸ್ ಈಶ್ವರಪ್ಪ ಒಟ್ಟಾಗಿ ಬೆಳಗಾವಿಯಿಂದ ಬೆಂಗಳೂರಿಗೆ ಬಂದಿದ್ದಾರೆ. ಚಳಿಗಾಲದ ಅಧಿವೇಶನಕ್ಕೆ ಹಾಜರಾಗದೇ, ಬೆಳಗಾವಿಯಿಂದ ಬೆಂಗಳೂರಿಗೆ ಬಂದಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ