ತುಪ್ಪರಿ ಹಳ್ಳ ಸೇರುತ್ತಿರುವ ಲಕ್ಷ್ಮೀ ಹೆಬ್ಬಾಳ್ಕರ್​ ಕಾರ್ಖಾನೆ ಕಲುಷಿತ ನೀರು; ಸಾವಿರಾರು ಮೀನುಗಳ ಮಾರಣ ಹೋಮ

ಸಕ್ಕರೆ ಕಾರ್ಖಾನೆಯಿಂದ ಹೊರ ಬಿಡಲಾಗುತ್ತಿರುವ ರಾಸಾಯನಿಕ ಮಿಶ್ರಿತ ನೀರು ಹಳ್ಳ ಸೇರುತ್ತಿದೆ. ಇದರಿಂದ ಹಳ್ಳದಲ್ಲಿದ್ದ ಸಾವಿರಾರು ಮೀನುಗಳು ಸಾವನ್ನಪ್ಪುತ್ತಿದ್ದು, ಹಳ್ಳದ ಅಕ್ಕಪಕ್ಕದ ಗ್ರಾಮಸ್ಥರಲ್ಲಿ ಕೂಡ ಆತಂಕ ಎದುರಾಗಿದೆ.

ಸಕ್ಕರೆ ಕಾರ್ಖಾನೆಯಿಂದ ಹೊರ ಬಿಡಲಾಗುತ್ತಿರುವ ರಾಸಾಯನಿಕ ಮಿಶ್ರಿತ ನೀರು ಹಳ್ಳ ಸೇರುತ್ತಿದೆ. ಇದರಿಂದ ಹಳ್ಳದಲ್ಲಿದ್ದ ಸಾವಿರಾರು ಮೀನುಗಳು ಸಾವನ್ನಪ್ಪುತ್ತಿದ್ದು, ಹಳ್ಳದ ಅಕ್ಕಪಕ್ಕದ ಗ್ರಾಮಸ್ಥರಲ್ಲಿ ಕೂಡ ಆತಂಕ ಎದುರಾಗಿದೆ.

ಸಕ್ಕರೆ ಕಾರ್ಖಾನೆಯಿಂದ ಹೊರ ಬಿಡಲಾಗುತ್ತಿರುವ ರಾಸಾಯನಿಕ ಮಿಶ್ರಿತ ನೀರು ಹಳ್ಳ ಸೇರುತ್ತಿದೆ. ಇದರಿಂದ ಹಳ್ಳದಲ್ಲಿದ್ದ ಸಾವಿರಾರು ಮೀನುಗಳು ಸಾವನ್ನಪ್ಪುತ್ತಿದ್ದು, ಹಳ್ಳದ ಅಕ್ಕಪಕ್ಕದ ಗ್ರಾಮಸ್ಥರಲ್ಲಿ ಕೂಡ ಆತಂಕ ಎದುರಾಗಿದೆ.

  • Share this:
ಧಾರವಾಡ (ಜ. 18) :  ಬೆಳಗಾವಿಯ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಈಗ ಅವರದೇ ಒಡೆತನದ ಹರ್ಷ ಶುಗರ್ಸ್ ಕಾರ್ಖಾನೆ ಸುದ್ದಿಯಾಗುತ್ತಿದೆ.  ಈ ಕಾರ್ಖಾನೆಯ ಹೊರ ಬಿಡುತ್ತಿರುವ ನೀರಿನಿಂದಾಗಿ ತುಪ್ಪರಿ ಹಳ್ಳದಲ್ಲಿ ಮೀನುಗಳ ಮಾರಣ ಹೋಮ ನಡೆದಿದೆ.  ಸಕ್ಕರೆ ಕಾರ್ಖಾನೆಯಿಂದ ಹೊರ ಬಿಡಲಾಗುತ್ತಿರುವ ರಾಸಾಯನಿಕ ಮಿಶ್ರಿತ ನೀರು ಹಳ್ಳ ಸೇರುತ್ತಿದೆ. ಇದರಿಂದ ಇಲ್ಲಿದ್ದ ಸಾವಿರಾರು ಮೀನುಗಳು ಸಾವನ್ನಪ್ಪುತ್ತಿದ್ದು, ಹಳ್ಳದ ಅಕ್ಕಪಕ್ಕದ ಗ್ರಾಮಸ್ಥರಲ್ಲಿ ಕೂಡ ಆತಂಕ ಎದುರಾಗಿದೆ.  ಜಿಲ್ಲೆಯ ಆಯಟ್ಟಿ, ಶಿರೂರು ಗ್ರಾಮಗಳ ಮಧ್ಯದಲ್ಲಿ ಹರಿಯುತ್ತಿರುವ ತುಪ್ಪರಿ ಹಳ್ಳವೇ ಇಲ್ಲಿನ ರೈತರ ಜೀವನಾಡಿ. ಈ ಹಳ್ಳದ ನೀರಿನಿಂದಲೇ ಇಲ್ಲಿನ ರೈತರು ವ್ಯವಸಾಯ ಮಾಡುತ್ತಿದ್ದಾರೆ. ಅಲ್ಲದೇ ಜಾನುವಾರಗಳಿಗೆ ಕುಡಿಯಲು ಬಳಕೆ ಮಾಡುತ್ತಾರೆ. ಈಗ ಈ ನೀರಿನಿಂದ ಮೀನುಗಳು ಸಾವನ್ನಪ್ಪುತ್ತಿರುವುದು ಇಲ್ಲಿನ ಜನರಲ್ಲಿ ನಿದ್ದೆ ಕೆಡೆಸಿದೆ. 

ಕಳೆದ ಎರಡು ವರ್ಷಗಳ ಹಿಂದೆ ಈ ತುಪ್ಪರಿ ಹಳ್ಳಕ್ಕೆ ರಾಸಾಯನಿಕ ಮಿಶ್ರಿತ ನೀರು ಬಿಡಲಾಗಿತ್ತು. ಇದರಿಂದ ಗಬ್ಬುವಾಸನೆ ಯಿಂದ ಶಿರೂರು ಹಾಗೂ ಆಯಟ್ಟಿ ಗ್ರಾಮದ ಜನರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಿತ್ತು. ಈ ಕುರಿತು ನ್ಯೂಸ್ 18 ವರದಿ ಬಿತ್ತರಿಸಿದ ಬಳಿಕ ಎಚ್ಚೆತ್ತ ಪರಿಸರ ಮಾಲಿನ್ಯ ಇಲಾಖೆ ಅಧಿಕಾರಿಗಳು ಸಕ್ಕರೆ ಕಾರ್ಖಾನೆಗೆ ನೋಟಿಸ್ ನೀಡಿ ಕಾರ್ಖಾನೆಯಿಂದ ಯಾವುದೇ ರಾಸಾಯನಿಕ ಮಿಶ್ರಿತ ನೀರನ್ನು ಬಿಡದಂತೆ ಎಚ್ಚರಿಕೆ ನೀಡಿದ್ದರು. ಇದರಿಂದ ಕಾರ್ಖಾನೆಯಿಂದ ಕಲುಷಿತ ನೀರು ಹಳ್ಳ ಸೇರಿರಲಿಲ್ಲ. ಈಗ ಮತ್ತೆ ಕಾರ್ಖಾನೆ ರಾಸಾಯನಿಕ ಮಿಶ್ರಿತ ನೀರು ಬಿಡುತ್ತಿದ್ದು, ಇಲಾಖೆಯ ಎಚ್ಚರಿಕೆ ಮರೆತಿದೆ.

ಇದನ್ನು ಓದಿ: ರಾಮನನ್ನೇ ವಿರೋಧಿಸಿದ ಸಾಹಿತಿ ಪ್ರೋ.ಕೆಎಸ್‌.ಭಗವಾನ್ ಬಳಿ ರಾಮಮಂದಿರಕ್ಕೆ ದೇಣಿಗೆ ಕೇಳಿದ ಆರ್‌ಎಸ್‌ಎಸ್, ಬಿಜೆಪಿ

ಬೆಳಗಾವಿ ಜಿಲ್ಲೆಯ ಸವದತ್ತಿ ಬಳಿ ಇರುವ ಹರ್ಷ ಶುಗರ್ಸ್ ಕಾರ್ಖಾನೆಯಿಂದ ಕೆಮಿಕಲ್ ಮಿಶ್ರಿತ ತ್ಯಾಜ್ಯ ನೀರನ್ನು ಫ್ಯಾಕ್ಟರಿ ಪಕ್ಕದ ಕಲ್ಲ ಹಳ್ಳಕ್ಕೆ ಬೀಡಲಾಗುತ್ತಿದೆ.  ಅದು ಬೆಳಗಾವಿ ಜಿಲ್ಲೆಯ ಚಿಕ್ಕ ಉಳ್ಳಿಗೇರಿ, ಇನಾಮಹೊಂಗಲ್  ಮೂಲಕ ಹರಿದು ಬಂದು ಧಾರವಾಡ ಜಿಲ್ಲೆಯ ಶಿರೂರ ಹಾಗೂ ಐಯಟ್ಟಿ ಬಳಿ ತುಪ್ಪರಿ ಹಳ್ಳವನ್ನು ಸೇರುತ್ತಿದೆ. ಈ ಭಯಾನಕ ರಾಸಾಯನಿಕ ಸೇರ್ಪಡೆಯಿಂದಾಗಿಯೇ ಏನಾಗಲಿದೆ ಎಂಬ ಆತಂಕ ಈಗ ಸ್ಥಳೀಯರಲ್ಲಿ ಮೂಡಿದೆ.  ಇನ್ನು ಇದೇ ರಾಸಾಯನಿಕ ಮಿಶ್ರಿತ ನೀರು ತುಪ್ಪರಿ ಹಳ್ಳದ ಮೂಲಕ ಮುಂದೆ ನವಲಗುಂದ ತಾಲೂಕಿನುದ್ದಕ್ಕೂ ಹರಿಯುವ ಬೆಣ್ಣಿಹಳ್ಳ ಸೇರುತ್ತಿದೆ. ಇದು ಮತ್ತೊಂದು ಅನಾಹುತಕ್ಕೆ ದಾರಿಯಾಗುತ್ತಿದೆ.

ಈ ಬಗ್ಗೆ ಸಂಬಂಧಪಟ್ಟ ಇಲಾಖೆಯವರು ಬೇಗ ಎಚ್ಚೆತ್ತು ಕೊಳ್ಳಬೇಕು. ಈ ಮೂಲಕ ಜಲಚರ ಹಾಗೂ ಜನರ ಪ್ರಾಣಿಗೆ ಯಾವುದೇ ಹಾನಿಯಾಗದಂತೆ ಎಚ್ಚರಿಕೆವಹಿಸಬೇಕು ಎಂದು ಇಲ್ಲಿನ ಜನರು ಮನವಿ ಮಾಡಿದ್ದಾರೆ. ಈಗಾಗಲೇ ಮೀನುಗಳ ಸಾವನ್ನಪ್ಪುತ್ತಿದ್ದರೂ ಕೂಡ ಅಧಿಕಾರಿಗಳು ನಿರ್ಲಕ್ಷ್ಯವಹಿಸಿರುವುದು ಇಲ್ಲಿನ ಜನರಲ್ಲಿ ಮತ್ತಷ್ಟು ಬೇಸರ ಮೂಡಿಸಿದೆ. ಅಧಿಕಾರಿಗಳು ಕಂಡು ಕಾಣದಂತೆ ಜನರ ಜೀವದ ಜೊತೆ ಚೆಲ್ಲಾಟವಾಡುತ್ತಿದ್ದಾರೆ. ಇನ್ನಾದರೂ ಈ ಬಗ್ಗೆ ಸೂಕ್ತ ಕ್ರಮಕ್ಕೆ ಮುಂದಾಗಬೇಕು ಎಂದು ಮನವಿ ಮಾಡಿದ್ದಾರೆ.

( ವರದಿ: ಮಂಜುನಾಥ ಯಡಳ್ಳಿ)
Published by:Seema R
First published: