• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Karnataka Politics: ಇವರೂ ಕೂಡ ಸಿಎಂ ಆಗುವುದಕ್ಕೆ ಅರ್ಹರು! ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬ್ಯಾಟಿಂಗ್ ಮಾಡಿದ್ದು ಯಾರ ಪರ?

Karnataka Politics: ಇವರೂ ಕೂಡ ಸಿಎಂ ಆಗುವುದಕ್ಕೆ ಅರ್ಹರು! ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬ್ಯಾಟಿಂಗ್ ಮಾಡಿದ್ದು ಯಾರ ಪರ?

ಲಕ್ಷ್ಮಿ ಹೆಬ್ಬಾಳ್ಕರ್‌

ಲಕ್ಷ್ಮಿ ಹೆಬ್ಬಾಳ್ಕರ್‌

ಬೆಳಗಾವಿ ಜಿಲ್ಲೆಯಲ್ಲಿ ಅಸಮಾಧಾನ ಇದೆ, ಆದರೆ ಬೇರೆ ಬೇರೆ ಹುದ್ದೆಗಳನ್ನು ನೀಡುವ ಮೂಲಕ ನಾಯಕರಿಗೆ ಸೂಕ್ತ ಗೌರವ ನೀಡುವ ಮಾಡುತ್ತೇವೆ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.

  • News18 Kannada
  • 2-MIN READ
  • Last Updated :
  • Bangalore [Bangalore], India
  • Share this:

ಬೆಳಗಾವಿ: ಯಾರಿಗೆ ಸಚಿವ ಸ್ಥಾನ (Cabinet Minister) ಸಿಕ್ಕಿಲ್ಲ ಅವರೆಲ್ಲಾ ಆರೋಪ ಮಾಡುತ್ತಿದ್ದಾರೆ. ಅದು ಸ್ವಾಭಾವಿಕ ಮತ್ತು ಸಹಜ . ಅಸಮಾಧಾನಿತರಿಗೆ ಬೇರೆ ಬೇರೆ ಹುದ್ದೆ ಕೊಡುತ್ತೇವೆ ಎಂದು ಸಚಿವ ಸತೀಶ್ ಜಾರಕಿಹೊಳಿ (Satish Jarkiholi) ಹೇಳಿದ್ದಾರೆ. ಇತ್ತ ಸತೀಶ್ ಜಾರಕಿಹೊಳಿಗೆ ಡಿಸಿಎಂ (DCM) ಸ್ಥಾನ ಯಾಕೆ ಕೊಡಲಿಲ್ಲ ಎಂಬ ಪ್ರಶ್ನೆಗೆ ಲಕ್ಷ್ಮಿ ಹೆಬ್ಬಾಳ್ಕರ್‌ (Laxmi Hebbalkar) ಪ್ರತಿಕ್ರಿಯಿಸಿ, ಸತೀಶ್ ಜಾರಕಿಹೊಳಿ ಅವರು ಉಪ ಮುಖ್ಯಮಂತ್ರಿ ಅಷ್ಟೇ ಅಲ್ಲ. ಮುಖ್ಯಮಂತ್ರಿ (Chief Minister) ಸ್ಥಾನಕ್ಕೂ ಅರ್ಹರು. ಅದಕ್ಕೆಲ್ಲವೂ ಕಾಲ ಕೂಡಿ ಬರಬೇಕಿದೆ ಎಂದಿದ್ದಾರೆ.


70 ಸಾವಿರ ಅಂಗನವಾಡಿಗಳು ರಾಜ್ಯದಲ್ಲಿ ಇದೆ


ಮಹಿಳಾ ಮತ್ತು ಮಕ್ಕಳ ಇಲಾಖೆ ನೀಡುವ ಬಗ್ಗೆ ಮಾತನಾಡಿದ ಲಕ್ಷ್ಮಿ ಹೆಬ್ಬಾಳ್ಕರ್ ಅವರು, ಮೊದಲು ಇಲಾಖೆಯಲ್ಲಿ ಆಮೂಲಾಗ್ರ ಬದಲಾವಣೆ ಮಾಡುವ ಚಿಂತನೆ ಇದೆ. ಮೊದಲು ಇಲಾಖೆ ಬಗ್ಗೆ ಅರ್ಥ ಮಾಡಿಕೊಳ್ಳಬೇಕಿದೆ. 70 ಸಾವಿರ ಅಂಗನವಾಡಿಗಳು ರಾಜ್ಯದಲ್ಲಿ ಇದೆ, ಸಾವಿರಾರರು ಅಂಗನವಾಡಿಗಳಿಗೆ ಕಟ್ಟಡ ಕೂಡ ಇಲ್ಲ. ಆದ್ದರಿಂದ ಇಷ್ಟು ವರ್ಷ ಆಗದ ಕೆಲಸಗಳನ್ನು ಒಂದೇ ದಿನ ಆಗೋದಿಲ್ಲ. ಆದ್ದರಿಂದ ನಮ್ಮ ಯೋಜನೆಗಳನ್ನು ಯಶಸ್ವಿಯಾಗಿ ಜಾರಿ ಮಾಡುವ ಮೂಲಕ ಬದಲಾವಣೆಗೆ ಕಾರಣವಾಗುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.


ಇದನ್ನೂ ಓದಿ: Karanataka Cabinet: ಸಿಎಂ, ಡಿಸಿಎಂಗೆ ‘ಸಾರಿಗೆ’ ಸಂಕಷ್ಟ! ಕೃಷ್ಣ ಭೈರೇಗೌಡ ಖಾತೆ ಮೇಲೆ ರಾಮಲಿಂಗಾರೆಡ್ಡಿ ಕಣ್ಣು!




ಇದಕ್ಕೂ ಮುನ್ನ ಮಾತನಾಡಿದ ಸತೀಶ್ ಜಾರಕಿಹೊಳಿ ಅವರು, ಈ ಹಿಂದೆಯೂ ನಾನು ಸಚಿವನಾಗಿದ್ದೆ. ಈ ಹಿಂದಿನ ಯೋಜನೆಗಳನ್ನು ಪೂರ್ಣಗೊಳಿಸಲು ಮುಂದಾಗುತ್ತೇವೆ ಎಂದು. ಬೆಳಗಾವಿ ಜಿಲ್ಲೆಯಲ್ಲಿ ಅಸಮಾಧಾನ ಇದೆ, ಆದರೆ ಬೇರೆ ಬೇರೆ ಹುದ್ದೆಗಳನ್ನು ನೀಡುವ ಮೂಲಕ ನಾಯಕರಿಗೆ ಸೂಕ್ತ ಗೌರವ ನೀಡುವ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು.


ಬೆಳಗಾವಿಯಲ್ಲಿ ಕಾಂಗ್ರೆಸ್ ಭರ್ಜರಿ ವಿಜಯ ಪಡೆದ ಹಿನ್ನೆಲೆಯಲ್ಲಿ ಇಂದು ಕಾಂಗ್ರೆಸ್ ನಾಯಕರು ವಿಜಯೋತ್ಸವ ಬೈಕ್ ರ್ಯಾಲಿ ನಡೆಸಿದರು. ಸಭೆಯಲ್ಲಿ ಸಚಿವರಾದ ಸತೀಶ್​ ಜಾರಕಿಹೊಳಿ, ಲಕ್ಷ್ಮಿ ಹೆಬ್ಬಾಳ್ಕರ್, ಶಾಸಕರಾದ ರಾಜು ಸೇಠ್, ಬಾಬಾಸಾಹೇಬ್ ಪಾಟೀಲ್, ವಿಶ್ವಾಸ್ ವೈದ್ಯ ಸಾಥ್ ನೀಡಿದ್ದಾರೆ. ಕಾಂಗ್ರೆಸ್ ಭವನದಿಂದ ಹೊರಟಿ ರ್ಯಾಲಿಯಲ್ಲಿ 5 ಸಾವಿರಕ್ಕೂ ಹೆಚ್ಚು ಬೈಕ್ ಭಾಗಿಯಾಗಿದ್ದವು. ಜಿಲ್ಲೆಯಲ್ಲಿ 11ಸ್ಥಾನ ಗೆದ್ದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಂಭ್ರಮಾಚರಣೆ ನಡೆದಿದೆ.

First published: