ಅಥಣಿಯಲ್ಲಿ ಮಹೇಶ್​​ ಕುಮಠಳ್ಳಿ ಗೆಲ್ಲಿಸಿ; ಬಿಜೆಪಿಗರ ಸಮ್ಮುಖದಲ್ಲೇ ಲಕ್ಷ್ಮಣ ಸವದಿ ಕರೆ; ಉಹಾಪೋಹಾಗಳಿಗೆ ತೆರೆ

ಈ ಮೂಲಕ ಸಿಎಂ ಬಿ. ಎಸ್. ಯಡಿಯೂರಪ್ಪ, ಮಾಜಿ ಸಿಎಂ ಮತ್ತು ಸಚಿವ ಜಗದೀಶ ಶೆಟ್ಟರ, ಸಚಿವರಾದ ಕೆ. ಎಸ್. ಈಶ್ವರಪ್ಪ, ಬಿಜೆಪಿ ಹಿರಿಯ ಶಾಸಕರಾದ ಉಮೇಶ ಕತ್ತಿ, ಸಿದ್ದು ಸವದಿ ಸಮ್ಮುಖದಲ್ಲೇ ತಮ್ಮ ಮತ್ತು ಬಿಜೆಪಿ ಅಭ್ಯರ್ಥಿ ಮಹೇಶ ಕುಮಠಳ್ಳಿ ಮಧ್ಯೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ ಎಂಬ ಸ್ಪಷ್ಟ ಸಂದೇಶ ಡಿಸಿಎಂ ಲಕ್ಷ್ಮಣ ಸವದಿ ಸಾರಿದ್ದಾರೆ.

news18-kannada
Updated:November 24, 2019, 8:53 AM IST
ಅಥಣಿಯಲ್ಲಿ ಮಹೇಶ್​​ ಕುಮಠಳ್ಳಿ ಗೆಲ್ಲಿಸಿ; ಬಿಜೆಪಿಗರ ಸಮ್ಮುಖದಲ್ಲೇ ಲಕ್ಷ್ಮಣ ಸವದಿ ಕರೆ; ಉಹಾಪೋಹಾಗಳಿಗೆ ತೆರೆ
ಡಿಸಿಎಂ ಲಕ್ಷ್ಣಣ ಸವದಿ
  • Share this:
ಬೆಳಗಾವಿ(ನ.24): ಅಥಣಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಅನರ್ಹ ಶಾಸಕ ಮಹೇಶ ಕುಮಠಳ್ಳಿ ಕಣಕ್ಕಿಳಿದಿರುವ ಕಾರಣ ಡಿಸಿಎಂ ಲಕ್ಷ್ಮಣ ಸವದಿ ಸ್ವಕ್ಷೇತ್ರ ಕಳೆದುಕೊಳ್ಳುವ ಆತಂಕ ಎದುರಿಸುತ್ತಿದ್ದರು. ಹಾಗಾಗಿ ಕೊನೆ ಘಳಿಗೆಯಲ್ಲಿ ಬಿಜೆಪಿ ಅಭ್ಯರ್ಥಿಗೆ ಕೈ ಕೊಡಲಿದ್ದಾರೆ ಎಂಬ ಊಹಾಪೋಹಗಳು ಹರಿದಾಡಿದ್ದವು. ಈ ವಿಚಾರ ಲಕ್ಷ್ಮಣ ಸವದಿಗೂ ಸಾಕಷ್ಟು ಕಿರಿಕಿರಿ ಉಂಟು ಮಾಡಿತ್ತು. ಇಂದರಿಂದ ಬೇಸತ್ತ ಡಿಸಿಎಂ ಲಕ್ಷ್ಮಣ ಸವದಿ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಸಿಎಂ ಬಿ. ಎಸ್. ಯಡಿಯೂರಪ್ಪ ಮುಂದೆಯೇ ಈ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.

ಬಿಜೆಪಿ ಕಾರ್ಯಕರ್ತರು ಯಾವುದೇ ಕಾರಣಕ್ಕೆ ಆತಂಕಕ್ಕೆ ಒಳಗಾಗಬಾರದು.  ಅಥಣಿ ಕ್ಷೇತ್ರದಲ್ಲಿ ಒಂದು ಇತಿಹಾಸ ಬರೆಯಬೇಕಿದೆ.  ನಮ್ಮನ್ನು ನಂಬಿಕೊಂಡು ಬಂದಿರುವ ಅಭ್ಯರ್ಥಿಯನ್ನು ಕೈ ಬಿಡಬಿರಾದು. ಇವರನ್ನು ಬಿಜೆಪಿಗರು ಗೆಲ್ಲಿಸಿದರು ಎಂದ ಸಂದೇಶ ಸಂದೇಶ ಅಥಣಿಯಿಂದ ಇಡೀ ರಾಜ್ಯಕ್ಕೆ ಹೋಗಬೇಕಿದೆ ಎನ್ನುವ ಮೂಲಕ ಮಹೇಶ್​​ ಕುಮಠಳ್ಳಿ ಪರ ಮತಯಾಚಿಸಿದರು. ಹೀಗೆ ಲಕ್ಷ್ಮಣ ಸವದಿ ನೀಡಿದ್ದ ಹೇಳಿಕೆ ಬಿಜೆಪಿಗರಿಗೆ ಅಚ್ಚರಿ ಮೂಡಿಸಿತು.

ಇನ್ನು ಮಾತು ಮುಂದುವರೆಸಿದ ಸವದಿ, ಇದು ನಮ್ಮ ಎಲ್ಲರ ಗೌರವ ಪ್ರಶ್ನೆ.  ಮೂಲ ಬಿಜೆಪಿ ಕಾರ್ಯಕರ್ತರು, ಲಕ್ಷ್ಮಣ ಸವದಿ ಬೆಂಬಲಿಗರಿಗೆ ನಾನು ಪಾದಮುಟ್ಟಿ ನಮಸ್ಕರಿಸಿ ಕೇಳುತ್ತೇನೆ. ಇಲ್ಲಿಯ ಜನ ಪ್ರಜ್ಞಾವಂತರಿದ್ದಾರೆ ಎಂದು ಇಡೀ ರಾಜ್ಯದ ಜನರಿಗೆ ತೋರಿಸಿ.  ಹಿಂದಿನ ಎಲ್ಲ ಘಟನೆಗಳನ್ನು ಮರೆಯಬೇಕು.  ನಾಳೆ ನಾನು ಫೋನ್ ಮಾಡಿ ಬೇರೆ ಸಂದೇಶ ಕಳುಹಿಸಬಹುದು ಎಂಬ ನಿರೀಕ್ಷೆ ಬೇಡ ಎಂದರು.

ಇದನ್ನೂ ಓದಿ: ಬಹುಮತ ಸಾಬೀತು ಕೋರಿ ಸೇನಾ-ಕಾಂಗ್ರೆಸ್-ಎನ್​​ಸಿಪಿ ಸುಪ್ರೀಂಕೋರ್ಟ್​​​ನಲ್ಲಿ ಅರ್ಜಿ; ಇಂದು ವಿಚಾರಣೆ

ಅಥಣಿ ಬಿಜೆಪಿ ಅಭ್ಯರ್ಥಿ ಮಹೇಶ ಕುಮಠಳ್ಳಿ ಅವರನ್ನು ಗೆಲ್ಲಿಸಲೇಬೇಕು.  ಕಳೆದ ಬಾರಿ ಕಾಂಗ್ರೆಸ್ ಅಭ್ಯರ್ಥಿ 82000 ಮತ್ತು ನಾನು 80000 ಮತಗಳನ್ನು ಪಡೆದಿದ್ದೆವು. ಈ ಬಾರಿ ನನ್ನ ಮತ್ತವರ ಮತಗಳನ್ನು ಒಟ್ಟಿಗೆ ಸೇರಿಸಿ ಬಿಜೆಪಿ ಅಭ್ಯರ್ಥಿಯ ಠೇವಣಿ ಜಪ್ತಿಯಾಗುವಂತೆ ಮಾಡಿ ಎಂದು ಕರೆ ನೀಡುವ ಮೂಲಕ ತಮ್ಮಲ್ಲಿ ಯಾವುದೇ ಅಸಮಾಧಾನ ಇಲ್ಲ ಎಂಬುದನ್ನು ಡಿಸಿಎಂ ಲಕ್ಸ್ಮಣ ಸವದಿ ಸ್ಪಷ್ಟನೆ ನೀಡಿದರು.

ಲಕ್ಷ್ಮಣ ಸವದಿ ಅಥಣಿ ಮತದಾರರು ಮತ್ತು ರಾಜ್ಯ ಹಾಗೂ ರಾಷ್ಟ್ರ ಬಿಜೆಪಿ ಮುಖಂಡರಿಗೆ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ಸಿಎಂ ಬಿ. ಎಸ್. ಯಡಿಯೂರಪ್ಪ, ಮಾಜಿ ಸಿಎಂ ಮತ್ತು ಸಚಿವ ಜಗದೀಶ ಶೆಟ್ಟರ, ಸಚಿವರಾದ ಕೆ. ಎಸ್. ಈಶ್ವರಪ್ಪ, ಬಿಜೆಪಿ ಹಿರಿಯ ಶಾಸಕರಾದ ಉಮೇಶ ಕತ್ತಿ, ಸಿದ್ದು ಸವದಿ ಸಮ್ಮುಖದಲ್ಲೇ ತಮ್ಮ ಮತ್ತು ಬಿಜೆಪಿ ಅಭ್ಯರ್ಥಿ ಮಹೇಶ ಕುಮಠಳ್ಳಿ ಮಧ್ಯೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ ಎಂಬ ಸ್ಪಷ್ಟ ಸಂದೇಶ ಡಿಸಿಎಂ ಲಕ್ಷ್ಮಣ ಸವದಿ ಸಾರಿದ್ದಾರೆ.
First published: November 24, 2019, 8:46 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading