‘ಮಹಾ’ ಬೆಳವಣಿಗೆ: ಮೈತ್ರಿಧರ್ಮ ಪಾಲಿಸದ ಶಿವಸೇನಾಗೆ ತಕ್ಕ ಪಾಠ – ಲಕ್ಷ್ಮಣ ಸವದಿ

ಶಿವಸೇನಾದ ಅಧಿಕಾರ ಲಾಲಸೆ ಹೆಚ್ಚಾಗಿತ್ತು. ಸಾವರ್ಕರ್ ವಿರುದ್ಧ ಟೀಕಿಸಿದ್ದ ಕಾಂಗ್ರೆಸ್ ಜೊತೆ ಅದು ಸರ್ಕಾರ ರಚಿಸಲು ಹೊರಟಿತ್ತು. ಇತಿಮಿತಿ ಮೀರಿ ವರ್ತಿಸುತ್ತಿದ್ದ ಶಿವಸೇನಾಗೆ ತಕ್ಕ ಪಾಠ ಕಲಿಸಿದಂತಾಗಿದೆ ಎಂದು ಸಚಿವ ಜಗದೀಶ್ ಶೆಟ್ಟರ್ ತಿಳಿಸಿದ್ದಾರೆ.

news18
Updated:November 23, 2019, 12:50 PM IST
‘ಮಹಾ’ ಬೆಳವಣಿಗೆ: ಮೈತ್ರಿಧರ್ಮ ಪಾಲಿಸದ ಶಿವಸೇನಾಗೆ ತಕ್ಕ ಪಾಠ – ಲಕ್ಷ್ಮಣ ಸವದಿ
ಅಥಣಿಯಲ್ಲಿ ಯಡಿಯೂರಪ್ಪ ಮತ್ತು ಲಕ್ಷ್ಮಣ ಸವದಿ
  • News18
  • Last Updated: November 23, 2019, 12:50 PM IST
  • Share this:
ಬೆಳಗಾವಿ(ನ. 23): ಮಹಾರಾಷ್ಟ್ರದಲ್ಲಿ ನಡೆದ ದಿಢೀರ್ ರಾಜಕೀಯ ಬೆಳವಣಿಗೆಯಲ್ಲಿ ಎನ್​ಸಿಪಿಯ ಅಜಿತ್ ಪವಾರ್ ಅವರು ಬಿಜೆಪಿ ಜೊತೆ ಕೈಜೋಡಿಸಿ ಸರ್ಕಾರ ರಚನೆಯಾಗಿದೆ. ಎನ್​ಸಿಪಿ ಮತ್ತು ಕಾಂಗ್ರೆಸ್ ಜೊತೆ ನಿನ್ನೆಯವರೆಗೂ ಮೈತ್ರಿ ಮಾತುಕತೆಯಲ್ಲಿ ತೊಡಗಿದ್ದ ಶಿವಸೇನಾಗೆ ಶಾಕ್ ಆಗಿದೆ. ಸಿಎಂ ಯಡಿಯೂರಪ್ಪ, ಡಿಸಿಎಂ ಲಕ್ಷ್ಮಣ ಸವದಿ, ಸಚಿವರಾದ ಈಶ್ವರಪ್ಪ, ಬಸವರಾಜ್ ಬೊಮ್ಮಾಯಿ ಮೊದಲಾದ ರಾಜ್ಯ ಬಿಜೆಪಿ ನಾಯಕರು ಮಹಾರಾಷ್ಟ್ರದ ಈ ನಾಟಕೀಯ ಬೆಳವಣಿಗೆಯನ್ನು ಸ್ವಾಗತಿಸಿದ್ದಾರೆ.

ಮಹಾರಾಷ್ಟ್ರದಲ್ಲಿ ಬಿಜೆಪಿ ಕಾರ್ಯಕರ್ತರ ವಿರೋಧದ ನಡುವೆಯೂ ಶಿವಸೇನಾ ಜೊತೆ ಸ್ಥಾನ ಹೊಂದಾಣಿಕೆ ಮಾಡಿಕೊಳ್ಳಲಾಗಿತ್ತು. ಫಲಿತಾಂಶ ಪ್ರಕಟವಾಗುತ್ತಲೇ ಶಿವಸೇನಾ ಬೇರೆ ಧ್ವನಿ ಎತ್ತಿತು. ಶಿವಸೇನಾ ಪಕ್ಷವು ಮೈತ್ರಿ ಧರ್ಮ ಪಾಲಿಸುವಲ್ಲಿ ತಪ್ಪಿತು. ಅದರ ಮೈತ್ರಿ ದ್ರೋಹಕ್ಕೆ ಈಗ ತಕ್ಕ ಪಾಠ ಸಿಕ್ಕಿದೆ ಎಂದು ಅಥಣಿಯಲ್ಲಿ ಡಿಸಿಎಂ ಲಕ್ಷ್ಮಣ ಸವದಿ ಅಭಿಪ್ರಾಯಪಟ್ಟಿದ್ಧಾರೆ.

ಇದನ್ನೂ ಓದಿ: ಕಾಂಗ್ರೆಸ್ ದಾರಿ ತಪ್ಪಿದೆ - ಒಂದರ್ಥದಲ್ಲಿ ಸಿದ್ಧರಾಮಯ್ಯ ಕಾಂಗ್ರೆಸ್ ಆಗಿದೆ; ಕೆ.ಎಸ್.ಈಶ್ವರಪ್ಪ ಲೇವಡಿ

ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಶಿವಸೇನಾ ಜೊತೆ ಹೊಂದಾಣಿಕೆ ಮಾಡಿಕೊಳ್ಳದೇ ಎಲ್ಲಾ ಕ್ಷೇತ್ರಗಳಲ್ಲೂ ಸ್ಪರ್ಧಿಸಿದ್ದರೆ ಬಿಜೆಪಿಗೆ ಬಹುಮತ ಬರುತ್ತಿತ್ತು. ಆದರೆ, ಶಿವಸೇನಾ ಇದನ್ನು ಅರ್ಥ ಮಾಡಿಕೊಳ್ಳದೇ ಬಿಜೆಪಿಯನ್ನು ಬಿಟ್ಟು ಎನ್​ಸಿಪಿ ಮತ್ತು ಕಾಂಗ್ರೆಸ್ ಜೊತೆ ಸರಕಾರ ರಚನೆಗೆ ಮುಂದಾಗಿತ್ತು. ಅದರ ದುರಾಸೆಗೆ ಈಗ ಪ್ರತಿಫಲ ಸಿಕ್ಕಿದೆ. ದೇವೇಂದ್ರ ಫಡ್ನವಿಸ್ ಸಿಎಂ ಆಗಿ, ಅಜಿತ್ ಪವಾರ್ ಡಿಸಿಎಂ ಆಗಿ 5 ವರ್ಷ ಮುಂದುವರಿಯಲಿದ್ಧಾರೆ ಎಂದು ಲಕ್ಷ್ಮಣ ಸವದಿ ಹೇಳಿದ್ಧಾರೆ.

ಸಚಿವ ಕೆ.ಎಸ್. ಈಶ್ವರಪ್ಪ ಅವರು ಮಹಾರಾಷ್ಟ್ರದಲ್ಲಿನ ರಾಜಕೀಯ ಬಿಕ್ಕಟ್ಟಿಗೆ ಶಿವಸೇನಾ ಮತ್ತು ಕಾಂಗ್ರೆಸ್ ಪಕ್ಷಗಳನ್ನ ದೂಷಿಸಿದ್ದಾರೆ. ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಕುತಂತ್ರದಿಂದ ಸರ್ಕಾರ ರಚಿಸಲು ಹೊರಟಿತ್ತು. ಹಿಂದುತ್ವವಾದಿ ಎನ್ನುವ ಶಿವಸೇನಾ ಪಕ್ಷವು ಕಾಂಗ್ರೆಸ್ ಜೊತೆ ಸೇರಲು ಹೊರಟಿತ್ತು. ಕಾಂಗ್ರೆಸ್​ನ ದ್ವಿಮುಖ ನೀತಿ ಇಲ್ಲಿ ಸ್ಪಷ್ಟವಾಗಿದೆ ಎಂದು ಈಶ್ವರಪ್ಪ ಟೀಕಿಸಿದ್ದಾರೆ.

ಶಿವಸೇನಾದ ಅಧಿಕಾರ ಲಾಲಸೆ ಹೆಚ್ಚಾಗಿತ್ತು. ಸಾವರ್ಕರ್ ವಿರುದ್ಧ ಟೀಕಿಸಿದ್ದ ಕಾಂಗ್ರೆಸ್ ಜೊತೆ ಅದು ಸರ್ಕಾರ ರಚಿಸಲು ಹೊರಟಿತ್ತು. ಇತಿಮಿತಿ ಮೀರಿ ವರ್ತಿಸುತ್ತಿದ್ದ ಶಿವಸೇನಾಗೆ ತಕ್ಕ ಪಾಠ ಕಲಿಸಿದಂತಾಗಿದೆ ಎಂದು ಸಚಿವ ಜಗದೀಶ್ ಶೆಟ್ಟರ್ ತಿಳಿಸಿದ್ದಾರೆ.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.
First published: November 23, 2019, 12:46 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading