Bengaluru: ಪೊಲೀಸರಿಂದ ವಕೀಲ ಜಗದೀಶ್ ಅರೆಸ್ಟ್, Lawyer ಬಂಧನಕ್ಕೆ ಕಾರಣ ಏನು ಗೊತ್ತಾ?

ಬಾರ್ ಕೌನ್ಸಿಲ್ ನೀಡಿದ ದೂರು ಆಧರಿಸಿ ಕ್ರಮ ಕೈಗೊಳ್ಳುವಂತೆ ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್ ಸೂಚಿಸಿದ್ದರು. ಹೀಗಾಗಿ ಕಮಿಷನರ್ ಸೂಚನೆಯಂತೆ ಬೆಂಗಳೂರಿನ ಹಲಸೋರು ಗೇಟ್ ಠಾಣೆ ಪೊಲೀಸರು ವಕೀಲ ಜಗದೀಶ್ ಅವರನ್ನು ಬಂಧಿಸಿದ್ದಾರೆ.

ವಕೀಲ ಜಗದೀಶ್

ವಕೀಲ ಜಗದೀಶ್

  • Share this:
ಬೆಂಗಳೂರು: ಸದಾ ಸದ್ದು, ಸುದ್ದಿ ಮಾಡುತ್ತಿರುವ ವಕೀಲ (Lawyer) ಜಗದೀಶ್ (Jagadish) ಮತ್ತೊಮ್ಮಮೆ ಸುದ್ದಿಯಾಗಿದ್ದಾರೆ. ಮಾಜಿ ಸಚಿವರೊಬ್ಬರ (Ex-Minister) ಸಿಡಿ (CD) ಆರೋಪದ ಕೇಸ್‌ನಿಂದ (Case) ಮುನ್ನಲೆಗೆ ಬಂದಿದ್ದ ವಕೀಲ ಜಗದೀಶ್, ಬಳಿಕ ಸುಮಾರು ಪ್ರಕರಣಗಳಲ್ಲಿ ಸುದ್ದಿಯಾಗಿದ್ದರು. ಮೊನ್ನೆಮೊನ್ನೆಯಷ್ಟೇ ಶಾಸಕರೊಬ್ಬರ (MLA) ವಿರುದ್ಧ ಮಹಿಳೆಯೊಬ್ಬರು ಆರೋಪಿಸಿದ್ದರು. ಆಗ ಆ ಮಹಿಳೆಗೆ ಬೆಂಬಲವಾಗಿ ನಿಂತಿದ್ದು ಇದೇ ನ್ಯಾಯವಾದಿ ಜಗದೀಶ್. ಇದೀಗ ವಕೀಲ ಜಗದೀಶ್ ಬಂಧಿಸಲ್ಪಟ್ಟಿದ್ದಾರೆ (Arrest). ಅವರನ್ನು ಬೆಂಗಳೂರು ಪೊಲೀಸರು (Bengaluru Police) ಅವರನ್ನು ವಶಕ್ಕೆ ಪಡೆದಿದ್ದಾರೆ. ಅಲ್ಲದೇ ಅವರ ವಿರುದ್ಧ ಎಫ್ಐಆರ್‌ (FIR) ಸಹ ದಾಖಲಾಗಿದೆ. ಜೊತೆಗೆ ಅವರ ಪುತ್ರನ ವಿರುದ್ಧವೂ ಕೂಡ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಹಾಗಿದ್ರೆ ವಕೀಲ ಜಗದೀಶ್ ಬಂಧನಕ್ಕೆ ಕಾರಣವೇನು? ಅವರ ಮೇಲಿನ ಆರೋಪ ಏನು ಎನ್ನುವ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ…

ಕೋರ್ಟ್ ಅವರಣದಲ್ಲಿ ಗಲಾಟೆ ನಡೆಸಿದ ಆರೋಪ

 ವಕೀಲ ಜಗದೀಶ್ ವಿರುದ್ದ ವಕೀಲರ ಮೇಲೆ ಹಲ್ಲೆ ನಡೆಸಿ, ಜೀವ ಬೆದರಿಕೆ ಹಾಕಿದ್ದಾರೆ ಅಂತ ಹಲಸೂರುಗೇಟ್ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು.  ಬಾರ್ ಕೌನ್ಸಿಲ್ ಅಧ್ಯಕ್ಷ ವಿವೇಕ್  ರೆಡ್ಡಿ ಅವರು ಜಗದೀಶ್ ವಿರುದ್ದ ದೂರು ನೀಡಿದ್ದರು. ಜಗದೀಶ್ ಗುಂಪು ಕಟ್ಟಿಕೊಂಡು ಬಂದು ಕೊಲೆಗೆ ಯತ್ನಿಸಿದ್ದಾರೆ. ಅಲ್ಲದೇ  ಕೋರ್ಟ್ ಆವರದ ಒಳಗೆ ನುಗ್ಗಿ ದಾಂಧಲೆ ಮಾಡಿದ್ದಾರೆ. ಹೊರಗಿನವರನ್ನು ಕರೆತಂದು ಲಾಯರ್ ಗಳ ಮೇಲೆ ದಾಳಿ ಮಾಡಿಸಿದ್ದಾರೆ ಅಂತ ಆರೋಪಿಸಿ ದೂರು ನೀಡಲಾಗಿತ್ತು.

ದೂರು ದಾಖಲಿಸಿದ್ದ ವಕೀಲ ಜಗದೀಶ್

ಬಾರ್ ಕೌನ್ಸಿಲ್ ಅಧ್ಯಕ್ಷ ವಿವೇಕ್ ರೆಡ್ಡಿ ದೂರು ನೀಡುವು ಮುನ್ನವೇ ವಕೀಲ ಜಗದೀಶ್ ಕೂಡ ಪ್ರತಿದೂರು ದಾಖಲಿಸಿದ್ದರು. ಕೇಸ್ ಸಂಬಂಧ ಶುಕ್ರವಾರ ಬೆಳಗ್ಗೆ ಸಿಟಿ ಸಿವಿಲ್ ಕೋರ್ಟ್‌ಗೆ ದಾಖಲೆ ಸಲ್ಲಿಸಲು ಹೋದಾಗ ನನ್ನ ಮೇಲೆ ಹಲ್ಲೆ ನಡೆದಿತ್ತು.

ಕೆಲವರು ತನ್ನ ಮೇಲೆ ಹಾಗೂ ನನ್ನ ಪುತ್ರ ಸೇರಿದಂತೆ ಆಪ್ತರ ಮೇಲೆ ಹಲ್ಲೆ ನಡೆಸಿದ್ದಾರೆಂದು ಜಗದೀಶ್ ಆರೋಪಿಸಿದ್ದರು. ಇದಾದ ನಂತರ ಶನಿವಾರ ವಕೀಲರ ಸಂಘ ಪೊಲೀಸ್‌ ಆಯುಕ್ತರಿಗೆ ದೂರು ನೀಡಿತ್ತು.

ಇದನ್ನು ಓದಿ: Fraud Case: ಪರಿಚಿತನ ಸೋಗಲ್ಲಿ ಮೋಸ ಮಾಡಿದ ಖದೀಮ, ಹೋಟೆಲ್ ಹುಡುಗನ ಚಿನ್ನ, ಹಣ ಪಡೆದು ಎಸ್ಕೇಪ್

ಕಮಿಷನರ್ ಸೂಚನೆಯಂತೆ ವಕೀಲ ಜಗದೀಶ್ ಬಂಧನ

ಬಾರ್ ಕೌನ್ಸಿಲ್ ನೀಡಿದ ದೂರು ಆಧರಿಸಿ ಕ್ರಮ ಕೈಗೊಳ್ಳುವಂತೆ ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್ ಸೂಚಿಸಿದ್ದರು. ಹೀಗಾಗಿ ಕಮಿಷನರ್ ಸೂಚನೆಯಂತೆ ಬೆಂಗಳೂರಿನ ಹಲಸೋರು ಗೇಟ್ ಠಾಣೆ ಪೊಲೀಸರು ವಕೀಲ ಜಗದೀಶ್ ಅವರನ್ನು ಬಂಧಿಸಿದ್ದಾರೆ.

ಇನ್ನು ಪೊಲೀಸರು ಇಂದು‌ ಸಂಜೆಯೊಳಗೆ ಕೋರಮಂಗಲ ನ್ಯಾಯಾಧೀಶರ ನಿವಾಸಕ್ಕೆ ಜಗದೀಶ್‌ ಅವರನ್ನು ಹಾಜರುಪಡಿಸಲು ಸಿದ್ಧತೆ ನಡೆಸಿಕೊಂಡಿದ್ದಾರೆ.

ಜಗದೀಶ್ ಮೇಲೆ ಎಫ್ಐಆರ್ ದಾಖಲು

ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ವಕೀಲ ಜಗದೀಶ್ ವಿರುದ್ಧ ಎಫ್ಐಆರ್ ದಾಖಲಾಗಿದೆ.  ಐಪಿಸಿ 307,143,153a,120b, 323, 504, 506,149 ಸೆಕ್ಷನ್ ಅಡಿ ಕೇಸ್ ದಾಖಲಾಗಿದೆ. ಸದ್ಯ ಹಲಸೂರು ಗೇಟ್ ಠಾಣೆ ಬಳಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.  ಮುನ್ನೆಚ್ಚರಿಕಾ ಕ್ರಮವಾಗಿ KSRP ತುಕಡಿ ನಿಯೋಜನೆ ಮಾಡಲಾಗಿದೆ.

ಇದನ್ನು ಓದಿ:  Cyber Crime: ಅವಳು ಬೇಕಾ, ಇವಳು ಬೇಕಾ? ಹೀಗಂತ ಫೋಟೋ ಜೊತೆ ರೇಟ್ ಹಾಕ್ತಿದ್ದ ವಿಕೃತ ಯುವಕ!

ಪುತ್ರನ ಮೇಲೂ ಎಫ್ಐಆರ್

ಇನ್ನು ವಕೀಲ ಜಗದೀಶ್ ಪುತ್ರ ಆರ್ಯಗೌಡ ಮೇಲೆ ಕೂಡ ಎಫ್‌ಐಆರ್ ದಾಖಲಾಗಿದೆ. ಕೊಡಿಗೇಹಳ್ಳಿ ಠಾಣೆಯಲ್ಲಿ ಪುನೀತ್ ಕೆರೆಹಳ್ಳಿ ಎಂಬುವರು ದೂರು ದಾಖಲಿಸಿದ್ದರು.  ಕಾಲೇಜೊಂದರ ಬಳಿ ಹೋದಾಗ ಹಲ್ಲೆ ಮಾಡಿ ಕೊಲೆ ಬೆದರಿಕೆ ಹಾಕಿರುವ ಆರೋಪ ಮಾಡಿ ಪುನೀತ್ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಆರ್ಯಗೌಡ ಮೇಲೆ ಐಪಿಸಿ ಸೆಕ್ಷನ್ 323, 504 ಹಾಗೂ 506 ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.
Published by:Annappa Achari
First published: