ಶಾಸಕ ಸಿಎಂ‌ ಇಬ್ರಾಹಿಂರಿಂದ ಕಾನೂನು ಉಲ್ಲಂಘನೆ! ; ಚುನಾವಣಾ ಆಯೋಗಕ್ಕೆ ದೂರು ಸಲ್ಲಿಕೆ

news18
Updated:August 31, 2018, 1:50 PM IST
ಶಾಸಕ ಸಿಎಂ‌ ಇಬ್ರಾಹಿಂರಿಂದ ಕಾನೂನು ಉಲ್ಲಂಘನೆ! ; ಚುನಾವಣಾ ಆಯೋಗಕ್ಕೆ ದೂರು ಸಲ್ಲಿಕೆ
news18
Updated: August 31, 2018, 1:50 PM IST
-ನ್ಯೂಸ್​ 18 ಕನ್ನಡ

ಬೆಂಗಳೂರು,(ಆ.31): ವಿಧಾನ ಪರಿಷತ್ ಸದಸ್ಯ ಸಿಎಂ‌ ಇಬ್ರಾಹಿಂ ಎರಡೆರಡು ಕಡೆ ವೋಟರ್​ ಐಡಿ ಹೊಂದಿದ್ದು, ಕಾನೂನು  ಉಲ್ಲಂಘನೆ ಮಾಡಿದ್ದಾರೆ. ಹೀಗಾಗಿ ವಿಪಕ್ಷ ನಾಯಕ ಪದ್ಮನಾಭ ರೆಡ್ಡಿ ರಾಜ್ಯ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ.

ಚುನಾವಣಾ ಆಯೋಗದ ಪ್ರಕಾರ ಎರಡು ಕಡೆ ವೋಟರ್​ ಐಡಿ ಪಡೆಯುವುದು ಕಾನೂನು ಬಾಹಿರ. ಹೀಗಿರುವಾಗ ಇಬ್ರಾಹಿಂ ಅವರು ಶಿವಮೊಗ್ಗ ಜಿಲ್ಲೆಯ ಭದ್ರಾವತಿ ವಿಧಾನಸಭಾ ಕ್ಷೇತ್ರ ಮತ್ತು ಬೆಂಗಳೂರು ಜಿಲ್ಲೆಯ ಶಿವಾಜಿನಗರ ಕ್ಷೇತ್ರ ಎರಡು ಕಡೆ ವೋಟರ್​ ಹೊಂದಿದ್ದಾರೆ.

ಸೆಪ್ಟೆಂಬರ್​ 30 ರಂದು ಬಿಬಿಎಂಪಿ ಚುನಾವಣೆ ನಡೆಯಲಿದ್ದು, ಇಬ್ರಾಹಿಂ ಮತದಾನದ ಹಕ್ಕು ಪಡೆದಿದ್ದಾರೆ. ಬೆಂಗಳೂರಿನ ನಿವಾಸಿ ಎಂದು ಮತದಾನ ಮಾಡಲಿದ್ದಾರೆ. ಈ ಕಾರಣಕ್ಕಾಗಿ  ಬಿಜೆಪಿ ರಾಜ್ಯ ಚುನಾವಣಾ ಆಯೋಗಕ್ಕೆ ದೂರು ನೀಡಿದೆ. ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್​ ಕುಮಾರ್​ ಪರಿಶೀಲನೆ ಮಾಡಿ ಸೂಕ್ತ ಕ್ರಮ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ.

ಸಿಎಂ ಇಬ್ರಾಹಿಂ ಚುನಾವಣಾ ಆಯೋಗಕ್ಕೆ ಯಾಮಾರಿಸಿದ್ರಾ?  ಎಂ.ಎಲ್​.ಸಿ. ಆಸೆಗೆ ಕಾನೂನು ಬಾಹಿರವಾಗಿ ಇಬ್ರಾಹಿಂ ವೋಟರ್​ ಐಡಿ ಪಡೆದ್ರಾ  ಮಾತುಗಳು ಕೇಳಿ ಬರುತ್ತಿವೆ.
First published:August 31, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ