news18-kannada Updated:January 20, 2020, 4:54 PM IST
ಸಚಿವ ಮಾಧುಸ್ವಾಮಿ
ಹಾಸನ: ಕಾನೂನು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಾಧುಸ್ವಾಮಿ ತ್ರೈಮಾಸಿಕ ಪೂರ್ವ ಭಾವಿ ಸಭೆ ನಡೆಸಿದರು. ಸಭೆಯಲ್ಲಿ ಜಿಲ್ಲೆಯ ಅಭಿವೃದ್ಧಿ ವಿಚಾರವಾಗಿ ಅಧಿಕಾರಿಗಳೊಂದಿಗೆ ಸುದೀರ್ಘವಾಗಿ ಚರ್ಚೆ ನಡೆಸಿದರು. ಇದೇ ವೇಳೆ ಅಪರ ಜಿಲ್ಲಾಧಿಕಾರಿ, ಡಿಎಚ್ಓ ಡಾ.ಸತೀಶ್ ಸೇರಿ ಹಲವು ಅಧಿಕಾರಿಗಳನ್ನು ಸಚಿವರು ತರಾಟೆ ತೆಗೆದುಕೊಂಡರು.
ಯಾವ ತಾಲೂಕು ಆಸ್ಪತ್ರೆಯಲ್ಲಿ ಎಷ್ಟು ಹೆರಿಗೆಯಾಗಿದೆ? ಎಲ್ಲಿ ಹೆರಿಗೆ ಪ್ರಮಾಣ ಕಡಿಮೆಯಾಗಿದೆ ಎಂಬ ಅಂಕಿ ಅಂಶ ಕೊಡಿ. ಸರ್ಕಾರಿ ಆಸ್ಪತ್ರೆಯಲ್ಲಿ ಯಾಕೆ ಹೆರಿಗೆ ಪ್ರಮಾಣ ಕಡಿಮೆಯಾಗಿದೆ? ಸಕಲೇಶಪುರ ತಾಲ್ಲೂಕಿನಲ್ಲಿ ಏಕೆ ಕಡಿಮೆಯಾಗಿದೆ? ಎಲ್ಲಾ ತಾಲ್ಲೂಕುಗಳ ಅಂಕಿಅಂಶ ಕೊಡಿ. ಜನರ ಸಮಸ್ಯೆಗೆ ಸ್ಪಂದಿಸುತ್ತಿಲ್ಲವಾ ಎಂದು ಕಿಡಿ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಸತೀಶ್ ಅವರನ್ನು ತರಾಟೆಗೆ ತೆಗೆದುಕೊಂಡರು.
ಅಪರ ಜಿಲ್ಲಾಧಿಕಾರಿ ಕವಿತಾ ರಾಜಾರಾಂ ಅವರಿಗೂ ಸಚಿವರು ಕ್ಲಾಸ್ ತೆಗೆದುಕೊಂಡರು. ಯಾವ ಬ್ಯಾಚ್ ಅಧಿಕಾರಿ ನೀವು? ಐ ಆ್ಯಮಾ ಸಾರಿ ಯಾಕ್ರೀ ಕೆಲಸ ಮಾಡುತ್ತಿಲ್ಲಾ. ಜನರಿಗೆ ನಾವು ಹೇಗೆ ಉತ್ತರ ಕೊಡೋದು? ಎಂದು ಕೋಪವಾಗಿ ಪ್ರಶ್ನಿಸಿದರು. ತಾಲ್ಲೂಕು ಕಚೇರಿಗಳಲ್ಲಿ ಪಿಂಚಣಿ ಅದಾಲತ್ನಲ್ಲಿ ಅರ್ಜಿಗಳು ವಿಲೇವಾರಿ ಆಗುತ್ತಿಲ್ಲಾ. 12,000 ಅರ್ಜಿಗಳು ಬಂದಿವೆ. ಆದರೆ ಇದರಲ್ಲಿ ಕೇವಲ ಒಂದೇ ಒಂದು ಅರ್ಜಿ ಕೂಡ ವಿಲೇವಾರಿ ಆಗಿಲ್ಲಾ. ಪಿಂಚಣಿ ಅದಾಲತ್ ಮಾಡಿ ಏನು ಪ್ರಯೋಜನ ಎಂದು ಎಲ್ಲಾ ತಹಸೀಲ್ದಾರ್ ಹಾಗೂ ಅಧಿಕಾರಿಗಳ ವಿರುದ್ದ ಆಕ್ರೋಶ ಹೊರಹಾಕಿದರು.
ಇದನ್ನು ಓದಿ: ಬಿಜೆಪಿಯವ್ರಿಗೆ ಮಹದಾಯಿ, ಕಾವೇರಿ, ಕೃಷ್ಣ ನದಿ ವಿಚಾರಗಳು ಬೇಕಾಗಿಲ್ಲ; ಅಮಿತ್ ಶಾ ಭಾಷಣವನ್ನು ಹೀಗಳೆದ ಡಿಕೆಶಿ
ಮೂರೂವರೆ ವರ್ಷದ ಬಳಿಕ ಸಿಎಂ ಯಡಿಯೂರಪ್ಪ ರಾಜಕೀಯ ನಿವೃತ್ತಿ ಘೋಷಿಸುತ್ತಾರೆ ಎಂಬ ಆರ್ಎಸ್ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ, ನಮ್ಮೊಟ್ಟಿಗೆ ಸಿಎಂ ಇಂತಹ ಯಾವುದೇ ವಿಚಾರ ಹೇಳಿಕೊಂಡಿಲ್ಲ. ನಾವೆಲ್ಲರೂ ಯಡಿಯೂರಪ್ಪ ಅವರ ನಾಯಕತ್ವ ಒಪ್ಪಿಕೊಂಡಿದ್ದೇವೆ. ಮೊನ್ನೆ ಯಡಿಯೂರಪ್ಪ ಅವರು ನಾವೇ ಮತ್ತೆ ಐದು ವರ್ಷ ಸರ್ಕಾರ ಮಾಡ್ತೀವಿ ಅಂತಾ ಹೇಳಿದ್ದಾರೆ. ಅವರ ನಾಯಕತ್ವದ ಬಗ್ಗೆ ನಮಗೆ ವಿಶ್ವಾಸವಿದೆ ಎಂದು ಹೇಳಿದರು.
First published:
January 20, 2020, 3:35 PM IST