ಹುಬ್ಬಳ್ಳಿ (ಡಿ.05): ಮಹಾರಾಷ್ಟ್ರದ ಸಚಿವರು ಬೆಳಗಾವಿಗೆ ಬರೋ ಡೇಟ್ ಫಿಕ್ಸ್ ಆಗಿದೆ. ಆದ್ರೆ ಮಹಾರಾಷ್ಟ್ರ ಸಚಿವರು ಕರ್ನಾಟಕಕ್ಕೆ ಬರೋದು ಬೇಡ. ಬಂದ್ರೆ ಇಲ್ಲಿನ ಕಾನೂನು ಸುವ್ಯವಸ್ಥೆ ಹದಗೆಡುತ್ತದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ (CM Basavaraj Bommai) ಅಭಿಪ್ರಾಯಪಟ್ಟಿದ್ದಾರೆ. ಹುಬ್ಬಳ್ಳಿಯಲ್ಲಿ (Hubballi) ಮಾತನಾಡಿದ ಅವರು, ಈಗಾಗಲೇ ನಮ್ಮ ಮುಖ್ಯ ಕಾರ್ಯದರ್ಶಿಗಳು, ಅವರ ಕಾರ್ಯದರ್ಶಿಗೆ ಲಿಖಿತವಾಗಿ ತಿಳಸಿದ್ದಾರೆ. ಈಗಿರುವ ವಾತಾವರಣದಲ್ಲಿ ಸಚಿವರು ಬರೋದು ಬೇಡಾ. ಇಲ್ಲಿ ಕಾನೂನು ಸುವ್ಯವಸ್ಥೆ (Law And Order) ಸಮಸ್ಯೆ ಆಗತ್ತೆ. ಹೀಗಾಗಿ ಬರೋದು ಉಚಿತ ಅಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.
ಇದು ಸರಿಯಾದ ಕ್ರಮ ಅಲ್ಲ
ಮಹಾರಾಷ್ಟ್ರ ಸಚಿವರು ಬರ್ತೀನಿ ಅನ್ನೋದು ಸರಿಯಾದ ಕ್ರಮ ಅಲ್ಲ. ಮಹಾರಾಷ್ಟ್ರ -ಕರ್ನಾಟಕ ಜನರ ನಡುವೆ ಸಾಮರಸ್ಯ ಇದೆ. ಇದೇ ಸಂದರ್ಭದಲ್ಲಿ ಗಡಿ ವಿವಾದ ಇದೆ. ಗಡಿ ವಿವಾದ ಕರ್ನಾಟಕದ ಪ್ರಕಾರ ಮುಗಿದು ಹೋಗಿರುವ ಅಧ್ಯಾಯ. ಆದ್ರೆ ಮಹಾರಾಷ್ಟ್ರ ಪದೇ ಪದೇ ಕ್ಯಾತೆ ತಗೆದು, ಸುಪ್ರೀಂ ಕೋರ್ಟ್ ಗೆ ಹೋಗಿದ್ದಾರೆ. ಅವರು ಬರುವ ಸಾಹಸ ಮಾಡಿದರೆ ಅಧಿಕಾರಿಗಳು ಕ್ರಮ ಕೈಗೊಳ್ತಾರೆ. ನಾನು ಈಗಾಗಲೇ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಮೊದಲು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡೋದು ಮುಖ್ಯ
ಪ್ರತಿಬಂಧಕ ಕಾಯ್ದೆ ಜಾರಿ ಮಾಡೋ ವಿಚಾರಕ್ಕೆ ಪ್ರತಿಕ್ರಿಯಿಸಿದ ಬೊಮ್ಮಾಯಿ, ಹಿಂದೆ ಈ ತರಹ ಆದಗೆಲ್ಲಾ ಸರ್ಕಾರ ಯಾವ ಕ್ರಮ ಕೈಗೊಂಡಿದ್ದು ಅದೆಲ್ಲಾ ಕ್ರಮ ಕೈಗೊಳ್ತೀವಿ ಎಂದರು. ರಾಜ್ಯದಲ್ಲಿ ಕೇಸರಿ ಶಾಲೆ ವಿಚಾರಕ್ಕೆ ಪ್ರತಿಕ್ರಿಯಸಿದ ಅವರು, ನಾನು ಈ ಬಗ್ಗೆ ಚರ್ಚೆ ಮಾಡೋಕೆ ಹೋಗಲ್ಲ. ಮೊದಲು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡೋದು ನಮ್ಮ ಲಕ್ಷ್ಯ ಇದೆ ಎಂದರು.
ತರಾತುರಿಯಲ್ಲಿ ಅಹವಾಲು ಸ್ವೀಕಾರ
ಇದಕ್ಕೂ ಮುನ್ನ ಆದರ್ಶ ನಗರದ ತಮ್ಮ ನಿವಾಸದ ಬಳಿ ತರಾತುರಿಯಲ್ಲಿ ಕೆಲ ಸಾರ್ವಜನಿಕರ ಅಹಲವಾಲು ಸ್ವೀಕರಿಸಿದ ಬೊಮ್ಮಾಯಿ, ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡದೆ ವಿಮಾನ ನಿಲ್ದಾಣಕ್ಕೆ ಹೊರಟು ಹೋದರು. ಅಹವಾಲು ನೀಡಲೆಂದು ಬೆಳಿಗ್ಗೆಯಿಂದಲೂ ಕಾದು ನಿಂತಿದ್ದ ಜನರಿಗೆ ನಿರಾಸೆಯಾಯಿತು. ವಿಮಾನ ನಿಲ್ದಾಣಕ್ಕೆ ಹೋದ ನಂತರ ಪತ್ರಕರ್ತರು ಬರ್ತಾರೆ ಅಂತ 20 ನಿಮಿಷ ಕಾದು ನಿಂತ ಬೊಮ್ಮಾಯಿ, ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, ವಿಶೇಷ ವಿಮಾನದ ಮೂಲಕ ಬೆಂಗಳೂರಿಗೆ ವಾಪಸ್ಸಾದರು.
ಇದನ್ನೂ ಓದಿ: C T Ravi: ನಾನು ಕೊತ್ವಾಲ್ ರಾಮಚಂದ್ರನ ಶಿಷ್ಯನಲ್ಲ, ಯಾವುದೇ ಗೂಂಡಾಗಿರಿ ಮಾಡಿಲ್ಲ- ಸಿ ಟಿ ರವಿ
ದಯಾ ಮರಣಕ್ಕೆ ಮನವಿ
ನೇಮಕಾತಿಗೆ ಆಗ್ರಹಿಸಿ ನಿರೀಕ್ಷಣಾಧಿಕಾರಿಗಳ ಆಕಾಂಕ್ಷೆಗಳಿಂದ ದಯಾಮರಣಕ್ಕೆ ಮನವಿ ಸಲ್ಲಿಸಲಾಗಿದೆ. ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಖಾಲಿ ಇರುವ 2692 ಆರೋಗ್ಯ ನಿರೀಕ್ಷಣಾಧಿಕಾರಿಗಳ ಹುದ್ದೆಗಳನ್ನು ಭರ್ತಿ ಮಾಡುವಂತೆ ಆಗ್ರಹಿಸಿ ಹುಬ್ಬಳ್ಳಿಯ ಆದರ್ಶನಗರದಲ್ಲಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಿದರು. ನಂತರ ಮಾತನಾಡಿದ ಉದ್ಯೋಗಾಕಾಂಕ್ಷಿಗಳು, ಒಂದು ವೇಳೆ ನೇಮಕಾತಿ ಪತ್ರ ನೀಡದಿದ್ದರೆ ದಯಾಮಣರಕ್ಕೆ ಸಹ ಅವಕಾಶ ನೀಡಲು ಒತ್ತಾಯಿಸಿದರು.
ಕರ್ನಾಟಕ ರಾಜ್ಯ ಆರೋಗ್ಯ ನಿರೀಕ್ಷಣಾಧಿಕಾರಿಗಳ ಉದ್ಯೋಗಾ ಆಕಾಂಕ್ಷೆಗಳಿಂದ ಸಂಘದ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು.
ಈಗಾಗಲೇ ಅನೇಕ ಸಲಪ್ರತಿಭಟನೆ ನಡೆಸಲಾಗುತ್ತಿದೆ. ಹಲವಾರು ದಿನಗಳಿಂದ ತಮ್ಮ ನ್ಯಾಯಯುತ ಬೇಡಿಕೆ ಈಡೇರಿಕೆಗೆ ಒತ್ತಾಯ ಮಾಡಲಾಗಿದೆ. ರಾಜ್ಯದ ವಿವಿಧ ಜಿಲ್ಲೆ ತಾಲೂಕು ಹಾಗೂ ಬೆಂಗಳೂರಿನಲ್ಲಿ ಪ್ರತಿಭಟನೆ ಮಾಡಿ ಮನವಿ ಸಹ ಸಲ್ಲಿಸಲಾಗಿತ್ತು. ಯಾವುದೇ ರೀತಿಯ ಪ್ರತಿಕ್ರಿಯೆ ಸರಿಯಾಗಿ ಬರದ ಕಾರಣ ನಿರೀಕ್ಷಣಾಧಿಕಾರಿಗಳ ಆಕಾಂಕ್ಷಿಗಳು ಬೇರಸ ವ್ಯಕ್ತಪಡಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ