ಲತಾ ರಜನಿಕಾಂತ್ ವಿರುದ್ಧ ಬೆಂಗಳೂರಿನ ಕೋರ್ಟ್​ನಲ್ಲಿ ನ್ಯಾಯಾಂಗ ನಿಂದನೆ ದೂರು

ಕೋಚಡಯಾನ್ ಸಿನಿಮಾ ಸಂಬಂಧ ವಂಚನೆ ಪ್ರಕರಣ ದಾಖಲಾಗಿ ಕೋರ್ಟ್ ಸಮನ್ಸ್ ನೀಡಿದರೂ ಲತಾ ರಜಿನಿಕಾಂತ್ ವಿಚಾರಣೆ ಹಾಜರಾಗಿಲ್ಲ. ಹೀಗಾಗಿ, ಅವರ ವಿರುದ್ಧ ನ್ಯಾಯಾಂಗ ನಿಂದನೆ ದೂರು ದಾಖಲಾಗಿದೆ.

ಲತಾ ರಜಿನಿಕಾಂತ್

ಲತಾ ರಜಿನಿಕಾಂತ್

  • Share this:
ಬೆಂಗಳೂರು: ಕೋಚಡೈಯಾನ್ ಸಿನಿಮಾ ರೈಟ್ಸ್ ಹಣಕಾಸಿನ ವಿವಾದ ಸಂಬಂಧ ನಟ ರಜನಿಕಾಂತ್ ಪತ್ನಿ ವಿರುದ್ದ ನ್ಯಾಯಾಂಗ ನಿಂದನೆಯ ಅರ್ಜಿ ಸಲ್ಲಿಸಲಾಗಿದೆ. ಸುಪ್ರೀಂ ಕೋರ್ಟ್ ಈ ಹಿಂದೆ ಕೆಳ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗುವಂತೆ ಸಿನಿಮಾ ನಿರ್ಮಾಪಕರಿಗೆ ನಿರ್ದೇಶನ ನೀಡಿತ್ತು. ಆದರೆ ಇದುವರೆಗೂ ಸಿನಿಮಾ ನಿರ್ಮಾಪಕರು ಕೋರ್ಟ್ ಸಮನ್ಸ್ ನೀಡಿದರೂ ವಿಚಾರಣೆಗೆ ಹಾಜರಾಗಿಲ್ಲ. ಆ್ಯಡ್ ಬ್ಯೂರೋ ಕಂಪನಿಯಿಂದ ಕೋಚ್ಚಡೈಯಾನ್ ಸಿನಿಮಾ ನಿರ್ಮಾಪಕರ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಕೆಯಾಗಿದ್ದು, ನವೆಂಬರ್ 2 ಕ್ಕೆ ಕೋರ್ಟ್ ಅರ್ಜಿ ವಿಚಾರಣೆ ನಡೆಸುವ ಸಾಧ್ಯತೆ ಇದೆ.

ಒಂದನೇ ಎಸಿಎಂಎಂ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಕೆಯಾಗಿದ್ದು, ಮತ್ತೆ ನಟ ರಜನಿಕಾಂತ್ ಪತ್ನಿ ಲತಾರಿಗೆ ಸಂಕಷ್ಟ ಎದುರಾಗಿದೆ. 2014 ರಲ್ಲಿ ಹಲಸೂರು ಗೇಟ್ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿತ್ತು. ಕೋಚಡಯ್ಯಾನ್ ಚಿತ್ರದ ಸಂಬಂಧ ಆ್ಯಡ್ ಬ್ಯುರೋ ಕಂಪನಿ 6.2 ಕೋಟಿ ರೂ ವಂಚನೆ ಆರೋಪ ಮಾಡಿ ಎಫ್ಐಆರ್ ದಾಖಲಿಸಿತ್ತು. 10 ಕೋಟಿ ರೂಗೆ ಪೋಸ್ಟ್ ಪ್ರೊಡಕ್ಷನ್ ಕೆಲಸ ವಹಿಸಲಾಗಿತ್ತು. ಆದರೆ, 6.2 ಕೋಟಿ ರೂ ಬಾಕಿ ಬರಬೇಕಿದೆ ಎಂದು ಆ್ಯಡ್ ಬ್ಯೂರೋ ದೂರಿದೆ. ಲತಾ ರಜಿನಿಕಾಂತ್ ಅವರ ವೈಯಕ್ತಿಕ ಗ್ಯಾರಂಟಿ ಮೇಲೆ ತಾವು ಈ ಕಾರ್ಯ ವಹಿಸಿಕೊಂಡಿದ್ದು ಎಂದೂ ಈ ಸಂಸ್ಥೆ ವಾದಿಸಿದೆ.

ಇದನ್ನೂ ಓದಿ: ಮೋರನಾಳದ ಶಿಳ್ಳಿಕ್ಯಾತರ್ ಕುಟುಂಬಕ್ಕೆ ಮತ್ತೊಂದು ರಾಜ್ಯೋತ್ಸವ ಪ್ರಶಸ್ತಿ ಗರಿ

ಇದೇ ವೇಳೆ, ಲತಾ ರಜನಿಕಾಂತ್ ಅವರಿಗೆ ಟ್ರಯಲ್​ಗೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಬೇಕೆಂದು ವಕೀಲ ಬಾಲನ್ ಅವರಿಂದ ಒಂದನೇ ಎಸಿಎಂಎಂ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಕೆ ಮಾಡಲಾಗಿದೆ‌.

ವರದಿ: ಗಂಗಾಧರ ವಾಗಟ
Published by:Vijayasarthy SN
First published: