• Home
  • »
  • News
  • »
  • state
  • »
  • Last ritual: ಈ ಗುಹೆ ಪ್ರವೇಶಿಸುವ ವ್ಯಕ್ತಿಗೆ ಜೀವಂತ ಇರುವಾಗಲೇ ಉತ್ತರಕ್ರಿಯೆ: ಕರ್ನಾಟಕ-ಕೇರಳ ಗಡಿಯಲ್ಲಿ ವಿಶೇಷ ಆಚರಣೆ

Last ritual: ಈ ಗುಹೆ ಪ್ರವೇಶಿಸುವ ವ್ಯಕ್ತಿಗೆ ಜೀವಂತ ಇರುವಾಗಲೇ ಉತ್ತರಕ್ರಿಯೆ: ಕರ್ನಾಟಕ-ಕೇರಳ ಗಡಿಯಲ್ಲಿ ವಿಶೇಷ ಆಚರಣೆ

ವಿಶೇಷ ಆಚರಣೆ

ವಿಶೇಷ ಆಚರಣೆ

ಜಾಂಬ್ರಿ ಗುಹೆಯೊಳಗೆ  ಕ್ಷೇತ್ರಕ್ಕೆ ಸಂಬಂಧಪಟ್ಟ 5 ಜನ ಮಾತ್ರ ಪ್ರವೇಶ  ಮಾಡುತ್ತಾರೆ. ಮೂರು ಜನ ವೈದಿಕರು ಹಾಗೂ ಇಬ್ಬರು ಈ ಭಾಗದ ಮೂಲ ನಿವಾಸಿಗಳಾಗಿರುತ್ತಾರೆ.

  • Share this:

ಈ ಗುಹೆಯನ್ನು (Cave) ಪ್ರವೇಶಿಸಬೇಕಾದರೆ ಜೀವಂತದಲ್ಲೇ ಉತ್ತರ ಕ್ರಿಯಾಧಿಗಳನ್ನು ನೆರವೇರಿಸಬೇಕು. 48 ದಿನಗಳ ಕಾಲ ಮನೆಯಿಂದ, ಊರಿಂದ ದೂರವಿದ್ದು, ಶ್ವೇತ ವಸ್ತ್ರಧಾರಿಯಾಗಿಯೇ ವೃತಾಚರಣೆ ಮಾಡಬೇಕು. ಹೌದು ಇದು ದಕ್ಷಿಣ ಕನ್ನಡ (Dakshina Kannada) ಹಾಗೂ ಕಾಸರಗೋಡು (Kasaragodu) ಜಿಲ್ಲೆಗಳ ಗಡಿಭಾಗದಲ್ಲಿರುವ ಜಾಂಬ್ರಿ ಗುಹಾ ಪ್ರವೇಶದ (Cave Entrance) ವಿಶೇಷತೆ. ಬರೋಬ್ಬರಿ 12 ವರ್ಷಗಳಿಗೊಮ್ಮೆ ನಡೆಯುವ ಈ ಗುಹಾ ಪ್ರವೇಶದ ಕುರಿತು ಒಂದು ವರದಿ ಇಲ್ಲಿದೆ. ದಕ್ಷಿಣ ಕನ್ನಡ ಹಾಗೂ ಕೇರಳದ ಕಾಸರಗೋಡು ಜಿಲ್ಲೆಗಳ ಗಡಿಭಾಗದಲ್ಲಿರುವ ಚೆಂಡೆತ್ತಡ್ಕ (Chendettadka Reserve Forest) ಎನ್ನುವ ರಕ್ಷಿತಾರಣ್ಯ ಪ್ರದೇಶದಲ್ಲಿ ಈ  ಜಾಂಬ್ರಿ ಗುಹೆಯಿದೆ. ಹಲವು ವಿಶೇಷತೆಗಳ ಕೇಂದ್ರ ಬಿಂದುವಾಗಿರುವ ಈ ಗುಹೆಯ ಒಳಗಿರುವ ಶಕ್ತಿಗೆ 12 ವರ್ಷಗಳಿಗೊಮ್ಮೆ ಜೀವ ತುಂಬುವ ಪ್ರಕ್ರಿಯೆ ನಡೆಯುತ್ತದೆ.


ಕಾಸರಗೋಡು ಜಿಲ್ಲೆಯ ನೆಟ್ಟಣಿಗೆ ಗ್ರಾಮದ ಮಹತೋಭಾರ ಮಹಾಲಿಂಗೇಶ್ವರ ದೇವಸ್ಥಾನದ ಪಕ್ಕದಲ್ಲೇ ಇರುವಂತಹ ಈ ಜಾಂಬ್ರಿ ಗುಹೆಗೂ  ದೇವಸ್ಥಾನಕ್ಕೂ ನಿಕಟ ಸಂಬಂಧವಿದೆ. ಹಿಂದೆ ರಾವಣನ ಸಹೋದರನಾದ ಖರಾಸುರನು ದಂಡಕಾರಣ್ಯದಲ್ಲಿ ಖುಷಿ, ಮುನಿಗಳಿಗೆ, ಮಹಿಳೆಯರಿಗೆ ತೊಂದರೆ ನೀಡುತ್ತಿದ್ದನಂತೆ. ಇದರಿಂದಾಗಿ ಖರಾಸುರನಿಗೆ ಕ್ಷಯರೋಗ ಆವರಿಸಿಕೊಂಡು, ಬಳಿಕ ತನ್ನ ತಪ್ಪಿನ ಅರಿವಾಗಿ ಖರಾಸುರ ಶಿವನಲ್ಲಿ ತನ್ನ ಸಂಕಷ್ಟಗಳನ್ನು ಅರುಹಿಕೊಳ್ಳುತ್ತಾನೆ.


ಅಸುರನಿಗೆ ಶಿವ ಅಭಯ


ಭೂಲೋಕಕ್ಕೆ ತೆರಳಿ  ಶಿವಲಿಂಗವನ್ನು ಪ್ರತಿಷ್ಟಾಪಿಸಿ ಅಲ್ಲಿರುವ ಜನರಿಗೆ ನನ್ನ ದರ್ಶನವನ್ನು ಕೊಡುವಂತಹ ಕಾರ್ಯ ಮಾಡಿದರೆ, ನಿನ್ನ ಪಾಪ ಪರಿಹಾರವಾಗುತ್ತದೆ ಎಂದು ಅಸುರನಿಗೆ ಶಿವ ಅಭಯವನ್ನು ನೀಡುತ್ತಾನೆ. ಅಲ್ಲದೆ ಶಿವಲಿಂಗವನ್ನು ತರುವ ಸಮಯದಲ್ಲಿ ಯಾವ ಕಾರಣಕ್ಕೂ ಆಕಾಶದ ಕಡೆಗೆ ನೋಡಬಾರದು. ನೋಡಿದಲ್ಲಿ ಶಿವಲಿಂಗ ಅದೇ ಸ್ಥಳದಲ್ಲಿ ಮಾಯವಾಗುತ್ತದೆ ಎನ್ನುವ ಎಚ್ಚರಿಕೆಯನ್ನೂ ಮಹಾಶಿವನು ನೀಡುತ್ತಾನೆ.


Last ritual performed live person special practice in karnataka kerala border akp mrq
ಗುಹೆ


ಈ ಗುಹೆಯೊಳಗೆ ಶಿವನ ಸಾನಿಧ್ಯ


ಆ  ಪ್ರಕಾರ ಖರಾಸುರನು ಕಾಶಿಯಿಂದ ಮೂರು ಲಿಂಗಗಳೊಂದಿಗೆ ದಕ್ಷಿಣಕ್ಕೆ ಬರುತ್ತಾನೆ. ಪಾತಾಳದ ಮೂಲಕ ಆಗಮಿಸುವ ಖರಾಸುರನಿಗೆ ಇಂದಿನ ನೆಟ್ಟಣಿಗೆ ಎನ್ನುವ ಪ್ರದೇಶಕ್ಕೆ ಬಂದಾಗ, ತನ್ನ ಊರು ಸಮೀಪಿಸಿತು ಎನ್ನುವ ಕಾರಣಕ್ಕಾಗಿ ಮೇಲೆ ನೋಡುತ್ತಾನೆ. ಇದೇ ಸಂದರ್ಭದಲ್ಲಿ ಆತನ ಕೈಯಲ್ಲಿದ್ದ ಶಿವಲಿಂಗ ಭೂ ಸ್ಪರ್ಶವಾಗುವ ಮೂಲಕ ನೆಟ್ಟಣಿಗೆ ಪ್ರದೇಶದಲ್ಲೇ ಪ್ರತಿಷ್ಠಾಪಿಸಲ್ಪಡುತ್ತದೆ. ಇದೇ ಖರಾಸುರನು ಬಂದಂತಹ ಗುಹೆ ಜಾಂಬ್ರಿ ಗುಹೆಯಾಗಿದ್ದು, ಶಿವನ ಸಾನಿಧ್ಯ ಈ ಗುಹೆಯೊಳಗೆ ಇದೆ ಎನ್ನುವ ಬಲವಾದ ನಂಬಿಕೆ ಈ ಭಾಗದ ಜನರದ್ದಾಗಿದೆ.


ಜಾಂಬ್ರಿ ಗುಹೆಯೊಳಗೆ  ಕ್ಷೇತ್ರಕ್ಕೆ ಸಂಬಂಧಪಟ್ಟ 5 ಜನ ಮಾತ್ರ ಪ್ರವೇಶ  ಮಾಡುತ್ತಾರೆ. ಮೂರು ಜನ ವೈದಿಕರು ಹಾಗೂ ಇಬ್ಬರು ಈ ಭಾಗದ ಮೂಲ ನಿವಾಸಿಗಳಾಗಿರುತ್ತಾರೆ. ಭೂಮಿಯಲ್ಲಿ ಹುದುಗಿ ಹೋಗಿದ್ದಂತಹ ಶಿವಲಿಂಗ ನಿಟ್ಟೋಣಿ ಎನ್ನುವ ಮೂಲ ನಿವಾಸಿಗೆ  ಗೆಡ್ಡೆ ಗೆಣಸನ್ನು ಅಗೆಯುತ್ತಿದ್ದ ಸಂದರ್ಭದಲ್ಲಿ ಗೋಚರಿಸಿತ್ತು.


ಕತ್ತಿ ಶಿವಲಿಂಗಕ್ಕೆ ತಗುಲಿ ರಕ್ತ


ಗೆಣಸು ಅಗೆಯುವ ಸಮಯದಲ್ಲಿ ಆತನ ಕತ್ತಿ ಶಿವಲಿಂಗಕ್ಕೆ ತಗುಲಿ ರಕ್ತ ಚಿಮ್ಮುತ್ತದೆ. ಈ ವಿಚಾರವನ್ನು ತಿಳಿದ ಆಗಿನ ರಾಜ ಸ್ಥಳಕ್ಕೆ ಆಗಮಿಸಿ ದೇವರಿಗೆ ದೇವಸ್ಥಾನವನ್ನು ಕಟ್ಟಿಸಿಕೊಡುತ್ತಾನೆ. ಈ ಕಾರಣಕ್ಕಾಗಿಯೇ ಜಾಂಬ್ರಿ ಗುಹೆಗೆ ಮೊದಲ ಪ್ರವೇಶ ಮಾಡುವ ಅವಕಾಶ ನೆಟ್ಟಣಿಗೆ ಗ್ರಾಮದ ಮೂಲ ನಿವಾಸಿಗಳಿಗಾಗಿದೆ.


ಇದನ್ನೂ ಓದಿ:  Chikkamagaluru: ಸರ್ಕಾರಕ್ಕೆ ಸೆಡ್ಡು ಹೊಡೆದು ಸ್ಥಳೀಯರಿಂದಲೇ ಕಾಲುಸಂಕ ನಿರ್ಮಾಣ; ಪರಿಪರಿಯಾಗಿ ಬೇಡಿಕೊಂಡರೂ ಕ್ಯಾರೇ ಅನ್ನದ ಜನಪ್ರತಿನಿಧಿಗಳು!


ಕಾಪಾಡರು ಎಂದು ಕರೆಯಲ್ಪಡುವ ಇವರು 48 ದಿನಗಳ ಕಾಲ ದೇವಸ್ಥಾನದ ಪಕ್ಕದಲ್ಲಿ ಯಾರಿಗೂ ಕಾಣದಂತೆ ಶ್ವೇತ ವಸ್ತ್ರಧಾರಿಯಾಗಿ ಕಠಿಣ ವೃತಾಚರಣೆ ಮಾಡಬೇಕಾಗುತ್ತದೆ. ಅಲ್ಲದೆ ಗುಹೆಯ ಪ್ರವೇಶಕ್ಕೆ ಮೊದಲು, ಕಾಪಾಡನಿಗೆ ಮದುವೆಯಾಗದೇ ಇದ್ದಲ್ಲಿ ದೇವಸ್ಥಾನದ ವತಿಯಿಂದಲೇ ಆತನಿಗೆ ಮದುವೆ ಮಾಡಿಸಲಾಗುತ್ತದೆ. ಅಲ್ಲದೆ ಆತನ ಉತ್ತರಕ್ರಿಯೆಯನ್ನೂ ಜೀವಂತವಿರುವಾಗಲೇ ಮಾಡಿಸಲಾಗುತ್ತದೆ. ಈ ಎಲ್ಲಾ ವಿಧಿಗಳು ನೆರವೇರಿದ ಬಳಿಕ ಕಾಪಾಡರ ಕುಟುಂಬ ವರ್ಗ ಇಬ್ಬರನ್ನೂ ದೇವಸ್ಥಾನಕ್ಕೆ ಒಪ್ಪಿಸುತ್ತಾರೆ.


Last ritual performed live person special practice in karnataka kerala border akp mrq
ಗುಹೆ


ಗುಹಾ ಪ್ರವೇಶ ಮಾಡಲು ವಿಧಿ ವಿಧಾನಗಳು


ಇಬ್ಬರು ಕಾಪಾಡರು ಮೊದಲು ಜಾಂಬ್ರಿ ಗುಹೆಗೆ ಪ್ರವೇಶ ಮಾಡಿ, ಗುಹೆಯೊಳಗೆ ಸುಮಾರು ಒಂದೂವರೆ ತಾಸಿನ ಬಳಿಕ ಹೊರ ಬರುತ್ತಾರೆ. ಬಳಿಕ ತಂತ್ರಿಗಳು ಹಾಗೂ ಇಬ್ಬರು ವೈದಿಕರು ಗುಹೆಯೊಳಗೆ ದೀವಿಟಿಗೆಯೊಂದಿಗೆ ಪ್ರವೇಶಿಸಿ ವೈದಿಕ ವಿಧಿ ವಿಧಾನಗಳನ್ನು ಪೂರೈಸಿದ ಬಳಿಕ ಗುಹಾ ಪ್ರವೇಶದ ಕಟ್ಟುಪಾಡುಗಳು ಪೂರ್ಣಗೊಳ್ಳುತ್ತದೆ.


ಇದನ್ನೂ ಓದಿ:  Karnataka Assembly Elections: ಜೈನ ಕಾಶಿ ಕಾರ್ಕಳದಲ್ಲಿ ಬಿಜೆಪಿಗಿಲ್ಲ ಆಪ್ಶನ್, ಕಾಂಗ್ರೆಸ್​ನಲ್ಲಿ ಆಕಾಂಕ್ಷಿಗಳ ಲೈನ್​!


ಗುಹಾ ಪ್ರವೇಶದ ಈ ವಿಶೇಷ  ಸಂದರ್ಭದಲ್ಲಿ ಸಾವಿರಾರು ಸಂಖ್ಯೆಯ ಭಕ್ತಾಧಿಗಳೂ ಇಲ್ಲಿ ಸೇರುತ್ತಿದ್ದು, ಗುಹೆಯೊಳಗಿಂದ ತರುವ ಮಣ್ಣೇ ಇಲ್ಲಿನ ಪ್ರಸಾದವಾಗಿದೆ. 12 ವರ್ಷಗಳಿಗೊಮ್ಮೆ ನಡೆಯುವ ಈ ವಿಶೇಷ ವಿಧಿವಿಧಾನಗಳ ವೀಕ್ಷಣೆಗಾಗಿ ರಾಜ್ಯ ಹಾಗೂ ಹೊರ ರಾಜ್ಯಗಳಿಂದಲೂ ಜನ ಈ ಗುಹೆಯತ್ತ ಬರುತ್ತಾರೆ. 2017 ರಲ್ಲಿ ಈ ಗುಹಾ ಪ್ರವೇಶ ವಿಧಿ-ವಿಧಾನ ನಡೆದಿದೆ.

Published by:Mahmadrafik K
First published: