ಎಸಿಬಿ ದಾಳಿ, ಲೋಕಾಯುಕ್ತ ಪ್ರಕರಣವಿದ್ದರೂ ಭಯವಿಲ್ಲ ಚಿಕ್ಕಮಗಳೂರಿನ ಈ 41 ಅಧಿಕಾರಿಗಳಿಗೆ
ಜಿಲ್ಲೆಯಲ್ಲಿ ಕಳೆದ ಐದು ವರ್ಷದಲ್ಲಿ 41ಕ್ಕೂ ಹೆಚ್ಚು ಅಧಿಕಾರಿಗಳ ಮೇಲೆ ಎಸಿಬಿ ಪ್ರಕರಣ ದಾಖಲಾಗಿದೆ. ಇದರಲ್ಲಿ ಇಬ್ಬರು ತಹಶೀಲ್ದಾರ್ , ಐವರು ವೈದ್ಯರು. ಮೂವರು ಗ್ರಾಮ ಲೆಕ್ಕಿಗರು, ಮೂವರು ಪಿಡಿಒ, ಮೂವರು ಮೆಸ್ಕಾಂ ಸಿಬ್ಬಂದಿ, ಅಬಕಾರಿ ಡಿಸ, ಕಮಿಷನರ್, ಸಬ್ ರಿಜಿಸ್ಟ್ರು, ಆರ್.ಟಿ.ಓ ಅಧಿಕಾರಿಗಳಿದ್ದಾರೆ. ಇವರ ಮೇಲೆ ಎಸಿಬಿ ದಾಳಿ ಮಾತ್ರವಲ್ಲದೇ, ಲೋಕಾಯುಕ್ತ ಪ್ರಕರಣಗಳು ಕೂಡ ಇವೆ.
news18-kannada Updated:February 5, 2020, 2:25 PM IST

ಸಾಂದರ್ಭಿಕ ಚಿತ್ರ
- News18 Kannada
- Last Updated: February 5, 2020, 2:25 PM IST
ಚಿಕ್ಕಮಗಳೂರು (ಫೆ.5): ಸರ್ಕಾರಿ ಕೆಲಸವನ್ನು ಜನಸೇವೆ ಎಂದು ಭಾವಿಸಿ ಮಾಡಬೇಕಾದ ಅಧಿಕಾರಿಗಳು ಅವರಿಂದಲೇ ದುಡ್ಡು ಕಿತ್ತು ಕೆಲಸ ಮಾಡುವ ಪ್ರಕರಣಗಳು ಪತ್ತೆಯಾಗುತ್ತಲೇ ಇರುತ್ತವೆ. ಈ ರೀತಿ ಲಂಚಬಾಕ ಅಧಿಕಾರಿಗಳ ಮೇಲೆ ಎಸಿಬಿ ದಾಳಿ ಕೂಡ ನಡೆಯುತ್ತದೆ. ಆದರೆ ಇದಾದ ಬಳಿಕವೂ ಅಧಿಕಾರಿಗಳು ತಮ್ಮ ಮೇಲೆ ಯಾವುದೇ ದಾಳಿ ನಡೆದಿಲ್ಲ ಎಂಬ ರೀತಿ ಮತ್ತೆ ತಮ್ಮ ಕಾರ್ಯದಲ್ಲಿ ತೊಡಗಿಕೊಂಡಿದ್ದು, ಇವರಿಗೆ ಭಯವಿಲ್ಲದಂತೆ ಆಗಿದೆ.
ಸರ್ಕಾರಿ ಕೆಲಸದಲ್ಲಿದ್ದು, ಲಂಚ ಪಡೆಯುವುದು ಅಪರಾಧ. ಇಂತಹ ಅಪರಾಧಿಗಳನ್ನು ಮಟ್ಟಹಾಕಲು ಎಸಿಬಿ, ಲೋಕಾಯುಕ್ತವಿದೆ. ಆದರೆ, ಎಸಿಬಿ ಕಣ್ಣಿಗೆ ಮಣ್ಣೇರಚಿದ ಅಧಿಕಾರಿಗಳು ಮತ್ತೆ ಯಥಾ ಪ್ರಕಾರ ತಮ್ಮ ಕೆಲಸ ಮುಂದುವರೆಸಿರುವ ಅನೇಕ ಪ್ರಕರಣಗಳು ಜಿಲ್ಲೆಯಲ್ಲಿ ಕಂಡು ಬಂದಿದೆ. ಜಿಲ್ಲೆಯಲ್ಲಿ ಕಳೆದ ಐದು ವರ್ಷದಲ್ಲಿ 41ಕ್ಕೂ ಹೆಚ್ಚು ಅಧಿಕಾರಿಗಳ ಮೇಲೆ ಎಸಿಬಿ ಪ್ರಕರಣ ದಾಖಲಾಗಿದೆ. ಇದರಲ್ಲಿ ಇಬ್ಬರು ತಹಶೀಲ್ದಾರ್ , ಐವರು ವೈದ್ಯರು. ಮೂವರು ಗ್ರಾಮ ಲೆಕ್ಕಿಗರು, ಮೂವರು ಪಿಡಿಒ, ಮೂವರು ಮೆಸ್ಕಾಂ ಸಿಬ್ಬಂದಿ, ಅಬಕಾರಿ ಡಿಸ, ಕಮಿಷನರ್, ಸಬ್ ರಿಜಿಸ್ಟ್ರು, ಆರ್.ಟಿ.ಓ ಅಧಿಕಾರಿಗಳಿದ್ದಾರೆ. ಇವರ ಮೇಲೆ ಎಸಿಬಿ ದಾಳಿ ಮಾತ್ರವಲ್ಲದೇ, ಲೋಕಾಯುಕ್ತ ಪ್ರಕರಣಗಳು ಕೂಡ ಇವೆ.
ಆದರೂ ಕೂಡ ಈ ಅಧಿಕಾರಿಗಳು ಯಾವುದೇ ಭಯವಿಲ್ಲದೇ ತಮ್ಮ ಕೆಲಸದಲ್ಲಿ ಮುಂದುವರೆಯುತ್ತಿದ್ದಾರೆ. ಕಾರಣ ಇವರ ಮೇಲೆ ಸೂಕ್ತ ಕ್ರಮ ಜರುಗದೇ ಇರುವುದು. ಎಸಿಬಿ ದಾಳಿ, ಲೋಕಾಯುಕ್ತ ಪ್ರಕರಣ ದಾಖಲಾಗುತ್ತಿದ್ದಂತೆ ಸುಳ್ಳು ನೆಪ ಹೇಳಿ ಆಸ್ಪತ್ರೆ ದಾಖಲಾಗುವ ಈ ಅಧಿಕಾರಿಗಳು ಬಳಿಕ ಜಾಮೀನು ಪಡೆದು ಮತ್ತೆ ಕೆಲಸಕ್ಕೆ ಮರಳುವುದು.
ಇದನ್ನು ಓದಿ: ಚಿಕ್ಕಮಗಳೂರಿನ ದಟ್ಟ ಕಾನನದಲ್ಲಿ ಚಿಟ್ಟೆಗಳ ಕಲರವ; ಪಾತರಗಿತ್ತಿ ಸೊಬಗಿಗೆ ಮನಸೋಲದವರಿಲ್ಲ
ಜಾಮೀನು ಪಡೆದ ಬಳಿಕ ಯಥಾ ಪ್ರಕಾರ ತಮ್ಮ ಕೆಲಸವನ್ನು ಅವರು ಮುಂದುವರೆಸಿದ್ದು, ಇವರಿಗೆ ಶಿಕ್ಷೆಯಾದರೆ ಸಾಕು ಎನ್ನುತ್ತಿದ್ದಾರೆ ನೊಂದ ಜನರು. ದಾಳಿ ನಡೆದ ಬಳಿಕ ತಪಿತಸ್ಥರಿಗೆ ಶಿಕ್ಷೆಯಾದರೆ ಭ್ರಷ್ಟಾಚಾರವನ್ನು ತಡೆಗಟ್ಟಬಹುದು. ಆದರೆ, ಕಾನೂನಿನ ಕೆಲವು ನಿಯಮಗಳನ್ನು ಅಸ್ತ್ರ ಮಾಡಿಕೊಂಡ ಈ ಅಧಿಕಾರಿಗಳಿಗೆ ಈ ದಾಳಿಗಳು ಲೆಕ್ಕಕ್ಕೆ ಇಲ್ಲದಂತೆ ಆಗಿದೆ. ದಾಳಿಯಾದರೂ ತಮ್ಮ ಮೇಲೆ ಯಾವುದೇ ಪ್ರಕರಣವಿಲ್ಲ ಎನ್ನುವಷ್ಟು ಮಟ್ಟಿಗೆ ಅಧಿಕಾರಿಗಳು ಸ್ವಚ್ಛಂದವಾಗಿದ್ದು, ಜನರು ಪರದಾಡುವಂತೆ ಆಗಿದೆ. ಇನ್ನಾದರೂ ಈ ಬಗ್ಗೆ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎನ್ನುತ್ತಾರೆ ಇಲ್ಲಿನ ಜನರು.
ಸರ್ಕಾರಿ ಕೆಲಸದಲ್ಲಿದ್ದು, ಲಂಚ ಪಡೆಯುವುದು ಅಪರಾಧ. ಇಂತಹ ಅಪರಾಧಿಗಳನ್ನು ಮಟ್ಟಹಾಕಲು ಎಸಿಬಿ, ಲೋಕಾಯುಕ್ತವಿದೆ. ಆದರೆ, ಎಸಿಬಿ ಕಣ್ಣಿಗೆ ಮಣ್ಣೇರಚಿದ ಅಧಿಕಾರಿಗಳು ಮತ್ತೆ ಯಥಾ ಪ್ರಕಾರ ತಮ್ಮ ಕೆಲಸ ಮುಂದುವರೆಸಿರುವ ಅನೇಕ ಪ್ರಕರಣಗಳು ಜಿಲ್ಲೆಯಲ್ಲಿ ಕಂಡು ಬಂದಿದೆ.