• Home
  • »
  • News
  • »
  • state
  • »
  • ಮೃತ್ಯು ಕೂಪವಾಗುತ್ತಿದೆ ನಿಸರ್ಗ ರಮಣೀಯ ಚಾರ್ಮಾಡಿ ಘಾಟ್..!

ಮೃತ್ಯು ಕೂಪವಾಗುತ್ತಿದೆ ನಿಸರ್ಗ ರಮಣೀಯ ಚಾರ್ಮಾಡಿ ಘಾಟ್..!

ಚಾರ್ಮುಡಿ ಘಾಟ್​​

ಚಾರ್ಮುಡಿ ಘಾಟ್​​

ಸೌಂದರ್ಯವನ್ನು ತನ್ನ ಸೆರಗಿನಲ್ಲಿಟ್ಟುಕೊಂಡಿರುವ ಈ ತಾಣವೀಗ ಅಪರಾಧ ಕೃತ್ಯ ಎಸಗುವವರ ಸ್ವರ್ಗವೂ ಆಗಿದೆ. ಆಳವಾದ ಪ್ರಪಾತ,  ದಟ್ಟ ಕಾನನ, ಕಂದಕಗಳು ಅಪರಾಧಿಗಳಿಗೆ  ವರದಾನವಾಗಿದೆ. 

  • Share this:ಅಚ್ಚರಿಯಾದರೂ ಇದು ಸತ್ಯ. ನಿಸರ್ಗದ ಝರಿ-ತೊರೆಯ ಸೌಂದರ್ಯವನ್ನು ತನ್ನ ಸೆರಗಿನಲ್ಲಿಟ್ಟುಕೊಂಡಿರುವ ಈ ತಾಣವೀಗ ಅಪರಾಧ ಕೃತ್ಯ ಎಸಗುವವರ ಸ್ವರ್ಗವೂ ಆಗಿದೆ. ಆಳವಾದ ಪ್ರಪಾತ, ದಟ್ಟ ಕಾನನ, ಆಳವಾದ ಕಂದಕಗಳು ಅಪರಾಧಿಗಳಿಗೆ  ವರದಾನವಾಗಿದೆ.


ಕಳೆದ ನಾಲ್ಕೈದು ತಿಂಗಳಲ್ಲಿ ಚಾರ್ಮಾಡಿ ಘಾಟ್​ನಲ್ಲಿ ಸುಮಾರು 30ಕ್ಕೂ ಹೆಚ್ಚು ಹೆಣ ಸಿಕ್ಕಿದೆ. ಇಲ್ಲಿ ಹೆಣ ಬಿದ್ದಿದೆ ಎಂಬುದು ತಿಳಿಯುವುದು ಕೂಡ ಹೆಣ ಕೊಳೆತ ಸ್ಥಿತಿಯಲ್ಲಿ.  ಇಲ್ಲಿನ ದಟ್ಟ ಕಾಡಿನ ಮಧ್ಯೆ ಯಾರು ಸತ್ತಿದ್ದಾರೆ ಎಂಬ ಅರಿವು ಕೂಡ ಯಾರಿಗೂ ಇರುವುದಿಲ್ಲ. ಇದನ್ನೇ ಲಾಭವಾಗಿ ಪಡೆದು ದುಷ್ಕರ್ಮಿಗಳು ಇಲ್ಲಿ ಕೊಲೆಯಂತಹ ಅಪರಾಧ ಕೃತ್ಯಗಳನ್ನು ಎಸಗುತ್ತಿದ್ದಾರೆ. ಇದರಿಂದ ಯಾರು ಹತ್ಯೆ ಮಾಡಿದರು ಎಂಬ ಸುಳಿವು ಕೂಡ ಸಿಗದಂತಾಗಿದೆ.


ಇನ್ನು ಇಲ್ಲಿ ಸಾವನ್ನಪ್ಪಿದ ಎಷ್ಟೋ ಜನರು ಪ್ರಾಣಿಗಳಿಗೆ ಆಹಾರವಾಗಿರುವ ಸಾಧ್ಯತೆ ಕೂಡ ಇದೆ. ಇದರಿಂದ ಪೊಲೀಸರ ಗಮನಕ್ಕೆ ಬಾರದ ಎಷ್ಟೋ ಜನರು ಇಲ್ಲಿ ಮಣ್ಣಾಗಿರುವ ಸಾಧ್ಯತೆ ಕೂಡ ಇದೆ.


ನಿನ್ನೆ ಕೂಡ ಇಲ್ಲಿನ ತರಿಮಲೈ ಪ್ರದೇಶದಲ್ಲಿ 50 ವರ್ಷದ ಸುಟ್ಟ ಮೃತದೇಹವೊಂದು ಸಿಕ್ಕಿತ್ತು. ಪೊಲೀಸರಿಗೆ ತಲೆ ನೋವು ಹೆಚ್ಚಿದೆ. ಇತ್ತೀಚಿನ ದಿನದಳಲ್ಲಿ ಇಲ್ಲಿ ಮೃತದೇಹಗಳು ಪತ್ತೆಯಾಗುತ್ತಿದ್ದು, ಆಳ ಕಂದಕಕ್ಕೆ ಪೊಲೀಸರೇ ಇಳಿದು ಶವ ಎತ್ತುವ ಪರಿಸ್ಥಿತಿ ಕೂಡ ನಿರ್ಮಾಣವಾಗಿದೆ.
ಇನ್ನು ಈ ಬಗ್ಗೆ ಎಷ್ಟೇ ಎಚ್ಚರದಿಂದ ಇದ್ದರೂ ದೃಷ್ಕರ್ಮಿಗಳು ಇಂತಹ ಕೃತ್ಯ ಎಸಗುತ್ತಿದ್ದಾರೆ. ಘಾಟ್​ನಲ್ಲಿ ಪೊಲೀಸ್​ ಕಣ್ಗಾವಲು ಇಟ್ಟಿದ್ದರೂ ಕಣ್ಮರೆಯಲ್ಲಿ ಈ ರೀತಿ ಘಟನೆಗಳು ನಡೆಯುತ್ತಿವೆ. ಕಾರಣ ಇಲ್ಲಿ ಚಾರಣಕ್ಕೆ ಬರುವವರ ಸಂಖ್ಯೆ ಕೂಡ ಅಧಿಕ. ಇದರಿಂದ ಬಂದ ಪ್ರವಾಸಿಗರನ್ನೆಲ್ಲಾ ಶಂಕೆಯಿಂದ ನೋಡುವಂತಹ ಪರಿಸ್ಥಿತಿ ಎದುರಾಗಿದೆ ಎನ್ನುತ್ತಾರೆ ಸ್ಥಳೀಯರು ಮತ್ತು ಪೊಲೀಸರು.

 

First published: