HOME » NEWS » State » LARGE NUMBER OF DARK BLUE TIGER BUTTERFLY SEEN IN CHIKKAMAGALURU FOREST SESR

ಚಿಕ್ಕಮಗಳೂರಿನ ದಟ್ಟ ಕಾನನದಲ್ಲಿ ಚಿಟ್ಟೆಗಳ ಕಲರವ; ​ಪಾತರಗಿತ್ತಿ ಸೊಬಗಿಗೆ ಮನಸೋಲದವರಿಲ್ಲ

ಚಿಕ್ಕಮಗಳೂರಿನಿಂದ ಬಾಳೆಹೊನ್ನೂರು ಮಾರ್ಗದ ಅರೆನೂರು ಬಳಿಯ ಕಾಡಿನಲ್ಲಿ ವಾಸ್ತವ್ಯ ಹೂಡಿರೋ ಲಕ್ಷಾಂತರ ಡಾರ್ಕ್ ಬ್ಲೂ ಟೈಗರ್ ಚಿಟ್ಟೆಗಳೇ ಹಾಕಿರೋ ಚಿತ್ತಾರ

news18-kannada
Updated:February 4, 2020, 12:57 PM IST
ಚಿಕ್ಕಮಗಳೂರಿನ ದಟ್ಟ ಕಾನನದಲ್ಲಿ ಚಿಟ್ಟೆಗಳ ಕಲರವ; ​ಪಾತರಗಿತ್ತಿ ಸೊಬಗಿಗೆ ಮನಸೋಲದವರಿಲ್ಲ
ಚಿಟ್ಟೆಗಳ ಕಲರವ
  • Share this:
ಚಿಕ್ಕಮಗಳೂರು (ಫೆ.04): ಜಿಲ್ಲೆಯ ಬಾಳೆಹೊನ್ನೂರು ಮಾರ್ಗದ ಅರೆನೂರು ಬಳಿಯ ಕಾಡಿನಲ್ಲಿ ಸದ್ಯ ಚಿಟ್ಟೆಗಳದ್ದೆ ಕಲರವ.  ಎಲ್ಲಿ ನೋಡಿದರಲ್ಲಿ ಬಣ್ಣ ಬಣ್ಣದ ಪತಂಗಗಳು. ನೋಡಿದಷ್ಟು ಮುದ ನೀಡುವ ಅದರ ಮೈಮಾಟ. ಗಣನೆಗೆ ಸಿಕ್ಕದಷ್ಟು ಸಂಖ್ಯೆಯ ಪಾತರಗಿತ್ತಿಯ ಆಟಕ್ಕೆ ಬೆರಾಗಾಗದವರು ಇಲ್ಲ.

ಇಲ್ಲಿನ ದಟ್ಟ ಕಾನನದಲ್ಲಿ ಈಗ ಎಲ್ಲಿ ನೋಡಿದರಲ್ಲಿ ಚಿಟ್ಟೆಗಳದ್ದೆ ಸದ್ದು. ಡಾರ್ಕ್​​​ ಬ್ಲೂ ಟೈಗರ್​ ಎಂಬ ಜಾತಿಗೆ ಸೇರಿದ ಚಿಟ್ಟೆಗಳು ಲಕ್ಷಾಂತರ ಸಂಖ್ಯೆಯಲ್ಲಿ ಒಂದೆಡೆ ಸೇರಿದೆ. ಡಿಸೆಂಬರ್​ನಲ್ಲಿ ಸಂತಾನೋತ್ಪತಿಗಾಗಿ ಮಲೆನಾಡಿನ ಪ್ರಕೃತಿ ಮಡಿಲ ಸೇರುವ ಈ ಚಿಟ್ಟೆಗಳು ಫೆಬ್ರವರಿ ಅಂತ್ಯದವರೆಗೂ ಇಲ್ಲಿಯೇ ಬಿಡಾರ ಹೂಡುತ್ತವೆ.

ckm butterfly 1
ಚಿಟ್ಟೆಗಳ ಕಲರವ


ಎಲ್ಲಿ ನೋಡಿದರೆ ಅಲ್ಲಿ ಮರ-ಗಿಡದ ಮೇಲೆ ಗೊಂಚಲು-ಗೊಂಚಲಿನಂತೆ ಈ ಚಿಟ್ಟೆಗಳು ಪ್ರತಿ ವರ್ಷ ಕೂಡ ಇಲ್ಲಿಗೆ ಸಂತಾನೋತ್ಪತಿಗಾಗಿ ಆಗಮಿಸುತ್ತವೆ. ದಟ್ಟ ಕಾನಾನದಲ್ಲಿ ಈ ಪ್ರಕ್ರಿಯೆ ನಡೆಯುವುದರಿಂದ ಈ ಚಿಟ್ಟೆಗಳ ಸೊಬಗು ಹೊರ ಜಗತ್ತಿಗೆ ತಿಳಿದಿಲ್ಲ. ಇಲ್ಲಿನ ಸ್ಥಳೀಯರಿಗೆ ಯಾವ ಸಮಯದಲ್ಲಿ ಇಲ್ಲಿ ಚಿಟ್ಟೆಗಳು ಬಂದು ಸೇರುತ್ತವೆ ಎಂಬ ಮಾಹಿತಿ ಹಿನ್ನೆಲೆ ಕೆಲವರು ಮಾತ್ರ ಈ ಚಿತ್ರ ಕಣ್ತುಂಬಿಕೊಳ್ಳುತ್ತಾರೆ.



ಮಲೆನಾಡಿನ ನಿಸರ್ಗದ ಮಡಿಲಲ್ಲಿನ ಹೂವಿನ ಮಕರಂದವನ್ನು ಹೀರುವುದರಿಂದ ಪರಾಗಸ್ಪರ್ಶ ಕ್ರಿಯೆ ನಡೆಯುತ್ತದೆ. ಇದರಿಂದ ಉತ್ಪಾದನೆ ಕೂಡ ಅಧಿಕಗೊಳ್ಳುತ್ತದೆ. ಇದರಿಂದ ಕಾಡಿನ ಪರಿಸರ ಸಮತೋಲನ ಕಾಯ್ದುಕೊಳ್ಳುವಲ್ಲಿ ಕೂಡ ಸಹಾಯಕವಾಗುತ್ತದೆ.

ಇದನ್ನು ಓದಿ: ಬರದ ನಾಡಿನ ಭಗೀರಥರು; ಯುವಕರ ಶ್ರಮದಿಂದ ಕೆರೆಗೆ ಹರಿದು ಬಂತು ನೀರುಇನ್ನು ಈ ಕಾಡಿನಲ್ಲಿ  ಡಾರ್ಕ್​ ಬ್ಲೂ ಟೈಗರ್​ ಒಂದೇ ಜಾತಿಯ ಚಿಟ್ಟೆಗಳನ್ನು ಈ ಅವಧಿಯಲ್ಲಿ ಯಥೇಚ್ಛವಾಗಿ ಕಾಣಬಹುದು. ಕಪ್ಪು ರೆಕ್ಕೆಯ ಮೇಲೆ ನೀಲಿ ಹಾಗೂ ಕಂದು ಒಣ್ಣದ ಗುರುತಿನ ಈ ಚಿಟ್ಟೆಗಳು ಮಾರ್ಚ್​ವೇಳೆಗೆ ಕಣ್ಮರೆಯಾಗುತ್ತವೆ.
First published: February 4, 2020, 12:56 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories