ಉತ್ತರ ಕನ್ನಡ: ಹಳದಿ ಬಣ್ಣದಿಂದ ಕೂಡಿದ ಹೋಳಿಗೆಯಂತಹ ತಿನಿಸು. ಅದ್ರ ಒಳಗಡೆ ಉಪ್ಪಿನಕಾಯಿ ಥರಾ ಕಾಣೋ ಮಸಾಲೆ. ಇದು ಯಾವ ಬಗೆಯ ತಿಂಡಿ ತಿನಿಸು ಅಂತೀರಾ? ಯೆಸ್, ಇದುವೇ ಲ್ಯಾಪಿಂಗ್. ಅರೆ, ಈ ಲ್ಯಾಪಿಂಗ್ (Laphing Food) ಅಂದ್ರೆ ಎಂತಾ ಅಂತಾ ಮತ್ತೆ ಕನ್ಫ್ಯೂಶನ್ ಆದ್ರ? ಹಾಗಿದ್ರೆ ಏನಿದು ಲ್ಯಾಪಿಂಗ್ (Laphing Recipe) ಅನ್ನೋದಕ್ಕೆ ಈ ಸ್ಟೋರಿ ನೋಡಿ.
ಟಿಬೆಟಿಯನ್ನರ ತಿಂಡಿ
ಹೌದು, ಇದು ಟಿಬೆಟಿಯನ್ನರ ಫೇಮಸ್ ತಿಂಡಿ ಲ್ಯಾಪಿಂಗ್. ಉತ್ತರ ಕನ್ನಡದ ಮುಂಡುಗೋಡಿನಲ್ಲಿ ನೆಲೆಸಿರುವ ಟಿಬೆಟಿಯನ್ನರು ಇಂತಹ ವಿಶೇಷ ತಿನಿಸುಗಳನ್ನು ಇತರರಿಗೂ ಉಣಬಡಿಸುತ್ತಾರೆ. ಮುಂಡಗೋಡದಲ್ಲಿ ಪುಟ್ಟದಾದ ಲ್ಯಾಪಿಂಗ್ ತಿನಿಸಿನ ಅಂಗಡಿ ಇಟ್ಟುಕೊಂಡಿರುವ ಪುರ್ಬು ಡೋಲ್ಮಾ ಅವರು ಇದರಿಂದಲೇ ಜೀವನ ನಡೆಸುತ್ತಿದ್ದಾರೆ.
ಲ್ಯಾಪಿಂಗ್ನಿಂದ ಲಾಫಿಂಗ್!
ಪತಿಯನ್ನು ಕಳೆದುಕೊಂಡಿರುವ ಪುರ್ಬು ಡೋಲ್ಮಾ ಅವರು ಪ್ರತಿದಿನ 1,500 ರೂಪಾಯಿಯಷ್ಟು ಆದಾಯವನ್ನು ಇದ್ರಿಂದ ಗಳಿಸುತ್ತಿದ್ದಾರೆ. ಈ ಲ್ಯಾಪಿಂಗ್ ಹೇಗೆ ಮಾಡೋದು ಅನ್ನೋದನ್ನ ಪುರ್ಬು ಡೋಲ್ಮಾ ಅವರು ನ್ಯೂಸ್ 18 ಕನ್ನಡ ಡಿಜಿಟಲ್ ವೀಕ್ಷಕರಿಗಾಗಿ ತೋರಿಸಿಕೊಟ್ಟಿದ್ದಾರೆ. ಹಾಗಿದ್ರೆ ಹೇಗ್ ಮಾಡೋದು ಈ ಲ್ಯಾಪಿಂಗ್ ಅನ್ನೋದನ್ನ ನೋಡೋಣ ಬನ್ನಿ.
ಇದನ್ನೂ ಓದಿ: Prawns Manchurian Recipe: ಬಾಯಲ್ಲಿ ನೀರು ತರಿಸುತ್ತೆ ಈ ಸಿಗಡಿ ಮಂಚೂರಿ, ಇಲ್ಲಿದೆ ರೆಸಿಪಿ
ಹೀಗೆ ಮಾಡಿ
ಮೊದಲು ತಂದೂರಿ ರೊಟ್ಟಿ ಮಾಡುವ ಹಿಟ್ಟು ಹಾಗೂ ಪಿಂಗ್ಜಮ್ ಎಂಬ ಕಾರ್ನ್ ಫ್ಲೋರ್ ಅನ್ನು ಮಿಶ್ರಣ ಮಾಡಿಕೊಂಡು ಉಂಡೆ ಕಟ್ಟಬೇಕು. ನಂತರ ಅದನ್ನು ಚೆನ್ನಾಗಿ ಲಟ್ಟಿಸಿಕೊಳ್ಳಬೇಕು. ಕಾರ್ನ್ ಫ್ಲೋರ್ ಕಾರಣದಿಂದ ಸಿಹಿಯಾಗಿಯೂ, ತಂದೂರಿ ರೊಟ್ಟಿಯ ಸ್ವಾದವೂ ಇದಕ್ಕೆ ಇರುತ್ತದೆ. ನಂತರ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಗೂ ಸೋಯಾಸಾಸ್, ಉಪ್ಪು, ವಿಚಿನ್ ಎಂಬ ಟಿಬೇಟಿಯನ್ ಮಸಾಲೆ ಪದಾರ್ಥ ಇವೆಲ್ಲವನ್ನೂ ಅದರ ಮೇಲೆ ಹರವಿ ಬಿಡಬೇಕು.
ಹಸಿವು ನೀಗೋದು ಪಕ್ಕಾ!
ನಂತರ ಬೇಯಿಸಿದ ತರಕಾರಿ ಅಥವಾ ಮಾಂಸ ಬೇಕೆಂದರೆ ಬೇಯಿಸಿದ ಮಾಂಸವನ್ನು ಹಾಕಿಕೊಂಡು ಒಂದೇ ರೋಲ್ನಲ್ಲಿ ಐದಾರು ತುಂಡು ಮಾಡಿಕೊಂಡು ತಿನ್ನುವ ವಸ್ತು ಇದಾಗಿದೆ. ಒಮ್ಮೆಗೆ ಒಂದು ತಿಂದರೆ ಹಸಿವು ನೀಗಿಸುವ ತಾಕತ್ತು ಈ ಲ್ಯಾಪಿಂಗ್ ಗೆ ಇದೆ. ಜೊತೆಗೆ ಇದು ಒಳ್ಳೆ ಪೌಷ್ಟಿಕ ಆಹಾರ ಕೂಡಾ.
ಇದನ್ನೂ ಓದಿ: Business Idea: ಬೇಸಿಗೆ ರಜೆ ಬ್ಯುಸಿನೆಸ್! ಮಾವಿನ ಹಣ್ಣು ಮಾರಿ ದಿನಕ್ಕೆ 5 ಸಾವಿರ ದುಡಿಯುವ ಮಕ್ಕಳು
ಒಟ್ಟಿನಲ್ಲಿ ಲ್ಯಾಪಿಂಗ್ ಎಂತವರ ಬಾಯಿ ರುಚಿಯನ್ನು ಹೆಚ್ಚಿಸುತ್ತೆ. ಒಂದು ತಿಂದರೆ ಮತ್ತೊಂದು ಬೇಕು ಎಂದೆನಿಸುವ ಸಖತ್ ಟೇಸ್ಟಿ ಆಗಿರೋ ತಿಂಡಿಯೇ ಇದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ