Karnataka Rains: ದಬ್ಬಡ್ಕದಲ್ಲಿ ಭೀಕರ ಜಲಸ್ಫೋಟಕ್ಕೆ ಕಾರಣವೇನು? ಜನರಲ್ಲಿ ಭಾರೀ ಆತಂಕ

ಚೆಂಬು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಂತಬೈಲಿನಲ್ಲಿ ಸುಮಾರು 250 ಮೀಟರ್ ಉದ್ದದಷ್ಟು ರಸ್ತೆ ಹತ್ತು ಅಡಿ ಆಳಕ್ಕೆ ಕೊಚ್ಚಿಹೋಗಿದೆ. ಈಗ ಹೊಳೆಯು ತಾನು ಹರಿಯುವ ದಿಕ್ಕನ್ನೇ ಬದಲಾಯಿಸಿದೆ. ಇದರಿಂದಾಗಿ ದಬ್ಬಡ್ಕ ಚೆಂಬು ಮೂಲಕ ಭಾಗಮಂಡಲ ಸಮೀಪದ ಚೆಟ್ಟಿಮಾನಿಯ ಸಂಪರ್ಕ ಕಡಿತವಾಗಿದೆ.

ಚೆಂಬು ದಬ್ಬಡ್ಕದಲ್ಲಿ ಭೂಕುಸಿತ

ಚೆಂಬು ದಬ್ಬಡ್ಕದಲ್ಲಿ ಭೂಕುಸಿತ

  • Share this:
    ಕೊಡಗು(ಆ. 31): ಜೂನ್ ತಿಂಗಳ ಅಂತ್ಯದಲ್ಲಿ ಸರಣಿ ಭೂಕಂಪನವಾಗಿದ್ದ (Earthquake) ಚೆಂಬು ದಬ್ಬಡ್ಕದಲ್ಲಿ ಸೋಮವಾರ ಮುಂಜಾನೆ ಸುರಿದ ದಿಢೀರ್ ಮಳೆಗೆ (Rain) ಎಸ್‍ಪಿ ತೋಟ ಎಂಬಲ್ಲಿ ಭೀಕರ ಭೂಕುಸಿತವಾಗಿದೆ (Landslide). ಪರಿಣಾಮ ದಬ್ಬಡ್ಕ ಹೊಳೆ ಉಕ್ಕಿ ಹರಿದು ಭಾರೀ ಅವಾಂತರಗಳು ಸೃಷ್ಟಿಯಾಗಿವೆ. ಜಲಸ್ಫೋಟಕ್ಕೆ ಜೂನ್ ತಿಂಗಳಲ್ಲಿ ಹಲವು ಬಾರಿ ಭೂಮಿ ಕಂಪಿಸಿದ್ದೇ ಕಾರಣ ಎನ್ನುವ ಆತಂಕವನ್ನು ಅಲ್ಲಿನ ಜನರು ವ್ಯಕ್ತಪಡಿಸಿದ್ದಾರೆ. ಹಿಂದೆಂದೂ ಕಂಡು ಕೇಳರಿಯದ ಪ್ರಮಾಣದಲ್ಲಿ ದಬ್ಬಡ್ಕ ಹೊಳೆ ಉಕ್ಕಿ ಹರಿದಿದೆ. ಪರಿಣಾಮ ಅಲ್ಲಿನ ಹಲವು ಸೇತುವೆಗಳು ಕೊಚ್ಚಿಹೋಗಿವೆ.  ಹೌದು ಚೆಂಬು ಗ್ರಾಮ ಪಂಚಾಯಿತಿ (Chembu Village Panchayat) ವ್ಯಾಪ್ತಿಯ ಕಾಂತಬೈಲಿನಲ್ಲಿ ಸುಮಾರು 250 ಮೀಟರ್ ಉದ್ದದಷ್ಟು ರಸ್ತೆ ಹತ್ತು ಅಡಿ ಆಳಕ್ಕೆ ಕೊಚ್ಚಿಹೋಗಿದೆ. ಈಗ ಹೊಳೆಯು ತಾನು ಹರಿಯುವ ದಿಕ್ಕನ್ನೇ ಬದಲಾಯಿಸಿದೆ. ಇದರಿಂದಾಗಿ ದಬ್ಬಡ್ಕ ಚೆಂಬು ಮೂಲಕ ಭಾಗಮಂಡಲ ಸಮೀಪದ ಚೆಟ್ಟಿಮಾನಿಯ ಸಂಪರ್ಕ ಕಡಿತವಾಗಿದೆ.

    ಇದನ್ನೂ ಓದಿ:  ಕಡಮಕಲ್ಲು ಅರಣ್ಯದಲ್ಲಿ ಮತ್ತೆ ಭಯಾನಕ ಭೂಕುಸಿತ, ಬೆಚ್ಚಿಬಿದ್ದ ಜನ

    ರಸ್ತೆ ಕೊಚ್ಚಿ ಹೋಗುವುದರ ಜೊತೆಗೆ ಅಲ್ಲಿದ್ದ ಸೇತುವೆ ಮುರಿದು ಬಿದ್ದಿದೆ. ಮೇಲ್ಭಾಗದಿಂದ ಭಾರೀ ಪ್ರಮಾಣದ ಬೃಹತ್ ಮರಗಳು ಕೊಚ್ಚಿಬಂದ ಹಿನ್ನೆಲೆಯಲ್ಲಿ ಆನಿಹಳ್ಳ ಸೇತುವೆಗೆ ಅಡ್ಡಲಾಗಿ ಸಿಲುಕಿ ಅಲ್ಲಿಯೂ ಹೊಳೆಯ ನೀರು ಸೇತುವೆಯ ಎರಡು ಬದಿಗಳಲ್ಲಿ ಹರಿದು ಸೇತುವೆ ಸಂಪರ್ಕ ಕಡಿತವಾಗಿದೆ. ಜೂನ್ ತಿಂಗಳಲ್ಲಿ ನಿರಂತರವಾಗಿ ಎಂಟರಿಂದ ಒಂಭತ್ತು ಬಾರಿ ಇಲ್ಲಿ ಭೂಮಿ ಕಂಪಿಸಿದ್ದ ಹಿನ್ನೆಲೆಯಲ್ಲಿ ಜಲಸ್ಫೋಟವಾಗಿದ್ದು, ಇದರಿಂದ ನಮಗೆ ತೀವ್ರ ಭಯವೂ ಇದೆ ಎನ್ನುವುದು ಜನರ ಆತಂಕ. ಸ್ಥಳಕ್ಕೆ ಬಂದಿದ್ದ ವಿಜ್ಞಾನಿಗಳು ಮತ್ತು ಅಧಿಕಾರಿಗಳ ತಂಡ ಭೂಕಂಪನದಿಂದ ಯಾವುದೇ ತೊಂದರೆ ಎಲ್ಲ ಎಂದಿದ್ದರು. ಆದರೆ ಈಗ ಈ ರೀತಿ ಆಗಿರುವುದಕ್ಕೆ ಏನು ಹೇಳುತ್ತಾರೆ ಎಂದು ಜನರು ಪ್ರಶ್ನಿಸಿದ್ದಾರೆ.

    ವಿರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ ಭೇಟಿ

    ಸ್ಥಳಕ್ಕೆ ವಿರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ ಜನರು ಆತಂಕಗೊಳ್ಳದೆ ಧೈರ್ಯ ಹಾಗೂ ಎಚ್ಚರದಿಂದ ಇರುವಂತೆಯೂ ಸೂಚಿಸಿದ್ದಾರೆ. ಇದೇ ವೇಳೆ ಜೂನ್ ತಿಂಗಳಲ್ಲಿ ಅತ್ಯಂತ ಕಡಿಮೆ ಪ್ರಮಾಣದ ಭೂಕಂಪನವಾಗಿತ್ತು. ಇದರಿಂದ ಯಾವುದೇ ತೊಂದರೆ ಇಲ್ಲ ಎಂದು ಭೂವಿಜ್ಞಾನಿಗಳು ಹೇಳಿದ್ದರು. ಈ ಕುರಿತು ವಿಜ್ಞಾನಿಗಳ ತಂಡ ಮತ್ತೊಮ್ಮೆ ಪರಿಶೀಲಿಸಿ ವರದಿ ನೀಡಬೇಕು ಎಂದು ಅವರು ಹೇಳಿದ್ದಾರೆ.

    ಇದು ಆತಂಕದ ವಿಚಾರ

    ಊರುಬೈಲು ಗ್ರಾಮದಲ್ಲೂ ಹೊಳೆ ಉಕ್ಕಿ ಹರಿದು ಸೇತುವೆ ಕೊಚ್ಚಿ ಹೋಗಿದೆ. ಇದರಿಂದ ಸಂಪಾಜೆಯಿಂದ ಊರುಬೈಲು, ಬಾಲಂಬಿ ಮತ್ತು ಚೆಂಬು ಗ್ರಾಮಗಳ ಸಂಪರ್ಕ ಕಡಿತಗೊಂಡಿದ್ದು, 300 ಕ್ಕೂ ಹೆಚ್ಚು ಕುಟುಂಬಗಳು ಈಗ ಕಲ್ಲುಗುಂಡಿ ಮಾರ್ಗವಾಗಿ ಸುತ್ತಿ ಬಳಸಿ ಓಡಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ರಾತ್ರಿ 11 ಗಂಟೆಯವರೆಗೆ ಮಳೆಯ ಯಾವುದೇ ಮುನ್ಸೂಚನೆ ಇರಲಿಲ್ಲ. ಆದರೆ ಮುಂಜಾನೆ ಇದ್ದಕ್ಕಿದ್ದಂತೆ ಮೇಘ ಸ್ಫೋಟವಾದಂತೆ ಮಳೆ ಸುರಿದಿದೆ. ಇದರಿಂದಾಗಿ ಜಲಸ್ಫೋಟವಾಗಿದೆ. ಅತ್ಯಂತ ದಟ್ಟ ಅರಣ್ಯ ಪ್ರದೇಶ ಇರುವಲ್ಲಿಯೂ ಜಲಸ್ಪೋಟ ಮತ್ತು ಭೂಕುಸಿತವಾಗಿರುವುದು ಆತಂಕದ ವಿಷಯ ಎಂದು ವಿರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ ಹೇಳಿದ್ದಾರೆ.

    ಇದನ್ನೂ ಓದಿ:  Chikkamagaluru: ಚಿಕ್ಕಮಗಳೂರಿನ ಗಿರಿ-ಪರ್ವತಕ್ಕೆ ನೀಲಿ ಚಿತ್ತಾರ, ಕಾಫಿನಾಡಿನ ಬೆಟ್ಟ-ಗುಡ್ಡಗಳಿಗೆ ಹೊಸ ಬಣ್ಣ!

    ನಮ್ಮ ತಾತನ ಕಾಲದಿಂದಲೂ ದಬ್ಬಡ್ಕ ಹೊಳೆ ಇಷ್ಟು ಭೀಕರವಾಗಿ ಉಕ್ಕಿ ಹರಿದಿರಲಿಲ್ಲ. 2018 ರಲ್ಲಿ ಜಿಲ್ಲೆಯಲ್ಲಿ ಅಷ್ಟೊಂದು ಭೂಕುಸಿತವಾದಾಗಲೂ ಇಲ್ಲಿ ಯಾವುದೇ ತೊಂದರೆ ಆಗಿರಲಿಲ್ಲ. ಆದರೆ ಭೂಕಂಪನವಾದ ಬಳಿಕ ಈ ಭಾಗದಲ್ಲಿ ಭೂಕುಸಿತ ಮತ್ತು ಜಲಸ್ಫೋಟವಾಗಿರುವುದು ಆತಂಕಕ್ಕೆ ಕಾರಣವಾಗಿದೆ ಎಂದು ಚೆಂಬು ಗ್ರಾಮ ಪಂಚಾಯಿತಿ ಸದಸ್ಯ ಗಿರೀಶ್ ಹೇಳಿದ್ದಾರೆ.
    Published by:Precilla Olivia Dias
    First published: