Kodagu: ಕರ್ತೋಜಿ ಬೆಟ್ಟದಲ್ಲಿ ಬಿರುಕು; ರಾಷ್ಟ್ರೀಯ ಹೆದ್ದಾರಿಯಲ್ಲಿ ಭೂಕುಸಿತ ಉಂಟಾಗುವ ಆತಂಕ

ಮಂಗಳವಾರ ಬೆಳಗ್ಗೆ ಒಂಭತ್ತು ಗಂಟೆ ವೇಳೆಗೆ ಸ್ವಲ್ಪ ಪ್ರಮಾಣದಲ್ಲಿ ಕಾಣಿಸಿಕೊಂಡಿದ್ದ ಬಿರುಕು ಮಧ್ಯಾಹ್ನದ ವೇಳೆ ನಾಲ್ಕು ಅಡಿಯಷ್ಟು ಕೆಳಕ್ಕೆ ಕುಸಿದಿದೆ.

ಹೆದ್ದಾರಿ ಪಕ್ಕದ ಬೆಟ್ಟದಲ್ಲಿ ಬಿರುಕು

ಹೆದ್ದಾರಿ ಪಕ್ಕದ ಬೆಟ್ಟದಲ್ಲಿ ಬಿರುಕು

  • Share this:
ಮಡಿಕೇರಿ: ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಕರ್ತೋಜಿ ಬಳಿ ರಾಷ್ಟ್ರೀಯ ಹೆದ್ದಾರಿ 275ರ (National Highway) ಬದಿಯಲ್ಲಿ ಇರುವ ಬೆಟ್ಟದಲ್ಲಿ ಭಾರೀ ಬಿರುಕು ಮೂಡಿರುವ ಹಿನ್ನೆಲೆಯಲ್ಲಿ ಭೂಕುಸಿತದ (Landslide) ಆತಂಕ ಎದುರಾಗಿದೆ. ಹೀಗಾಗಿ ಮುನ್ನೆಚ್ಚರಿಕೆ ಮದೆನಾಡಿನಿಂದ ಸಂಪಾಜೆವರೆಗೆ (Madenadu To Sampaje) ಎಲ್ಲಾ ವಾಹನಗಳಿಗೆ (Vehicles) ರಾತ್ರಿ ಸಂಚಾರವನ್ನು ರಾತ್ರಿ 9 ರಿಂದ ಬೆಳಿಗ್ಗೆ 6.30 ರವರೆಗೆ ಕೊಡಗು (Kodagu) ಜಿಲ್ಲಾಡಳಿತ ನಿಷೇಧಿಸಿದೆ. ಕೊಡಗು ಜಿಲ್ಲೆಯಲ್ಲಿ 2018 ರಲ್ಲಿ ಭೂಕುಸಿತವಾಗಿದ್ದ ಬೆಟ್ಟದ ಸ್ಥಳದಲ್ಲೇ ಮತ್ತೆ ಭಾರೀ ಬಿರುಕು ಕಾಣಿಸಿಕೊಂಡಿದೆ. ಇದರಿಂದ ಬೆಟ್ಟ ಕುಸಿದು ರಾಷ್ಟ್ರೀಯ ಹೆದ್ದಾರಿ ಬಂದ್ ಆಗುವ ಆತಂಕ ಎದುರಾಗಿದೆ. ಬೆಟ್ಟ ಕುಸಿದಿದ್ದೇ ಆದಲ್ಲಿ ಮಡಿಕೇರಿ ಮತ್ತು ಮಂಗಳೂರು (Madikeri To Mangaluru) ನಡುವೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 275 ಬಂದ್ ಆಗಲಿದೆ.

ಬೆಟ್ಟದಲ್ಲಿ ಬಿರುಕು ಮೂಡಿದ್ದು, ಬಿರುಕಿಗೆ ಮಳೆ ಬಂದಾಗಲೆಲ್ಲಾ ಸಾಕಷ್ಟು ಪ್ರಮಾಣದ ನೀರು ಹೋಗುತ್ತಿದೆ. ಹೀಗಾಗಿ ಆ ಬೆಟ್ಟ ನಿರಂತರವಾಗಿ ಕೆಳಕ್ಕೆ ಜರುಗುತ್ತಲೇ ಇದ್ದು, ಯಾವುದೇ ಕ್ಷಣದಲ್ಲೂ ಕುಸಿದು ಬೀಳುವ ಸಾಧ್ಯತೆ ಇದೆ.

ಮಂಗಳವಾರ ಬೆಳಗ್ಗೆ ಒಂಭತ್ತು ಗಂಟೆ ವೇಳೆಗೆ ಸ್ವಲ್ಪ ಪ್ರಮಾಣದಲ್ಲಿ ಕಾಣಿಸಿಕೊಂಡಿದ್ದ ಬಿರುಕು ಮಧ್ಯಾಹ್ನದ ವೇಳೆ ನಾಲ್ಕು ಅಡಿಯಷ್ಟು ಕೆಳಕ್ಕೆ ಕುಸಿದಿದೆ. ಹೀಗಾಗಿ ಕೊಡಗು ಜಿಲ್ಲಾಡಳಿತ ಮಂಗಳವಾರ ರಾತ್ರಿಯಿಂದ ಬುಧವಾರ ಬೆಳಿಗ್ಗೆ 6.30 ರವರೆಗೆ ಈ ಮಾರ್ಗದಲ್ಲಿ ಎಲ್ಲಾ ವಾಹನಗಳ ಓಡಾಟವನ್ನು ನಿಷೇಧಿಸಿ ಆದೇಶಿಸಿದೆ.

ಇದನ್ನೂ ಓದಿ:  Power Cut: ಆಗಸ್ಟ್ 10 ರಿಂದ 13ರವರೆಗೆ ಬೆಂಗಳೂರಿನ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ!

ಮಣ್ಣು ತೆರವುಗೊಳಿಸಲು ಸಿದ್ಧತೆ

ಒಂದು ವೇಳೆ ಬೆಟ್ಟ ಕುಸಿದಲ್ಲಿ ಕನಿಷ್ಠ 350 ರಿಂದ 400 ಲೋಡ್ ನಷ್ಟು ಮಣ್ಣು ರಾಷ್ಟ್ರೀಯ ಹೆದ್ದಾರಿಗೆ ಅಡ್ಡಲಾಗಿ ಬೀಳಲಿದೆ. 2018 ರಲ್ಲಿ ಇದೇ ಸ್ಥಳದಲ್ಲಿ ಬೆಟ್ಟದ ಒಂದು ಭಾಗವೇ ಕುಸಿದು ಬಿದ್ದಿದ್ದರಿಂದ ಆ ಮಣ್ಣನ್ನು ತೆರವುಗೊಳಿಸಲು ನಾಲ್ಕು ದಿನಗಳೇ ಬೇಕಾಗಿತ್ತು. ಅಲ್ಲಿಯವರೆಗೆ ಈ ರಸ್ತೆಯಲ್ಲಿ ಸಂಚಾರ ಬಂದ್ ಆಗಿತ್ತು.

ಸ್ಥಳಕ್ಕೆ ಕೆಜಿ ಬೋಪಯ್ಯ ಭೇಟಿ

ಈ ಬೆಟ್ಟ ಕುಸಿದಲ್ಲಿ ಈಗಲೂ ಕನಿಷ್ಠ ಎರಡು ದಿನಗಳ ಕಾಲ ರಸ್ತೆ ಬಂದ್ ಆಗುವ ಆತಂಕವಿದೆ. ಇದರಿಂದ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗಲಿದೆ. ಬೆಟ್ಟದಲ್ಲಿ ಬಾರೀ ಬಿರುಕು ಕಾಣಿಸಿಕೊಂಡಿರುವ ವಿಷಯ ತಿಳಿದು ಸ್ಥಳಕ್ಕೆ ವಿರಾಜಪೇಟೆ ಶಾಸಕ ಕೆ.ಜಿ.ಬೋಪಯ್ಯ ಭೇಟಿ ನೀಡಿ ಪರಿಶೀಲಿಸಿದರು. ಸದ್ಯ ಸ್ಥಳದಲ್ಲಿ ಈಗಾಗಲೇ ಜೆಸಿಬಿ ತಂದು ನಿಲ್ಲಿಸಿಕೊಳ್ಳಲಾಗಿದ್ದು, ಹೆದ್ದಾರಿ ಮೇಲೆ ಬೆಟ್ಟ ಕುಸಿದಲ್ಲಿ ಅದನ್ನು ತೆರವು ಮಾಡಲು ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಬೆಟ್ಟ ಯಾವುದೇ ಕ್ಷಣದಲ್ಲಿ ಕುಸಿದು ಬೀಳುವ ಸಾಧ್ಯತೆ ಇದೆ. ಹೀಗಾಗಿ ಮುನ್ನೆಚ್ಚರಿಕೆ ವಹಿಸಲು ಸೂಚಿಸಲಾಗಿದೆ.

ಒಂದು ವೇಳೆ ಹಾಗೇನಾದರೂ ಆದಲ್ಲಿ ತಕ್ಷಣವೇ ಮಣ್ಣು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅವಕಾಶ ನೀಡಲು ಸೂಚಿಸಲಾಗಿದೆ. ವಿರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ ಹೇಳಿದ್ದಾರೆ.

ಜಿಲ್ಲಾಡಳಿತದಿಂದ ಮುಂಜಾಗ್ರತ ಕ್ರಮ

ಬೆಟ್ಟ ಬಿರುಕು ಬಿಟ್ಟಿರುವುದರಿಂದ ಯಾವುದೇ ವಾಹನಗಳು ಓಡಾಡುವುದು ಅಪಾಯಕಾರಿ. ಈ ವಿಷಯವನ್ನು ಜಿಲ್ಲಾಡಳಿತದ ಗಮನಕ್ಕೆ ತರಲಾಗಿದೆ. ಯಾವುದೇ ಕ್ಷಣದಲ್ಲಾದರೂ ಮಣ್ಣು ಕುಸಿಯುವ ಆತಂಕವಿದೆ ರಾಷ್ಟ್ರೀಯ ಹೆದ್ದಾರಿ ಇಲಾಖೆ ಸಹಾಯಕ ಮುರುಗೇಶ್ ಹೇಳಿದ್ದಾರೆ. ಸದ್ಯ ರಾತ್ರಿ ಸಂಚಾರ ಬಂದ್ ಮಾಡಿ ಯಾವುದೇ ಅಪಾಯ ಆಗದಂತೆ ಜಿಲ್ಲಾಡಳಿತ ಕ್ರಮ ಕೈಗೊಂಡಿದೆ.

ಇದನ್ನೂ ಓದಿ:  Shikaripura: ತಂದೆ ಹೇಳಿಕೆ ಬೆನ್ನಲ್ಲೇ ಶಿಕಾರಿಪುರದಲ್ಲಿ ವಿಜಯೇಂದ್ರ ಫುಲ್ ಆ್ಯಕ್ಟಿವ್

ಮಳೆ ಸಾಧ್ಯತೆ 

ಕರಾವಳಿಯ ಎಲ್ಲಾ ಜಿಲ್ಲೆಗಳು, ಉತ್ತರ ಒಳನಾಡಿನ ಬೆಳಗಾವಿ, ಬೀದರ್, ಧಾರವಾಡ, ಕಲಬುರಗಿ ದಕ್ಷಿಣ ಒಳನಾಡಿನ ಹಾಸನ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಭಾರಿ ಮಳೆ ಸಾಧ್ಯತೆ ಇದೆ. ನಾಳೆ ಕರಾವಳಿಯ ಎಲ್ಲಾ ಜಿಲ್ಲೆಗಳಲ್ಲಿ ಮತ್ತು ಉತ್ತರ ಒಳನಾಡಿನ ಬೆಳಗಾವಿ, ಧಾರವಾಡ, ಹಾವೇರಿ, ದಕ್ಷಿಣ ಒಳನಾಡಿನ ಚಿಕ್ಕಮಗಳೂರು, ಕೊಡಗು, ಹಾಸನ, ಶಿವಮೊಗ್ಗ, ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಭಾರಿ ಮಳೆ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
Published by:Mahmadrafik K
First published: