ಬೆಳ್ತಂಗಡಿಯಲ್ಲಿ ಆಸ್ತಿ ವಿವಾದ: ಅಡಿಕೆ ಗಿಡಗಳ ಮಾರಣ ಹೋಮ

ಏಳಕ್ಕೂ ಹೆಚ್ಚು ತೆಂಗಿನ ಗಿಡ, ಅಡಿಕೆ ಗಿಡ ನಾಶವಾಗಿದೆ. ನಮಿತಾ ಅವರ ಕಣ್ಣಮುಂದೆಯೇ ಈ ಘಟನೆ ನಡೆದಿದೆ. ಇದನ್ನು ನಿಲ್ಲಿಸುವ ಪ್ರಯತ್ನ ನಡೆಸಿದ್ರು ಸಹ ಗದರಿಸಿ ಕೃತ್ಯ ಎಸಗಲಾಗಿದೆ ಎಂದು ತೊಂದರೆಗೊಳಗಾದ ನಮಿತಾ ಆರೋಪಿಸಿದ್ದಾರೆ. ಧರ್ಮಸ್ಥಳ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಸ್ಥಳಕ್ಕೆ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

news18-kannada
Updated:July 16, 2020, 7:15 AM IST
ಬೆಳ್ತಂಗಡಿಯಲ್ಲಿ ಆಸ್ತಿ ವಿವಾದ: ಅಡಿಕೆ ಗಿಡಗಳ ಮಾರಣ ಹೋಮ
ಬೆಳ್ತಂಗಡಿಯಲ್ಲಿ ಆಸ್ತಿ ವಿವಾದ: ಅಡಿಕೆ ಗಿಡಗಳ ಮಾರಣ ಹೋಮ
  • Share this:
ಮಂಗಳೂರು(ಜು.16): ಮಾನವ ಜನ್ಮ ನೀರ ಮೇಲಿನ ಗುಳ್ಳೆಯಂತಿದ್ದರೂ ಸಹ ಒಮ್ಮೊಮ್ಮೆ ತಾನು ಶಾಶ್ವತವಾಗಿ ಈ ಭೂಮಿ ಮೇಲೆ ಇರ್ತೇನೆ ಎಂಬಂತೆ ವರ್ತಿಸುತ್ತಾನೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ವ್ಯಕ್ತಿಯೊಬ್ಬ ಪ್ರಕೃತಿಯ ಮೇಲೆಯೇ ದಾಳಿ ನಡೆಸಿದ್ದಾನೆ. ಜಾಗದ ತಕರಾರಿಗೆ ಹಲವು ಗಿಡಗಳಿಗೆ ಕೊಡಲಿಯೇಟು ನೀಡಿ ಕತ್ತರಿಸಿ ಹಾಕಿದ್ದಾನೆ.

ಕಳೆದ ಬಾರಿ ತುಮಕೂರು ಜಿಲ್ಲೆಯಲ್ಲಿ ನಡೆದ ರೀತಿಯ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಯಲ್ಲಿ ನಡೆದಿದೆ. ಧರೆಗೆ ಉರುಳಿರುವ ಅಡಿಕೆ ಗಿಡ, ತೆಂಗಿನ ಗಿಡ, ನೆಲಸಮವಾಗಿರುವ ಪ್ರದೇಶವಾಗಿರೋದು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕಲ್ಮಂಜ ಗ್ರಾಮದಲ್ಲಿ. ಜಾಗದ ವಿಚಾರದಲ್ಲಿ ಉಂಟಾಗಿರುವ ತಕರಾರಿಗೆ ವ್ಯಕ್ತಿಯೊಬ್ಬ ಪ್ರಕೃತಿಯ ಮೇಲೆ ಈ ರೀತಿಯ ದಾಳಿ ಮಾಡಿದ್ದಾನೆ.

ಕಲ್ಮಂಜ ಗ್ರಾಮದ ನಮಿತಾ-ಉಮೇಶ್ ಗೌಡ ದಂಪತಿಗಳು 9 ಸೆಂಟ್ಸ್ ಜಾಗದಲ್ಲಿ ಮನೆ ಕಟ್ಟಿ 94Cಗೆ ಅರ್ಜಿ ಸಲ್ಲಿಸಿದ್ದರು. ಐದು ವರ್ಷದ ಹಿಂದೆ ಇವರ ಹೆಸರಿಗೆ ಜಾಗ ಮಂಜೂರಾಗಿತ್ತು. ಕೆಲ ವರ್ಷಗಳ ಹಿಂದೆ ಪಕ್ಕದಲ್ಲೇ ಲೋಕೇಶ್ ಶೆಟ್ಟಿ ಎಂಬಾತ ಬಂದಿದ್ದು, ತನಗೆ ಮಂಜೂರಾದ ಜಾಗ ನಿಮ್ಮ ಜಾಗದಲ್ಲಿ ಹಂಚಿಕೊಂಡಿದೆ ಎಂದು ತಗಾದೆ ತೆಗೆಯುತ್ತ ಬಂದಿದ್ದಾನೆ. ಇದೀಗ ತನ್ನ ಪ್ರಭಾವವನ್ನು ಬಳಸಿ ನಮಿತಾ ಉಮೇಶ್ ಗೌಡ ಅವರ ಜಾಗದಲ್ಲಿ ಬೆಳೆದಿದ್ದ ತೆಂಗಿನ ಗಿಡ, ಅಡಿಕೆ ಗಿಡವನ್ನು ಜೆ.ಸಿ.ಬಿ ಯಂತ್ರದ ಮೂಲಕ ನೆಲಸಮ ಮಾಡಿ ತನ್ನ ಅಟ್ಟಹಾಸವನ್ನು ತೋರಿದ್ದಾನೆ.

ಏಳಕ್ಕೂ ಹೆಚ್ಚು ತೆಂಗಿನ ಗಿಡ, ಅಡಿಕೆ ಗಿಡ ನಾಶವಾಗಿದೆ. ನಮಿತಾ ಅವರ ಕಣ್ಣಮುಂದೆಯೇ ಈ ಘಟನೆ ನಡೆದಿದೆ. ಇದನ್ನು ನಿಲ್ಲಿಸುವ ಪ್ರಯತ್ನ ನಡೆಸಿದ್ರು ಸಹ ಗದರಿಸಿ ಕೃತ್ಯ ಎಸಗಲಾಗಿದೆ ಎಂದು ತೊಂದರೆಗೊಳಗಾದ ನಮಿತಾ ಆರೋಪಿಸಿದ್ದಾರೆ. ಧರ್ಮಸ್ಥಳ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಸ್ಥಳಕ್ಕೆ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಆದರೆ ಲೋಕೇಶ್ ಶೆಟ್ಟಿ ಮಾತ್ರ ತನ್ನ ಕೃತ್ಯದ ಬಗ್ಗೆ ಸಮರ್ಥನೆ ನೀಡಿದ್ದಾರೆ. ಈ ಹಿಂದೆಯೇ ಬಹಳಷ್ಟು ಬಾರಿ ಅತಿಕ್ರಮಿಸಿಕೊಂಡಿರುವ ಪ್ರದೇಶವನ್ನು ಬಿಟ್ಟುಕೊಡುವಂತೆ ಕೇಳಲಾಗಿದೆ. ಆದರೂ ಜಾಗ ಬಿಟ್ಟು ಕೊಡಲು ಒಪ್ಪಲಿಲ್ಲ. ಹಾಗಾಗಿ ಕಾನೂನಿನ ಪ್ರಕಾರವಾಗಿಯೇ ತನ್ನ ಸ್ವತ್ತನ್ನು ಪಡೆದುಕೊಳ್ಳೋದಾಗಿ ಲೋಕೇಶ್ ಶೆಟ್ಟಿ ಸಮರ್ಥಿಸಿಕೊಂಡಿದ್ದಾರೆ.

ಇದನ್ನೂ ಓದಿ: ಬ್ರಾಹ್ಮಣರಿಗೆ ಜಾತಿ ಪ್ರಮಾಣ ಪತ್ರ ನೀಡಲು ರಾಜ್ಯ ಸರ್ಕಾರದ ಆದೇಶಆದರೆ ಲೋಕೇಶ್ ಶೆಟ್ಟಿ ಪ್ರಭಾವಿಗಳ ಹೆಸರು ಬಳಸಿಕೊಂಡು ಈ ಕೃತ್ಯ ಎಸಗಿದ್ದಾನೆ ಎಂದು ತೊಂದರೆಗೆ ಒಳಗಾದವರು ಆರೋಪಿಸಿದ್ದಾರೆ. ಒಟ್ಟಿನಲ್ಲಿ ಜಾಗದ ವಿವಾದ ಏನೇ ಇದ್ದರೂ ಕಾನೂನು ಸಮರದ ಮೂಲಕ ಬಗೆಹರಿಸಿಕೊಳ್ಳಬಹುದಿತ್ತು. ಆದ್ರೆ ಈ ರೀತಿಯಾಗಿ ಪಕೃತಿಯ ಮೇಲೆಯೇ ತನ್ನ ಅಟ್ಟಹಾಸವನ್ನು ತೋರಿರುವುದು ನಿಜಕ್ಕೂ ಖಂಡನೀಯ.
Published by: Ganesh Nachikethu
First published: July 16, 2020, 7:15 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading