• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Flower Show: ಈ ಬಾರಿ ಲಾಲ್​ಬಾಗ್​ನಲ್ಲಿ ‘ಪವರ್’ ಶೋ; ಹೂಗಳಲ್ಲಿ ಅರಳಲಿದೆ ಗಾಜನೂರಿನ ಗೂಡು

Flower Show: ಈ ಬಾರಿ ಲಾಲ್​ಬಾಗ್​ನಲ್ಲಿ ‘ಪವರ್’ ಶೋ; ಹೂಗಳಲ್ಲಿ ಅರಳಲಿದೆ ಗಾಜನೂರಿನ ಗೂಡು

ಲಾಲ್​ಬಾಗ್​ ಫ್ಲವರ್​ ಶೋ, ಪುನೀತ್​ ರಾಜ್​ ಕುಮಾರ್​

ಲಾಲ್​ಬಾಗ್​ ಫ್ಲವರ್​ ಶೋ, ಪುನೀತ್​ ರಾಜ್​ ಕುಮಾರ್​

ಕೋವಿಡ್ ಕಾರಣದಿಂದ ಲಾಲ್ ಬಾಗ್​​ನಲ್ಲಿ ಫ್ಲವರ್ ಶೋ ಮಾಡಲು ಆಗಿರಲಿಲ್ಲ. ಆದರೆ ಈ ವರ್ಷ ಆಗಸ್ಟ್​ 5 ರಿಂದ ಫ್ಲವರ್ ಶೋ ಪ್ರಾರಂಭಿಸಲು ನಿರ್ಧರಿಸಿದ್ದೇವೆ. ಸಿಎಂ ಬಸವರಾಜ ಬೊಮ್ಮಾಯಿ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಿದ್ದಾರೆ.

  • Share this:

ಬೆಂಗಳೂರು (ಜು.12):  ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಲಾಲ್‍ಬಾಗ್ ನಲ್ಲಿ ಪ್ರತಿ ಬಾರಿ  ಫಲಪುಷ್ಪ ಪ್ರದರ್ಶನ (Lalbagh Independence day flower show) ನಡೆಸಲಾಗುತ್ತದೆ. ಈ ಬಾರಿ ಆಗಸ್ಟ್ 5 ರಿಂದ 15 ರವರೆಗೆ ನಡೆಯಲಿದೆ.  ಕರ್ನಾಟಕ ರತ್ನ ದಿವಂಗತ ಪುನೀತ್ ರಾಜ್​​ಕುಮಾರ್ (Puneeth Rajkumar)​ ಹೆಸರಲ್ಲಿ ಈ ಬಾರಿಯ ಫ್ಲವರ್ ಶೋ ಮಾಡಲಾಗುವುದು. ಅಲ್ಲದೇ ಡಾ.ರಾಜ್​​ಕುಮಾರ್​ ಅವರ ಗಾಜನೂರ ಮನೆಯನ್ನು ಹೂಗಳಿಂದ ಅಲಂಕಾರ ಮಾಡಲಾಗುವುದು. ಆಗಸ್ಟ್ 5 ರಂದು ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಉದ್ಘಾಟನೆ ಮಾಡಲಿದ್ದಾರೆ ಎಂದು ತೋಟಗಾರಿಕಾ ಸಚಿವ ಮುನಿರತ್ನ (Horticulture Minister Muniratna) ಹೇಳಿದ್ದಾರೆ.


ಆಗಸ್ಟ್​ 5 ರಿಂದ ಫ್ಲವರ್ ಶೋ ಆರಂಭ


ವಿಕಾಸಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಳೆದ ವರ್ಷ ಕೋವಿಡ್ ಕಾರಣದಿಂದ ಲಾಲ್ ಬಾಗ್​​ನಲ್ಲಿ ಫ್ಲವರ್ ಶೋ ಮಾಡಲು ಆಗಿರಲಿಲ್ಲ. ಆದರೆ ಈ ವರ್ಷ ಆಗಸ್ಟ್​ 5 ರಿಂದ ಫ್ಲವರ್ ಶೋ ಪ್ರಾರಂಭಿಸಲು ನಿರ್ಧರಿಸಿದ್ದೇವೆ. ಸಿಎಂ ಬಸವರಾಜ ಬೊಮ್ಮಾಯಿ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಿದ್ದಾರೆ. ಆ.15 ವರೆಗೆ ಶೋ ನಡೆಯಲ್ಲಿದೆ.


ಅದ್ಧೂರಿಯಾಗಿ ಕಾರ್ಯಕ್ರಮ


ಆದರೆ ಇನ್ನೂ 2 ದಿನ ಶೋ ವಿಸ್ತರಿಸಬೇಕು ಎನ್ನುವ ಚಿಂತನೆ ಇದೆ ಎಂದರು. ವಿದೇಶಗಳಿಂದ ವಿಶೇಷ ಹೂ ಗಿಡಗಳನ್ನು ತರಿಸುತ್ತಿದ್ದೇವೆ. ದಿ. ಡಾ. ರಾಜ್​​ಕುಮಾರ್​​ ಮತ್ತು ದಿ. ಪುನೀತ್​​ ರಾಜ್​​ಕುಮಾರ್​​ ಅವರ ಪ್ರತಿಮೆಗಳಿಗೆ ಹೂಗಳಿಂದ ಅಲಂಕಾರ ಮಾಡುತ್ತಿದ್ದೇವೆ. ಕೋವಿಡ್ ಕಡಿಮೆ ಆಗಿರುವ ಹಿನ್ನೆಲೆ ಅದ್ಧೂರಿಯಾಗಿ ಕಾರ್ಯಕ್ರಮ ನಡೆಸುತ್ತಿದ್ದೇವೆ ಎಂದು ಸಚಿವರು ತಿಳಿಸಿದರು.


ಇದನ್ನೂ ಓದಿ: Puneeth Rajkumar: ಮನೆ ಮನೆಗೂ ಎಂಟ್ರಿ ಕೊಡ್ತಿದ್ದಾರೆ ಜೇಮ್ಸ್, ಎಲ್ಲಿ? ಯಾವಾಗ? ಮಿಸ್​ ಮಾಡದೇ ನೋಡಿ!


ಏರಿಕೆಯಾಗುತ್ತಾ ಫ್ಲವರ್ ಶೋ​ ಟಿಕೆಟ್​ ರೇಟ್​


ಫ್ಲವರ್ ಶೋ ಸಮಯದಲ್ಲಿ ಲಾಲ್ ಬಾಗ್ ಪ್ರವೇಶಕ್ಕೆ ಟಿಕೆಟ್ ‌ದರ ಹೆಚ್ಚು ಮಾಡುವ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಸಚಿವ ಮುನಿರತ್ನ, ವಿದೇಶಗಳಿಂದ ಹೂವಿನ ತಳಿಗಳನ್ನು ತರಿಸುತ್ತಿದ್ದೇವೆ. ಆದರೆ ಟಿಕೆಟ್ ದರ ಜಾಸ್ತಿ ಅಥವಾ ಕಡಿಮೆ ಮಾಡುವುದರ ಬಗ್ಗೆ ಅಧಿಕಾರಿಗಳ ಜೊತೆ ಚರ್ಚೆ ಮಾಡಿ ನಿರ್ಧರಿಸುತ್ತೇವೆ ಎಂದು ಹೇಳಿದರು.


ರೈತರ ಜೊತೆ ನಾವಿದ್ದೇವೆ


ರಾಜ್ಯದಲ್ಲಿ ಮಳೆಯಿಂದ ತೋಟಗಾರಿಕೆ ಬೆಳೆ ನಷ್ಟ ವಿಚಾರ ಕುರಿತು ಪ್ರತಿಕ್ರಿಯಿಸುತ್ತ, ಸಂಪೂರ್ಣ ವರದಿಯನ್ನು ಅಧಿಕಾರಿಗಳು ತರಿಸುತ್ತಿದ್ದಾರೆ. ವರದಿ ಬಳಿಕ ರೈತರಿಗೆ ಮಾಡಬೇಕಿರುವ ಸಹಾಯವನ್ನು ಖಂಡಿತವಾಗಿಯೂ ಮಾಡುತ್ತೇವೆ. ಏನೇನು ನಷ್ಟ ಉಂಟಾಗಿದೆಯೋ ಅದನ್ನು ಗಮನಿಸುತ್ತೇವೆ. ಪ್ರಾಮಾಣಿಕವಾಗಿ ನಾವು ರೈತರ ಜತೆ ಇದ್ದೇವೆ. ಪರಿಹಾರ ನೀಡಲಿದ್ದೇವೆ ಎಂದು ಭರವಸೆ ನೀಡಿದರು.


ಹೊಸಪೇಟೆಯಲ್ಲಿ ಪವರ್ ಸ್ಟಾರ್ ಪುತ್ಥಳಿ


ಹೊಸಪೇಟೆಯಲ್ಲಿ 'ಪವರ್ ಸ್ಟಾರ್' ಪುನೀತ್ ರಾಜ್‌ಕುಮಾರ್ ಅವರ 7.4 ಅಡಿ ಎತ್ತರದ ಕಂಚಿನ ಪುತ್ಥಳಿಯನ್ನು  ಜೂನ್​ 7 ರಂದು ಅನಾವರಣಗೊಳಿಸಲಾಯಿತು. ಹೊಸಪೇಟೆಯ ತಾಲೂಕು ಕಚೇರಿ ಸಮೀಪದಲ್ಲಿರುವ ಪುನೀತ್ ರಾಜ್‌ಕುಮಾರ್ ವೃತ್ತದಲ್ಲಿ ಈ ಪುತ್ಥಳಿಯನ್ನು ನಿರ್ಮಿಸಲಾಗಿದೆ. ಈ ಪುತ್ಥಳಿಯನ್ನು ರಾಘವೇಂದ್ರ ರಾಜ್‌ಕುಮಾರ್ ಅವರು ಅನಾವರಣಗೊಳಿಸಿದರು. ಕಾರ್ಯಕ್ರಮದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಪುನೀತ್ ಅಭಿಮಾನಿಗಳು ಸೇರಿದ್ದರು. ಅಭಿಮಾನಿಗಳ ಕಡೆಗೆ ಕೈಬೀಸಿ, ಮಂಡಿಯೂರಿ ಅವರಿಗೆ ರಾಘಣ್ಣ ನಮಸ್ಕರಿಸಿದರು.


ಇದನ್ನೂ ಓದಿ: Reality Show: ಬೆಂಗಳೂರಿಗೆ ಆಗಮಿಸುತ್ತಿದೆ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಅಪ್ಪು ಟ್ರೋಫಿ


ಈ ಕಾರ್ಯಕ್ರಮದಲ್ಲಿ ಪ್ರವಾಸೋದ್ಯಮ ಸಚಿವ ಆನಂದ್‌ ಸಿಂಗ್, ನಟ ಅಜಯ್ ರಾವ್, ನಿರ್ದೇಶಕ ಸಂತೋಷ್ ಆನಂದ್ ರಾಮ್, ನಗರಸಭೆ ಅಧ್ಯಕ್ಷೆ ಸುಂಕಮ್ಮ, ಹುಡಾ ಅಧ್ಯಕ್ಷ ಅಶೋಕ್ ಜೀರೆ ಮುಂತಾದವರು ಭಾಗಿಯಾಗಿದ್ದರು. ಪುನೀತ್ ಪುತ್ಥಳಿ ಅನಾವರಣಗೊಳ್ಳುತ್ತಿದ್ದಂತೆಯೇ, ಮಂಗಳಾ ರಾಘವೇಂದ್ರ ರಾಜ್‌ಕುಮಾರ್ ಅವರು ಭಾವುಕರಾದರು. ಅಭಿಮಾನಿಗಳ ಅಭಿಮಾನ ಮುಗಿಲುಮುಟ್ಟಿತ್ತು

Published by:Pavana HS
First published: