ಹೆಣ್ಣಾಗಿ ನಾನೇ 1,200 ಕೋಟಿ ರೂ. ಅನುದಾನ ತಂದಿದ್ದೇನೆ; ಗಂಡಸ್ಸಾಗಿ ನೀವೆಷ್ಟು ತರಬಹುದಿತ್ತು; ಮಹೇಶ್​​ ಕುಮಟಳ್ಳಿಗೆ ಹೆಬ್ಬಾಳ್ಕರ್​​ ಪ್ರಶ್ನೆ 

ಮಹೇಶ್​​ ಕುಮಟಳ್ಳಿಗೆ ಟಿಕೆಟ್​​ ಕೊಡಿಸಲು ಎರಡು ಚುನಾವಣೆಯಲ್ಲಿ ಸಹಾಯ ಮಾಡಿದ್ದೇನೆ. ಒಳ್ಳೆಯವರು ಮತ್ತು ಸುಸಂಸ್ಕೃತರು ಆಗಿದ್ದಾರೆ ಎಂದು ಭಾವಿಸಿದ್ದೆ. ಆದರೀಗ, ಕಾಂಗ್ರೆಸ್​​​​ ಎನ್ನುವ ಹೆತ್ತ ತಾಯಿಗೆ ದ್ರೋಹ ಮಾಡಿದ್ದಾರೆ- ಲಕ್ಷ್ಮೀ ಹೆಬ್ಬಾಳ್ಕರ್​​

news18-kannada
Updated:November 24, 2019, 10:37 AM IST
ಹೆಣ್ಣಾಗಿ ನಾನೇ 1,200 ಕೋಟಿ ರೂ. ಅನುದಾನ ತಂದಿದ್ದೇನೆ; ಗಂಡಸ್ಸಾಗಿ ನೀವೆಷ್ಟು ತರಬಹುದಿತ್ತು; ಮಹೇಶ್​​ ಕುಮಟಳ್ಳಿಗೆ ಹೆಬ್ಬಾಳ್ಕರ್​​ ಪ್ರಶ್ನೆ 
ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್
  • Share this:
ಬೆಂಗಳೂರು(ನ.24): ತಾಯಿಗೆ ದ್ರೋಹ ಬಗೆದ ಅನರ್ಹ ಶಾಸಕ ಮಹೇಶ್​​ ಕುಮಟಳ್ಳಿ ಸೋಲಿಸಿ ಎಂದು ಕಾಂಗ್ರೆಸ್​​ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್​​ ಕರೆ ನೀಡಿದ್ಧಾರೆ. "ಕೊಟ್ಟ ಕುದುರೆ ಏರಲಾಗದವನು, ಇನ್ನೊಂದು ಕುದುರೆ ಏರುತ್ತೇನೆ ಎನ್ನೋನು ವೀರನು ಅಲ್ಲ ಶೂರನು ಎಲ್ಲ ಎಂದು ಪರೋಕ್ಷವಾಗಿ ಕಾಂಗ್ರೆಸ್​​ ತೊರೆದು ಬಿಜೆಪಿ ಸೇರಿದ ಮಹೇಶ್​​ ಕುಮಟಳ್ಳಿಗೆ ಹೇಳಿದ್ಧಾರೆ.

ಅಥಣಿ ಕ್ಷೇತ್ರದ ಕಕಮರಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗಜಾನನ ಮಂಗಸೂಳಿ ಪರ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್​​ ಪ್ರಚಾರ ನಡೆಸಿದರು. ಈ ವೇಳೆ ಕಾರ್ಯಕರ್ತರನ್ನುದ್ದೇಶಿಸಿ ಮಾತಾಡಿದ ಹೆಬ್ಬಾಳ್ಕರ್​​, ಬಿಜೆಪಿ ಅಭ್ಯರ್ಥಿ ಮಹೇಶ ಕುಮಠಳ್ಳಿ ವಿರುದ್ಧ ಕಟು ವಾಗ್ದಾಳಿ ನಡೆಸಿದರು. "ಮಳ್ಳ ಮಳ್ಳ ಮಂಚಕ್ಕೆ ಎಷ್ಟು ಕಾಲು ಅಂದರೆ, ಮೂರು ಮತ್ತೊಂದು ಅನ್ನೋವಂತಹ ಮಳ್ಳ ಮಹೇಶ್​​ ಕುಮಟಳ್ಳಿ" ಎಂದು ಜರಿದಿದ್ದಾರೆ.

ಮಹೇಶ್​​ ಕುಮಟಳ್ಳಿಗೆ ಟಿಕೆಟ್​​ ಕೊಡಿಸಲು ಎರಡು ಚುನಾವಣೆಯಲ್ಲಿ ಸಹಾಯ ಮಾಡಿದ್ದೇನೆ. ಒಳ್ಳೆಯವರು ಮತ್ತು ಸುಸಂಸ್ಕೃತರು ಆಗಿದ್ದಾರೆ ಎಂದು ಭಾವಿಸಿದ್ದೆ. ಆದರೀಗ, ಕಾಂಗ್ರೆಸ್​​​​ ಎನ್ನುವ ಹೆತ್ತ ತಾಯಿಗೆ ದ್ರೋಹ ಮಾಡಿದ್ದಾರೆ. ಇವತ್ತು ಹಾಲು ಕುಡಿದ ಮಕ್ಕಳು ಬದುಕುತ್ತಿಲ್ಲ. ಇನ್ನು ವಿಷ ಕುಡಿದ ಮಹೇಶ್​​ ಕುಮಟಳ್ಳಿ ಬದುಕುತ್ತಾರಾ? ಎಂದು ಪ್ರಶ್ನಿಸಿದರು.

ಜನ್ಮಕೊಟ್ಟ ತಾಯಿ ಒಬ್ಬರಿದ್ದರೆ. ಜಗತನ್ನು ತೋರಿಸಿದ ತಾಯಿ ನಮ್ಮ ಪಕ್ಷ. ಅಂತಹ ಪಕ್ಷಕ್ಕೆ ದ್ರೋಹ ಮಾಡಿ ಹೋಗಿದ್ದಾರೆ. ಅನುದಾನ ನೀಡಿಲ್ಲ ಎಂದು ಪಕ್ಷ ಬಿಟ್ಟು ಹೋಗಿದ್ದಾರಂತೆ. ಲಕ್ಷ್ಮೀ ಹೆಬ್ಬಾಳ್ಕರ್​​ಗೆ ಕೊಟ್ಟಷ್ಟು ಅನುದಾನ ನಮಗೆ ಕೊಡಲಿಲ್ಲ ಎನ್ನುತ್ತಿದ್ದಾರೆ. ಅನುದಾನ ಕೇಳೋಕೆ ಆಗದೆ ಇವರೇನು ಬಾಯಲ್ಲಿ ಕಡಬು ಇಟ್ಟುಕೊಂಡಿದ್ರಾ? ಯಾಕೇ ಮಂತ್ರಿಗಳ ಕೈಕಾಲು ಹಿಡಿದು ಕೇಳಿ ಅನುದಾನ ಪಡೆಯಬಾರದಿತ್ತೇ ಎಂದರು.

ಇದನ್ನೂ ಓದಿ: ಹೆಣ್ಣಾಗಿ ನಾನೇ 1,200 ಕೋಟಿ ರೂ. ಅನುದಾನ ತಂದಿದ್ದೇನೆ; ಗಂಡಸ್ಸಾಗಿ ನೀವೆಷ್ಟು ತರಬಹುದಿತ್ತು; ಮಹೇಶ್​​ ಕುಮಟಳ್ಳಿಗೆ ಹೆಬ್ಬಾಳ್ಕರ್​​ ಪ್ರಶ್ನೆ

ಹೆಣ್ಣು ಮಗಳಾಗಿ ನಾನೇ 1200 ರೂ. ಕೋಟಿ ಅನುದಾನ ತಂದಿದ್ದೇನೆ.  ನೀವು ಗಂಡಸರಾಗಿ ಕನಿಷ್ಠ ಅನುದಾನ ತರೋಕೆ ಆಗಲಿಲ್ಲವೇ? ಎಂದರು. ಹಾಗೆಯೇ ಮಾತು ಮುಂದುವರೆಸಿದ ಇವರು, ಯಾರೋ ಊಟ ಮಾಡಿದ್ದಾರೆ ಎನ್ನುತ್ತಾ ನಾವು ಉಪವಾಸ ಇರೋದು ತಪ್ಪು. ಬದಲಿಗೆ ಇನ್ನೊಬ್ಬರು ದುಡಿದು ಊಟ ಮಾಡಿದಾಗೇ ನಾವು ದುಡಿದು ಊಟ ಮಾಡಬೇಕು ಎನ್ನುವುದು ಗಂಡಸ್ಥನ. ಅದನ್ನು ಬಿಟ್ಟು ಮಳ್ಳನಂಗ ಸೋಗು ಹಾಕುವುದು ಕೈ ಮುಗಿಯೋದು ಮಾಡುತ್ತಾರೆ ಎಂದು ಕುಟುಕಿದರು.

ಮಹೇಶ್​ ಕುಮಟಳ್ಳಿಯದ್ದು ಅತೀ ವಿನಯಂ ಚೋರ್ ಲಕ್ಷಣಂ. ನನ್ನ ಮಾತು ಬಿರುಸು, ಗುಂಡು ಹೊಡೆದಂಗೆ ಇರಬಹುದು. ಆದರೆ, ಯಾವತ್ತಿಗೂ ಸತ್ಯಕ್ಕೆ ತಲೆಬಾಗುವೆ. ನಾನು ಅಥಣಿ ಜನರಿಗೆ ಏನೂ ಮಾಡಲು ಆಗದಿದ್ದರೂ, ಬೆಳಗಾವಿ ರಾಜಕಾರಣ ಬದಲು ಮಾಡಿ ತೋರಿಸುವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್​​.
First published:November 24, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading