ರಮೇಶ್ ಜಾರಕಿಹೊಳಿ ಜೊತೆಗಿನ ಜಗಳದ ಮೂಲ ಕಾರಣ ಬಿಚ್ಚಿಟ್ಟ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್

ಹೈದರಾಬಾದ್​ನಲ್ಲಿ ಬೆಳಗಾವಿ ಶಾಸಕರ ಸಭೆ ಇತ್ತು. ಆಗ ಬಿಜೆಪಿಗೆ ಹೋಗೋಣ ಎಂದು ಹೇಳಿದ್ದರು. ನಾನು ಮತ್ತು ಮಹಾಂತೇಶ ಕೌಜಲಗಿ ಬಿಜೆಪಿಗೆ ಬರೋಲ್ಲ ಅಂತಾ ಹೇಳಿದ್ವಿ. ಈ ವಿಚಾರವನ್ನು ನಾನು ಸುಮ್ಮನಿರದೆ ಪರಮೇಶ್ವರ್ ಮತ್ತು ವೇಣುಗೋಪಾಲ್ ಅವರಿಗೆ ಹೇಳಿ ಬಿಟ್ಟೆ. ಅದಿನಿಂದಲೇ ಜಗಳ ಶುರುವಾಯ್ತು ನೋಡಿ ಎಂದು ಹೇಳಿದರು.

HR Ramesh | news18-kannada
Updated:November 29, 2019, 7:39 PM IST
ರಮೇಶ್ ಜಾರಕಿಹೊಳಿ ಜೊತೆಗಿನ ಜಗಳದ ಮೂಲ ಕಾರಣ ಬಿಚ್ಚಿಟ್ಟ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್
ರಮೇಶ್ ಜಾರಕಿಹೊಳಿ​​, ಲಕ್ಷ್ಮಿ ಹೆಬ್ಬಾಳ್ಕರ್​​
  • Share this:
ವಿಜಯಪುರ: ಆಪರೇಶನ್ ಕಮಲದ ಬಗ್ಗೆ ಕಾಂಗ್ರೆಸ್ ವರಿಷ್ಠರಿಗೆ ನಾನು ಮಾಹಿತಿ ನೀಡಿದ್ದೆ ಇಷ್ಟೇಲ್ಲ ರಾದ್ಧಾಂತಕ್ಕೆ ಕಾರಣ ಎಂದು ರಮೇಶ ಜಾರಕಿಹೊಳಿ ಮತ್ತು ತಮ್ಮ ನಡುವಿನ ಜಗಳದ ಮೂಲ‌ ಕಾರಣವನ್ನು ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಬಿಚ್ಚಿಟ್ಟರು.

ಅಥಣಿ‌ ಕ್ಷೇತ್ರದ ದರೂರ ಗ್ರಾಮದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗಜಾನನ ಮಂಗಸೂಳಿ ಪರ ಪ್ರಚಾರ ಸಭೆಯಲ್ಲಿ ಮಾತನಾಡಿದ ಲಕ್ಷ್ಮೀ ಹೆಬ್ಬಾಳ್ಕರ್ ಅವರು, ಮಹೇಶ್ ಕುಮಟಳ್ಳಿ ನೋಡೋಕೆ ಬಹಳ ಸಂಭಾವಿತರು. ನಾನು ಕಾಗ್ರೆಸ್ ಜಿಲ್ಲಾಧ್ಯಕ್ಷೆಯಾಗಿದ್ದಾಗ ಹಿರಿಯ ಮುಖಂಡರೆಲ್ಲ ಸೇರಿ ಟಿಕೆಟ್ ಕೊಟ್ಟೆವು. ಮೊದಲು ಸೋತರು, 2018ರಲ್ಲಿ ಮತ್ತೆ ಟಿಕೆಟ್ ಕೊಟ್ಟೆವು. ಅಥಣಿ ಕ್ಷೇತ್ರದ ಧ್ವನಿಯಾಗಿ ವಿಧಾನಸೌಧದಲ್ಲಿ ಕುಮಟಳ್ಳಿ ಘರ್ಜನೆ ಮಾಡ್ತಾರೆ ಅಂತಾ ಆಗ ರಾಹುಲ್‌ ಗಾಂಧಿಯೇ ಹೇಳಿದ್ದರು. ಲಕ್ಷ್ಮಣ ಸವದಿ ಬಿಜೆಪಿಯಲ್ಲಿ ತನ್ನದೇ ಛಾಪು ಮೂಡಿಸಿದ ಬಲಿಷ್ಠ ವ್ಯಕ್ತಿ. ಫಲಿತಾಂಶ ಬಂದ ಬಳಿಕ ಹೈದರಾಬಾದ್​ಗೆ ಹೋಗಿದ್ವಿ.  ಎಂಎಲ್‌ಎ ಆಗಿ ಐದಾರು ದಿನ ಆಗಿತ್ತು. ಹೈದರಾಬಾದ್​ನಲ್ಲಿ ಬೆಳಗಾವಿ ಶಾಸಕರ ಸಭೆ ಇತ್ತು. ಆಗ ಬಿಜೆಪಿಗೆ ಹೋಗೋಣ ಎಂದು ಹೇಳಿದ್ದರು. ನಾನು ಮತ್ತು ಮಹಾಂತೇಶ ಕೌಜಲಗಿ ಬಿಜೆಪಿಗೆ ಬರೋಲ್ಲ ಅಂತಾ ಹೇಳಿದ್ವಿ. ಈ ವಿಚಾರವನ್ನು ನಾನು ಸುಮ್ಮನಿರದೆ ಪರಮೇಶ್ವರ್ ಮತ್ತು ವೇಣುಗೋಪಾಲ್ ಅವರಿಗೆ ಹೇಳಿ ಬಿಟ್ಟೆ. ಅದಿನಿಂದಲೇ ಜಗಳ ಶುರುವಾಯ್ತು ನೋಡಿ ಎಂದು ಹೇಳಿದರು.

ಇದನ್ನು ಓದಿ: ಹೈಕಮಾಂಡ್​ ತೀರ್ಮಾನಿಸಿದ್ರೆ ಮತ್ತೆ ಕಾಂಗ್ರೆಸ್​-ಜೆಡಿಎಸ್​ ಮೈತ್ರಿ; ಜಿ ಪರಮೇಶ್ವರ್​​

ಈ ವೇಳೆ ವೇದಿಕೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಸೇರಿ ಹಲವು ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.
First published:November 29, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ