• Home
  • »
  • News
  • »
  • state
  • »
  • Belagavi: ಹೆಬ್ಬಾಳ್ಕರ್ ಅಖಾಡದಲ್ಲಿ ಸಾಹುಕಾರ್ ಫುಲ್ ಆ್ಯಕ್ಟೀವ್: ಜಾರಕಿಹೊಳಿಗೆ ಚಾಲೆಂಜ್ ಹಾಕಿದ ಲಕ್ಷ್ಮಿ!

Belagavi: ಹೆಬ್ಬಾಳ್ಕರ್ ಅಖಾಡದಲ್ಲಿ ಸಾಹುಕಾರ್ ಫುಲ್ ಆ್ಯಕ್ಟೀವ್: ಜಾರಕಿಹೊಳಿಗೆ ಚಾಲೆಂಜ್ ಹಾಕಿದ ಲಕ್ಷ್ಮಿ!

ಲಕ್ಷ್ಮಿ ಹೆಬ್ಬಾಳ್ಕರ್ - ರಮೇಶ್ ಜಾರಕಿಹೊಳಿ

ಲಕ್ಷ್ಮಿ ಹೆಬ್ಬಾಳ್ಕರ್ - ರಮೇಶ್ ಜಾರಕಿಹೊಳಿ

ಹೇಗಾದರೂ ಸರಿ ಲಕ್ಷ್ಮಿ ಹೆಬ್ಬಾಳ್ಕರ್​ನ್ನು ಸೋಲಿಸಲೇಬೇಕೆಂಬ ಹಠಕ್ಕೆ ಬಿದ್ದಿರುವ ರಮೇಶ್ ಜಾರಕಿಹೊಳಿ ಪದೇ ಪದೇ ಬೆಳಗಾವಿ ಗ್ರಾಮೀಣ ಕ್ಷೇತ್ರಕ್ಕೆ ಭೇಟಿ ನೀಡುತ್ತಿದ್ದಾರೆ. ಇಲ್ಲಿ ಆಯೋಜಿಸಲಾಗುತ್ತಿರುವ ಪ್ರತಿಯೊಂದು ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿರುವ ಸಾಹುಕಾರ್ ಮತದಾರರನ್ನು ಓಲೈಸುವ ತಂತ್ರ ಆರಂಭಿಸಿದ್ದಾರೆ.

ಮುಂದೆ ಓದಿ ...
  • News18 Kannada
  • Last Updated :
  • Belgaum, India
  • Share this:

ಬೆಳಗಾವಿ(ಡಿ.05): ಚುನಾವಣೆ ಸಮೀಪಿಸುತ್ತಿದ್ದಂತೆಯೇ ಕರ್ನಾಟಕ ರಾಜಕೀಯ (Karnataka Politics) ಅಖಾಡದಲ್ಲಿ ನಾಯಕರು ತಮ್ಮದೇ ಆದ ಶೈಲಿಯಲ್ಲಿ ಪ್ರಚಾರ ನಡೆಸುತ್ತಿದ್ದು, ಜನರ ಮೆಚ್ಚುಗೆ ಗಳಿಸಲು ಯತ್ನಿಸುತ್ತಿದ್ದಾರೆ. ಈ ಎಲ್ಲಾ ಬೆಳವಣಿಗೆಗಳ ಮಧ್ಯೆ ಹೆಬ್ಬಾಳ್ಕರ್ (Lakshmi Hebbalkar) ಹಾಗೂ ಸಾಹುಕಾರನ ನಡುವಿನ ಗುದ್ದಾಟ ಬಹಳಷ್ಟು ಸದ್ದು ಮಾಡುತ್ತಿದೆ. ಹೌದು ಹಳೇ ದ್ವೇಷಕ್ಕೆ ಸೇಡು ಪಡೆಯಲು ಮುಂದಾಗರುವ ರಮೇಶ್ ಜಾರಕಿಹೊಳಿ (Ramesh Jarkiholi) 2023ರ ಚುನಾವಣೆಯಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್​ನ್ನು ಸೋಲಿಸಲೇಬೇಕೆಂಬ ಪಣ ತೊಟ್ಟಿದ್ದಾರೆ. ಈ ನಿಟ್ಟಿನಲ್ಲಿ ಭರ್ಜರಿ ತಯಾರಿ ನಡೆಸುತ್ತಿದ್ದಾರೆ. ಹೌದು ಸಚಿವ ಸ್ಥಾನ ಕಳೆದುಕೊಂಡು ಮೇಲೆ ಸ್ವಲ್ಪ ಮೌನವಾಗಿದ್ದ ರಮೇಶ್ ಜಾರಕಿಹೊಳಿ ಮತ್ತೆ ಆ್ಯಕ್ಟಿವ್ ಆಗಿದ್ದಾರೆ. ಲಕ್ಷ್ಮಿ ಹೆಬ್ಬಾಳ್ಕರ್ ಪ್ರತಿನಿಧಿಸುವ ಬೆಳಗಾವಿ ಗ್ರಾಮೀಣ ಕ್ಷೇತ್ರದ (Belagavi Rural Constituency) ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದಾರೆ.


ಹೌದು ಹೇಗಾದರೂ ಸರಿ ಲಕ್ಷ್ಮಿ ಹೆಬ್ಬಾಳ್ಕರ್​ನ್ನು ಸೋಲಿಸಲೇಬೇಕೆಂಬ ಹಠಕ್ಕೆ ಬಿದ್ದಿರುವ ರಮೇಶ್ ಜಾರಕಿಹೊಳಿ ಪದೇ ಪದೇ ಬೆಳಗಾವಿ ಗ್ರಾಮೀಣ ಕ್ಷೇತ್ರಕ್ಕೆ ಭೇಟಿ ನೀಡುತ್ತಿದ್ದಾರೆ. ಇಲ್ಲಿ ಆಯೋಜಿಸಲಾಗುತ್ತಿರುವ ಪ್ರತಿಯೊಂದು ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿರುವ ಸಾಹುಕಾರ್ ಮತದಾರರನ್ನು ಓಲೈಸುವ ತಂತ್ರ ಆರಂಭಿಸಿದ್ದಾರೆ.


ಇದನ್ನೂ ಓದಿ:  Silent Sunil and Fighter Ravi: ಸೈಲೆಂಟ್‌ ಆಗಿಯೇ ಸದ್ದು ಮಾಡುತ್ತಿರುವ ಸುನೀಲ ಯಾರು? ಫೈಟರ್ ರವಿ ಇತಿಹಾಸ ನಿಮಗೆ ಗೊತ್ತಾ?


ಈಗಾಗಲೇ ರಮೇಶ್ ಜಾರಕಿಹೊಳಿ ಬಡಸ ಕೆ.ಹೆಚ್. ಗ್ರಾಮದಲ್ಲಿ ಯುವಕ ಸಂಘ ಉದ್ಘಾಟನೆ ಮಾಡಿದ್ದಾರೆ. ಅಲ್ಲದೇ ಛತ್ರಪತಿ ಶಿವಾಜಿ ಮಹಾರಾಜ ಯುವಕ ಮಂಡಳ ಉದ್ಘಾಟನೆಯನ್ನೂ ನೆರವೇರಿಸಿದ್ದಾರೆ. ಈ ಕ್ಷೇತ್ರದಲ್ಲಿ ಮರಾಠಾ ಸಮುದಾಯದ ವೋಟುಗಳು ನಿರ್ಣಾಯಕ ಎಂದು ಹೇಳಲಾಗಿದ್ದು ಸದ್ಯ ಅವರನ್ನು ಮತಗಳನ್ನು ಧ್ರುವೀಕರಿಸುವ ತಂತ್ರ ಹೆಣೆಯುತ್ತಿದ್ದಾರೆ.


ಮೈದಾನ ಖಾಲಿ ಇದೆ, ನಾವೂ ತಯಾರಿದ್ದೇವೆ


ಇನ್ನು ರಮೇಶ್​ ಜಾರಕಿಹೊಳಿಯ ಈ ತಯಾರಿಗಳನ್ನು ಗನಿಸುತ್ತಿರುವ ಲಕ್ಷ್ಮಿ ಹೆಬ್ಬಾಳ್ಕರ್ ಪರೋಕ್ಷವಾಗಿ ಅವರಿಗೆ ಚಾಲೆಂಜ್ ಹಾಕಿದ್ದಾರೆ. ಹೌದು ಈ ವಿಚಾರವಾಗಿ ಮಾತನಾಡಿದ ಲಕ್ಷಮಿ ಹೆಬ್ಬಾಳ್ಕರ್ ಮೈದಾನ್ ಓಪನ್ ಹೈ, ಖುಲ್ಲಾ ಹೈ, ಹಮ್ ಬಿ ತಯಾರ್ ಹೈ ಆಪ್ ಬೀ ಖುದೋ ಮೈದಾನ್ ಮೇ ಎಂದಿದ್ದಾರೆ. ಅಂದರೆ ಅಖಾಡ ತೆರೆದಿದೆ, ನಾವೂ ತಯಾರಿದ್ದೇವೆ ನೀವು ಅಖಾಡಕ್ಕೆ ಧುಮುಕಿ ಎಂದು ರಮೇಶ್ ಜಾರಕಿಹೊಳಿಗೆ ಆಹ್ವಾನ ನೀಡಿದ್ದಾರೆ.


ಹೆಬ್ಬಾಳ್ಕರ್ ವಿರುದ್ಧ ರಮೇಶ್ ಜಾರಕಿಹೊಳಿ
ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್


ಎಲೆಕ್ಷನ್ ಗೆದ್ದ ಮಾರನೇ ದಿನದಿಂದಲೇ ನಾನು ಮುಂದಿನ ಎಲೆಕ್ಷನ್‌‌ಗೆ ತಯಾರಿ


ಅಲ್ಲದೇ ಎಲೆಕ್ಷನ್ ಗೆದ್ದ ಮಾರನೇ ದಿನದಿಂದಲೇ ನಾನು ಮುಂದಿನ ಎಲೆಕ್ಷನ್‌‌ಗೆ ತಯಾರಿ ನಡೆಸಿದ್ದೇನೆ. ಈಗ ಚುನಾವಣೆಗೆ 90 ದಿನ ಇದೆ ಎಂದು ತಯಾರಿ ನಡೆಸಿಲ್ಲ. ಈಗ ಬಂದು ಬಿಲ್ಲು, ಬಾಣ, ಬತ್ತಳಿಕೆ ಅಂತೆಲ್ಲಾ ಇಲ್ಲ, ಚುನಾವಣೆ ಗೆದ್ದ ಮಾರನೇ ನನ್ನ ದಿನವೇ ಹುಟ್ಟಿದ ದಿನಾಂಕ ಮತದಾರರಿಗಾಗಿ ಬದಲಾಯಿಸಿಕೊಂಡೆ. ನನಗೆ ಪುನರ್ಜನ್ಮ ಕೊಟ್ಟ ಕ್ಷೇತ್ರ ಎಂದು ಬದಲಾಯಿಸಿಕೊಂಡಿದ್ದೇನೆ. ಜನರ ಮನಸ್ಸು ಯಾವ ರೀತಿ ಗೆಲ್ಲಬೇಕೆಂದು ಗೊತ್ತು. ನಾಲ್ಕೂವರೆ ವರ್ಷಗಳಿಂದ ಅದನ್ನೇ ಕೆಲಸ ಮಾಡಿಕೊಂಡು ಬಂದಿದ್ದೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.


ಇದನ್ನೂ ಓದಿ: Silent Sunil: ಸೈಲೆಂಟ್ ಸುನೀಲ್​ನನ್ನ ವಶಕ್ಕೆ ಪಡೆಯಲು ಸಿಸಿಬಿ ಸೂಚನೆ; ರೌಡಿಗೆ ಪೊಲೀಸರು ಎಸ್ಕಾರ್ಟ್ ನೀಡಿದ್ರಾ?


ಚುನಾವಣಾ ಫಲಿತಾಂಶದ್ ಬಗ್ಗೆಯೂ ಮಾತನಾಡಿದ ಹೆಬ್ಬಾಳ್ಕರ್ ಭವಿಷ್ಯ ಅಂತೂ ನಾನು ಹೇಳಲ್ಲ. ಮುಂದೆ ನೀವೇ ನೋಡ್ತಿರಿಲ್ಲ ಎಲೆಕ್ಷನ್ ರಿಸಲ್ಟ್, ಇನ್ನೂ ಕಾವು ಏರಬೇಕು. ಮೈದಾನ್ ಓಪನ್ ಹೈ, ಖುಲ್ಲಾ ಹೈ, ಹಮ್ ಬಿ ತಯಾರ್ ಹೈ ಆಪ್ ಬೀ ಖುದೋ ಮೈದಾನ್ ಮೇ ಎಂದು ಪರೋಕ್ಷವಾಗಿ ಸವಾಲೆಸೆದಿದ್ದಾರೆ.

Published by:Precilla Olivia Dias
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು