ಪಿಎಲ್​​ಡಿ ಬ್ಯಾಂಕ್​ಗೆ ಅವಿರೋಧ ಆಯ್ಕೆ; ಲಕ್ಷ್ಮೀ ಹೆಬ್ಬಾಳ್ಕರ್​ ಬಣಕ್ಕೆ ಒಲಿದ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ

news18
Updated:September 7, 2018, 12:34 PM IST
ಪಿಎಲ್​​ಡಿ ಬ್ಯಾಂಕ್​ಗೆ ಅವಿರೋಧ ಆಯ್ಕೆ; ಲಕ್ಷ್ಮೀ ಹೆಬ್ಬಾಳ್ಕರ್​ ಬಣಕ್ಕೆ ಒಲಿದ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ
  • News18
  • Last Updated: September 7, 2018, 12:34 PM IST
  • Share this:
ನ್ಯೂಸ್​ ​18 ಕನ್ನಡ

ಬೆಳಗಾವಿ (ಸೆ. 7): ಜಾರಕಿಹೊಳಿ ಸಹೋದರರು ಮತ್ತು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್​ ನಡುವೆ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಸಂಧಾನ ನಡೆಸಿರುವುದರಿಂದ ಪಿಎಲ್​ಡಿ ಬ್ಯಾಂಕ್​ ಚುನಾವಣೆಯಲ್ಲಿ ಅವಿರೋಧವಾಗಿ ಅಧ್ಯಕ್ಷ, ಉಪಾಧ್ಯಕ್ಷರನ್ನು ಆಯ್ಕೆ ಮಾಡಲಾಗಿದೆ.

ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್​ ಬಣದ ಮಹಾದೇವ ಪಾಟೀಲ್​ ಅಧ್ಯಕ್ಷರಾಗಿ, ಬಾಪುಗೌಡ ಜಮಾದರ್​ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಮೇಲ್ನೋಟಕ್ಕೆ ಲಕ್ಷ್ಮೀ ಹೆಬ್ಬಾಳ್ಕರ್​ ಅವರಿಗೆ ಜಯ ಸಿಕ್ಕಂತಾಗಿದ್ದರೂ ಅತ್ತ ಜಾರಕಿಹೊಳಿ ಅವರ ಹಠವೂ ಗೆದ್ದಿದೆ ಎನ್ನಲಾಗುತ್ತಿದೆ.

ಜಾರಕಿಹೊಳಿ ಸೋದರರ ಬೇಡಿಕೆ ಏನಾಗಿತ್ತು?

ಬೆಳಗಾವಿಯ ಮಹಾಂತೇಶ್ ಪಾಟೀಲ್ ವಿಧಾನಸಭೆ ಚುನಾವಣೆಯಲ್ಲಿ ಜಾರಕಿಹೊಳಿ ವಿರುದ್ಧ ಕೆಲಸ ಮಾಡಿದ್ದ. ಲಕ್ಷ್ಮೀ ಹೆಬ್ಬಾಳ್ಕರ್​​ ಸೂಚನೆ ಮೇರೆಗೆ  ಜಾರಕಿಹೊಳಿಗೆ ಲಿಂಗಾಯತ ಮತಗಳು ಬೀಳದಂತೆ ನೋಡಿಕೊಂಡಿದ್ದ ಮಹಾಂತೇಶ್​ ವಿರುದ್ಧ ಜಾರಕಿಹೊಳಿ ಸಹೋದರರು ಗರಂ ಆಗಿದ್ದರು.  ಅದೇ ಮಹಾಂತೇಶ್​ ಪಾಟೀಲ್​ ಅವರನ್ನು ಪಿಎಲ್​ಡಿ ಬ್ಯಾಂಕ್​ ಅಧ್ಯಕ್ಷರನ್ನಾಗಿ ಮಾಡಲು ಲಕ್ಷ್ಮೀ ಹೆಬ್ಬಾಳ್ಕರ್​ ಪಣ ತೊಟ್ಟಿದ್ದರು. ಆದರೆ, ಇದಕ್ಕೆ ರಮೇಶ್​ ಜಾರಕಿಹೊಳಿ ಮತ್ತು ಸತೀಶ್​ ಜಾರಕಿಹೊಳಿ ಆಕ್ಷೇಪ ವ್ಯಕ್ತಪಡಿಸಿದ್ದರು. ಯಾವುದೇ ಕಾರಣಕ್ಕೂ ಮಹಾಂತೇಶ್​ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಬಾರದೆಂದು ಹೈಕಮಾಂಡ್​ ಬಳಿ ಬೇಡಿಕೆ ಇಟ್ಟಿದ್ದರು.

ಇಂದು ಸಂಧಾನ ನಡೆಸಿರುವ ಈಶ್ವರ ಖಂಡ್ರೆ ಲಕ್ಷ್ಮೀ ಹೆಬ್ಬಾಳ್ಕರ್​ ಅವರ ಬೇಡಿಕೆಯಂತೆ ಅವರ ಬಣದವರನ್ನೇ ಅಧ್ಯಕ್ಷ, ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆ ಮಾಡುವಂತೆ ಮಾಡಿದ್ದಾರೆ. ಹಾಗೇ, ಜಾರಕಿಹೊಳಿ ಸಹೋದರರ ಬೇಡಿಕೆಗೆ ಸ್ಪಂದಿಸಿರುವ ಖಂಡ್ರೆ ಮಹಾಂತೇಶ್​ ಪಾಟೀಲ್​ ಬದಲಾಗಿ ಮಹಾದೇವ ಪಾಟೀಲ್​ ಅವರನ್ನು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವಂತೆ ನೋಡಿಕೊಂಡಿದ್ದಾರೆ. ಅಲ್ಲಿಗೆ, ಎರಡೂ ಬಣದ ಮುಖಂಡರ ಆಸೆಯೂ ಕೈಗೂಡಿದಂತಾಗಿದೆ.
First published:September 7, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading