ಸಮ್ಮಿಶ್ರ ಸರ್ಕಾರಕ್ಕೆ ಮುಳುವಾಗಲಿದೆಯೇ ಹೆಬ್ಬಾಳ್ಕರ್-ಜಾರಕಿಹೊಳಿ ನಡುವಿನ ಕಿತ್ತಾಟ?

news18
Updated:September 6, 2018, 3:29 PM IST
ಸಮ್ಮಿಶ್ರ ಸರ್ಕಾರಕ್ಕೆ ಮುಳುವಾಗಲಿದೆಯೇ ಹೆಬ್ಬಾಳ್ಕರ್-ಜಾರಕಿಹೊಳಿ ನಡುವಿನ ಕಿತ್ತಾಟ?
  • News18
  • Last Updated: September 6, 2018, 3:29 PM IST
  • Share this:
ರಮೇಶ್​ ಹಿರೇಜಂಬೂರು, ನ್ಯೂಸ್ 18 ಕನ್ನಡ

ಬೆಂಗಳೂರು (ಸೆ.6): ಕಾಂಗ್ರೆಸ್- ಜೆಡಿಎಸ್​ ಮೈತ್ರಿ ಸರ್ಕಾರಕ್ಕೆ ದಿನಕ್ಕೊಂದು ಕಂಟಕಗಳು ಎದುರಾಗುತ್ತಿವೆ. ಒಂದೆಡೆ ಅಧಿಕಾರಕ್ಕಾಗಿ ನಾಯಕರ ನಡುವೆ ಶೀತಲ ಸಮರ, ಮತ್ತೊಂದೆಡೆ ಸರ್ಕಾರ ಉರುಳಿಸಲು ವಿರೋಧ ಪಕ್ಷದ ತಂತ್ರಗಳ ನಡುವೆಯೇ ಇದೀಗ ಮತ್ತೊಂದು ಸಂಕಟ ಎದುರಾಗಿದೆ. ಬೆಳಗಾವಿಯ ಕಾಂಗ್ರೆಸ್​ ಮುಖಂಡರಾದ ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ಜಾರಕಿಹೊಳಿ ಬ್ರದರ್ಸ್​ ನಡುವಿನ ಕಿತ್ತಾಟ ಸರ್ಕಾರ ಉರುಳಿಸುವ ಮಟ್ಟಕ್ಕೆ ಬೆಳೆದುನಿಂತಿದೆ.

ಪಿಎಲ್​ಡಿ ಬ್ಯಾಂಕಿನ ವಿಚಾರವಾಗಿ ಲಕ್ಷ್ಮೀ  ಹೆಬ್ಬಾಳ್ಕರ್ ಹಾಗೂ ಜಾರಕಿಹೊಳಿ ಬ್ರದರ್ಸ್​ ನಡುವೆ ಗದ್ದಲ ಆರಂಭವಾಯಿತು. ಹೆಬ್ಬಾಳ್ಕರ್​ ಬೆನ್ನಿಗೆ ಪ್ರಭಾವಿ ಸಚಿವ ಡಿ.ಕೆ.ಶಿವಕುಮಾರ್​ ನಿಂತಾಗ ವಿವಾದ ಮತ್ತಷ್ಟು ತಾರಕಕ್ಕೆ ಏರಿತು.

ಇಬ್ಬರ ನಡುವೆ ರಾಜಿ ಸಂಧಾನ ಮಾಡಲು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ನೇತೃತ್ವದಲ್ಲಿ ಸಭೆ ನಡೆದಾಗ "ಬೆಳಗಾವಿ ವಿಷಯಕ್ಕೆ ಯಾರಾದರೂ ತಲೆ ಹಾಕಿದರೆ, ಕಾಂಗ್ರೆಸ್​ಗೆ ರಾಜೀನಾಮೆ ನೀಡಿ ಹೊರಹೋಗಬೇಕಾಗುತ್ತದೆ. ಜೊತೆಗೆ 12 ಮಂದಿ ಶಾಸಕರನ್ನು ಕರೆದುಕೊಂಡು ಹೋಗುತ್ತೇನೆ," ಎಂದು ರಮೇಶ್​ ಜಾರಕಿಹೊಳಿ ಎಚ್ಚರಿಕೆ ನೀಡಿದ್ದರು.

ಮೈತ್ರಿ ಸರ್ಕಾರ ಉರುಳಿಸಿ, ಮತ್ತೆ ಅಧಿಕಾರ ಹಿಡಿಯಲು ಹವಣಿಸುತ್ತಿರುವ ಬಿಜೆಪಿ ಕಾಂಗ್ರೆಸ್​ನ ಆಂತರಿಕ ಭಿನ್ನಮತದ ಲಾಭ ಪಡೆಯಲು ಯತ್ನಿಸುತ್ತಿದೆ. ತೆರೆ ಮರೆಯಲ್ಲೇ ಜಾರಕಿಹೊಳಿ ಬ್ರದರ್ಸ್ ಮತ್ತು ಇತರ 12 ಶಾಸಕರನ್ನು ಸೆಳೆದುಕೊಳ್ಳಲು ಯತ್ನಿಸುತ್ತಿದೆ. ಅದಕ್ಕಾಗಿ ಅವರಿಗೆಲ್ಲ ಭರ್ಜರಿ ಆಫರ್​ ಮಾಡಲಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಇದೇ ವೇಳೆ ಗುರುವಾರ ರಾಜ್ಯಸಭಾ ಸದಸ್ಯ ಪ್ರಭಾಕರ್ ಕೋರೆ ಅವರು "ಸಿಎಂ ಕೆಳಗೆ ಇಳಿಸೋದು ಗೊತ್ತು, ಸಿಎಂ ಮಾಡೋದೂ ಗೊತ್ತು, ಕಾಂಗ್ರೆಸ್ ನಾಯಕರ ಕಿತ್ತಾಟದಿಂದ ನಮಗೇನು ಲಾಭ ಸಿಗುತ್ತದೆ ಎಂದು ಕಾಯುತ್ತಾ ಇದ್ದೇವೆ," ಎಂದು ಹೇಳಿಕೆ ನೀಡಿರುವುದು ರಾಜಕೀಯ ಪಡಸಾಲೆಯಲ್ಲಿ ಹಲವು ಚರ್ಚೆಗಳನ್ನು ಹುಟ್ಟುಹಾಕಿದೆ.

ಇಬ್ಬರ ನಡುವಿನ ಕಿತ್ತಾಟಕ್ಕೆ ಕಾರಣವೇನು?ಇಷ್ಟು ದಿನ ಚೆನ್ನಾಗಿಯೇ ಇದ್ದ ಬೆಳಗಾವಿ ಕಾಂಗ್ರೆಸ್ ನಾಯಕರಾದ ಲಕ್ಷ್ಮೀ ಹೆಬ್ಬಾಳ್ಕರ್ ಮತ್ತು ಜಾರಕಿಹೊಳಿ ಬ್ರದರ್ಸ್​ ನಡುವೆ ಕಿತ್ತಾಟ ಶುರುವಾಗಲು ಕೇವಲ ಹಣಕಾಸು ವ್ಯವಹಾರ ನಿಜವಾದ ಕಾರಣವಲ್ಲ. ಇದರ ಹಿಂದೆ ಅಸಲಿ ಕಾರಣವೇ ಬೇರೆಯೇ ಇದೆ ಎನ್ನಲಾಗುತ್ತಿದೆ.

.'ಪ್ಲೀಸ್ ಕೂಲ್ ಆಗಿರಿ ಬ್ರದರ್, ನೀವು ಕೂಲಾಗಿದ್ರೆ ಸರ್ಕಾರ...' ಎಂದು ಡಿಕೆಶಿಗೆ ಎಚ್​ಡಿಕೆ ಹೇಳಿದ್ಯಾಕೆ?
First published: September 6, 2018, 3:29 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading