ಎಪಿಎಂಸಿ ಚುನಾವಣೆಯಲ್ಲಿ ಹೆಬ್ಬಾಳ್ಕರ್​- ಜಾರಕಿಹೊಳಿ ಒಗ್ಗಟ್ಟು ಪ್ರದರ್ಶನ; ಕುತೂಹಲ ಕೆರಳಿಸಿದೆ ಎರಡು ಬಣಗಳ ನಡೆ

sushma chakre | news18
Updated:October 15, 2018, 7:46 PM IST
ಎಪಿಎಂಸಿ ಚುನಾವಣೆಯಲ್ಲಿ ಹೆಬ್ಬಾಳ್ಕರ್​- ಜಾರಕಿಹೊಳಿ ಒಗ್ಗಟ್ಟು ಪ್ರದರ್ಶನ; ಕುತೂಹಲ ಕೆರಳಿಸಿದೆ ಎರಡು ಬಣಗಳ ನಡೆ
sushma chakre | news18
Updated: October 15, 2018, 7:46 PM IST
ಚಂದ್ರಕಾಂತ ಸುಗಂಧಿ, ನ್ಯೂಸ್​18 ಕನ್ನಡ

ಬೆಳಗಾವಿ (ಅ. 15): ಬೆಳಗಾವಿಯಲ್ಲಿ ಕಳೆದ ತಿಂಗಳು ನಡೆದ ಪಿಎಲ್ ಡಿ ಬ್ಯಾಂಕ್ ಚುನಾವಣೆ ವಿಚಾರದಲ್ಲಿ ಶಾಸಕರಾದ ಸತೀಶ​ ಜಾರಕಿಹೊಳಿ ಮತ್ತು ಲಕ್ಷ್ಮೀ ಹೆಬ್ಬಾಳ್ಕರ್​ ಪರಸ್ಪರ ಕಿತ್ತಾಡಿಕೊಂಡಿದ್ದರು. ಈ ಜಗಳ ಎಪಿಎಂಸಿ ಚುನಾವಣೆಯಲ್ಲೂ ಮುಂದುವರೆಯಲಿದೆ ಎಂದೇ ಹೇಳಲಾಗಿತ್ತು. ಆದರೆ, ಎಪಿಎಂಸಿ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯಲ್ಲಿ ಜಾರಕಿಹೊಳಿ ಸಹೋದರರು, ಹೆಬ್ಬಾಳ್ಕರ್ ಒಂದಾಗುವ ಮೂಲಕ ರಾಜಕೀಯ ವಲಯದಲ್ಲಿ ಅಚ್ಚರಿ ಮೂಡಿಸಿದ್ದಾರೆ.

ಕುಂದಾ ನಗರಿ ಬೆಳಗಾವಿಯಲ್ಲಿ ನಡೆದ ಪಿಎಲ್ ಡಿ ಬ್ಯಾಂಕ್ ಚುನಾವಣೆ ಕಿತ್ತಾಟ ರಾಜ್ಯದ ಸಮ್ಮಿಶ್ರ ಸರ್ಕಾರವನ್ನು ಅಲುಗಾಡಿಸಿತ್ತು. ಇಂದಿನ ಎಪಿಎಂಸಿ ಚುನಾವಣೆ ವಿಚಾರದಲ್ಲಿ ಜಾರಕಿಹೊಳಿ ಬಣ ಹಾಗೂ ಹೆಬ್ಬಾಳ್ಕರ್ ಕಿತ್ತಾಟ ನಡೆಯಲಿದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ಜಾರಕಿಹೊಳಿ ಸಹೋದರರು, ಹೆಬ್ಬಾಳ್ಕರ್ ರಾಜಕೀಯ ನಡೆ ಅಚ್ಚರಿಗೆ ಕಾರಣವಾಗಿದೆ.

ಎರಡೂ ಬಣದ ಒಗ್ಗಟ್ಟು ಪ್ರದರ್ಶನ:

ಇಂದು ಎಪಿಎಂಸಿ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ನಡೆದಿದ್ದು, ಚುನಾವಣೆಗೂ ಮೊದಲು ಬೆಳಗಾವಿಯ ಸರ್ಕ್ಯೂಟ್ ಹೌಸ್​ನಲ್ಲಿ ಶಾಸಕ ಸತೀಶ ಜಾರಕಿಹೊಳಿ, ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಮಾತುಕತೆ ನಡೆಸಿದ್ದರು. 5 ನಿಮಿಷಗಳ ಕಾಲ ನಡೆದ ಮಾತುಕತೆ ಯಶಸ್ಸು ಕಂಡಿತು. ಎಪಿಎಂಸಿ ಅಧ್ಯಕ್ಷರಾಗಿ ಶಾಸಕ ಸತೀಶ ಜಾರಕಿಹೊಳಿ ಬೆಂಬಲಿಗ ಆನಂದ ಪಾಟೀಲ್, ಉಪಾಧ್ಯಕ್ಷರಾಗಿ ಲಕ್ಷ್ಮೀ ಹೆಬ್ಬಾಳ್ಕರ್ ಬೆಂಬಲಿಗ ಸುಧೀರ ಗಡ್ಡೆ ಹೆಸರನ್ನು ಅಂತಿಮಗೊಳಿಸಲಾಯಿತು. ನಂತರ, ಮಾಧ್ಯಮಗಳ ಜತೆಗೆ ಮಾತನಾಡಿದ ಹೆಬ್ಬಾಳ್ಕರ್ ಹಾಗೂ ಸತೀಶ ಜಾರಕಿಹೊಳಿ ಪಕ್ಷದ ಹಿತದೃಷ್ಟಿಯಿಂದ ಒಮ್ಮತದ ನಿರ್ಧಾರಕ್ಕೆ ಬಂದಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ: ಬೆಳಗಾವಿಯಲ್ಲಿ ಎಪಿಎಂಸಿ ಚುನಾವಣೆ; ಮತ್ತೆ ಸ್ಫೋಟಗೊಳ್ಳಲಿದೆಯಾ ಹೆಬ್ಬಾಳ್ಕರ್, ಜಾರಕಿಹೊಳಿ ಬಣದ ಭಿನ್ನಮತ?

ಶಾಸಕ ಸತೀಶ ಜಾರಕಿಹೊಳಿ, ಲಕ್ಷ್ಮೀ ಹೆಬ್ಬಾಳ್ಕರ್ ಒಂದಾಗಿದ್ದರಿಂದ ಅನಿವಾರ್ಯವಾಗಿ ಎಂಇಎಸ್, ಬಿಜೆಪಿ ಬೆಂಬಲಿತ ಸದಸ್ಯರು ಅವರನ್ನು ಬೆಂಬಲಿಸಿದ್ದರು. ಎಲ್ಲ 17 ಸದಸ್ಯರು ಒಟ್ಟುಗೂಡಿ ಎಪಿಎಂಸಿಗೆ ಆಗಮಿಸಿ ನಾಮಪತ್ರ ಸಲ್ಲಿಸಿದರು. ಅಧ್ಯಕ್ಷ ಸ್ಥಾನಕ್ಕೆ ಆನಂದ ಪಾಟೀಲ್, ಉಪಾಧ್ಯಕ್ಷ ಸ್ಥಾನಕ್ಕೆ ಸುಧೀರ ಗಡ್ಡಿ ನಾಮಪತ್ರ ಸಲ್ಲಿಸಿದರು. ಅವರಿಬ್ಬರೂ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ತಹಶೀಲ್ದಾರ್ ಮಂಜುಳಾ ನಾಯಕ್ ಘೋಷನೆ ಮಾಡಿದರು.
Loading...

ಇದನ್ನೂ ಓದಿ: ಬೆಳಗಾವಿಯಲ್ಲಿ ಮತ್ತೆ ಆರಂಭವಾಗುತ್ತಾ ಹೆಬ್ಬಾಳ್ಕರ್​ VS ಜಾರಕಿಹೊಳಿ ಕದನ?

ಬೆಳಗಾವಿಯಲ್ಲಿ ಇಂದು ನಡೆದ ಎಪಿಎಂಸಿ ಚುನಾವಣೆ ಮತ್ತೊಮ್ಮೆ ಹೆಬ್ಬಾಳ್ಕರ್, ಜಾರಕಿಹೊಳಿ ನಡುವಿನ ಸಂಘರ್ಷಕ್ಕೆ ವೇದಿಕೆಯಾಗಲಿಲ್ಲ. ಬದಲಾಗಿ ಪರಸ್ಪರ ಒಟ್ಟಾಗುವ ಮೂಲಕ ರಾಜಕೀಯದಲ್ಲಿ ಯಾರೂ ಶತ್ರುಗಳಲ್ಲ ಯಾರೂ ಮಿತ್ರರಲ್ಲ ಎನ್ನುವುದನ್ನು ತೋರಿಸಿಕೊಟ್ಟರು. ಈ ನಡೆಯ ಹಿಂದೆ ಹೈಕಮಾಂಡ್ ಖಡಕ್ ಸೂಚನೆ ಇದೆ ಎನ್ನಲಾಗಿದೆ. ಈ ಒಮ್ಮತದ ಒಗ್ಗಟ್ಟು ಮುಂದಿನ ಲೋಕಸಭೆ ಚುನಾವಣೆ ಅಭ್ಯರ್ಥಿಯ ಆಯ್ಕೆಯ ಸಂದರ್ಭದಲ್ಲಿಯೂ ಮುಂದುವರೆಯಲಿದೆಯಾ? ಎಂಬುದು ಕುತೂಹಲಕ್ಕೆ ಕಾರಣವಾಗಿದೆ.
First published:October 15, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...