ಸ್ವಾಭಿಮಾನಕ್ಕೆ ಧಕ್ಕೆ ಬಂದ್ರೆ ಸಹಿಸುವುದಿಲ್ಲ; ಲಕ್ಷ್ಮೀ ಹೆಬ್ಬಾಳ್ಕರ್ ಎಚ್ಚರಿಕೆ

news18
Updated:September 10, 2018, 7:11 AM IST
ಸ್ವಾಭಿಮಾನಕ್ಕೆ ಧಕ್ಕೆ ಬಂದ್ರೆ ಸಹಿಸುವುದಿಲ್ಲ; ಲಕ್ಷ್ಮೀ ಹೆಬ್ಬಾಳ್ಕರ್ ಎಚ್ಚರಿಕೆ
news18
Updated: September 10, 2018, 7:11 AM IST
-ಚಂದ್ರಕಾಂತ ಸುಗಂಧಿ, ನ್ಯೂಸ್​ 18 ಕನ್ನಡ

ಬೆಳಗಾವಿ (ಸೆ.09): ಜಾರಕಿಹೊಳಿ ಜೊತೆಗಿನ ಪಿಎಲ್​ಡಿ ಬ್ಯಾಂಕ್​ ಚುನಾವಣೆ ವಿಚಾರಕ್ಕೆ ಸಂಬಂಧಿಸಿದ ಕಿತ್ತಾಟದಲ್ಲಿ ಕೊನೆಗೆ ಲಕ್ಷ್ಮೀ ಹೆಬ್ಬಾಳ್ಕರ್​ ಅವರಿಗೆ ಗೆಲವು ಲಭಿಸಿತು. ಈ ಜಯದ ನಗೆ ಬೀರಿರುವ ನೂತನ ಶಾಸಕಿ ಇಂದು ತಮ್ಮಲ್ಲಿ ಅಡಗಿದ್ದ ಸಿಟ್ಟನ್ನು ಹೊರ ಹಾಕಿದ್ದು, ಸ್ವಾಭಿಮಾನಕ್ಕೆ ಧಕ್ಕೆ ಬಂದರೆ ಯಾವುದೇ ಕಾರಣಕ್ಕೂ ತಾನು ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.

ತಮ್ಮ ಕ್ಷೇತ್ರದಲ್ಲಿ ಅಧಿಕಾರ ಹಸ್ತಕ್ಷೇಪ ಮಾಡುತ್ತಿದ್ದ ಬಗ್ಗೆ ಹೈ ಕಮಾಂಡ್​ ಗೆ ದೂರು ನೀಡಿದ ಜಾರಕಿಹೊಳಿ ಸಹೋದರರು ಲಕ್ಷ್ಮೀ ಹೆಬ್ಬಾಳಕರ್​ ವಿರುದ್ಧ ಸಿಡಿದೆದ್ದಿದ್ದರು. ಕಡೆಗೆ ಜಾರಕಿಹೊಳಿ ಸಹೋದರರ ಗುಟುರಿಗೆ ಬೆದರಿದ ಹೈಕಮಾಂಡ್​ ಹೆಬ್ಬಾಳ್ಕರ್​ಗೆ ಸುಮ್ಮನಿರುವಂತೆ ತಾಕೀತು ಮಾಡಿತು.

ಹೈಕಮಾಂಡ್​ ಅಣತಿ ಹಿನ್ನಲೆ ತಣ್ಣಗಾಗಿದ್ದ ಲಕ್ಷ್ಮೀ ಹೆಬ್ಬಾಳ್ಕರ್​ ಬಣಕ್ಕೆ ಪಿಎಲ್​ಡಿ ಚುನಾವಣೆಯಲ್ಲಿ ಗೆಲುವು ಲಭಿಸುವ ಮೂಲಕ ತಾನು ಕೂಡ ಕ್ಷೇತ್ರದಲ್ಲಿ ಪ್ರಬಲ ವ್ಯಕ್ತಿ ಎಂಬುದನ್ನು ಲಕ್ಷ್ಮೀ  ಸಾಬೀತು ಮಾಡಿದರು.

ಪಿಎಲ್​​ಡಿ ಬ್ಯಾಂಕ್​ಗೆ ಅವಿರೋಧ ಆಯ್ಕೆ; ಲಕ್ಷ್ಮೀ ಹೆಬ್ಬಾಳ್ಕರ್​ ಬಣಕ್ಕೆ ಒಲಿದ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ

ಇಂದು ಬಾಗಲಕೋಟೆಯ ಕೂಡಲಸಂಗಮದಲ್ಲಿ ನಡೆದ ಬಸವಪಂಚಮಿ ಕಾರ್ಯಕ್ರಮದಲ್ಲಿ ಜಾರಕಿಹೊಳಿ ಸಹೋದರ ವಿರುದ್ಧ ಪರೋಕ್ಷ ದಾಳಿ ನಡೆಸಿದ ಅವರು,  ನಮ್ಮ ಕ್ಷೇತ್ರದ ವಿಚಾರಕ್ಕೆ ಬಂದ್ರೆ ಸುಮ್ಮನಿರುವುದಿಲ್ಲ. ಬೆಳಗಾವಿಯದ್ದು ಅದೊಂದು ಕೆಟ್ಟ ಘಟನೆ ಎಂದು ಮರೆತುಬಿಡಿ. ಅನ್ಯಾಯ ಸಹಿಸಿಕೊಳ್ಳುವುದು ಅನ್ಯಾಯ ಮಾಡಿದಷ್ಟೇ ಕೆಟ್ಟದು.  ಸ್ವಾಭಿಮಾನಕ್ಕೆ ಧಕ್ಕೆ ಬಂದ್ರೆ ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ಹಿಂದೆ ರಾಜ್ಯ-ರಾಜ್ಯಗಳ ನಡುವೆ ಯುದ್ಧಗಳಾಗುತ್ತಿದ್ದವು. ಈಗ ಕಲಿಯುಗದಲ್ಲಿ ಚುನಾವಣೆಗಳೇ ಯುದ್ಧಗಳಾಗಿಬಿಟ್ಟಿವೆ. ಸಂಘಟನೆ ಮೂಲಕ ಅನ್ಯಾಯದ ವಿರುದ್ಧ ಹೋರಾಡೋಣ. ಕ್ರಾಂತಿ ನಮ್ಮಲ್ಲಿ, ನಿಮ್ಮಲ್ಲಿ ಮತ್ತೆ ಹುಟ್ಟಿದೆ, ಸಂಘಟನೆಯಾಗಿದ್ದೇವೆ ಎಂದು ಮಾತಿನ ಚಾಟಿ ಬೀಸಿದರು.
Loading...

ವಿಜಯಾನಂದ ಕಾಶಪ್ಪನವರ್ ಮೇಲೆ ಆದ ಹಲ್ಲೆ ಕಠಿಣ ಶಬ್ಧ ದಿಂದ ಖಂಡಿಸಿದ ಅವರು, ಪ್ರಜಾಪ್ರಭುತ್ವದಲ್ಲಿ ಇಂಥ ಘಟನೆ ನಡೆಯಬಾರದು ಎಂದು ಖಂಡಿಸಿದರು.
First published:September 9, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...