• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Lakhimpur: ಇಬ್ಬರು ಹೆಣ್ಮಕ್ಕಳ ಹತ್ಯೆ ಪ್ರಕರಣದಲ್ಲಿ ಬಿಗ್ ಟ್ವಿಸ್ಟ್​: ರೇಪ್​ ಬಳಿಕ ಮದುವೆಗೆ ಒತ್ತಾಯಿಸಿದ್ದಕ್ಕೆ ಕೊಲೆ!

Lakhimpur: ಇಬ್ಬರು ಹೆಣ್ಮಕ್ಕಳ ಹತ್ಯೆ ಪ್ರಕರಣದಲ್ಲಿ ಬಿಗ್ ಟ್ವಿಸ್ಟ್​: ರೇಪ್​ ಬಳಿಕ ಮದುವೆಗೆ ಒತ್ತಾಯಿಸಿದ್ದಕ್ಕೆ ಕೊಲೆ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Lakhimpur Rape and Murder Case: ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪೊಲೀಸ್ ವರಿಷ್ಠಾಧಿಕಾರಿ ಸಂಜೀವ್ ಸುಮನ್, ಬಂಧಿತ 6 ಆರೋಪಿಗಳೆಲ್ಲರೂ ಪರಸ್ಪರ ಸ್ನೇಹಿತರಾಗಿದ್ದಾರೆ. ಹತ್ಯೆಗೀಡಾದ ಸಹೋದರಿಯರ ನೆರೆಹೊರೆಯಲ್ಲಿ ವಾಸಿಸುವ ಆರೋಪಿ ಛೋಟು ಮೂಲಕ ಇಬ್ಬರು ಹೆಣ್ಮಕ್ಕಳಿಗೆ ಆರೋಪಿಗಳ ಪರಿಚಯವಾಗಿತ್ತು.

ಮುಂದೆ ಓದಿ ...
  • Share this:

ಲಕ್ನೋ(ಸೆ.15): ಲಖಿಂಪುರ ಖೇರಿ (Lakhimpur Kheri) ಜಿಲ್ಲೆಯ ನಿಘಸನ್ ಕೊಟ್ವಾಲಿ ಪ್ರದೇಶದ ಇಬ್ಬರು ಸಹೋದರಿಯರ ಸಾವಿನ ರಹಸ್ಯವನ್ನು 24 ಗಂಟೆಗಳಲ್ಲಿ ಬೇಧಿಸಿದ ಪೊಲೀಸರು ಪ್ರಕರಣ ಸಂಬಂಧ 6 ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳಲ್ಲಿ ಇಬ್ಬರು ತಾವು ಈ ಪ್ರಕರಣದಲ್ಲಿ ಭಾಗಿಯಾಗಿರುವುದಾಗಿ ಒಪ್ಪಿಕೊಂಡಿದ್ದಾರೆ. ಆರೋಪಿಗಳೆಲ್ಲ ಬಾಲಕಿಯರಿಗೆ ಆಮಿಷ ಒಡ್ಡಿ ಗದ್ದೆಗೆ ಕರೆದುಕೊಂಡು ಹೋಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಅಲ್ಲಿ ಅವರ ಒಪ್ಪಿಗೆ ಇಲ್ಲದೇ ದೈಹಿಕ ಸಂಬಂಧ ಬೆಳೆಸಿ ನಂತರ ಕತ್ತು ಹಿಸುಕಿ ಕೊಲೆ (Murder Case) ಮಾಡಲಾಗಿತ್ತು. ಬಳಿಕ ಇಬ್ಬರ ಶವವನ್ನು ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಕಾಣುವಂತೆ ನೇತು ಹಾಕಿದ್ದಾರೆ. ಈ ಮೂಲಕ ಇದೊಂದು ಆತ್ಮಹತ್ಯೆ ಪ್ರಕರಣ ಎಂದು ಬಿಂಬಿಸಲು ಯತ್ನಿಸಿದ್ದಾರೆ.


ಇದನ್ನೂ ಓದಿ: Ex-Spy: ಮಾಜಿ ಗೂಢಚಾರಿಯ 30 ವರ್ಷಗಳ ಕಾನೂನು ಹೋರಾಟಕ್ಕೆ ಸಿಗ್ತು ಜಯ: ಏನಿದು ಪ್ರಕರಣ?


ಇಬ್ಬರು ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ


ಪೊಲೀಸ್ ವರಿಷ್ಠಾಧಿಕಾರಿ ಪ್ರಕಾರ, ಬಂಧಿತರಾದ ಸೊಹೈಲ್ ಮತ್ತು ಜುನೈದ್ ತಮ್ಮ ಅಪರಾಧವನ್ನು ಒಪ್ಪಿಕೊಂಡಿದ್ದಾರೆ. ಗುರುವಾರ ಬೆಳಗ್ಗೆ ನಡೆದ ಎನ್‌ಕೌಂಟರ್‌ನಲ್ಲಿ ಜುನೈದ್‌ನನ್ನು ಪೊಲೀಸರು ಬಂಧಿಸಿದ್ದರು. ಆತನ ಕಾಲಿಗೆ ಗುಂಡು ತಗುಲಿದೆ. ಇದಲ್ಲದೆ ಛೋಟು, ಹಫೀಜುಲ್, ಆರಿಫ್ ಮತ್ತು ಕರೀಮುದ್ದೀನ್ ಎಂಬುವವರನ್ನು ಬಂಧಿಸಲಾಗಿದೆ. ಇದೀಗ ವಿಚಾರಣೆ ಪ್ರಾಥಮಿಕ ಹಂತದಲ್ಲಿದೆ. ಎರಡೂ ಶವಗಳ ಮರಣೋತ್ತರ ಪರೀಕ್ಷೆ ನಡೆಯುತ್ತಿದೆ. ಮರಣೋತ್ತರ ಪರೀಕ್ಷೆ ವರದಿ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಸದ್ಯ ಈ ಪ್ರಕರಣದಲ್ಲಿ ಅತ್ಯಾಚಾರ, ಕೊಲೆ ಹಾಗೂ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.


ದೋಷಿಗಳಿಗೆ ಸಿಗುವ ಸಜೆ ಮುಂದಿನ ಪೀಳಿಗೆಗೆ ಪಾಠವಾಗಲಿದೆ


ಮತ್ತೊಂದೆಡೆ, ಲಖೀಂಪುರ ಖೇರಿ ಘಟನೆ ಬಯಲಾದ ಬೆನ್ನಲ್ಲೇ, ಉಪಮುಖ್ಯಮಂತ್ರಿ ಬ್ರಜೇಶ್ ಪಾಠಕ್ ಮಾತನಾಡಿ ಸರ್ಕಾರವು ಘಟನೆಯ ಎಲ್ಲಾ ಬೆಳವಣಿಗೆಗಳನ್ನು ಗಮನಿಸುತ್ತಿದೆ. ಈಗಾಗಲೇ ಎಲ್ಲಾ ಆರೋಪಿಗಳನ್ನು ಬಂಧಿಸಲಾಗಿದೆ. ಈ ಆರೋಪಿಗಳ ಮುಂದಿನ ಏಳು ತಲೆಮಾರುಗಳನ್ನು ನೆನಪಿಸಿಕೊಳ್ಳುವಂಥ ಕ್ರಮವನ್ನು ಸರ್ಕಾರ ತೆಗೆದುಕೊಳ್ಳುತ್ತದೆ ಎಂದಿದ್ದಾರೆ.


ಇದನ್ನೂ ಓದಿ: Horse Viral News: ಈ ಕುದುರೆ ಮರಿಗೆ ಬಸ್ ಮೇಲಿನ ಚಿತ್ರವೇ ಅಮ್ಮ!


ಬಂಧಿತ ಆರೋಪಿಗಳು ಹೀಗಿದ್ದಾರೆ


ಬಾಲಕಿಯರನ್ನು ಕಬ್ಬಿನ ಗದ್ದೆಗೆ ಕರೆದೊಯ್ದು ಸುಹೇಲ್, ಜುನೈದ್ ಮತ್ತು ಹಫೀಜುಲ್ ರೆಹಮಾನ್ ಅತ್ಯಾಚಾರವೆಸಗಿದ್ದಾರೆ ಎಂದು ಜಿಲ್ಲಾ ಪೊಲೀಸ್ ಮುಖ್ಯಸ್ಥ ಸಂಜೀವ್ ಸುಮನ್ ಸುದ್ದಿಗಾರರಿಗೆ ತಿಳಿಸಿದ್ದಾರೆ.


ಆದರೆ ಈ ಪೈಕಿ ಇಬ್ಬರು ಬಂಧಿತ ಆರೋಪಿಗಳು ಬಾಲಕಿಯರಿಗೆ ಪರಿಚಿತರೇ ಆಗಿದ್ದಾರೆ. ಆರೋಪಿಗಳ ಬೈಕ್​ನಲ್ಲೇ ಬಾಲಕಿಯರು ತೆರಳಿದ್ದಾರೆ. ಆರೋಪಿಗಳಿಗೆ ಮದುವೆಯಾಗುವಂತೆ ಒತ್ತಾಯಿಸಿದಾಗ ಆರೋಪಿಗಳು ಕತ್ತುಹಿಸುಕಿ ದಲಿತ ಸಹೋದರಿಯರನ್ನು ಕೊಲೆಗೈದಿದ್ದಾರೆ ಎಂದು ಸಹ ಹೇಳಲಾಗಿದೆ.

top videos
    First published: