Lakhimpur Kheri Massacre: ಯೂತ್ ಕಾಂಗ್ರೆಸ್ಸಿನಿಂದ ದೆಹಲಿಯಲ್ಲಿ ಪಂಜಿನ ಮೆರವಣಿಗೆ, ಕೇಂದ್ರ ಸಚಿವರ ವಜಾಕ್ಕೆ ಆಗ್ರಹ

ಉತ್ತರಪ್ರದೇಶದ ಲಖೀಂಪುರ್​ ಖೇರಿ ಎಂಬಲ್ಲಿ ಅಕ್ಟೋಬರ್​ 03ರಂದು ರೈತರ ಹತ್ಯಾಕಾಂಡ ನಡೆದಿತ್ತು. ಕೇಂದ್ರ ಗೃಹ ಖಾತೆಯ ರಾಜ್ಯ ಸಚಿವ ಅಜಯ್ ಮಿಶ್ರಾ ಅವರ ಪುತ್ರ ಆಶೀಶ್​ ಮಿಶ್ರಾ ತಮ್ಮ ದುಬಾರಿ ಕಾರ್​ ಅನ್ನು ರೈತ ಹೋರಾಟಗಾರರ ಮೇಲೆ ಹರಿಸಿದ್ದರು. ಈ ಘಟನೆಯಲ್ಲಿ ಕನಿಷ್ಟ 4 ಜನ ರೈತರು ಮೃತಪಟ್ಟಿದ್ದರು. ಇದರಿಂದ ದೊಡ್ಡ ಗಲಭೆಯೂ ಉಂಟಾಗಿತ್ತು. ಗಲಭೆಯಲ್ಲಿ ಓರ್ವ ಸ್ಥಳೀಯ ಪತ್ರಕರ್ತ ಸೇರಿದಂತೆ 5 ಜನ ಮೃತಪಟ್ಟಿದ್ದರು. ಒಟ್ಟು 9 ಜನರ ಸಾವಿಗೆ ಕಾರಣವಾಗಿದ್ದ ಲಖೀಂಪುರ್ ಖೇರಿ ಹಿಂಸಾಚಾರಕ್ಕೆ ಕೇಂದ್ರ ಸಚಿವ ಮತ್ತು ಆತನ ಪುತ್ರನೇ ನೇರ ಕಾರಣ ಎನ್ನಲಾಗಿದೆ.

ಪಂಜಿನ ಮೆರವಣಿಗೆ ನಡೆಸಿದ ಯೂತ್ ಕಾಂಗ್ರೆಸ್ ಸದಸ್ಯರು

ಪಂಜಿನ ಮೆರವಣಿಗೆ ನಡೆಸಿದ ಯೂತ್ ಕಾಂಗ್ರೆಸ್ ಸದಸ್ಯರು

  • Share this:
ನವದೆಹಲಿ, ಅ. 13: ಉತ್ತರಪ್ರದೇಶದ (Uttar Pradesh) ಲಖೀಂಪುರ್​ ಖೇರಿಯಲ್ಲಿ (Lakhimpur Kheri) ಇದೇ ಅಕ್ಟೋಬರ್​ 3ರಂದು ನಡೆದಿದ್ದ ರೈತರ ಹತ್ಯಾಕಾಂಡಕ್ಕೆ ಕೇಂದ್ರ ಗೃಹ ಖಾತೆಯ ರಾಜ್ಯ ಸಚಿವ ಅಜಯ್ ಮಿಶ್ರಾ (Ajay Mishra) ಅವರ ಪುತ್ರ ಆಶೀಶ್​ ಮಿಶ್ರಾ (Ashish Mishra) ಕಾರಣಕರ್ತನಾಗಿದ್ದು ಕೂಡಲೇ ಅಜಯ್ ಮಿಶ್ರಾ ಅವರನ್ನು ಕೇಂದ್ರ ಸಚಿವ ಸಂಪುಟದಿಂದ (Union Cabinet) ವಜಾ ಮಾಡಬೇಕು. ಲಖೀಂಪುರ್ ಖೇರಿ ಹಿಂಸಾಚಾರದಲ್ಲಿ ಮೃತಪಟ್ಟ ರೈತ ಕುಟುಂಬಗಳಿಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿ ಅಖಿಲ ಭಾರತ ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ್ ಬಿ.ವಿ. (All India Youth Congress President Srinivas BV) ನೇತೃತ್ವದಲ್ಲಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಬುಧವಾರ ಸಂಜೆ ಪಂಜಿನ ಮೆರವಣಿಗೆ (Torch Light Parade) ಮಾಡಲಾಯಿತು.

ಈ ವೇಳೆ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಅಖಿಲ ಭಾರತ ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ್ ಬಿ.ವಿ., ದೇಶದಲ್ಲಿ ಅನ್ನದಾತನಿಗೆ ಕಿರುಕುಳ ನೀಡುವುದು ಪ್ರಧಾನಿ ನರೇಂದ್ರ ಮೋದಿ (Narendara Modi) ನೇತೃತ್ವದ ಕೇಂದ್ರ ಸರ್ಕಾರದ ನೀತಿ ಎಂದು ತೋರುತ್ತದೆ‌. ಇದು ವಿಫಲವಾದ ತಂತ್ರ. ರೈತರು ಈಗ ಬಿಜೆಪಿಯ ಕುಟಿಲ ನೀತಿ ಮತ್ತು ತಂತ್ರಗಳನ್ನು ಅರ್ಥಮಾಡಿಕೊಳ್ಳುತ್ತಿದ್ದಾರೆ. ಉತ್ತರ ಪ್ರದೇಶದ ಲಖಿಂಪುರ್ ಖೇರಿಯಲ್ಲಿ ಕ್ಷಮಿಸಲಾಗದ ಕೃತ್ಯ ನಡೆಸಿರುವುದು ಮತ್ತು ರೈತರನ್ನು ನಿರ್ದಯವಾಗಿ ಹತ್ಯೆ ಮಾಡಿರುವುದು ಭಾರತದ ಆತ್ಮವನ್ನು ಕದಡಿದೆ. ಲಖಿಂಪುರ್ ಖೇರಿ ಘಟನೆಯಲ್ಲಿ ಬಿಜೆಪಿ ಸರ್ಕಾರದ ವರ್ತನೆ ಮೊದಲಿಗಿಂತಲೂ ಅನುಮಾನಾಸ್ಪದವಾಗಿದೆ. ಆರೋಪಿಗಳನ್ನು ರಕ್ಷಿಸುವ ಪ್ರಯತ್ನಗಳು ನಡೆಯುತ್ತಿವೆ. ಆದರೆ ಸತ್ಯ ಏನು ಎಂಬುದು ಎಲ್ಲರಿಗೂ ತಿಳಿದಿದೆ. ಸರ್ಕಾರದ ಲಕ್ಷಗಟ್ಟಲೆ ಪ್ರಯತ್ನಗಳ ನಂತರವೂ ರೈತರ ನ್ಯಾಯದ ಧ್ವನಿಯನ್ನು ಹತ್ತಿಕ್ಕಲು ಸಾಧ್ಯವಿಲ್ಲ ಎಂದು ಹೇಳಿದರು.

ರೈತರು ಶಾಂತಿಯುತವಾಗಿ ಪ್ರತಿಭಟನೆ ಮಾಡುತ್ತಿದ್ದಾಗ ಕೇಂದ್ರ ಸಚಿವರ ಮಗನ ಬೆಂಗಾವಲು ವಾಹನ ರೈತರು ಮತ್ತು ಪತ್ರಕರ್ತನನ್ನು ತುಳಿದು ಹಾಕಿ ಹತ್ಯೆ ಮಾಡಿದೆ. ಆಗ ಕೇಂದ್ರ ಸಚಿವ ಅಜಯ್ ಮಿಶ್ರಾ ಪುತ್ರ ಆಶಿಶ್ ಮಿಶ್ರಾ ವಾಹನದಲ್ಲಿದ್ದರು ಎಂದು ಪ್ರತ್ಯಕ್ಷದರ್ಶಿಗಳು ಖಚಿತಪಡಿಸಿದ್ದಾರೆ. ಇದು ಸಾರ್ವಕಾಲಿಕ ಅತ್ಯಂತ ಭಯಾನಕ ಮತ್ತು ಯೋಜಿತ ಕಾರ್ಯಗಳಲ್ಲಿ ಒಂದಾಗಿದೆ. ಇದು ಕ್ಯಾಮೆರಾದಲ್ಲಿ ಕೂಡ ಸೆರೆಯಾಗಿದೆ. ಈ ಹಿಂಸಾಚಾರದಲ್ಲಿ ಆಡಳಿತಾರೂಢ ಬಿಜೆಪಿ (BJP) ನಾಯಕರ ವರ್ತನೆ ಅನುಮಾನಾಸ್ಪದವಾಗಿದೆ. ಈ ಬಗ್ಗೆ ನ್ಯಾಯಯುತವಾದ ನ್ಯಾಯಾಂಗ ತನಿಖೆ ನಡೆಯಬೇಕು. ಅದಕ್ಕಾಗಿ ಕೇಂದ್ರ ಗೃಹ ಇಲಾಖೆಯ ರಾಜ್ಯ ಖಾತೆ ಸಚಿವ ಅಜಯ್ ಮಿಶ್ರಾ ಅವರನ್ನು ತಕ್ಷಣವೇ ವಜಾಗೊಳಿಸಬೇಕು.‌ ಆ ವ್ಯಕ್ತಿಗೆ ಒಂದು ಕ್ಷಣವೂ ತನ್ನ ಹುದ್ದೆಯಲ್ಲಿ ಮುಂದುವರಿಯುವ ಹಕ್ಕಿಲ್ಲ ಎಂದು ಶ್ರೀನಿವಾಸ್ ಬಿವಿ ಆಗ್ರಹಿಸಿದರು.

Also read: Uttar Pradesh: ಫ್ಲೆಕ್ಸ್​ನಲ್ಲಿ ಸೋನಿಯಾ ಗಾಂಧಿ ಜೊತೆ ಕಾಣಿಸಿಕೊಂಡ ವರುಣ್ ಗಾಂಧಿ: ಸ್ಪಷ್ಟನೆ ಕೇಳಿದ ಕಾಂಗ್ರೆಸ್

ಭಾರತೀಯ ಯುವ ಕಾಂಗ್ರೆಸ್‌ನ ರಾಷ್ಟ್ರೀಯ ಮಾಧ್ಯಮ ಉಸ್ತುವಾರಿ ರಾಹುಲ್ ರಾವ್ (All India Youth Congress Media In charge Rahul Rao) ಮಾತನಾಡಿ ಹುತಾತ್ಮ ರೈತರಿಗೆ ನ್ಯಾಯ ದೊರಕಿಸಿಕೊಡಲು ಮತ್ತು ಕೇಂದ್ರ ಸಚಿವ ಅಜಯ್ ಮಿಶ್ರಾ ಅವರನ್ನು ವಜಾಗೊಳಿಸುವಂತೆ ಒತ್ತಾಯಿಸಲು ರಾಷ್ಟ್ರೀಯ ಅಧ್ಯಕ್ಷ ಶ್ರೀನಿವಾಸ್ ಬಿವಿ ನೇತೃತ್ವದಲ್ಲಿ ಅನೇಕ ಯುವ ಕಾಂಗ್ರೆಸ್ ಕಾರ್ಯಕರ್ತರು ಬೃಹತ್ "ಪಂಜಿನ ಆಕ್ರೋಶ ಮೆರವಣಿಗೆ" ನಡೆಸಿದ್ದಾರೆ ಎಂದು ಹೇಳಿದರು. ಭಾರತೀಯ ಯುವ ಕಾಂಗ್ರೆಸ್ ಕಚೇರಿಯ ಮೂಲಕ ಜಂತರ್ ಮಂತರ್ (Janthar Manthar) ತನಕ ಪಂಜಿನ ಮೆರವಣಿಗೆಯನ್ನು ನಡೆಸಲಾಯಿತು.

ರಾಷ್ಟ್ರಪತಿ ಭೇಟಿ ಮಾಡಿದ ಕಾಂಗ್ರೆಸ್ ನಿಯೋಗ

ಇದಕ್ಕೂ ಮೊದಲು ಲಖೀಂಪುರ್​ ಖೇರಿ ರೈತರ ಹತ್ಯಾಕಾಂಡದ ರೂವಾರಿ ಕೇಂದ್ರ ಗೃಹ ಖಾತೆಯ ರಾಜ್ಯ ಸಚಿವ ಅಜಯ್ ಮಿಶ್ರಾ ಅವರ ಪುತ್ರ ಆಶೀಶ್​ ಮಿಶ್ರಾ ಅವರನ್ನು ಕೇಂದ್ರ ಸಚಿವ ಸ್ಥಾನದಿಂದ ವಜಾಗೊಳಿಸುವಂತೆ ಮತ್ತು ಪ್ರಕರಣದ ಎಲ್ಲಾ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮಕ್ಕೆ ಆಗ್ರಹಿಸಿ ಕಾಂಗ್ರೆಸ್​ ನಿಯೋಗ ಬುಧವಾರ ರಾಷ್ಟ್ರಪತಿ ರಮಾನಾಥ್ ಕೋವಿಂದ್ (President Ramanath Kovind) ಅವರನ್ನು ಭೇಟಿ ಮಾಡಿತು.
ಕಾಂಗ್ರೆಸ್ ಮಾಜಿ ಅಧ್ಯಕ್ಷ ಹಾಗೂ ಸಂಸದ ರಾಹುಲ್ ಗಾಂಧಿ (Rahul Gandhi) ಅವರ ನೇತೃತ್ವದ ‌ನಿಯೋಗದಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ (AICC General Secretry Priyanka Gandhi), ರಾಜ್ಯಸಭೆಯ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ (Oppostion Leader of Rajyasabha Mallikarjuna Karge), ರಾಜ್ಯಸಭೆಯ ಪ್ರತಿಪಕ್ಷದ ಮಾಜಿ ನಾಯಕ ಗುಲಾಂನಭಿ ಆಜಾದ್ (Former Oppostion Leader of Rajyasabha Gulam Nabhi Azad) ಮತ್ತು ಕೇಂದ್ರದ ಮಾಜಿ ಸಚಿವ ಎ.ಕೆ. ಆ್ಯಂಟನಿ (Former Union Minister A.K. Antony) ಇದ್ದರು. ಕಾಂಗ್ರೆಸ್ ನಿಯೋಗವು ರಾಷ್ಟ್ರಪತಿಯ ಅವರನ್ನು ಭೇಟಿ ಮಾಡಿ  ಲಖೀಂಪುರ್​ ಖೇರಿ ರೈತ ಹತ್ಯಾಕಾಂಡದ ಬಗ್ಗೆ ಚರ್ಚೆ ನಡೆಸಿದೆ. ಅಲ್ಲದೆ, ಈ ಘಟನೆಗೆ ಕಾರಣವಾದ ಸಚಿವರ ವಿರುದ್ಧ ಸೂಕ್ತ ಕ್ರಮ ಜರುಗಿಸಿ ಎಂದು ಒತ್ತಾಯಿಸಿದೆ.

ಕೇಂದ್ರ ಸಚಿವರ ವಜಾಕ್ಕೆ ಆಗ್ರಹ

ರಾಷ್ಟ್ರಪತಿ ಭೇಟಿಯ ಬಳಿಕ‌ ಸುದ್ದಿಗಾರರ ಜೊತೆ ಮಾತನಾಡಿದ ರಾಹುಲ್ ಗಾಂಧಿ ಅವರು,‌ 'ಅಪರಾಧ ನಡೆದ ನಂತರ ಸರ್ಕಾರ ಮತ್ತು ಆಡಳಿತವು ಎಚ್ಚೆತ್ತುಕೊಳ್ಳದೆ ಅವು ಅನ್ಯಾಯ ಮಾಡಲಲು ಮುಂದಾದಾಗ ನಾವು ಧ್ವನಿ ಎತ್ತುವುದು ಅಗತ್ಯ. ಹಾಗಾಗಿ ರಾಷ್ಟ್ರಪತಿಗಳನ್ನು ಭೇಟಿ ಮಾಡಿ ದೂರು ನೀಡಿದ್ದೇವೆ. ಲಖಿಂಪುರ್ ಖೇರಿ ಹಿಂಸಾಚಾರ  ಪ್ರಕರಣದಲ್ಲಿ ನಮಗೆ ಎರಡು ಬೇಡಿಕೆಗಳಿವೆ. ಮೊದಲನೆಯದಾಗಿ ಈ ಬಗ್ಗೆ ನ್ಯಾಯಯುತವಾದ ನ್ಯಾಯಾಂಗ ವಿಚಾರಣೆ ನಡೆಯಬೇಕು. ಇನ್ನೊಂದು ತಕ್ಷಣವೇ ಹಿಂಸಾಚಾರಕ್ಕೆ ಕಾರಣಕರ್ತ ಎನ್ನಲಾದ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಅವರನ್ನು ಸಂಪುಟದಿಂದ  ವಜಾ ಮಾಡಬೇಕು' ಎಂದು ಹೇಳಿದ್ದಾರೆ.

ಅನ್ಯಾಯದ ವಿರುದ್ಧ ದನಿ ಎತ್ತಿದ್ದೇವೆ

ಲಖೀಂಪುರ್ ಖೇರಿಯಲ್ಲಿ ಹಿಂಸಾಚಾರ ನಡೆಯುತ್ತಿದ್ದಂತೆ ಅಲ್ಲಿಗೆ ಹೋಗಲು ಯತ್ನಿಸಿ ಮೂರು ದಿನ ಉತ್ತರ ಪ್ರದೇಶ ಪೊಲೀಸರು (Uttar Pradesh Police) ವಿಧಿಸಿದ ಗೃಹ ಬಂಧನದಲ್ಲಿದ್ದ (Home Arrest) ಪ್ರಿಯಾಂಕಾ ಗಾಂಧಿ ಅವರು ಕೂಡ ಇಂದಿನ ಕಾಂಗ್ರೆಸ್ ನಿಯೋಗದಲ್ಲಿ ಇದ್ದಿದ್ದು ಅಚ್ಚರಿಯಾಗಿತ್ತು. ಲಖೀಂಪುರ್ ಖೇರಿ ಹಿಂಸಾಚಾರ ಪ್ರಕರಣವನ್ನು ಬಹಳ ಗಂಭೀರವಾಗಿ ಪರಿಗಣಿಸಿರುವ, ಉತ್ತರ ಪ್ರದೇಶ ಕಾಂಗ್ರೆಸ್ ಉಸ್ತುವಾರಿಯೂ (Uttar Pradesh Congress In Charge) ಆಗಿರುವ ಪ್ರಿಯಾಂಕಾ ಗಾಂಧಿ ನಿನ್ನೆ ಕೂಡ ಲಖೀಂಪುರ್ ಖೇರಿಗೆ ತೆರಳಿ‌ ಮೃತಪಟ್ಟ ರೈತರ ಕುಟುಂಬಗಳಿಗೆ ಸಾಂತ್ವನ ಹೇಳಿದ್ದರು. ರಾಷ್ಟ್ರಪತಿ ಭೇಟಿ ಬಳಿಕ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಪ್ರಿಯಾಂಕಾ ಗಾಂಧಿ, 'ಲಖಿಂಪುರ್-ಖೇರಿ ರೈತ ಹತ್ಯಾಕಾಂಡದ ಘಟನೆಯ ಕುರಿತು, ಇಂದು ರಾಹುಲ್ ಗಾಂಧಿ ಮತ್ತು ಹಿರಿಯ ಕಾಂಗ್ರೆಸ್ ನಾಯಕರೊಂದಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರನ್ನು ಭೇಟಿ ಮಾಡಿ ನ್ಯಾಯದ ಪರವಾಗಿ ಧ್ವನಿಯನ್ನು ಎತ್ತಿದ್ದೇವೆ' ಎಂದು ಹೇಳಿದ್ದಾರೆ.

ಘಟನೆಯ ವಿವರ

ಉತ್ತರಪ್ರದೇಶದ ಲಖೀಂಪುರ್​ ಖೇರಿ ಎಂಬಲ್ಲಿ ಅಕ್ಟೋಬರ್​ 03ರಂದು ರೈತರ ಹತ್ಯಾಕಾಂಡ ನಡೆದಿತ್ತು. ಕೇಂದ್ರ ಗೃಹ ಖಾತೆಯ ರಾಜ್ಯ ಸಚಿವ ಅಜಯ್ ಮಿಶ್ರಾ ಅವರ ಪುತ್ರ ಆಶೀಶ್​ ಮಿಶ್ರಾ ತಮ್ಮ ದುಬಾರಿ ಕಾರ್​ ಅನ್ನು ರೈತ ಹೋರಾಟಗಾರರ ಮೇಲೆ ಹರಿಸಿದ್ದರು. ಈ ಘಟನೆಯಲ್ಲಿ ಕನಿಷ್ಟ 4 ಜನ ರೈತರು ಮೃತಪಟ್ಟಿದ್ದರು. ಇದರಿಂದ ದೊಡ್ಡ ಗಲಭೆಯೂ ಉಂಟಾಗಿತ್ತು. ಗಲಭೆಯಲ್ಲಿ ಓರ್ವ ಸ್ಥಳೀಯ ಪತ್ರಕರ್ತ ಸೇರಿದಂತೆ 5 ಜನ ಮೃತಪಟ್ಟಿದ್ದರು. ಒಟ್ಟು 9 ಜನರ ಸಾವಿಗೆ ಕಾರಣವಾಗಿದ್ದ ಲಖೀಂಪುರ್ ಖೇರಿ ಹಿಂಸಾಚಾರಕ್ಕೆ ಕೇಂದ್ರ ಸಚಿವ ಮತ್ತು ಆತನ ಪುತ್ರನೇ ನೇರ ಕಾರಣ ಎನ್ನಲಾಗಿದೆ.

Also read: ತನಗಿಂತ 15 ವರ್ಷ ಚಿಕ್ಕವನನ್ನ ಗೆಳೆಯನನ್ನಾಗಿಸಿಕೊಂಡ ಶ್ರೀಮಂತ ಮಹಿಳೆ - ಈ ಇನಿಯನಿಗೆ ಸಂಬಳ ಎಷ್ಟು ಗೊತ್ತಾ?

ಈ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್​ (Supreme Court) ಸಹ ಮಧ್ಯಪ್ರವೇಶಿಸಿದ್ದು, ಸಚಿವ ಅಜಯ್ ಮಿಶ್ರಾ ಮತ್ತು ಆಶೀಶ್ ಮಿಶ್ರಾ ಸೇರಿದಂತೆ 13 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಆದರೂ ಅವರನ್ನು ಸಚಿವ ಸ್ಥಾನದಿಂದ ಇಳಿಸಲಾಗಿಲ್ಲ‌.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಅನಗತ್ಯವಾಗಿ ಯಾರೂ ಮನೆಯಿಂದ ಹೊರಗೆ ಬಾರದೆ ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕಿದೆ. ಹಾಗೂ ಗುಂಪುಗೂಡುವುದನ್ನು ಆದಷ್ಟು ನಿಯಂತ್ರಿಸಬೇಕಿದೆ. ಸರ್ಕಾರ ಕಾಲಕಾಲಕ್ಕೆ ಹೊರಡಿಸುತ್ತಿರುವ ಕೊರೋನಾ ಮಾರ್ಗಸೂಚಿಗಳನ್ನು ಪ್ರತಿಯೊಬ್ಬರೂ ಕಡ್ಡಾಯವಾಗಿ ಪಾಲಿಸಬೇಕಿದೆ.
Published by:HR Ramesh
First published: