Lakhimpur Kheri Massacre; ಲಖೀಂಪುರ್​ ರೈತ ಹತ್ಯಾಕಾಂಡ; ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿ ಕಾಂಗ್ರೆಸ್​ ಮೌನ ಪ್ರತಿಭಟನೆ

ಕೇಂದ್ರ ಸಚಿವರನ್ನು ವಜಾ ಗೊಳಿಸುವಂತೆ ಮತ್ತು ಈ ಹತ್ಯಾಕಾಂಡ ನಡೆಸಿದ ಎಲ್ಲಾ ಅಪರಾಧಿಗಳನ್ನು ತಕ್ಷಣ ಬಂಧಿಸುವಂತೆ ಆಗ್ರಹಿಸಿ ಕರ್ನಾಟಕ ಕಾಂಗ್ರೆಸ್ ಸೋಮವಾರ ರೇಸ್ ಕೋರ್ಸ್ ರಸ್ತೆಯ ಕಾಂಗ್ರೆಸ್ ಕಚೇರಿಯ ಗಾಂಧಿ ಪ್ರತಿಮೆಯ ಮುಂದೆ ಮೌನ ಪ್ರತಿಭಟನೆ ನಡೆಸುತ್ತಿದೆ.

ಕಾಂಗ್ರೆಸ್​ ನಾಯಕರಿಂದ ಮೌನ ಪ್ರತಿಭಟನೆ.

ಕಾಂಗ್ರೆಸ್​ ನಾಯಕರಿಂದ ಮೌನ ಪ್ರತಿಭಟನೆ.

 • Share this:
  ಬೆಂಗಳೂರು (ಅಕ್ಟೋಬರ್​​ 11); ಕಳೆದ ಭಾನುವಾರ ಅಕ್ಟೋಬರ್​ 03 ರಂದು ಲಖೀಂಪುರ್​ ಖೇರಿಯಲ್ಲಿ (Lakhimpur Kheri Violence) ಕೇಂದ್ರ ಸಚಿವ ಅಜಯ್ ಮಿಶ್ರಾ (Ajay Mishra) ಮಗ ಆಶೀಶ್ ಮಿಶ್ರಾ (Ashish Mishra) ರೈತ ಹೋರಾಟಗಾರರ ಮೇಲೆ ಕಾರು ಹರಿಸಿದ್ದರು. ಇದರಲ್ಲಿ 4 ಜನ ರೈತರು ಸ್ಥಳದಲ್ಲೇ ಮೃತಪಟ್ಟಿದ್ದರೆ, ನಂತರ ನಡೆದ ಹಿಂಸಾಚಾರದಲ್ಲಿ 5 ಜನ ಮೃತಪಟ್ಟಿದ್ದರು. ಘಟನೆ ನಡೆದ ನಂತರ ನಾಪತ್ತೆಯಾಗಿದ್ದ ಆಶೀಶ್​ ಮಿಶ್ರಾ ನಿನ್ನೆ ಉತ್ತರಪ್ರದೇಶ (Uttara Pradesh) ಪೊಲೀಸರ ಎದುರು ಶರಣಾಗಿದ್ದಾರೆ. ಆದರೆ, ಅವರ ವಿರುದ್ಧ ಈವರೆಗೆ ಪೊಲೀಸರು ಯಾವುದೇ ಕಠಿಣ ಕ್ರಮ ತೆಗೆದುಕೊಂಡಿಲ್ಲ. ಅಲ್ಲದೆ, ಪ್ರಕರಣದ ಮತ್ತೋರ್ವ ಪ್ರಮುಖ ಆರೋಪಿಯಾದ ಕೇಂದ್ರ ಸಚಿವ ಅಜಯ್ ಮಿಶ್ರಾ ಅವರಿಂದಲೂ ಈವರೆಗೆ ಕನಿಷ್ಠ ರಾಜೀನಾಮೆ ಸಹ ಪಡೆದಿಲ್ಲ. ಹೀಗಾಗಿ "ಕೇಂದ್ರ ಸಚಿವ ಅಜಯ್ ಮಿಶ್ರಾ ಮತ್ತು ಅವರ ಮಗ ಆಶೀಶ್ ಮಿಶ್ರಾ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು, ಸಚಿವರ ರಾಜೀನಾಮೆ ಪಡೆಯಬೇಕು" ಎಂದು ಒತ್ತಾಯಿಸಿ ಕರ್ನಾಟಕ ಕಾಂಗ್ರೆಸ್ ಸೋಮವಾರ ಮೌನ ವ್ರತ ಸತ್ಯಾಗ್ರಹ ನಡೆಸುತ್ತಿದೆ.  ಲಖೀಂಪುರ್​ ರೈತ ಹತ್ಯಾಕಾಂಡವನ್ನು ಖಂಡಿಸಿರುವ ಕಾಂಗ್ರೆಸ್ ದೇಶದಾದ್ಯಂತ ಹೋರಾಟ ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸಚಿವರನ್ನು ವಜಾ ಗೊಳಿಸುವಂತೆ ಮತ್ತು ಈ ಹತ್ಯಾಕಾಂಡ ನಡೆಸಿದ ಎಲ್ಲಾ ಅಪರಾಧಿಗಳನ್ನು ತಕ್ಷಣ ಬಂಧಿಸುವಂತೆ ಆಗ್ರಹಿಸಿ ಕರ್ನಾಟಕ ಕಾಂಗ್ರೆಸ್ ಸೋಮವಾರ ರೇಸ್ ಕೋರ್ಸ್ ರಸ್ತೆಯ ಕಾಂಗ್ರೆಸ್ ಕಚೇರಿಯ ಗಾಂಧಿ ಪ್ರತಿಮೆಯ ಮುಂದೆ ಮೌನ ಪ್ರತಿಭಟನೆ ನಡೆಸುತ್ತಿದೆ.

  ಹತ್ಯಾಕಾಂಡದ ಪ್ರಮುಖ ಆರೋಪಿ ಆಶಿಶ್ ಮಿಶ್ರಾ ನ್ಯಾಯಾಂಗ ಬಂಧನದಲ್ಲಿದ್ದು, ಈವರೆಗೂ ಕೃತ್ಯ ಎಸಗಿದ ಆತನ ವಿರುದ್ಧ ಯಾವುದೇ ಕಠಿಣ ಕ್ರಮ ಕೈಗೊಂಡಿಲ್ಲ. ಜೊತೆಗೆ ಕೇಂದ್ರ ಸಚಿವ ಅಜಯ್ ಮಿಶ್ರಾ ಅವರ ರಾಜೀನಾಮೆ ಪಡೆದಿಲ್ಲ. ಕೇಂದ್ರ ಸಚಿವರನ್ನು ವಜಾ ಗೊಳಿಸುವಂತೆ ಮತ್ತು ಈ ಹತ್ಯಾಕಾಂಡ ನಡೆಸಿದ ಎಲ್ಲಾ ಅಪರಾಧಿಗಳನ್ನು ತಕ್ಷಣ ಬಂಧಿಸುವಂತೆ ಕಾಂಗ್ರೆಸ್ ಆಗ್ರಹಿಸಿದೆ.  ಅಕ್ಟೋಬರ್ 11 ರಂದು‌ ರೇಸ್ ಕೋರ್ಸ್ ರಸ್ತೆಯ ಕಾಂಗ್ರೆಸ್ ಕಚೇರಿಯ ಗಾಂಧಿ ಪ್ರತಿಮೆಯ ಮುಂದೆ ಬೆಳಿಗ್ಗೆ 11 ಗಂಟೆಯಿಂದ ‘ಮೌನ ವ್ರತ’ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ. ಈ ‘ಮೌನ ವ್ರತ’ ಸತ್ಯಾಗ್ರಹದಲ್ಲಿ ಪಕ್ಷದ ಎಲ್ಲಾ ನಾಯಕರು, ಶಾಸಕರು, ಮಾಜಿ ಸಚಿವರು, ಪದಾಧಿಕಾರಿಗಳು, ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ಮೂಲಕ, ಕೇಂದ್ರ ಹಾಗೂ ಉತ್ತರ ಪ್ರದೇಶ ಬಿಜೆಪಿ ಸರ್ಕಾರ ರೈತರ ಹತ್ಯಾಕಾಂಡ ನಡೆಸಿದವರ ರಕ್ಷಣೆಗೆ ನಿಂತಿರುವುದನ್ನು ಖಂಡಿಸಬೇಕೆಂದು ಕೋರುತ್ತೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಮನವಿ ಮಾಡಿದ್ದಾರೆ.
  Published by:MAshok Kumar
  First published: