ಬೆಳಗಾವಿ ಪರಿಷತ್ ಫೈಟ್: ಬಿಜೆಪಿ, ಕಾಂಗ್ರೆಸ್ ಅಭ್ಯರ್ಥಿಗಳಿಗೆ Lakhan Jarkiholi ಟಕ್ಕರ್

ಮೂರು ಜನ ಜಾರಕಿಹೊಳಿ ಸಹೋದರರು ಶಾಸಕರಾಗಿ ಕೆಲಸ ಮಾಡುತ್ತಿದ್ದು, ನಾಲ್ಕನೇ ಸಹೋದರ ಪರಿಷತ್ ಕಣಕ್ಕೆ ಇಳಿಸಲು ಭರ್ಜರಿ ತಯಾರಿ ನಡೆದಿದೆ. ಲಖನ್ ಜಾರಕಿಹೊಳಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯೋದು ಫಿಕ್ಸ್ ಆಗಿದ್ದು,  ನವೆಂಬರ್ 23ರಂದು ಸಂಕಷ್ಟ ಚತುರ್ಥಿಯಂದು ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ.

ಲ;ಖನ್ ಜಾರಕಿಹೊಳಿ

ಲ;ಖನ್ ಜಾರಕಿಹೊಳಿ

  • Share this:
ಬೆಳಗಾವಿ: ಡಿಸೆಂಬರ್ 10ಕ್ಕೆ  ಬೆಳಗಾವಿ ಸ್ಥಳೀಯ ಸಂಸ್ಥೆಯಿಂದ ಪರಿಷತ್ (Council Election) ಎರಡು ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಇದು ಬೆಳಗಾವಿ (Belagavi Politcs) ಜಿಲ್ಲೆಯಲ್ಲಿ ಜಿದ್ದಾಜಿದ್ದಿನ ಹೋರಾಟಕ್ಕೆ ಸಾಕ್ಷಿಯಾಗಲಿದೆ. ಕಾಂಗ್ರೆಸ್, ಬಿಜೆಪಿ (Congress And BJP) ಪಕ್ಷ ಇನ್ನೂ ತಮ್ಮ ಅಧಿಕೃತ ಅಭ್ಯರ್ಥಿಯನ್ನು ಘೋಷಣೆ ಮಾಡಿಲ್ಲ. ಆದರೆ ಕಾಂಗ್ರೆಸ್ ನಿಂದ ಚನ್ನರಾಜ್ ಹಟ್ಟಿಹೊಳಿ (Channaraj hattiholi) ಹಾಗೂ ಬಿಜೆಪಿಯಿಂದ ಮಹಾಂತೇಶ ಕವಟಗಿಮಠ (Mahantesh Kavatagimath) ಕಣಕ್ಕೆ ಇಳಿಯೋದು ಬಹುತೇಕ ಖಚಿತವಾಗಿದೆ. ಇಬ್ಬರಿಗೆ ಪಕ್ಷೇತರ ಅಭ್ಯರ್ಥಿಯಾಗಿ ಲಖನ್ ಜಾರಕಿಹೊಳಿ (Lakhan Jarkiholi) ಕಣಕ್ಕೆ ಇಳಿಯುತ್ತಿರೋದು ದೊಡ್ಡ ತಲೆನೋವು ಆಗಿದೆ.

ಫಲಿತಾಂಶದ ಮೇಲೆ ಪರಿಣಾಮ ಬೀರಲಿದ್ದು, ಇಬ್ಬರು ಆಕಾಂಕ್ಷಿಗಳನ್ನು ಗೊಂದಲ ಸೃಷ್ಟಿಯಾಗಿದೆ. ಮೂರು ಜನ ಜಾರಕಿಹೊಳಿ ಸಹೋದರರು (Jarkiholi Brothers) ಈಗಾಗಲೇ ವಿಧಾನಸಭೆ ಸದಸ್ಯರಾಗಿ ಅನೇಕ ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಈಗ ಮತ್ತೊಬ್ಬ ಸಹೋದರ ಪರಿಷತ್ ಮೂಲಕ ರಾಜಕೀಯ ಪ್ರವೇಶಕ್ಕೆ ತಾಲೀಮು ‌ಆರಂಭಿಸಿದ್ದಾರೆ. ಈ ಚುನಾವಣೆ ‌ಜಾರಕಿಹೊಳಿ ಸಹೋದರರು ಹಾಗೂ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ (MLA Laxmi Hebbalkar)ನಡುವಿನ ಮತ್ತೊಂದು ಹೋರಾಟಕ್ಕೆ ಸಾಕ್ಷಿ‌ ಆಗಲಿದೆ.

ಪಿ ಎಲ್ ಡಿ ಬ್ಯಾಂಕ್ ಬಳಿಕ ಬೆಳಗಾವಿ ಪರಿಷತ್ ಎರಡು ಸ್ಥಾನಗಳ ಚುನಾವಣೆ ಜಿದ್ದಾಜಿದ್ದಿನ ಹೋರಾಟಕ್ಕೆ ವೇದಿಕೆ ಆಗಲಿದೆ. ಜಾರಕಿಹೊಳಿ ಹಾಗೂ ಹೆಬ್ಬಾಳ್ಕರ್ ನಡುವೆ ಹೋರಾಟ ನಡೆಯಲಿದೆ. ಕುಟುಂಬ ರಾಜಕೀಯ ವಿಸ್ತರಣೆಗೆ ಪರಿಷತ್ ಚುನಾವಣೆ ವೇದಿಕೆಯಾಗಿದೆ.

ಲಖನ್ ಬೆನ್ನಿಗೆ ನಿಂತ ಸೋದರರು

ಮೂರು ಜನ ಜಾರಕಿಹೊಳಿ ಸಹೋದರರು ಶಾಸಕರಾಗಿ ಕೆಲಸ ಮಾಡುತ್ತಿದ್ದು, ನಾಲ್ಕನೇ ಸಹೋದರ ಪರಿಷತ್ ಕಣಕ್ಕೆ ಇಳಿಸಲು ಭರ್ಜರಿ ತಯಾರಿ ನಡೆದಿದೆ. ಲಖನ್ ಜಾರಕಿಹೊಳಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯೋದು ಫಿಕ್ಸ್ ಆಗಿದ್ದು,  ನವೆಂಬರ್ 23ರಂದು ಸಂಕಷ್ಟ ಚತುರ್ಥಿಯಂದು ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ.

ಜಾರಕಿಹೊಳಿ ಬ್ರದರ್ಸ್ ರಾಜಕೀಯ ರಣತಂತ್ರ

ಈಗಾಗಲೇ ಒಂದು ಸುತ್ತು ಪ್ರಚಾರ ನಡೆಸಿರೋ ಲಖನ್ ಜಾರಕಿಹೊಳಿ ಬೆನ್ನಿಗೆ ರಮೇಶ್, ಬಾಲಚಂದ್ರ ಜಾರಕಿಹೊಳಿ ನಿಂತಿದ್ದಾರೆ. ಲಖನ್ ಗೆಲ್ಲಿಸಲು ಎಲ್ಲಾ ರೀತಿಯ ರಾಜಕೀಯ ರಣತಂತ್ರ ಹೆಣೆದ ಸಹೋದರರು. ಗೋಕಾಕ್, ಮೂಡಲಗಿ, ಯಮಕನಮರಡಿ, ಸವದತ್ತಿ, ಬೆಳಗಾವಿ ಗ್ರಾಮೀಣ ಮತ ಕ್ಷೇತ್ರದಲ್ಲಿ ಹೆಚ್ಚಿನ ಮತ ಪಡೆಯಲು ಪ್ಲ್ಯಾನ್ ಮಾಡಿದ್ದಾರೆ.

ಇದನ್ನೂ ಓದಿ:  Ramesh Jarkiholi: ಸಿಎಂ ಮನೆಗೆ ರಮೇಶ್ ಜಾರಕಿಹೊಳಿ: ಸಾಹುಕಾರನ ಮನವಿಗೆ ಸ್ಪಂದಿಸ್ತಾರಾ ಮುಖ್ಯಮಂತ್ರಿಗಳು?

ಚನ್ನರಾಜ್ ಹಟ್ಟಿಹೊಳಿಗೆ ಟಿಕೆಟ್ ಬಹುತೇಕ ಫಿಕ್ಸ್

ಕಾಂಗ್ರೆಸ್ ನಿಂದ ಚನ್ನರಾಜ್ ಹಟ್ಟಿಹೊಳಿ ಬಹುತೇಕ ಫಿಕ್ಸ್ ಆಗಿದೆ. ಕಾಂಗ್ರೆಸ್ ಹೈಕಮಾಂಡ್ ಮಟ್ಟದಲ್ಲಿ ಹೆಬ್ಬಾಳ್ಕರ್ ಪ್ರಭಾವ ಬಳಿಸಿ ಸಹೋದರನಿಗೆ ಟಿಕೆಟ್ ಕೊಡಿಸುವಲ್ಲಿ ಯಶಸ್ವಿ ಆಗಿದ್ದಾರೆ. ಲೋಕಸಭಾ ಉಪಚುವಾವಣೆ, ಡಿಸಿಸಿ ಬ್ಯಾಂಕ್ ಸಂದರ್ಭದಲ್ಲಿ ಚನ್ನರಾಜ್ ಹೆಸರು ಪ್ರಸ್ತಾಪ ಆಗಿತ್ತು. ಕೊನೆಗೂ ಪರಿಷತ್ ಚುನಾವಣೆಯಲ್ಲಿ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಬಿಜೆಪಿಯಿಂದ ಮಹಾಂತೇಶ ಕವಟಗಿಮಠಗೆ ಟಿಕೆಟ್ ಬಹುತೇಕ ಖಚಿತವಾಗಿದ್ದು, ಇನ್ನೂ ಅಧಿಕೃತ ಘೋಷಣೆ ಆಗಿಲ್ಲ. ಕಳೆದ ಎರಡು ಸಲ ವಿಧಾನ ಪರಿಷತ್ ಗೆ ಆಯ್ಕೆ ಆಗಿರೋ ಕವಟಗಿಮಠಗೆ ಅನುಭವ ಇದೆ. ಜಾರಕಿಹೊಳಿ, ಹೆಬ್ಬಾಳ್ಕರ್ ಫೈಟ್ ನಡುವೆ ಹೋರಾಟ ನಡೆಸಲು ಕವಟಗಿಮಠ ಸಿದ್ದತೆ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಇದೆ.

ಇದನ್ನೂ ಓದಿ: Bhavani Revanna: ನನ್ನ ಹೆಸರು ಪಸ್ತಾಪ ಆಗಿಲ್ಲ, ಶೇ.70ರಷ್ಟು ನಮ್ಮ ತಾಯಿಗೆ ಟಿಕೆಟ್: ಸೂರಜ್ ರೇವಣ್ಣ ಹೇಳಿಕೆ

ಸೋದರನಿಗೆ ಟಿಕೆಟ್ ನೀಡುವಂತೆ ಸಿಎಂ ಬಳಿ ರಮೇಶ್ ಜಾರಕಿಹೊಳಿ ಮನವಿ?

ಬೆಳಗಾವಿ (Belagavi) ಸಾಹುಕಾರ ರಮೇಶ್ ಜಾರಕಿಹೊಳಿ (Ramesh Jarkiholi) ಸಂಪುಟದಲ್ಲಿ ಮರಳಿ ಸ್ಥಾನ ಪಡೆಯಲು ಪ್ರಯತ್ನಿಸುತ್ತಿದ್ದಾರೆ. ಹೈಕಮಾಂಡ್  (BJP Highcommond) ಮೂಲಕ ಒತ್ತಡ ತರುವ ಪ್ರಯತ್ನವನ್ನು ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ನಾಲ್ಕು ದಿನಗಳ ಹಿಂದೆ ಬೆಂಗಳೂರಿನ ಆರ್.ಟಿ,ನಗರದ ಸಿಎಂ ನಿವಾಸಕ್ಕೆ ಆಗಮಿಸಿದ ರಮೇಶ್ ಜಾರಕಿಹೊಳಿ ಹೊಸ ಮನವಿಯೊಂದನ್ನು ಮುಂದಿಟ್ಟಿದ್ದಾರೆ ಎಂದು ತಿಳಿದು ಬಂದಿತ್ತು.

ನಾನು ಮಂತ್ರಿ ಸ್ಥಾನದಿಂದ ವಂಚಿತನಾಗಿದ್ದೇನೆ. ಹಾಗಾಗಿ ಸಹೋದರ ಲಖನ್ ಜಾರಕಿಹೊಳಿಗೆ ಆದರೂ ಈ ಅವಕಾಶ ಕೊಡಿ ಎಂದು ಸಿಎಂ ಬೊಮ್ಮಾಯಿ ಮನವಿ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಇತ್ತ ಸಿಎಂ ನೋಡೋಣ ಎಂದು ಹೇಳಿದ್ದಾರೆ ಎಂಬ ಅಶ್ವಾಸನೆ ನೀಡಿ ಕಳುಹಿಸಿದ್ದಾರೆ ಎನ್ನಲಾಗಿದೆ.
Published by:Mahmadrafik K
First published: