HOME » NEWS » State » LAKHAN JARAKIHOLI SLAMS HIS BROTHER RAMEHS JARKIHOLI SESR

ರಮೇಶ ಜಾರಕಿಹೊಳಿಗೆ ನೀರಾವರಿ ಖಾತೆ ಕೊಟ್ಟರೆ ಬಿಜೆಪಿಯನ್ನೇ ಮುಳುಗಿಸುತ್ತಾರೆ: ಲಖನ್​​

ಉಪಚುನಾವಣೆಗೆ ಮುನ್ನವೇ ನಾವು ರಮೇಶ್​ ಜಾರಕಿಹೊಳಿಗೆ ಯಾವುದೇ ಸಚಿವ ಸ್ಥಾನವು ಸಿಗುವುದಿಲ್ಲ. ಅವರು ಡಿಸಿಎಂ ಕೂಡ ಆಗುವುದಿಲ್ಲ ಎಂದು ಹೇಳಿದ್ದೇವು. ಅವರಿಗೆ ಸ್ಥಾನ ಸಿಗದಿರುವುದರ ಹಿಂದೆ ಮುಖ್ಯಮಂತ್ರಿ, ಬಿಜೆಪಿ ಮುಖಂಡರ ಯಾವುದೇ ತಪ್ಪು ಕೂಡ ಇಲ್ಲ

news18-kannada
Updated:January 30, 2020, 5:01 PM IST
ರಮೇಶ ಜಾರಕಿಹೊಳಿಗೆ ನೀರಾವರಿ ಖಾತೆ ಕೊಟ್ಟರೆ ಬಿಜೆಪಿಯನ್ನೇ ಮುಳುಗಿಸುತ್ತಾರೆ: ಲಖನ್​​
ಲಖನ್ ಜಾರಕಿಹೊಳಿ- ರಮೇಶ್ ಜಾರಕಿಹೊಳಿ
  • Share this:
ಬೆಳಗಾವಿ(ಜ. 30): ಬಿಜೆಪಿ ಸರ್ಕಾರ ರಚಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ ರಮೇಶ್​ ಜಾರಕಿಹೊಳಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಲಾಗುತ್ತದೆ ಎಂಬ ಮಾತುಗಳು ಕೇಳಿ ಬಂದಿದ್ದವು. ಇದೇ ಕಾರಣಕ್ಕೆ ಶ್ರೀರಾಮುಲು ಹಾಗೂ ರಮೇಶ್​ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿತ್ತು. ಆದರೆ, ಯಾವುದೇ ಡಿಸಿಎಂ ಹುದ್ದೆ ಸೃಷ್ಟಿಇಲ್ಲ ಎನ್ನುವ ಮೂಲಕ ಸಿಎಂ ಕಾಂಗ್ರೆಸ್​ ನಾಯಕ ಲಖನ್​ ಜಾರಕಿಹೊಳಿ, ರಮೇಶ್​ಗೆ ಯಾವುದೇ ಡಿಸಿಎಂ ಸ್ಥಾನದ ಭರವಸೆ ಕೊಟ್ಟಿರಲಿಲ್ಲ ಎಂಬ ಹೊಸ ಬಾಂಬ್ ಸಿಡಿಸಿದ್ದಾರೆ. 

ನಗರದಲ್ಲಿ ಮಾತನಾಡಿದ ಅವರು, ಉಪಚುನಾವಣೆಗೆ ಮುನ್ನವೇ ನಾವು ರಮೇಶ್​ ಜಾರಕಿಹೊಳಿಗೆ ಯಾವುದೇ ಸಚಿವ ಸ್ಥಾನವು ಸಿಗುವುದಿಲ್ಲ. ಅವರು ಡಿಸಿಎಂ ಕೂಡ ಆಗುವುದಿಲ್ಲ ಎಂದು ಹೇಳಿದ್ದೆವು. ಅವರಿಗೆ ಸ್ಥಾನ ಸಿಗದಿರುವುದರ ಹಿಂದೆ ಮುಖ್ಯಮಂತ್ರಿ, ಬಿಜೆಪಿ ಮುಖಂಡರ ಯಾವುದೇ ತಪ್ಪು ಕೂಡ ಇಲ್ಲ ಎಂದೂ ಸ್ಪಷಟಪಡಿಸಿದ್ದಾರೆ.

ರಮೇಶ್​ ಜಾರಕಿಹೊಳಿ ಒಂದು ವೇಳೆ ನೀರಾವರಿ ಸಚಿವರಾದರೆ ಬಿಜೆಪಿಯನ್ನು ಮುಳುಗಿಸುತ್ತಾರೆ. ಅವರಿಗೆ ಸಣ್ಣ ಕೈಗಾರಿಕೆ ಅಥವಾ ಪೌರಾಡಳಿತ ಖಾತೆ ಕೊಟ್ಟರೆ ಮಾತ್ರ ಬಿಜೆಪಿ ಸರ್ಕಾರ ಸುರಕ್ಷಿತವಾಗಲಿದೆ.

ಇದನ್ನು ಓದಿ: ಸಚಿವ ಸ್ಥಾನ ಸಿಗದಿದ್ದರೆ ಶಾಸಕನಾಗಿ ಕೆಲಸ: ಮಹೇಶ್​ ಕುಮಟಳ್ಳಿ ಅಚ್ಚರಿ ಹೇಳಿಕೆ

ಇನ್ನು ಚುನಾವಣೆಯಲ್ಲಿ ತಮ್ಮ ಸೋಲಿನ ಕುರಿತು ಮಾತನಾಡಿದ ಅವರು, ಜನರ ಮುಂದೆ ಸುಳ್ಳು ಹೇಳಿ ಚುನಾವಣೆ ಗೆದ್ದಿದ್ದಾರೆ. ಅಂಬಿರಾವ್ ಪ್ರಚಾರಕ್ಕೆ ಬಂದಿದ್ದರೆ ನಾನು ಗೆಲ್ಲುತ್ತಿದ್ದೆ. ಈಗ ಅಲ್ಲಿ ಇಲ್ಲಿ ಪೂಜೆ ಅಂತ ಓಡಾಡುತ್ತಿದ್ದಾನೆ. ಕಮಿಷನ್​ಗಾಗಿ ಅಂಬಿರಾವ್ ಪಾಟೀಲ್ ಓಡಾಡುತ್ತಿದ್ದಾರೆ. ಕ್ಷೇತ್ರದಲ್ಲಿ ಅಳಿಯ, ಮಾವನ ದರ್ಬಾರ್​ ಜೋರಾಗಿದೆ ಎಂದು ವಾಗ್ದಾಳಿ ನಡೆಸಿದರು.

ಇನ್ನು ಚುನಾವಣೆ ಸಂದರ್ಭದಲ್ಲಿ ಲಖನ್​ ವಿರುದ್ಧ ಹರಿಹಾಯ್ದಿದ್ದ ರಮೇಶ್​ ಜಾರಕಿಹೊಳಿ, ಆತ ನನ್ನ ತಮ್ಮನೇ ಅಲ್ಲ. ಆತ ಜೊತೆಯಲ್ಲಿಯೇ ಇದ್ದು, ನನ್ನ ಬೆನ್ನಿಗೆ ಚೂರಿ ಹಾಕಿದ ಎಂದು ಟೀಕಿಸಿದ್ದರು.
Youtube Video
First published: January 30, 2020, 4:26 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories