HOME » NEWS » State » LAKH OF STUDIOS ARE CLOSED DUE TO CORONA LOCK DOWN LG

ಸಂಕಷ್ಟದಲ್ಲಿ ಸ್ಟುಡಿಯೋ ಮಾಲೀಕರು ಮತ್ತು ನೌಕರರು; ಕೊರೋನಾದಿಂದ ಮುಚ್ಚಿದ 1 ಲಕ್ಷಕ್ಕೂ ಹೆಚ್ಚು ಸ್ಟುಡಿಯೋಗಳು

ನೂಸ್ 18 ಕನ್ನಡದ ಜೊತೆ ಮಾತನಾಡಿದ ದೇವನಹಳ್ಳಿ ಸ್ಟುಡಿಯೋ ಮತ್ತು ಫೋಟೋಗ್ರಾಫರ್ಸ್ ಅಸೋಸೊಯೇಷನ್ ಸಂಘದ ಪದಾಧಿಕಾರಿಗಳು, ಒಂದು ಲಕ್ಷಕ್ಕೂ ಹೆಚ್ಚು ಸ್ಟುಡಿಯೋಗಳು, ಅದನ್ನೇ ನಂಬಿದ್ದ ಸುಮಾರು 10 ಲಕ್ಷಕ್ಕೂ ಹೆಚ್ಚು ನೌಕರರು, ಮಾಲೀಕರ ಜೀವನ ಅಸ್ತವ್ಯಸ್ತವಾಗಿದೆ.

news18-kannada
Updated:August 28, 2020, 11:00 AM IST
ಸಂಕಷ್ಟದಲ್ಲಿ ಸ್ಟುಡಿಯೋ ಮಾಲೀಕರು ಮತ್ತು ನೌಕರರು; ಕೊರೋನಾದಿಂದ ಮುಚ್ಚಿದ 1 ಲಕ್ಷಕ್ಕೂ ಹೆಚ್ಚು ಸ್ಟುಡಿಯೋಗಳು
ದೇವನಹಳ್ಳಿ ಸ್ಟುಡಿಯೋ ಮತ್ತು ಫೋಟೋಗ್ರಾಫರ್ಸ್ ಅಸೋಸೊಯೇಷನ್ ಸಂಘದ ಪದಾಧಿಕಾರಿಗಳು
  • Share this:
ದೇವನಹಳ್ಳಿ(ಆ.28): ಕೊರೋನಾ ಬಂದಾಗಿನಿಂದ ಜನರಿಗೆ ಒಂದಿಲ್ಲೊಂದು ಸಂಕಷ್ಟ ತಪ್ಪಿಲ್ಲ. ಬಡವರು, ಸಣ್ಣ ಪುಟ್ಟ ವ್ಯಾಪಾರಿಗಳು, ರೈತರು, ಕೂಲಿ ಕಾರ್ಮಿಕರು ಸೇರಿದಂತೆ ಸಾಕಷ್ಟು ಜನರಗೆ ಜೀವನ ನರಕಯಾತನೆ ಅನುಭವಿಸಿದ್ದಾರೆ. ಅದರ ಸಾಲಿಗೆ ಬಡವನೂ ತಪ್ಪಿಲ್ಲ, ಬಲ್ಲಿಗನೂ ಕಾಣ್ತಿಲ್ಲ. ಕೊರೋನಾ ಕರಿನೆರಳಿಗೆ ಬಲಿಯಾದ ಅದೆಷ್ಟೋ ಉದ್ಯಮಗಳಲ್ಲಿ ಫೋಟೋಗ್ರಾಫರ್ಸ್ ಮತು ಸ್ಟುಡಿಯೋ ಮಾಲೀಕರು ಹೊರತಾಗಿಲ್ಲ. ಒಂದು ಸ್ಟುಡಿಯೋ ನಡೆಸಲು ಕನಿಷ್ಠ 10 ಸಾವಿರದಿಂದ 1 ಲಕ್ಷ ಬಂಡವಾಳದ ಅವಶ್ಯಕತೆ ಇದೆ. ಕೊರೋನಾ ಮೊದಲು ಡಿಜಿಟಲೀಕರಣದ ಹೊಡೆತಕ್ಕೆ ಸಿಲುಕಿ ನಲುಗಿದ್ದ ಸ್ಟುಡಿಯೋ ಉದ್ಯಮಕ್ಕೆ ತೀರ ಸಂಕಷ್ಟಕ್ಕೆ ದೂಡಿದ್ದು ಕೊರೋನಾ.

ಅನ್​​ಲಾಕ್ ಆದ‌ ನಂತರದಲ್ಲೂ ಸ್ಟುಡಿಯೋಗಳತ್ತ ಬಾರದ ಸಾರ್ವಜನಿಕರು ಮತ್ತು ಸಭೆ, ಸಮಾರಂಭಗಳು. ಕೊರೋನಾ ಮೊದಲು ಮದುವೆ, ಸಭೆ, ಸಮಾರಂಭ, ಶುಭ ಸಂದರ್ಭಗಳಿಗೆ ಫೋಟೋ, ವಿಡಿಯೋ ತೆಗಿಸಲಾಗ್ತಿತ್ತು. ಆದರೆ ಕೊರೋನಾ ನಂತರದಲ್ಲಿ ಸಭೆ, ಸಮಾರಂಭಗಳಿಲ್ಲದೆ ಸೊರಗಿ ಹೋಗಿದೆ. ಇದನ್ನೆ ನಂಬಿದ್ದ ಸುಮಾರು 1 ಲಕ್ಷಕ್ಕೂ ಹೆಚ್ಚಿನ ಸ್ಟುಡಿಯೋಗಳಲ್ಲಿ ಬಹುತೇಕ ಸ್ಟುಡಿಯೋಗಳು ಮುಚ್ಚಲಾಗಿದೆ. ಹಲವರು ಸಾಲ-ಸೋಲ ಮಾಡಿ ಬಂಡವಾಳ ಹಾಕಿದ್ದ 3 ಡಿ, 4 ಡಿ, 5 ಡಿ ಕ್ಯಾಮೆರಾಗಳು, ಡ್ರೋನ್ ಸೇರಿ ದಿನದಿಂದ ದಿನಕ್ಕೆ ಬದಲಾಗುವ ಕಾಲಘಟ್ಟದ ಸ್ಟುಡಿಯೋ ಉಪಕರಣಗಳ ಮೇಲೆ ಹಾಕಿರುವ ಬಂಡವಾಳದ ಸಾಲ ತೀರಿಸಲಾಗದೆ ತೀರಾ ಸಂಕಷ್ಟಕ್ಕೆ ಸಿಲುಕಿದ್ದಾರೆ. 

ಅಕ್ರಮ ಗಣಿಗಾರಿಕೆಗೆ ಕಡಿವಾಣ ಹಾಕಲು ಬೇಬಿ ಬೆಟ್ಟಕ್ಕೆ ಇಸ್ರೋ ಕಣ್ಗಾವಲು

ನೂಸ್ 18 ಕನ್ನಡದ ಜೊತೆ ಮಾತನಾಡಿದ ದೇವನಹಳ್ಳಿ ಸ್ಟುಡಿಯೋ ಮತ್ತು ಫೋಟೋಗ್ರಾಫರ್ಸ್ ಅಸೋಸೊಯೇಷನ್ ಸಂಘದ ಪದಾಧಿಕಾರಿಗಳು, ಒಂದು ಲಕ್ಷಕ್ಕೂ ಹೆಚ್ಚು ಸ್ಟುಡಿಯೋಗಳು, ಅದನ್ನೇ ನಂಬಿದ್ದ ಸುಮಾರು 10 ಲಕ್ಷಕ್ಕೂ ಹೆಚ್ಚು ನೌಕರರು, ಮಾಲೀಕರ ಜೀವನ ಅಸ್ತವ್ಯಸ್ತವಾಗಿದೆ. ಬಹುತೇಕರು ಕೆಲಸ ಸಿಗದೆ ಸ್ಟುಡಿಯೋಗಳನ್ನ ಮುಚ್ಚಿದ್ದಾರೆ. ಅದನ್ನೆ ನಂಬಿದ್ದ ಅದೆಷ್ಟೋ ಕೆಲಸಗಾರರಿಗೆ ಕತ್ತರಿ ಹಾಕಲಾಗಿದ್ದು ಸಂಬಳ ನೀಡಲಾಗದೆ ಕಂಗಾಲಾಗಿ ಕೈ ಚಲ್ಲಿ ಕೂತಿದ್ದಾವೆ ಎಂದ ಅಳಲು ತೋಡಿಕೊಂಡಿದ್ದಾರೆ.

ಸಾಲ ಮಾಡಿ ಖರೀದಿ ಮಾಡಿದ್ದ ಕ್ಯಾಮೆರಾಗಳು, ಇತರೆ ದಾಸ್ತಾನುಗಳು ಅರ್ಧಕ್ಕೂ ಕಮ್ಮಿ ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ಸಾಕಷ್ಟು ವಸ್ತುಗಳು ಖರೀದಿಗೂ ಯಾರೂ ಮುಂದಾಗದೆ ಸಾಲ ಕಟ್ಟಲಾಗದೆ ಮನೆಗಳನ್ನೇ ಖಾಲಿ ಮಾಡಿ ಹೋಗಿದ್ದಾರೆ. ಕೊರೋನಾ ಹೊಡೆತಕ್ಕೆ ಕಂಗಾಲಾಗಿರುವ ಸ್ಟುಡಿಯೊ ಉದ್ಯಮ ಮತ್ತು ಅದನ್ನೆ ನಂಬಿ ಬದುಕು ಕಟ್ಟಿಕೊಂಡಿದ್ದ ಲಕ್ಷಾಂತರ ಜನರ ಜೀವನ ಬೀದಿ ಪಾಲಾಗಿದೆ. ಕ್ಯಾಬ್, ಆಟೋ, ರೈತರು, ಕೂಲಿ ಕಾರ್ಮಿಕರ ಬಗ್ಗೆ ಕಾಳಜಿ ತೋರುವ ಸರ್ಕಾರ ಸ್ಟುಡಿಯೋ ಉದ್ಯಮದ ಬಗ್ಗೆ ಗಮನ ಹರಿಸಬೇಕೆಂದು ಮಂಜುನಾಥ್ ಮತ್ತು ಶಿವಕುಮಾರ್ ಅಳಲು ತೋಡಿಕೊಂಡಿದ್ದಾರೆ.
Published by: Latha CG
First published: August 28, 2020, 11:00 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories