ಫಲವತ್ತಾದ ಕೆರೆಗಳ ಮಣ್ಣು ಖಾಸಗಿ ಬಡಾವಣೆಗಳ ಪಾಲು; ಅಧಿಕಾರಿಗಳ ಜಾಣ ಕುರುಡಿಗೆ ಜನರ ಆಕ್ರೋಶ

ಒತ್ತುವರಿಯಾಗಿರುವ ಕೆರೆಗಳ ಪಟ್ಟಿ ಸಿದ್ದಪಡಿಸಿ, ಹಂತ ಹಂತವಾಗಿ ತೆರವುಗೊಳಿಸಿ, ತಂತಿ ಬೇಲಿ ಹಾಕುವ ಬಗ್ಗೆಯೂ ಸೂಚನೆ ನೀಡಲಾಗಿದೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಜೆ ಮಂಜುನಾಥ್ ತಿಳಿಸಿದ್ದಾರೆ.

ಕೆರೆಯ ಮಣ್ಣು

ಕೆರೆಯ ಮಣ್ಣು

  • Share this:
ಆನೇಕಲ್(ಏ.15): ಒಂದು ಕಾಲದ ರೈತನ ಮಿತ್ರ , ಜನ ಜಾನುವಾರುಗಳ ಜೀವನಾಡಿಗಳಾಗಿದ್ದ ಬಹುತೇಕ ಕೆರೆಗಳು ಇಂದು ಅಸ್ತಿತ್ವ ಕಳೆದುಕೊಂಡು ಬರಡಾಗಿವೆ . ಅಳಿದುಳಿದ ಕೆರೆಗಳಲ್ಲಿನ ಫಲವತ್ತಾದ ಮಣ್ಣು ಖಾಸಗಿ ಬಡಾವಣೆಗಳ ಪಾಲಾಗುತ್ತಿದೆ . ರಾಜಾರೋಷವಾಗಿ ಕೆರೆಗಳಲ್ಲಿನ ಫಲವತ್ತಾದ ಮಣ್ಣು ಖಾಲಿಯಾಗುತ್ತಿದ್ರು ಅಧಿಕಾರಿಗಳು ಮಾತ್ರ ಗುಮ್ಮನಂತಿದ್ದಾರೆ .  ಹೌದು ಹೀಗೆ ಕೆರೆಯಲ್ಲಿನ ಫಲವತ್ತಾದ ಮಣ್ಣನ್ನು ಲೂಟಿಗೈದು ಖಾಸಗಿ ಬಡಾವಣೆಗಳಿಗೆ ಮತ್ತು ರಸ್ತೆ ಕಾಮಗಾರಿಗಳಿಗೆ ಡಂಪ್ ಮಾಡಿರುವ ರಾಶಿ ರಾಶಿ ಮಣ್ಣು  ಕಂಡುಬಂದದ್ದು ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಮುತ್ತಾನಲ್ಲೂರು ಮತ್ತು ಬೆಂಡಿಗಾನಹಳ್ಳಿ ಬಳಿ . ಇಲ್ಲಿನ ಕೆರೆಗಳಲ್ಲಿನ ಫಲವತ್ತಾದ ಮಣ್ಣನ್ನು ಹಗಲು ರಾತ್ರಿ ಎನ್ನದೆ ದೋಚಿ ಖಾಸಗಿ ಬಡಾವಣೆಗಳ ಅಭಿವೃದ್ಧಿಗೆ ಸರ್ಕಾರದ ರಸ್ತೆ ಕಾಮಗಾರಿಗಳಿಗೆ ಮಾರಾಟ ಮಾಡಿಕೊಳ್ಳಲಾಗಿದೆ.

ರೈತರ ಹೊಲ, ಗದ್ದೆ, ತೋಟಗಳಿಗೆ ಮಾತ್ರ ಕೆರೆ ಮೇಲ್ಪದರದ ಮೂರು ಅಡಿ ಫಲವತ್ತಾದ ಮಣ್ಣು ತೆಗೆಯಬಹುದು . ಆದ್ರೆ ಮಣ್ಣು ಮಾರಾಟಗಾರರು ನೂರಾರು ಅಡಿ ಕೆರೆ ಮಣ್ಣನ್ನು ಬಗೆದು ಬರಿದು ಮಾಡಿದ್ದಾರೆ . ಈ ಬಗ್ಗೆ ಅಧಿಕಾರಿಗಳಿಗೆ ಹಲವು ಬಾರಿ ದೂರು ನೀಡಿದರೂ ಪ್ರಯೋಜನವಾಗಿಲ್ಲ . ಹಾಗಾಗಿ ಅಕ್ರಮವಾಗಿ ಕೆರೆಯಲ್ಲಿ ಮಣ್ಣು ತೆಗೆಯುತ್ತಿದ್ದ ಲೋಕೇಶ್ ರೆಡ್ಡಿ ಮತ್ತು ವಿಶ್ವನಾಥ ರೆಡ್ಡಿ ವಿರುದ್ಧ ದೂರು ನೀಡಿ ಪ್ರಕರಣ ದಾಖಲು ಮಾಡಿಸಿರುವುದಾಗಿ ಕೆಆರ್​ಎಸ್​ ಪಕ್ಷದ ಕಾರ್ಯಕರ್ತ ಮಹೇಶ್ ರೆಡ್ಡಿ ತಿಳಿಸಿದ್ದಾರೆ.

ರಾಮನಗರ: ನೀರು ತರಲು ಕಾಡಿಗೆ ಹೋದವರ ಮೇಲೆ ಕರಡಿ ದಾಳಿ; ಇಬ್ಬರಿಗೆ ಗಂಭೀರ ಗಾಯ

ರಾಮನಗರ: ನೀರು ತರಲು ಕಾಡಿಗೆ ಹೋದವರ ಮೇಲೆ ಕರಡಿ ದಾಳಿ; ಇಬ್ಬರಿಗೆ ಗಂಭೀರ ಗಾಯ

ಇನ್ನೂ ಕೆರೆಗಳ ಸಂರಕ್ಷಣೆಗೆ ಈಗಾಗಲೇ ಜಿಲ್ಲಾಡಳಿತ ಕೆರೆಗಳ ಸರ್ವೆ ಕಾರ್ಯ ನಡೆಸುತ್ತಿದೆ . ಬಹುತೇಕ ಕೆರೆಗಳ ಸರ್ವೆ ಕಾರ್ಯ ಮುಗಿದಿದೆ. ಇನ್ನೂ ಕೆಲವು ಕೆರೆಗಳ ಸರ್ವೆ ಕಾರ್ಯ ಬಾಕಿ ಇದೆ . ಜೊತೆಗೆ ಪರಿಸರ ತಜ್ಞ ಡಾ ಯಲ್ಲಪ್ಪ ರೆಡ್ಡಿ ನೇತೃತ್ವದ ಕೆರೆಗಳ ಸಂರಕ್ಷಣಾ ಸಮಿತಿ ಸಭೆಯಲ್ಲಿಯೂ ಕೆರೆಗಳ ಸಂರಕ್ಷಣೆ ಬಗ್ಗೆ ಚರ್ಚಿಸಲಾಗಿದೆ . ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ, ಕಂದಾಯ ಇಲಾಖೆ ಮತ್ತು ಸ್ಥಳೀಯ ಸಂಸ್ಥೆಗಳಿಗೆ ಅಗತ್ಯ ಕ್ರಮ ವಹಿಸಲು ಈಗಾಗಲೇ ಸೂಚಿಸಲಾಗಿದೆ.

ಒತ್ತುವರಿಯಾಗಿರುವ ಕೆರೆಗಳ ಪಟ್ಟಿ ಸಿದ್ದಪಡಿಸಿ, ಹಂತ ಹಂತವಾಗಿ ತೆರವುಗೊಳಿಸಿ, ತಂತಿ ಬೇಲಿ ಹಾಕುವ ಬಗ್ಗೆಯೂ ಸೂಚನೆ ನೀಡಲಾಗಿದೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಜೆ ಮಂಜುನಾಥ್ ತಿಳಿಸಿದ್ದಾರೆ.ಒಟ್ಟಿನಲ್ಲಿ ಬರಿದಾದ ಕೆರೆಗಳು,  ಖಾಸಗಿ ಬಡಾವಣೆಗಳ ಬಳಿ ಕೆರೆಗಳ ಫಲವತ್ತಾದ ಮಣ್ಣು ಕಣ್ಣಿಗೆ ರಾಚುತ್ತಿದ್ದರೂ ಅಧಿಕಾರಿಗಳು ಮಾತ್ರ ಏನು ನಡೆದಿಲ್ಲ ಎನ್ನುವಂತಹ ಮಾತಿನ ದಾಟಿಯಲ್ಲಿದ್ದಾರೆ. ಇದು ಹಲವು ಅನುಮಾನಗಳನ್ನು ಹುಟ್ಟು ಹಾಕಿದ್ದು , ಇನ್ನಾದ್ರು ಸಂಬಂಧಪಟ್ಟ ಅಧಿಕಾರಿಗಳು ಕೆರೆಗಳ ಸಂರಕ್ಷಣೆಗೆ ಮುಂದಾಗುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.
Published by:Latha CG
First published: