• Home
  • »
  • News
  • »
  • state
  • »
  • Heavy Rain: ಕೆರೆ ಕೋಡಿ ಹರಿದು ಗ್ರಾಮಕ್ಕೆ ನುಗ್ಗಿದ ನೀರು; ಸಚಿವ ಮುನೇನಕೊಪ್ಪ ತವರು ಕ್ಷೇತ್ರವನ್ನು ಕೇಳೋರಿಲ್ಲ!

Heavy Rain: ಕೆರೆ ಕೋಡಿ ಹರಿದು ಗ್ರಾಮಕ್ಕೆ ನುಗ್ಗಿದ ನೀರು; ಸಚಿವ ಮುನೇನಕೊಪ್ಪ ತವರು ಕ್ಷೇತ್ರವನ್ನು ಕೇಳೋರಿಲ್ಲ!

ಗ್ರಾಮಕ್ಕೆ ನುಗ್ಗಿದ ಕೆರೆ ನೀರು

ಗ್ರಾಮಕ್ಕೆ ನುಗ್ಗಿದ ಕೆರೆ ನೀರು

ಕೆರೆ ಕೋಡಿಯ ನೀರು ಗ್ರಾಮಕ್ಕೆ ನುಗ್ಗಿ ಮಂಟೂರಿನಲ್ಲಿ ಭಾರೀ ಅವಾಂತರ ಸೃಷ್ಟಿಸಿದೆ. ಮನೆಗಳಿಗೆ ನುಗ್ಗಿದ ನೀರು ಹೊರ ಹಾಕೋಕೆ ಹರಸಾಹಸಪಡುವಂತಾಯಿತು. ಸಚಿವ ಮುನೇನಕಪ್ಪ ತವರು ಕ್ಷೇತ್ರದಲ್ಲಿ ಮಳೆ ಅವಾಂತರ ನಡೆದರೂ ಕೇಳೋರಿಲ್ಲದಂತಾಗಿದೆ.

  • Share this:

ಹುಬ್ಬಳ್ಳಿ : ಕೆರೆ ಕೋಡಿ ನೀರು ನುಗ್ಗಿ ಭಾರಿ ಅವಾಂತರ ಸೃಷ್ಟಿಯಾದ ಘಟನೆ ಹುಬ್ಬಳ್ಳಿ (Hubballi) ತಾಲೂಕಿನ ಮಂಟೂರು ಗ್ರಾಮದಲ್ಲಿ ನಡೆದಿದೆ. ಮಂಟೂರು ಗ್ರಾಮದಲ್ಲಿ ಹತ್ತಾರು ಮನೆಗಳಿಗೆ ನೀರು ನುಗ್ಗಿದೆ. ಕೆರೆ ನೀರಿನ ಜೊತೆಗೆ ಮನೆಗಳಿಗೆ ಡ್ರೈನೇಜ್ ನೀರು (Drainage Water) ನುಗ್ಗಿದ್ದರಿಂದ ಜನ ಸಂಕಷ್ಟ ಎದುರಿಸುವಂತಾಗಿದೆ. ಮಳೆ ನೀರು (Rain Water) ಹೊರ ಹಾಕೋಕೆ ಗ್ರಾಮಸ್ಥರು (Villagers) ಹರಸಾಹಸಪಡುವಂತಾಗಿದೆ.


ಮೋಟಾರ್​ನಿಂದ ನೀರು ಹೊರಹಾಕಿದ ಜನ


ಕೆಲವರು ಮೋಟಾರ್ ಹಚ್ಚಿ ನೀರು ಎತ್ತುವ ಕೆಲಸ ಮಾಡಿದರೆ ಮತ್ತೆ ಕೆಲವರು ಕೈಯಿಂದಲೇ ಎತ್ತಿ ಹಾಕೋ ಮೂಲಕ ಮನೆ ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ್ದರು. ಆದರೆ ಭಾರಿ ನೀರು ನುಗ್ಗಿದ್ದರಿಂದ ದವಸ, ಧಾನ್ಯ ಸಾಮಾನುಗಳು ಮಳೆ ನೀರುಪಾಲಾಗಿವೆ. ಊಟಕ್ಕೂ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.


ಹತ್ತಕ್ಕೂ ಹೆಚ್ಚು ಮನೆಗಳ ಕುಸಿತ


ಗ್ರಾಮದಲ್ಲಿ ಹತ್ತಕ್ಕೂ ಹೆಚ್ಚು ಮನೆಗಳು ಕುಸಿತವಾಗಿದ್ದು, ಕೆಲವರು ನಿರಾಶ್ರಿತರಾಗುವಂತಾಗಿದೆ. ಇಷ್ಟಾದರೂ ಯಾರೂ ಈ ಕಡೆ ಗಮನ ಹರಿಸಿಲ್ಲ ಅಂತ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರತಿ ಬಾರಿ ಮಳೆ ಬಂದಾಗಲೂ ಇದೇ ಸಮಸ್ಯೆ ಪುನರಾವರ್ತನೆಯಾಗುತ್ತದೆ.


Lake water entered the village due to heavy rain


ಸಚಿವ ಶಂಕರಪಾಟೀಲ ಮುನೇನಕೊಪ್ಪ ತವರು ಕ್ಷೇತ್ರ


ಕೆರೆ ನೀರು ಹತ್ತಾರು ಮನೆಗಳಿಗೆ ನುಗ್ಗುತ್ತೆ. ಈ ಕುರಿತು ಮನವಿ ಕೊಟ್ಟು ಸಾಕಾಗಿದೆ. ಸ್ವತಃ ಸಕ್ಕರೆ, ಜವಳಿ ಖಾತೆ ಸಚಿವ ಶಂಕರಪಾಟೀಲ ಮುನೇನಕೊಪ್ಪ ತವರು ಕ್ಷೇತ್ರವಾದರೂ ಸ್ಪಂದನೆ ಸಿಗ್ತಿಲ್ಲ. ಸಚಿವರು ನಮ್ಮ ಗ್ರಾಮದ ಬಗ್ಗೆ ಕ್ಯಾರೇ ಅನ್ನುತ್ತಿಲ್ಲ. ಅಧಿಕಾರಿಗಳೂ ಬರ್ತಿಲ್ಲ. ಈಗಲಾದ್ರೂ ಸಮಸ್ಯೆಗೆ ಸ್ಪಂದಿಸುವಂತೆ ಗ್ರಾಮಸ್ತರು ಆಗ್ರಹಿಸಿದ್ದಾರೆ. ಕೂಡಲೇ ಕೆರೆ ನೀರು ಮತ್ತು ಡ್ರೈನೇಜ್ ನೀರು ಹರಿಯೋದನ್ನು ನಿಲ್ಲಿಸಬೇಕು. ಶಾಶ್ವತ ಪರಿಹಾತ ಕಲ್ಪಿಸಬೇಕೆಂದು ಮಂಟೂರು ಗ್ರಾಮದ ಗಂಗಮ್ಮ ಇಂದೂರ ಹಾಗೂ ಬಸವರಾಜ ಸುಂಕದ್ ಒತ್ತಾಯಿಸಿದ್ದಾರೆ.


ಇದನ್ನೂ ಓದಿ: Railway Ministry: ಟಿಪ್ಪು ಎಕ್ಸ್​ಪ್ರೆಸ್ ಅಲ್ಲ ಇನ್ಮುಂದೆ ಇದು ಒಡೆಯರ್​ ಎಕ್ಸ್​​ಪ್ರೆಸ್; ಶುಭ ಶುದ್ದಿ ಎಂದ್ರು ಪ್ರತಾಪ್​ ಸಿಂಹ


ಸೀಗಿ ಹುಣ್ಣಿಮೆ ಸಂಭ್ರಮ ಕಸಿದ ಮಳೆ 


ಧಾರವಾಡ ಜಿಲ್ಲೆಯಲ್ಲಿ ಸೀಗೆ ಹುಣ್ಣಿಮೆ ಸಂಭ್ರಮ ಮನೆ ಮಾಡಿದೆ. ಆದರೆ ಮಳೆ ಅಬ್ಬದಿಂದಾಗಿ ಸೀಗೆ ಹುಣ್ಣಿಗೆ ಪೂಜೆ ನೆರವೇರಿಸಲು ರೈತರಿಗೆ ತೊಂದರೆಯಾಯಿತು. ರವಿವಾರದಂದು ಹುಣ್ಣಿಮಿ ಬಂದಿರೋ ಹಿನ್ನೆಲೆಯಲ್ಲಿ ಶುಕ್ರವಾರವೇ ಶುಭದಿನವೆಂದು ಬಹುತೇಕ ರೈತರು ಇಂದು ಸೀಗೆ ಹುಣ್ಣಿಮೆ ಸಂಪ್ರದಾಯಗಳನ್ನು ನೆರವೇರಿಸಿದರು.


ಹೊಲಗಳಿಗೆ ತೆರಳಿ ರೈತರ ವಿಶೇಷ ಪೂಜೆ


ಹೊಲಗಳಿಗೆ ತೆರಳಿದ ರೈತರು ವಿಶೇಷ ಪೂಜೆ ಸಲ್ಲಿಸಿದರು. ಕುಂದಗೋಳ, ಹುಬ್ಬಳ್ಳಿ, ಕಲಘಟಗಿ ಮತ್ತಿತರ ತಾಲೂಕುಗಳಲ್ಲಿ ಸಂಭ್ರಮ ಮನೆ ಮಾಡಿತ್ತು. ಭೂ ತಾಯಿಗೆ ಉಡಿ ತುಂಬಿ ಸೀಮಂತ ಕಾರ್ಯ ಮಾಡಿದ ಜನತೆ, ಪಂಚ ಪಾಂಡವರ ಮೂರ್ತಿ ಗಳನ್ನಿಟ್ಟು ಪೂಜೆ ನೆರವೇರಿಸಿದರು.


ಇದನ್ನೂ ಓದಿ: Dakshina Kannada: ಫ್ಯಾಮಿಲಿ ಕ್ಯಾತೆಗೆ ಒಗ್ಗಟ್ಟಿನ ಸವಾಲು, ತಾವೇ ಮುಂದೆ ನಿಂತು ಬಸ್ ನಿಲ್ದಾಣ ಕಟ್ಟಿದ ಗ್ರಾಮಸ್ಥರು!


ಮಳೆ ಅಬ್ಬರಕ್ಕೆ ರೈತರ ಬೇಸರ


ಕಡುಬು, ಹೋಳಿಗೆ, ಉಂಡಗಡುಬು, ಎಳ್ಳು ಹೋಳಿಗೆ, ಐದು ತರಹದ ಪಲ್ಯ ಇಟ್ಟು ಪೂಜೆ ಮಾಡಿದರು. ಬೆಟ್ಟದ ಬುಟ್ಟಿಯಲ್ಲಿ ಇಟ್ಟು ಪೂಜೆ ನೆರವೇರಿಸಿದ ರೈತರು ಸಂಪ್ರದಾಯ ಪೂರೈಸಿದರು. ಕೆಲವೆಡೆ ಹಳ್ಳ ಹರಿಯುತ್ತಿರುವುದರಿಂದ ಹೊಲಗಳಿಗೆ ಹೋಗಲು ರೈತರಿಗೆ ತೊಂದರೆಯಾಗಿದೆ. ಕೊನೆಗೆ ಹೊಲಕ್ಕೆ ಹೋಗೋ ರಸ್ತೆಯಲ್ಲಿಯೇ ಪೂಜೆ ನೆರವೇರಿಸಿದ ರೈತರು, ಮಳೆ ಅಬ್ಬರಕ್ಕೆ ಬೇಸರ ವ್ಯಕ್ತಪಡಿಸಿದರು.

Published by:ಪಾವನ ಎಚ್ ಎಸ್
First published: