ಬೆಂಗಳೂರು: ಮ್ಯಾಟ್ರಿಮೋನಿಯಲ್ನಲ್ಲಿ (Matrimonial Website) ಪರಿಚಯವಾದವನ ಭೇಟಿಗಾಗಿ ದೆಹಲಿಗೆ (Delhi) ತೆರಳಿದ್ದ ಬೆಂಗಳೂರಿನ (Bengaluru) ಮಹಿಳೆ ಹಣ ಮತ್ತು ಚಿನ್ನಾಭರಣ ಕಳೆದುಕೊಂಡಿದ್ದಾರೆ. 39 ವರ್ಷದ ಮಹಿಳೆಯೊಬ್ಬರಿಗೆ ಕೆಲ ತಿಂಗಳ ಹಿಂದೆ ಮ್ಯಾಟಿಮೋನಿಯಲ್ನಲ್ಲಿ ವ್ಯಕ್ತಿಯ ಪರಿಚಯವಾಗಿದೆ. ಈಗ ಆ ವ್ಯಕ್ತಿಯಿಂದಾಗಿ ಹಣ, ಚಿನ್ನ (Gold and Cash) ಕಳೆದುಕೊಂದು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಮಹಿಳೆ ಏರ್ಲೈನ್ ಉದ್ಯೋಗಿ ಎಂದು ತಿಳಿದು ಬಂದಿದೆ. ಮ್ಯಾಟ್ರಿಮೋನಿ ವೆಬ್ಸೈಟ್ನಲ್ಲಿ ಪರಿಚಯವಾದ ವ್ಯಕ್ತಿ ತನ್ನ ಹೆಸರು ಅನ್ಶುಲ್ ಜೈನ್ಎಂದು ಹೇಳಿಕೊಂಡು, ತಾನೋರ್ವ ಎನ್ಸಿಆರ್ (Delhi NCR) ಪ್ರದೇಶದ ಉದ್ಯಮಿ ಎಂದು ಹೇಳಿಕೊಂಡಿದ್ದಾನೆ. ಮದುವೆ ಬಗ್ಗೆ ಮಾತನಾಡಲು ಕುಟುಂಸ್ಥರ ಜೊತೆ ಬರುವಂತೆ ಹೇಳಿದ್ದಾನ. ಬರುವಾಗ ಹೊಸ ಬಟ್ಟೆ ಮತ್ತು ಕೆಲ ಚಿನ್ನದ ಆಭರಣಗಳನ್ನು ತರುವಂತೆ ಹೇಳಿದ್ದಾನೆ.
ಅನ್ಶುಲ್ ಮಾತು ನಂಬಿದ ಮಹಿಳೆ ಭಾನುವಾರ ಬೆಂಗಳೂರಿನಿಂದ ದೆಹಲಿಗೆ ತೆರಳಿದ್ದಾರೆ. ವಿಮಾನ ನಿಲ್ದಾಣದಲ್ಲಿ ಮಹಿಳೆಯನ್ನು ಆತ್ಮೀಯವಾಗಿ ಬರಮಾಡಿಕೊಂಡಿದ್ದಾನೆ. ನಂತರ ಇಬ್ಬರು ಫುಡ್ ಕೋರ್ಟ್ನಲ್ಲಿ ಜೊತೆಯಾಗಿ ಊಟ ಮಾಡಿದ್ದಾರೆ.
ಮಹಿಳೆಯನ್ನು ಕೆಳಗಿಳಿಸಿ ಎಸ್ಕೇಪ್
ಊಟದ ಬಳಿಕ ಅನ್ಶುಲ್ ಕಾರ್ನಲ್ಲಿ ಮಹಿಳೆ ತೆರಳಿದ್ದಾರೆ. ಸುಮಾರು ಅರ್ಧ ಕಿಲೋಮೀಟರ್ ತೆರಳಿದ ಬಳಿಕ ಕಾರ್ ಟೈರಿನಲ್ಲಿ ಏನೋ ಸದ್ದು ಬರುತ್ತಿದೆ ಎಂದು ನಿಲ್ಲಿಸಿ, ಮಹಿಳೆಗೆ ಕೆಳಗೆ ಇಳಿದು ಪರಿಶೀಲಿಸುವಂತೆ ಹೇಳಿದ್ದಾನೆ. ಮಹಿಳೆ ಕಾರ್ನಿಂದ ಇಳಿಯುತ್ತಿದ್ದಂತೆ ಅನ್ಶುಲ್ ಎಸ್ಕೇಪ್ ಆಗಿದ್ದಾನೆ.
ಏನೆಲ್ಲಾ ದೋಚಿದ?
300 ಗ್ರಾಂ ಚಿನ್ನ, 15 ಸಾವಿರ ನಗದು, ಮೊಬೈಲ್ ಪೋನ್, ಮೂರು ಎಟಿಎಂ ಕಾರ್ಡ್ ಸೇರಿದಂತೆ ಬಟ್ಟೆ ಬ್ಯಾಗ್ ಕಳ್ಳತನ ಮಾಡಲಾಗಿದೆ ಎಂದು ಮಹಿಳೆ ದೂರು ದಾಖಲಿಸಿದ್ದಾರೆ.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯ ಬಂಧನಕ್ಕೆ ಬಲೆ ಬೀಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ