Kuja Dosha: ಪ್ರೀತಿಸಿದವನ ಜೊತೆ ಮದುವೆಗೆ ಕುಜದೋಷವೇ ಅಡ್ಡಿಯಾಯ್ತು! ನೊಂದ ಲೇಡಿ ಕಾನ್ಸ್‌ಟೇಬಲ್ ಸಾವಿಗೆ ಶರಣು

ಕುಜ ದೋಷ ಇರುವ ಹುಡುಗಿ ಜೊತೆ ಮಗನ ಮದುವೆ ಮಾಡಲು ಸಾಧ್ಯವಿಲ್ಲ, ಅವಳನ್ನು ಸೊಸೆಯಾಗಿ ಸ್ವೀಕರಿಸುವುದಿಲ್ಲ ಎಂದು ಪ್ರವೀಣ್ ತಾಯಿ ತಿಳಿಸಿದ್ದರು. ಅಲ್ಲದೇ ಸುಧಾಳಿಗೂ ಫೋನ್ ಮಾಡಿ ನನ್ನ ಮಗನ ಸಹವಾಸ ಬಿಟ್ಟು ಬಿಡು. ಈ ಮದುವೆ ಮಾಡಲು ಸಾಧ್ಯವಿಲ್ಲ ಎಂದಿದ್ದರು ಎನ್ನಲಾಗಿದೆ. 

ಆತ್ಮಹತ್ಯೆಗೆ ಶರಣಾದ ಸುಧಾ

ಆತ್ಮಹತ್ಯೆಗೆ ಶರಣಾದ ಸುಧಾ

  • Share this:
ಶಿವಮೊಗ್ಗ: ಪ್ರೀತಿಸಿದ ಹುಡುಗನ್ನು (Lover) ಮದುವೆಯಾಗಲು (Marriage) ಕುಜದೋಷ (Kuja Dosha) ಅಡ್ಡಿಯಾಯ್ತು ಅಂತ ಲೇಡಿ ಪೊಲೀಸ್ ಕಾನ್ಸ್‌ಟೇಬಲ್ (Lady Police Constable) ಒಬ್ಬರು ವಿಷ (Poison) ಕುಡಿದು ಆತ್ಮಹತ್ಯೆಗೆ (Suicide) ಶರಣಾಗಿದ್ದಾರೆ. ಶಿವಮೊಗ್ಗ (Shivamogga) ಜಿಲ್ಲೆಯ ಭದ್ರಾವತಿ (Bhadravati) ತಾಲೂಕಿನ ಕಲ್ಲಾಪುರ ನಿವಾಸಿ ಸುಧಾ ಎಂಬುವರೇ ಆತ್ಮಹತ್ಯೆಗೆ ಶರಣಾದ ಲೇಡಿ ಪೊಲೀಸ್ ಕಾನ್ಸ್‌ಟೇಬಲ್. ಇವರು ತೀರ್ಥಹಳ್ಳಿ ಠಾಣೆಯಲ್ಲಿ (Teerthahalli Station) ಪೊಲೀಸ್ ಕಾನ್ಸ್‌ಟೇಬಲ್ ಆಗಿ ಕರ್ತವ್ಯ (Duty) ನಿರ್ವಹಿಸುತ್ತಿದ್ದರು. ಈಕೆ ಭದ್ರಾವತಿ ಅರಣ್ಯ ವಲಯದಲ್ಲಿ (Forest Division) ನೌಕರನಾಗಿದ್ದ ಪ್ರವೀಣ್ ಎಂಬಾತನನ್ನು ಪ್ರೀತಿಸುತ್ತಿದ್ದರು. ಮನೆಯವರ ವಿರೋಧದ ನಡುವೆಯೂ ಪ್ರೀತಿ (Love) ಮುಂದುವರೆಸಿದ್ದರು. ಇದೀಗ ಮದುವೆಗೆ ಆಕೆಯ ಜಾತಕದಲ್ಲಿದ್ದ ಕುಜದೋಷವೇ ಅಡ್ಡಿಯಾಗಿತ್ತು ಎನ್ನಲಾಗಿದೆ. ಇದರಿಂದ ನೊಂದ ಸುಧಾ ವಿಷ ಕುಡಿದು, ಆತ್ಮಹತ್ಯೆಗೆ ಶರಣಾಗಿದ್ದಾರೆ.

6 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿ

ಬೆಳಗಾವಿ ಮೂಲದ ಪ್ರವೀಣ್ ಹಾಗೂ ಭದ್ರಾವತಿ ಮೂಲದ ಸುಧಾ ಸುಮಾರು ಆರು ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದರು. ಇವರಿಬ್ಬರ ಪ್ರೀತಿಗೆ ಹೆತ್ತವರ ವಿರೋಧವಿತ್ತು. ಆರಂಭದಲ್ಲಿ ಇವರಿಬ್ಬರ ಪ್ರೀತಿಗೆ ಜಾತಿ ಅಡ್ಡಿಯಾಗಿತ್ತು. ಆದರೆ ಜಾತಿ ಅಡ್ಡಿ, ಮನೆಯವರ ವಿರೋಧದ ನಡುವೆಯೂ ಇಬ್ಬರು ಮದುವೆಗೆ ಸಿದ್ಧರಾಗಿದ್ದರು.



ಹುಡುಗಿಗೆ ಕುಜದೋಷ ಇದೆ ಎಂದಿದ್ದ ಜ್ಯೋತಿಷಿ

ಪ್ರವೀಣ್ ತಾಯಿ ಸುಧಾ ಜಾತಕವನ್ನು ಜ್ಯೋತಿಷಿಯೊಬ್ಬರಿಗೆ ತೋರಿಸಿದ್ದರು. ಜ್ಯೋತಿಷಿ ಈ ಯುವತಿಗೆ ಕುಜ ದೋಷ ಇದೆ. ಇವಳೊಂದಿಗೆ ವಿವಾಹವಾದರೆ ನಿಮ್ಮ ಮಗನ ಆಯಸ್ಸು ಕಡಿಮೆ ಆಗುತ್ತದೆ ಅಂತ ಹೇಳಿದ್ದಾರಂತೆ. ಹೀಗಾಗಿ ಕುಜ ದೋಷ ಇರುವ ಹುಡುಗಿ ಜೊತೆ ಮಗನ ಮದುವೆ ಮಾಡಲು ಸಾಧ್ಯವಿಲ್ಲ, ಅವಳನ್ನು ಸೊಸೆಯಾಗಿ ಸ್ವೀಕರಿಸುವುದಿಲ್ಲ ಎಂದು ಪ್ರವೀಣ್ ತಾಯಿ ತಿಳಿಸಿದ್ದರು. ಅಲ್ಲದೇ ಸುಧಾಳಿಗೂ ಫೋನ್ ಮಾಡಿ ನನ್ನ ಮಗನ ಸಹವಾಸ ಬಿಟ್ಟು ಬಿಡು. ಈ ಮದುವೆ ಮಾಡಲು ಸಾಧ್ಯವಿಲ್ಲ ಎಂದಿದ್ದರು ಎನ್ನಲಾಗಿದೆ.

ಇದನ್ನೂ ಓದಿ: Hassan: ಅಮ್ಮ ಬರ್ತಾಳೆ ಅಂತ ಕಾಯ್ತಿದ್ದ ಮಗನಿಗೆ ಶಾಕ್; ಕೆರೆಯಲ್ಲಿ ಮುಳುಗಿಸಿ ಕೊಂದ ಕಳ್ಳ!

 ಎಪಿಎಂಸಿ ಆವರಣದಲ್ಲಿ ವಿಷ ಕುಡಿದಿದ್ದ ಪ್ರೇಮಿಗಳು

ಪ್ರವೀಣ್ ತಾಯಿ ಮಾತಿನಿಂದ ಪ್ರೇಮಿಗಳಿಬ್ಬರು ಕಂಗಾಲಾಗಿದ್ದಾರೆ. ಹೇಗಿದ್ದರೂ ನಮ್ಮ ಮದುವೆ ಸಾಧ್ಯವಿಲ್ಲ ಅಂತ ಕಣ್ಣೀರಿಟ್ಟಿದ್ದಾರೆ. ಇದರಿಂದ ಮನನೊಂದ ಪ್ರೇಮಿಗಳು ಮೇ 31ರಂದು ಭದ್ರಾವತಿಯ ಎಪಿಎಂಸಿ ಆವರಣದಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು.

ಚಿಕಿತ್ಸೆ ಫಲಿಸದೇ ಮಧ್ಯರಾತ್ರಿ ಸಾವನ್ನಪ್ಪಿದ ಸುಧಾ

ವಿಷ ಕುಡಿಯುತ್ತಿದ್ದಂತೆ ಇಬ್ಬರೂ ತೀವ್ರ ಅಸ್ವಸ್ಥರಾಗಿದ್ದರು. ಆತ್ಮಹತ್ಯೆಗೆ ಯತ್ನಿಸಿದ್ದ ಪ್ರೇಮಿಗಳಿಗೆ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಆದರೆ ಯುವತಿ ಸುಧಾಳನ್ನು ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ್ ಗೆ ದಾಖಲಿಸಲಾಗಿತ್ತು. ಆದರೆ ದುರಾದೃಷ್ಟವಶಾತ್ ಚಿಕಿತ್ಸೆ ಫಲಿಸದೇ ನಿನ್ನೆ ಮಧ್ಯೆ ರಾತ್ರಿ‌ ಆಸ್ಪತ್ರೆಯಲ್ಲಿ ಸುಧಾ ಮೃತಪಟ್ಟಿದ್ದಾಳೆ. ಸದ್ಯ ಯುವಕ ಪ್ರವೀಣ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ ಅಂತ ಹೇಳಲಾಗ್ತಿದೆ.

ಇದನ್ನೂ ಓದಿ: High Court: ಪ್ರೀತ್ಸೋದು ತಪ್ಪಲ್ಲ, ಆದ್ರೆ ಅಪ್ಪ-ಅಮ್ಮನ ತ್ಯಾಗ ನೆನಪಿರಲಿ

ಪ್ರೇಯಸಿ ಜೊತೆ ರೆಡ್​ಹ್ಯಾಂಡ್ ಆಗಿ ಸಿಕ್ಕಿಬಿದ್ದ ಪತಿ!

ಬಹಳಷ್ಟು ಜನರ ದಾಂಪತ್ಯಕ್ಕೆ ಮುಳುವಾಗುವುದು ಅಕ್ರಮ ಸಂಬಂಧಗಳು. ಪತಿ ಅಥವಾ ಪತ್ನಿ ಇದ್ದಾಗಲೂ ಪ್ರಿಯಕರ ಅಥವಾ ಪ್ರೇಯಿಸಿ ಹಿಂದೆ ಬೀಳುವ ಮಂದಿ ಬಹಳಷ್ಟಿದ್ದಾರೆ. ಇಂತಹ ಘಟನೆಗಳಲ್ಲಿ ಬಹುತೇಕ ದುರಂತವಾಗಿ ಕೊನೆಯಾಗುತ್ತದೆ. ಇಂಥದ್ದೇ ಬೆಳವಣಿಗೆಯಲ್ಲಿ ಮಹಿಳೆಯೊಬ್ಬಳು ತನ್ನ ಗಂಡನನ್ನು ಆತನ ಪ್ರೇಯಸಿ ಜೊತೆಗೆ ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾಳೆ. ನಂತರ ಗಂಡನನ್ನೂ ಆತನ ಪ್ರೇಯಿಸಿಯನ್ನೂ (Lover) ಅರೆಬೆತ್ತಲೆ ಸ್ಥಿತಿಯಲ್ಲೇ ಮೆರವಣಿಗೆ (Parade) ಮಾಡಿಸಿದ್ದಾಳೆ. ಛತ್ತೀಸ್‌ಗಢದ ಕೊಂಡಗಾಂವ್ ಜಿಲ್ಲೆಯ ಬುಡಕಟ್ಟು ಜನಾಂಗದವರ ಪ್ರಾಬಲ್ಯದ ಹಳ್ಳಿಯೊಂದರಲ್ಲಿ ಪ್ರೀತಿಯಲ್ಲಿ (Love) ಬಿದ್ದಿದ್ದಕ್ಕಾಗಿ ದಂಪತಿಯನ್ನು (Couple) ಬೆತ್ತಲೆಯಾಗಿ ಮೆರವಣಿಗೆ ಮಾಡಲಾಗಿದೆ.
Published by:Annappa Achari
First published: