ಚಾಮರಾಜಪೇಟೆಯಲ್ಲಿ ಒಂಟಿ ಮಹಿಳೆ ಕೊಲೆ: ತಲೆಗೆ ಹೊಡೆದು ಭೀಕರವಾಗಿ ಹತ್ಯೆ


Updated:March 14, 2018, 12:29 AM IST
ಚಾಮರಾಜಪೇಟೆಯಲ್ಲಿ ಒಂಟಿ ಮಹಿಳೆ ಕೊಲೆ: ತಲೆಗೆ ಹೊಡೆದು ಭೀಕರವಾಗಿ ಹತ್ಯೆ

Updated: March 14, 2018, 12:29 AM IST
-ನ್ಯೂಸ್ 18 ಕನ್ನಡ

ಬೆಂಗಳೂರು(ಮಾ.13): ಬೆಂಗಳೂರಿನಲ್ಲಿ ಮತ್ತೊಂದು ಒಂಟಿ ಮಹಿಳೆ ಕೊಲೆಯಾಗಿದೆ. ಚಾಮರಾಜಪೇಟೆಯ 5ನೇ ಮುಖ್ಯರಸ್ತೆಯ ಮನೆಯಲ್ಲಿ ವಿಜಯಾ ಎಂಬ 50 ವರ್ಷದ ಮಹಿಳೆಯ ತಲೆಗೆ ಹೊಡೆದು ಹತ್ಯೆ ಮಾಡಲಾಗಿದೆ.

ಕಳೆದ ಹಲವು ವರ್ಷಗಳಿಂದ ವಿಜಯಾ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ವಿಜಯಾ ಸಾಕುಮಗಳು ಇತ್ತೀಚೆಗೆ ಅಮ್ಮನ ಇಷ್ಟಕ್ಕೆ ವಿರುದ್ಧವಾಗಿ ಪ್ರಿಯಕರನ ಮದುವೆಯಾಗಿದ್ದಳು. ಹೀಗಾಗಿ, ಮಗಳ ಜೊತೆ ವಿಜಯಾಗೆ ಮನಸ್ತಾಪವಿತ್ತು. ಅಮ್ಮ-ಮಗಳ ಜೊತೆ ಸಂಪರ್ಕ ಇರಲಿಲ್ಲ ಎನ್ನಲಾಗಿದೆ. ಸ್ಥಳಕ್ಕೆ ಭೇಟಿ ನೀಡಿರುವ ಚಾಮರಾಜಪೇಟೆ ಪೊಲೀಸರು ಮತ್ತು ವಿಧಿವಿಜ್ಞಾನ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದೆ.

ಕೊಲೆಗೆ ಕಾರಣ ಏನಿರಬಹುದೆಂಬ ಬಗ್ಗೆ ಪೊಳಸರು ತನಿಖೆ ಕೈಗೊಂಡಿದ್ದು, ಹಣ ಅಥವಾ ಒಡವೆಗಾಗಿ ಕೊಲೆ ಮಾಡಿದ್ಧಅರಾ..? ಮನೆಯಿಂದ ಯಾವುದಾದರೂ ವಸ್ತುಗಳನ್ನ ದೋಚಿದ್ದಾರಾ ಎಂಬ ಬಗ್ಗೆಯೂ ತನಿಖೆ ನಡೆಯುತ್ತಿದೆ.

ಮಂಗಳವಾರ ಬೆಳಗ್ಗೆ ಅಥವಾ ಹಿಮದಿನ ದಿನ ರಾತ್ರಿ ಕೊಲೆ ನಡೆದಿರುವ ಶಂಕೆ ಇದೆ. ಪರಿಚಿತರೊಬ್ಬರು ವಿಜಯ ಭೇಟಿಗೆ ಮನೆಗೆ ತೆರಳಿದ್ದಾಗ ಕೊಲೆಯಾಗಿರುವುದನ್ನ ಕಂಡು ಪೊಲಿಸರಿಗೆ ಮಾಹಿತಿ ನೀಡಿದ್ದಾರೆ. ಒಟ್ಟಿನಲ್ಲಿ, ಮಹಾನಗರಿ ಬೆಂಗಳೂರಿನಲ್ಲಿ ಒಂಟಿ ಮಹಿಳೆಯರು ಎಷ್ಟು ಸೇಫ್ ಎಂಬ ಪ್ರಶ್ನೆ ಪದೇ ಪದೇ ಏಳಲಾರಂಭಿಸಿದೆ.
First published:March 14, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ