CoronaVirus: ಸಿಲಿಕಾನ್ ಸಿಟಿ ಕೊರೋನಾ ಅಖಾಡಕ್ಕಿಳಿದ್ರು ಲೇಡಿ ಮಾರ್ಷಲ್ಸ್; ಮಹಿಳೆಯರನ್ನು ನಿಭಾಯಿಸಲು ಹೊಸ ತಂತ್ರ!
ಸದ್ಯ ಒಟ್ಟು 20 ಮಹಿಳಾ ಮಾರ್ಷಲ್ಸ್ ಅನ್ನು ಬಿಬಿಎಂಪಿ ನೇಮಕ ಮಾಡಿದೆ. ಆದರೆ, ನಾಲ್ಕು ಲೇಡಿ ಮಾರ್ಷಲ್ಸ್ ಅನ್ನು ಮಾತ್ರ ಫೀಲ್ಡ್ ಅಲ್ಲಿ ನಿಯೋಜನೆ ಮಾಡಲಾಗಿದೆ. ಉಳಿದಂತೆ 16 ಮಂದಿ ಮಹಿಳಾ ಮಾರ್ಷಲ್ಸ್ ಗಳನ್ನು ಅಗತ್ಯ ಬಿದ್ದಲ್ಲಿ ಬಳಕೆ ಮಾಡಲಾಗುತ್ತೆ ಎನ್ನಲಾಗಿದೆ.
ಬೆಂಗಳೂರು (ಮಾರ್ಚ್ 10) ಕೊರೋನಾ ಬಂದಾಗ ಜನಸಾಮಾನ್ಯರ ಜೀವ ಹಿಂಡಿದ್ದು ಮಾರ್ಷಲ್ಗಳು. ಮಾಸ್ಕ್ ಹಾಕಿ, ಸಾಮಾಜಿಕ ಅಂತರ ಕಾಪಾಡಿ ಅಂತ ಸಿಲಿಕಾನ್ ಮಂದಿಯ ನಿದ್ದೆ ಕೆಟ್ಟೋಗಿತ್ತು. ಆದ್ರೆ ಮಹಿಳೆಯರನ್ನು ನಿಭಾಯಿಸಲು ಹರಸಾಹಸ ಬೀಳಬೇಕಿತ್ತು ಮಾರ್ಷಲ್ಗಳು. ಆದರೀಗ ಲೇಡಿ ಮಾರ್ಷಲ್ಸ್ ನೇಮಿಸಿದೆ ಬಿಬಿಎಂಪಿ. ಮಾಸ್ಕ್ ಹಾಕದೆ ಕೆಲ ಮಹಿಳೆಯರೆಲ್ಲಾ ಮಾರ್ಷಲ್ಸ್ ಜೊತೆಗೆ ಜಗಳಕ್ಕೆ ನಿಂತುಕೊಳ್ತಿದ್ರು. ಮಾತೇತ್ತಿದ್ರೆ ಪೊಲೀಸ್ ಸ್ಟೇಷನ್ ಕೋರ್ಟ್ ಅಂತ ಗೌರವವನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ರು. ಮಾಸ್ಕ್ ಹಾಕಿಲ್ಲ ಮೇಡಂ ಫೈನ್ ಕಟ್ಟಿ ಅಂದ್ರೆ ಉಪಟಳ ತೋರ್ತಿದ್ರು. ಆದ್ರೀಗ ಅದೆಲ್ಲದಕ್ಕೂ ಬ್ರೇಕ್ ಹಾಕೋಕೆ ಬಿಬಿಎಂಪಿ ಮುಂದಾಗಿದೆ. ಸುಖಾಸುಮ್ಮನೆ ರೂಲ್ಸ್ ಬ್ರೇಕ್ ಮಾಡಿ ಜಗಳಕ್ಕೆ ನಿಲ್ಲೋ ಮಹಿಳೆಯರನ್ನು ನಿಭಾಯಿಸುವುದಕ್ಕೆ ಈಗ ಲೇಡಿ ಮಾರ್ಷಲ್ ಗಳೇ ಅಖಾಡಕ್ಕೆ ಇಳಿದಿದ್ದಾರೆ.
ಮಾಸ್ಕ್ ಹಾಕದೆ ಉಪಟಳ ತೋರುವ ಮಹಿಳೆಯರ ಜೊತೆ ಮಾತಿನ ಚಕಮಕಿಯಾಗ್ತಿತ್ತು. ಈ ವೇಳೆ ಪುರುಷ ಮಾರ್ಷಲ್ಸ್ ಗಳನ್ನು ಅವಾಚ್ಯ ಶಬ್ಧಗಳಿಂದ ನಿಂದಿಸುತ್ತಿದ್ರು ಕೆಲ ಮಹಿಳೆಯರು. ಇಂಥಾ ಸನ್ನಿವೇಶಗಳನ್ನು ಇನ್ಮುಂದೆ ಮಹಿಳಾ ಮಾರ್ಷಲ್ಸ್ ನಿಭಾಯಿಸಲಿದ್ದಾರೆ. ಹೌದು, ಈವರೆಗೆ ಪುರುಷರು ಮಾತ್ರ ಮಾರ್ಷಲ್ಸ್ ಆಗಿದ್ರು. ಈಗ ಮಹಿಳಾ ಮಾರ್ಷಲ್ಸ್ ಕೂಡ ಫೀಲ್ಡಿಗೆ ಇಳಿದಿದ್ದಾರೆ. ಜನಜಂಗುಳಿ ಹೆಚ್ಚಿರುವ ಏರಿಯಾಗಳಿಗೆ ಮಾತ್ರ ಸದ್ಯಕ್ಕೆ ಲೇಡಿ ಮಾರ್ಷಲ್ಸ್ ನೇಮಕ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಮಹಿಳಾ ಮಾರ್ಷಲ್ಸ್ ಸಂಖ್ಯೆ ಹೆಚ್ಚಿಸುವ ಉದ್ದೇಶ ಬಿಬಿಎಂಪಿಗಿದೆ.
ಸದ್ಯ ಒಟ್ಟು 20 ಮಹಿಳಾ ಮಾರ್ಷಲ್ಸ್ ಅನ್ನು ಬಿಬಿಎಂಪಿ ನೇಮಕ ಮಾಡಿದೆ. ಆದರೆ, ನಾಲ್ಕು ಲೇಡಿ ಮಾರ್ಷಲ್ಸ್ ಅನ್ನು ಮಾತ್ರ ಫೀಲ್ಡ್ ಅಲ್ಲಿ ನಿಯೋಜನೆ ಮಾಡಲಾಗಿದೆ. ಉಳಿದಂತೆ 16 ಮಂದಿ ಮಹಿಳಾ ಮಾರ್ಷಲ್ಸ್ ಗಳನ್ನು ಅಗತ್ಯ ಬಿದ್ದಲ್ಲಿ ಬಳಕೆ ಮಾಡಲಾಗುತ್ತೆ ಎನ್ನಲಾಗಿದೆ. ಕೆಆರ್ ಮಾರುಕಟ್ಟೆ, ಚರ್ಚ್ ಸ್ಟ್ರೀಟ್ ನಲ್ಲಿ ತಲಾ ಒಬ್ಬೊಬ್ಬ ಲೇಡಿ ಮಾರ್ಷಲ್ಸ್ ಹಾಗೂ ಬಿಬಿಎಂಪಿ ಕಚೇರಿಯಲ್ಲಿ ಇಬ್ಬರು ಲೇಡಿ ಮಾರ್ಷಲ್ಸ್ ಅನ್ನು ಬಿಬಿಎಂಪಿ ನಿಯೋಜನೆ ಮಾಡಿದೆ.
ಈ ಬಗ್ಗೆ ನ್ಯೂಸ್ 18 ಕನ್ನಡ ಜತೆ ಮಾತನಾಡಿದ ಬಿಬಿಎಂಪಿ ಮಾರ್ಷಲ್ ಚೀಫ್ ಕರ್ನಲ್ ರಾಜ್ ಭೀರ್ ಸಿಂಗ್, "ಈ ಆಲೋಚನೆ ಬಹಳ ಹಿಂದಿನಿಂದಲೂ ಇತ್ತು. ಆದರೆ ಕಾರಣಾಂತರಗಳಿಂದ ಜಾರಿ ಮಾಡಲು ಸಾಧ್ಯವಾಗಿರಲಿಲ್ಲ. ಈಗ ಕಾಲ ಕೂಡಿ ಬಂದಿದೆ. ಮಹಿಳೆಯರನ್ನು ಹ್ಯಾಂಡಲ್ ಮಾಡಲು ನಮ್ಮ ಮಾರ್ಷಲ್ಸ್ ಹರಸಾಹಸ ಬೀಳುತ್ತಿದ್ದಾರೆ. ಈಗ ಕಾನೂನುಗಳೂ ಕೂಡ ಕಠಿಣವಾಗಿರೋದರಿಂದ ಮಾರ್ಷಲ್ಸ್ ಹೆಚ್ಚಿಗೆ ಮಾತನಾಡಲು ಸಾಧ್ಯವಿಲ್ಲ. ಹೀಗಾಗಿ ಮಹಿಳಾ ಮಾರ್ಷಲ್ಸ್ ಸಾರ್ವಜನಿಕ ಮಹಿಳೆಯರನ್ನು ನಿಭಾಯಿಸಲಿದ್ದಾರೆ" ಎಂದಿದ್ದಾರೆ.
ಮಾರ್ಷಲ್ ಗಳ ಜೊತೆಗೆ ಲೇಡಿ ಮಾರ್ಷಲ್ಸ್ ಗಳೂ ಇರುವ ಕಾರಣದಿಂದ ಸದ್ಯಕ್ಕೆ ಮಹಿಳೆಯರ ಉಪಟಳ ಕಡಿಮೆಯಾಗಿದೆ. ಇದೇ ಮಾದರಿಯಲ್ಲಿ ಬೆಂಗಳೂರಿನ ಎಲ್ಲಾ ವಾರ್ಡ್ ಗಳಲ್ಲೂ ಲೇಡಿ ಮಾರ್ಷಲ್ಸ್ ಅನ್ನು ನೇಮಕ ಮಾಡಲು ಬಿಬಿಎಂಪಿ ಯೋಚನೆ ಇಟ್ಟುಕೊಂಡಿದೆ. ಇನ್ನು ಸ್ವಲ್ಪ ದಿನದಲ್ಲೇ ಈ ಪ್ರಕ್ರಿಯೆ ಮುಗಿಯಲಿದೆ ಎನ್ನಲಾಗಿದೆ.
(ವರದಿ- ಆಶಿಕ್ ಮುಲ್ಕಿ)
Published by:MAshok Kumar
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ