ಮೊಬೈಲ್ ಕಳೆದುಕೊಂಡ ಯುವತಿಗೆ ಲೈಂಗಿಕ ಕಿರುಕುಳ ಕೊಡಲೆತ್ನಿಸಿದ ಕೀಚಕನಿಗೆ ಬಿತ್ತು ಗೂಸಾ


Updated:March 11, 2018, 8:45 PM IST
ಮೊಬೈಲ್ ಕಳೆದುಕೊಂಡ ಯುವತಿಗೆ ಲೈಂಗಿಕ ಕಿರುಕುಳ ಕೊಡಲೆತ್ನಿಸಿದ ಕೀಚಕನಿಗೆ ಬಿತ್ತು ಗೂಸಾ
ಆರೋಪಿ ಚಿನ್ನರಾಜು
  • Share this:
- ಕಿರಣ್ ಕೆ.ಎನ್., ನ್ಯೂಸ್18 ಕನ್ನಡ

ಬೆಂಗಳೂರು(ಮಾ. 11): ಇಲ್ಲಿಯ ಶ್ರೀನಗರದ ಕಾಳಿದಾಸ ಲೇಔಟ್​ನಲ್ಲಿ ಸಾರ್ವಜನಿಕರು ಕಾಮುಕನೊಬ್ಬನಿಗೆ ಧರ್ಮದೇಟು ನೀಡಿದ ಘಟನೆ ನಿನ್ನೆ ನಡೆದಿರುವುದು ಬೆಳಕಿಗೆ ಬಂದಿದೆ. ಶನಿವಾರ ಬೆಳಗ್ಗೆ ಶ್ರೀನಗರ ನಿವಾಸಿ 30 ವರ್ಷದ ಗೃಹಿಣಿ ತಮ್ಮ ಮಕ್ಕಳನ್ನು ಶಾಲೆಗೆ ಕರೆದುಕೊಂಡು ಹೋಗುವ ವೇಳೆ ಮಾರ್ಗ ಮಧ್ಯೆ ಮೊಬೈಲ್ ಕಳೆದುಕೊಂಡಿರುತ್ತಾರೆ. ಆ ಮೊಬೈಲ್ ಪೋನ್ ಈ ಚಿನ್ನರಾಜು ಎಂಬ ಕಿರಾತನಕನ ಕೈಗೆ ಸಿಕ್ಕಿದೆ. ನಂತ್ರ ದಿನವೀಡಿ ಮಬೈಲ್ ಗೆ ಕರೆ ಮಾಡಿ ಪತ್ತೆ ಹಚ್ಚಲು ಗೃಹಿಣಿ ಪ್ರಯತ್ನಿಸಿದ್ದಾರೆ. ಆದ್ರೆ ಆ ಮೊಬೈಲ್ ಸ್ವಿಚ್ ಆಫ್ ಆನ್ ಮಾಡಿಕೊಂಡು ಕರೆ ಸ್ವೀಕರಿಸದೇ ಸತಾಯಿಸಿದ ಆರೋಪಿ ಚಿನ್ನರಾಜು ಸಂಜೆ 5 ಗಂಟೆ ಸುಮಾರಿಗೆ ಕರೆ ಸ್ವೀಕರಿಸಿದ್ದಾನೆ. ಬಳಿಕ ಗೃಹಿಣಿಗೆ ರಾತ್ರಿ 8 ಗಂಟೆಗೆ ಶ್ರೀನಗರದ ಕಾಳಿದಾಸ ಸರ್ಕಲ್ ಬಳಿ ಒಬ್ಬಂಟಿಯಾಗಿ ಬಂದ್ರೆ ಮೊಬೈಲ್ ನೀಡುವುದಾಗಿ ಹೇಳಿದ್ದಾನೆ. ಮೊಬೈಲ್ ಪಡೆದುಕೊಳ್ಳಲು ಗೃಹಿಣಿ 8 ಗಂಟೆಗೆ ಸುಮಾರಿಗೆ ಬಂದು ಆತನನ್ನ ಕಂಡು ಮೊಬೈಲ್ ಹಿಂದಿರುಗಿಸುವಂತೆ ಕೇಳಿದ್ದಾಳೆ.

ಮೊದಲಿಗೆ  ಮೊಬೈಲ್ ನೀಡಲು ಹಣಕ್ಕೆ ಬೇಡಿಕೆ ಇಟ್ಟ ಕಿರಾತಕ ನಂತ್ರ ಆಕೆಯೊಂದಿಗೆ ಅಶ್ಲೀಲ ಪದಗಳನ್ನ ಪ್ರಯೋಗಿಸಿದ್ದಾನೆ. ತನ್ನೊಂದಿಗೆ ಬೈಕ್ ಏರಿ ಬಂದ್ರೆ ಮೊಬೈಲ್ ಕೊಡುವುದಾಗಿ ಕ್ಯಾತೆ ತೆಗೆದು ಕಿರುಕುಳ ನೀಡಿ ಪೀಡಿಸಿದ್ದಾನೆ. ಚಿನ್ನರಾಜ್​ನ ಕಿರುಕುಳ ತಡೆಯಲಾರದೆ ಸಂತ್ರಸ್ತ ಯುವತಿ ಅಕ್ಕಪಕ್ಕದಲ್ಲಿ ನೆರೆದಿದ್ದ ಜನರನ್ನು ಸಹಾಯಕ್ಕೆ ಕರೆದಿದ್ದಾಳೆ. ಕೂಡಲೇ ಅಲ್ಲಿದ್ದ ಜನರು ಅಸಲಿ ವಿಚಾರ ತಿಳಿದು ಕಾಮುಕ ಚಿನ್ನರಾಜ್​ನನ್ನು ಹಿಡಿದು ಧರ್ಮದೇಟು ನೀಡಿದ್ದಾರೆ.

ನಂತರ ಹನುಮಂತನಗರ ಹೊಯ್ಸಳ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವಿಚಾರ ತಿಳಿದು ಸ್ಥಳಕ್ಕೆ ಬಂದ ಹನುಮಂತನಗರ ಪೊಲೀಸರು ಆರೋಪಿ ಚಿನ್ನರಾಜ್​ನನ್ನ ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದಿದ್ದಾರೆ.
First published:March 11, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading