ನಮ್ಮ ದನ ಕಸಾಯಿಖಾನೆಗೆ ಕಳುಸುವಂಗ ಮಾಡಬೇಡ್ರಿ; ಗಣಿನಾಡಿನಲ್ಲಿ ಗೋಶಾಲೆ ಮುಚ್ಚುವ ಆತಂಕ, ರೈತರ ಅಳಲು

ಸುಮಾರು ಮೂರು ಸಾವಿರಕ್ಕೂ ಹೆಚ್ಚು ಜಾನುವಾರುಗಳು ಈ ಗೋಶಾಲೆಯಲ್ಲಿದ್ದು ಇಲ್ಲಿಗೆ ತಂದ ರೈತರದ್ದು ಒಬ್ಬೊಬ್ಬರದು ಒಂದೊಂದು ಕರುಣಾಜನಕ ಕತೆ. ಇದೇ ತಿಂಗಳು ಗೋಶಾಲೆ ಬಂದ್ ಮಾಡುವುದಾಗಿ ಸರಕಾರ ಸೂಚಿಸಿದೆ.

G Hareeshkumar | news18-kannada
Updated:September 17, 2019, 8:15 AM IST
ನಮ್ಮ ದನ ಕಸಾಯಿಖಾನೆಗೆ ಕಳುಸುವಂಗ ಮಾಡಬೇಡ್ರಿ; ಗಣಿನಾಡಿನಲ್ಲಿ ಗೋಶಾಲೆ ಮುಚ್ಚುವ ಆತಂಕ, ರೈತರ ಅಳಲು
ಗೋವುಗಳಿಗೆ ಮೇವು ಹಾಕುತ್ತಿರುವ ರೈತರು
  • Share this:
ಬಳ್ಳಾರಿ (ಸೆ.17): ಉತ್ತರ ಕರ್ನಾಟಕದಲ್ಲಿ ಒಂದು ಕಡೆ ಭಾರೀ ಪ್ರವಾಹ ಮತ್ತೊಂದೆಡೆ ಭೀಕರ ಬರಗಾಲ. ಮಳೆಯಿಲ್ಲದೆ ರೈತರ ಪರಿಸ್ಥಿತಿ ಅಯೋಮಯವಾಗಿದೆ. ಇನ್ನು ಬಾಯಿ ಇರುವ ಜಾನುವಾರಗಳ ಪರಿಸ್ಥಿತಿ ದೇವರಿಗೆ ಪ್ರೀತಿ. ಈ ಕಾರಣಕ್ಕೆ ಬಳ್ಳಾರಿ ಜಿಲ್ಲೆಯಲ್ಲಿ ನಿರ್ಮಿಸಿದ ಗೋಶಾಲೆಗಳನ್ನು ಸರ್ಕಾರ ಇದೇ ತಿಂಗಳು ಮುಚ್ಚುತ್ತಿದೆ. ಒಂದು ವೇಳೆ ಇದೇ ರೀತಿ ಮೇವಿಲ್ಲದೇ ಸಾವಿರಾರು ಜಾನುವಾರುಗಳು ಕಸಾಯಿಖಾನೆಗೆ ಸರ್ಕಾರವೇ ಕೊಟ್ಟುಬಿಡಲಿ ಎಂದು ನೂರಾರು ರೈತರು ಕಣ್ಣೀರು ಹಾಕುತ್ತಿದ್ದಾರೆ.

ಗಣಿನಾಡು ಬಳ್ಳಾರಿ ಜಿಲ್ಲೆಯಲ್ಲಿ ಒಂದು ಕಡೆ ತುಂಗಭದ್ರಾ ಜಲಾಶಯ ಮೈದುಂಬಿ ಹರಿಯುತ್ತಿದೆ. ಮತ್ತೊಂದೆಡೆ ಮಳೆಯಾಶ್ರಿತ ಪ್ರದೇಶಗಳಲ್ಲಿ ಮಳೆ ಇಲ್ಲದೇ ಭೀಕರ ಬರಗಾಲ ಪರಿಸ್ಥಿತಿಯನ್ನ ಎದುರಾಗಿದೆ. ಅದ್ರಲ್ಲೂ ಕೂಡ್ಲಿಗಿ ತಾಲೂಕು ಯಾವುದೇ ನೀರಾವರಿ ಇಲ್ಲದ ತಾಲೂಕು. ಮಳೆಯನ್ನೇ ನಂಬಿದ ಈ ತಾಲೂಕಿನಲ್ಲಿ ಭೀಕರ ಬರಗಾಲ ಆವರಿಸಿದೆ. ಆರಂಭದಲ್ಲಿ ಬಂದ ಮಳೆಗೆ ಬಿತ್ತನೆ ಮಾಡಿದ್ದು ಬಿಟ್ರೆ ಇದುವರೆಗೆ ಹೇಳಿಕೊಳ್ಳುವಂತಹ ಮಳೆಯಾಗಿಲ್ಲ. ಹೀಗಾಗಿ ಬೆಳೆಗಳು ಒಣಗುತ್ತಿವೆ.

ಭೀಕರ ಬರಗಾಲ ಇರೋದ್ರಿಂದ ಜಿಲ್ಲಾಡಳಿತ ಗಂಡುಬೊಮ್ಮನಹಳ್ಳಿ, ಪೂಜಾರಹಳ್ಳಿಯಲ್ಲಿ ಗೋಶಾಲೆಯನ್ನು ಆರಂಭಿಸಿದೆ. ಗುಡೇಕೋಟೆ ಹೋಬಳಿ, ಖಾನಹೊಸಳ್ಳಿ ಹೋಬಳಿ ಸೇರಿದಂತೆ ಮೂರ್ನಾಲ್ಕು ಹೋಬಳಿ ಸುಮಾರು 20ಕ್ಕೂ ಹೆಚ್ಚು ಗ್ರಾಮಗಳ ಜಾನುವಾರುಗಳಿಗಾಗಿ ಗಂಡುಬೊಮ್ಮಮಹಳ್ಳಿ ಗೋಶಾಲೆ ಆರಂಭವಾಗಿದೆ. ಸರಿ ಸುಮಾರು ಮೂರು ಸಾವಿರಕ್ಕೂ ಹೆಚ್ಚು ಜಾನುವಾರುಗಳು ಈ ಗೋಶಾಲೆಯಲ್ಲಿದ್ದು ಇಲ್ಲಿಗೆ ತಂದ ರೈತರದ್ದು ಒಬ್ಬೊಬ್ಬರದು ಒಂದೊಂದು ಕರುಣಾಜನಕ ಕತೆ. ಇದೇ ತಿಂಗಳು ಗೋಶಾಲೆ ಬಂದ್ ಮಾಡುವುದಾಗಿ ಸರಕಾರ ಸೂಚಿಸಿದೆ. ಅದೇ ರೀತಿ ಬಂದ್ ಮಾಡಿದ್ದೇ ಆದಲ್ಲಿ ಮೇವಿಲ್ಲದೆ ರೈತರು ತಮ್ಮ ಜಾನುವಾರುಗಳು ಸಾಯುವುದನ್ನು ನೋಡದೇ ಅನಿವಾರ್ಯವಾಗಿ ಕಸಾಯಿಖಾನೆಗೆ ಕೊಡಬೇಕಾಗುತ್ತದೆ ಎಂದು ನೊಂದ ರೈತರು ಕಣ್ಣೀರು ಹಾಕುತ್ತಾರೆ‌.

ಇದನ್ನೂ ಓದಿ : ವಿಶ್ವಪ್ರಸಿದ್ಧ ಹಂಪಿ ಉತ್ಸವಕ್ಕೆ ಮತ್ತೆ ನಿರ್ಲಕ್ಷ್ಯ; ಮೈಸೂರು ದಸರಾಕ್ಕಿರುವ ಉತ್ಸಾಹ ಹಂಪಿ ಉತ್ಸವಕ್ಕೇಕಿಲ್ಲ

ಮಳೆಗಾಲದಲ್ಲಿಯೂ ಮಳೆಯೂ ಇಲ್ಲದೆ ರೈತರು ಬೆಳೆದ ಬೆಳೆಗಳು ಒಣಗಿ ಹೋಗುತ್ತಿವೆ. ಹೀಗಾಗಿ ಬ್ಯಾಂಕ್ ಸೇರಿದಂತೆ ವಿವಿಧೆಡೆ ಸಾಲ ಮಾಡಿ ಬಿತ್ತನೆ ಮಾಡಿದ್ದ ರೈತರು ಬೆಳೆಗಳಿಲ್ಲದೇ ಕಂಗಲಾಗಿದ್ದಾರೆ. ಈ ನಡುವೆ ಜಾನುವಾರುಗಳಿಗೂ ಮೇವು ಇಲ್ಲ. ಇಂತಹ ಪರಿಸ್ಥಿತಿಯಲ್ಲಿ ಜಿಲ್ಲಾಡಳಿತ ಆರಂಭಿಸಿದ್ದ ಗೋಶಾಲೆಯೇ ಸಾವಿರಾರು ಜಾನುವಾರುಗಳಿಗೆ ಆಸರೆಯಾಗಿತ್ತು. ಇದೀಗ ಜಿಲ್ಲಾಡಳಿತ ಏಕಾಏಕಿಯಾಗಿ ಮಳೆಗಾಲವಿದೆ ಎನ್ನುವ ಕಾರಣಕ್ಕೆ ಗೋಶಾಲೆ ಮುಚ್ಚಲು ತೀರ್ಮಾನ ಮಾಡಿದೆ. ಆದರೆ ಇದು ಮೇವಿಲ್ಲದೆ ಜಾನುವಾರುಗಳಿಗೆ ಸಂಕಷ್ಟ ಎದುರಾಗಿದೆ. ಜಾನುವಾರುಗಳನ್ನೇ ನಂಬಿಕೊಂಡು ಬದುಕುತ್ತಿರುವ ಇಲ್ಲಿನ ರೈತರು ಜಾನುವಾರುಗಳನ್ನ ಮಾರಾಟ ಮಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಸರ್ಕಾರ ಗೋಶಾಲೆಯನ್ನ ಮುಚ್ಚದೇ ಮುಂದುವರಿಸಬೇಕು, ಇಲ್ಲದಿದ್ರೆ ನಾವು ದನಕರುಗಳನ್ನು ಕಟ್ಟಿಕೊಂಡು ಮೇವಿಗಾಗಿ ಎಲ್ಲಿಗೆ ಹೋಗಬೇಕು ಎಂದು ರೈತ ಮಹಿಳೆ ಸರ್ಕಾರವನ್ನು ಪ್ರಶ್ನಿಸುತ್ತಿದ್ದಾರೆ.

ಕಳೆದ ಮೂರು ವರ್ಷಗಳಿಂದ ಬರಗಾಲದಿಂದ ತತ್ತರಿಸಿರುವ ಬಳ್ಳಾರಿ ಜಿಲ್ಲೆಯಲ್ಲಿ ಕೂಡ್ಲಿಗಿ ತಾಲೂಕಿನಲ್ಲಿ ಈಗಲೂ ಬರಗಾಲವಿದೆ. ಸರ್ಕಾರವೂ ಘೋಷಣೆ ಮಾಡಿದೆ. ಈ ಸಂದರ್ಭದಲ್ಲಿ ಸಾವಿರಾರು ಜಾನುವಾರುಗಳನ್ನು ಗೋಶಾಲೆಯಲ್ಲಿ ಉಳಿಸಿ ಇದೀಗ ಬರಗಾಲವಿದ್ದರೂ ಹೊರದಬ್ಬುವುದು ಬೇಡ. ನೀವೇ ಜಾನುವಾರು ತೆಗೆದುಕೊಂಡುಬಿಡಿ ಎಂದು ಸರ್ಕಾರಕ್ಕೆ ರೈತರು ಕಣ್ಣೀರು ಹಾಕುತ್ತಿದ್ದಾರೆ.

ವರದಿ : ಶರಣು ಹಂಪಿ
First published: September 17, 2019, 8:03 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading