ಬೆಂಗಳೂರು(ಮಾ.31) : ಕೊರೋನಾ ವೈರಸ್ ಲಾಕ್ ಡೌನ್ ದಿಂದ ರಾಜ್ಯದ ಕನ್ನಡಿಗರನ್ನು ಕಾರ್ಮಿಕರನ್ನು ರಕ್ಷಣೆ ಮಾಡುವ ನಿಟ್ಟಿನಲ್ಲಿ ರಾಜ್ಯ ಸರಕಾರ ಹಾಗೂ ಕಾರ್ಮಿಕ ಇಲಾಖೆ ಹಲವಾರು ಕ್ರಮಗಳನ್ನು ಕೈಗೊಂಡಿದೆ.
ಗೋವಾ ರಾಜ್ಯದಲ್ಲಿ ಸಾವಿರಾರು ಕಾರ್ಮಿಕರು ಹಲವಾರು ವರ್ಷಗಳಿಂದ ಕಟ್ಟಡ ಕಾರ್ಮಿಕರಾಗಿ ಕೆಲಸ ನಿರ್ವಹಿಸುತ್ತಿದ್ದು ಲಾಕ್ ಡೌನ್ ದಿಂದ ತೊಂದರೆಯಲ್ಲಿರುತ್ತಾರೆ. ಈ ಬಗ್ಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನವರ ನಿರ್ದೇಶನದಂತೆ ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಅವರು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರ ಜೊತೆ ದೂರವಾಣಿ ಮೂಲಕ ಸಮಸ್ಯೆ ಬಗ್ಗೆ ಚರ್ಚಿಸಿದರು.
ಜೊತೆಗೆ ಅವಶ್ಯಕತೆ ಇದಲ್ಲಿ ಗೋವಾಕ್ಕೆ ಬಂದು ಕಾರ್ಮಿಕ ಬಗ್ಗೆ ಹಾಗೂ ಕನ್ನಡಿಗರ ಕಾಳಜಿ ಬಗ್ಗೆ ಚರ್ಚಿಸುವುದಕ್ಕೆ ಸಿದ್ದವಾಗಿರುವುದಾಗಿ ಸಚಿವರು ಹೇಳಿದರು.
ಗೋವಾ ಮುಖ್ಯಮಂತ್ರಿ ಅವರು ಈಗಾಗಲೇ ಕನ್ನಡಿಗರ ಹಾಗೂ ಕಾರ್ಮಿಕರಿಗೆ ಎಲ್ಲಾ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಸಚಿವರಿಗೆ ತಿಳಿಸಿದರು.
ಇದನ್ನೂ ಓದಿ :
ಗೋವಾ ಸರ್ಕಾರದಿಂದ ಕನ್ನಡಿಗರಿಗೆ ಹಳಸಿದ ಅನ್ನ; ನಮ್ಮದು ನಾಯಿ ಪಾಡು ಎಂದ ಕಾರ್ಮಿಕರು
ಗೋವಾದ ಕನ್ನಡಿಗರ ಹಾಗೂ ಕಾರ್ಮಿಕರ ಧೈರ್ಯ ತುಂಬುವ ನಿಟ್ಟಿನಲ್ಲಿ ಸಚಿವರಿಗೆ ವಿಡಿಯೋ ಮೂಲಕವಾಗಿ ಸಂದೇಶ ರವಾನಿಸುವಂತೆ ಗೋವಾ ಮುಖ್ಯಮಂತ್ರಿಗಳು ತಿಳಿಸಿದರು ಅದರಂತೆ ಸಚಿವರು ಸಂದೇಶವನ್ನು ಗೋವಾ ಸರಕಾರಕ್ಕೆ ರವಾನಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ