ಹೊರ ರಾಜ್ಯದ ಕಾರ್ಮಿಕರ ದಾಖಲೆ ಪರಿಶೀಲನೆ; ಕಾರಣ ಕೇಳಿ ಕೊಡಗು ಎಸ್​ಪಿಗೆ ಕಾರ್ಮಿಕ ಇಲಾಖೆ ನೋಟಿಸ್​​

ದೇಶದೆಲ್ಲೆಡೆ ಎನ್​​ಆರ್ಸಿ​ ಹಾಗೂ ಪೌರತ್ವ ಕಾಯ್ದೆ ಕಿಚ್ಚು ಹಬ್ಬಿದ್ದರ ನಡುವೆ, ಕೊಡಗಿನಲ್ಲಿ ಪೊಲೀಸರು ಹೊರ ರಾಜ್ಯದವರ ದಾಖಲೆ ಪರಿಶೀಲನೆಗೆ ಮುಂದಾಗಿದ್ದರು. ಇದು ಕೂಡ ಎನ್​ಸಿಆರ್​ ಸಮೀಕ್ಷೆ ಎಂಬ ಅನುಮಾನ ವ್ಯಕ್ತವಾಗಿತ್ತು

Seema.R | news18-kannada
Updated:January 26, 2020, 5:29 PM IST
ಹೊರ ರಾಜ್ಯದ ಕಾರ್ಮಿಕರ ದಾಖಲೆ ಪರಿಶೀಲನೆ; ಕಾರಣ ಕೇಳಿ ಕೊಡಗು ಎಸ್​ಪಿಗೆ ಕಾರ್ಮಿಕ ಇಲಾಖೆ ನೋಟಿಸ್​​
ದಾಖಲೆ ಪರಿಶೀಲನೆ ಕಾರ್ಯ
  • Share this:
ಕೊಡಗು (ಜ.26): ಜಿಲ್ಲೆಯಲ್ಲಿ ಏಕಾಏಕಿ ಕಾಫಿ ತೋಟ ಹಾಗೂ ಕಟ್ಟಡ ನಿರ್ಮಾಣದಲ್ಲಿ ತೊಡಗಿದ್ದ ಹೊರ ರಾಜ್ಯದವರ ದಾಖಲೆ ಪರೀಶಲನೆ ನಡೆಸಿದ ಜಿಲ್ಲಾ ಪೊಲೀಸ್​ ಇಲಾಖೆಯ ನಡೆ ಕುರಿತು ಕಾರಣ ಕೇಳಿ ಕಾರ್ಮಿಕ ಇಲಾಖೆ ಕಾರಣ ಕೇಳಿ ನೋಟಿಸ್​ ಜಾರಿ ಮಾಡಿದೆ. 

ದೇಶದೆಲ್ಲೆಡೆ ಎನ್​​ಆರ್​ಸಿ​ ಹಾಗೂ ಪೌರತ್ವ ಕಾಯ್ದೆ ಕಿಚ್ಚು ಹಬ್ಬಿದ್ದರ ನಡುವೆ, ಕೊಡಗಿನಲ್ಲಿ ಪೊಲೀಸರು ಹೊರ ರಾಜ್ಯದವರ ದಾಖಲೆ ಪರಿಶೀಲನೆಗೆ ಮುಂದಾಗಿದ್ದರು. ಇದು ಕೂಡ ಎನ್​ಸಿಆರ್​ ಸಮೀಕ್ಷೆ ಎಂಬ ಅನುಮಾನ ವ್ಯಕ್ತವಾಗಿತ್ತು. ಈ ನಡೆಯನ್ನು ಸಮರ್ಥಿಸಿಕೊಂಡ ಜಿಲ್ಲಾ ಎಸ್​ಪಿ ಸುಮನ್​ ಡಿ ಪನ್ನೇಕರ್​ ಜಿಲ್ಲೆಯ ರಕ್ಷಣೆ ಮತ್ತು ಹಿತದೃಷ್ಟಿಯಿಂದ ಈ ಕಾರ್ಯಕ್ಕೆ ಮುಂದಾಗಲಾಗಿದೆ. ಇದರಲ್ಲಿ ಬೇರೆ ಯಾವುದೇ ಉದ್ದೇಶವಿಲ್ಲ ಎಂದು ಸಮಾಜಾಯಿಷಿ ನೀಡಿದ್ದರು.ಅಲ್ಲದೇ ಇದನ್ನು ತಪ್ಪಾಗಿ ಅರ್ಥೈಸುವ ಪ್ರಯತ್ನ ನಡೆಸಲಾಗಿದೆ. ಜಿಲ್ಲೆಯಲ್ಲಿ ಅಧಿಕ ಸಂಖ್ಯೆಯ ಹೊರ ರಾಜ್ಯದ ಕಾರ್ಮಿಕರಿದ್ದು, ಸಾರ್ವಜನಿಕರಲ್ಲಿ ಅವರ ಬಗ್ಗೆ ಕೆಲವು ಊಹಾಪೋಹಾಗಳು ಹರಿದಾಡುತ್ತೀವೆ. ಈ ಹಿನ್ನೆಲೆ ಇವನ್ನೆಲ್ಲಾ ದೂರ ಮಾಡುವ ಉದ್ದೇಶದಿಂದ ಈ ದಾಖಲೆ ಪರಿಶೀಲನೆ ಕೆಲಸ ಮಾಡಲಾಗುತ್ತಿದೆ ಎಂದಿದ್ದರು.

ಇದನ್ನು ಓದಿ: ಮತ್ತೆ ವಕೀಲಿಕೆ ವೃತ್ತಿ ಇಲ್ಲ, ನಳಿನಿ ಪರ ವಕಾಲತ್ತು ವಹಿಸಲ್ಲ; ಸಿದ್ದರಾಮಯ್ಯ

  • ಯಾವ ಕಾನೂನಿನ ಅಡಿಯಲ್ಲಿ ಕಾರ್ಮಿಕ ಇಲಾಖೆ ದಾಖಲೆಗಳನ್ನು ನಡೆಸಲಾಗುತ್ತಿದೆ.
  • ಕಳೆದ ವರ್ಷವೂ ಈ ದಾಖಲೆ ಪರಿಶೀಲನೆ ನಡೆದಿತ್ತಾ. ಇದೇ ರೀತಿ ದಾಖಲೆ ಪರಿಶೀಲನೆ ಕಾರ್ಯ ನಡೆದಿತ್ತಾ ಅಥವಾ ಬೇರೆ ರೀತಿಯಲ್ಲಿ ಪರಿಶೀಲನಾ ಕಾರ್ಯ ನಡೆದಿತ್ತಾ?

  • ಕಾರ್ಮಿಕರಿಂದ ಏನಾದರೂ ದೂರು ಇದೆಯಾ? ಹಾಗಿದ್ದಲ್ಲಿ ದೂರಿನ ಪ್ರತಿ ಎಲ್ಲಿ?

  • ದಾಖಲೆ ಪರಿಶೀಲನೆ ದಿನ ಅವರಿಗೆ ದಿನಗೂಲಿಯನ್ನು ಪರಿಹಾರವಾಗಿ ನೀಡಲಾಯಿತೆ? ಎಂಬ ಪ್ರಶ್ನೆಗಳಿಗೆ ಕಾರಣ ಕೇಳಿ ನೋಟಿಸ್​ ನೀಡಲಾಗಿದೆ.


ಆಯಕ್ತರ ನೋಟಿಸ್​ಗೆ ಎಸ್​ಪಿ ಪನ್ನೇಕರ್​ ಸ್ಪಷ್ಟನೆ ನೀಡಿದ್ದು, ಜಿಲ್ಲೆಯ ಭದ್ರತೆ ದೃಷ್ಟಿಯಿಂದ ದಾಖಲೆ ಪರಿಶೀಲಿಸಿದ್ದೇವೆ ಅಂತಾ ಮಾಹಿತಿ ರವಾನಿಸಿದ್ದಾರೆ.
First published:January 26, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ