ಆರ್.ಆರ್. ನಗರ ಉಪಚುನಾವಣೆ: ಡಿಕೆ ರವಿ ಹೆಂಡತಿ ಕುಸುಮಾ ಸ್ಪರ್ಧೆ?

ವರ್ಷಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದ ಐಎಎಸ್ ಅಧಿಕಾರಿ ಡಿಕೆ ರವಿ ಅವರ ಪತ್ನಿ ಕುಸುಮಾ ಅವರು ಆರ್.ಆರ್. ನಗರ ಕ್ಷೇತ್ರದಲ್ಲಿ ಜೆಡಿಎಸ್ ಅಥವಾ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸುವ ಸಾಧ್ಯತೆ ಇದೆ ಎಂದು ಕೆಲ ಮೂಲಗಳು ಹೇಳುತ್ತಿವೆ.

ಡಿಕೆ ಸುರೇಶ್

ಡಿಕೆ ಸುರೇಶ್

  • Share this:
ಬೆಂಗಳೂರು(ಅ. 01): ರಾಜ್ಯದಲ್ಲಿ ಉಪ ಚುನಾವಣೆ ರಂಗೇರುತ್ತಿದೆ. ಎರಡು ಕ್ಷೇತ್ರಗಳ ಉಪ ದಿನಾಂಕ ಘೋಷಣೆ ನಂತರ ಮೂರು ರಾಜಕೀಯ ಪಕ್ಷಗಳ ಚಟುವಟಿಕೆಗಳು ಬಿರುಸುಗೊಂಡಿದೆ. ಅದರಲ್ಲೂ  ತೀವ್ರ ಕುತೂಹಲ ಕೆರಳಿಸಿರೊದು ಆರ್.ಆರ್. ನಗರ ವಿಧಾನಸಭಾ ಕ್ಷೇತ್ರ. ಈಗ ನಡೆಯುತ್ತಿರುವ ಉಪಚುನಾವಣೆ ಗೆ ಮೂರುಗಳಿಂದ ಅಭ್ಯರ್ಥಿ ಯಾರು ಅನ್ನೋದು ಯಕ್ಷ ಪ್ರಶ್ನೆ ಆಗಿದೆ. ಇಲ್ಲಿ ಸಾಕಷ್ಟು ಚರ್ಚೆ ಆಗುತ್ತಿರುವುದು ಐಎಎಸ್ ಅಧಿಕಾರಿಯಾಗಿದ್ದ ದಿವಂಗತ ಡಿ.ಕೆ. ರವಿ ಅವರ ಪತ್ನಿ ಕುಸುಮಾ ಸ್ಪರ್ಧೆ ವಿಚಾರ. ಕುಸುಮಾ ಸ್ಪರ್ಧೆ ಖಚಿತ ಎಂಬ ಮಾತು ಕೇಳಿಬರುತ್ತಿದೆ. ಆದರೆ ಅವರು ಸ್ಪರ್ಧಿಸುವುದು ಕಾಂಗ್ರೆಸ್​ನಲ್ಲಾ ಅಥವಾ ಜೆಡಿಎಸ್​ನಲ್ಲಾ ಎಂಬುದೇ ಈಗ ಯಕ್ಷ ಪ್ರಶ್ನೆ.

ಕುಸುಮಾ ಕಣಕ್ಕಿಳಿಸಲು ಕೈ ನಾಯಕರ ಕೂಡ ಚರ್ಚೆ ಮಾಡಿದ್ದಾರೆ. ಆದರೆ ಕುಸುಮಾರನ್ನ ಜೆಡಿಎಸ್​ನಿಂದ  ಸ್ಪರ್ಧೆ ಮಾಡಿಸಬೇಕು ಅನ್ನೋದು ತಂದೆ  ಹನುಮಂತರಾಯಪ್ಪ ರವರ ಆಸೆ ಎನ್ನಲಾಗಿದೆ. ನಿನ್ನೆ ಜೆಡಿಎಸ್ ಸಭೆಯಲ್ಲಿ ಕುಸುಮಾ ಅವರಿಗೆ ಟಿಕೆಟ್ ನೀಡುವ ಬಗ್ಗೆ ಚರ್ಚೆ ಕೂಡ ನಡೆದಿರುವುದು ತಿಳಿದುಬಂದಿದೆ. ಈ ವಿಚಾರಕ್ಕೆ ಡಿಕೆ ಶಿವಕುಮಾರ್ ಮತ್ತು ಡಿಕೆ ಸುರೇಶ್ ಜೊತೆಯೂ ಹನುಮಂತರಾಯಪ್ಪ ಚರ್ಚೆ ಮಾಡಿದ್ದರೆನ್ನಲಾಗಿದೆ.‌ ಕುಸುಮಾ ಅವರು ಜೆಡಿಎಸ್​ನಿಂದ ಸ್ಪರ್ಧಿಸಿದರೆ ಅವರಿಗೆ ಬೆಂಬಲ ನೀಡುವಂತೆ ಕಾಂಗ್ರೆಸ್ ನಾಯಕರಿಗೆ ಹನುಮಂತರಾಯಪ್ಪ ಮಾಡಿಕೊಂಡಿರುವ ಬಗ್ಗೆ ಮಾತುಗಳು ಕೇಳಿಬರುತ್ತಿವೆ.

ಇದನ್ನೂ ಓದಿ: ಎಪಿಎಂಸಿ, ಭೂ ಸುಧಾರಣೆ ತಿದ್ದುಪಡಿ ವಿಧೇಯಕಕ್ಕೆ ಮತ್ತೆ ಸುಗ್ರೀವಾಜ್ಞೆ ತರಲು ಸಂಪುಟ ಸಭೆ ನಿರ್ಧಾರ

ಆದರೆ, ಹನುಮಂತರಾಯಪ್ಪನವರ ಮನವಿಗೆ ಡಿಕೆ ಸಹೋದರರು ಸಂಪೂರ್ಣ ಪೂರಕವಾಗಿ ಸ್ಪಂದಿಸಿಲ್ಲ. ನಾವು ಅಭ್ಯರ್ಥಿ ಹಾಕದೆ ಹೋದರೆ ಸರಿಯಾಗಲ್ಲ. ನಾವು ಅಭ್ಯರ್ಥಿಯನ್ನ ಹಾಕಲೇಬೇಕಾಗುತ್ತದೆ. ಕಾಂಗ್ರೆಸ್​ನಿಂದ ನಿಲ್ಲುವ ಆಸೆಯಿದ್ದರೆ ಪ್ರಯತ್ನಿಸೋಣ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆಂದು ಮೂಲಗಳು ಮಾಹಿತಿ ನೀಡಿವೆ. ಇದೇ ವೇಳೆ, ಬೆಂಗಳೂರಿನ ವಿಜಯನಗರದಲ್ಲಿರುವ ಆದಿ ಚುಂಚನಗಿರಿ ಮಠಕ್ಕೆ ಭೇಟಿ ನೀಡಿದ ದಿವಂಗತ ಡಿ ಕೆ ರವಿ ಪತ್ನಿ ಕುಸುಮಾ ಅವರು, ನಿರ್ಮಲಾನಂದ ಶ್ರೀಗಳನ್ನ ಭೇಟಿ ಮಾಡಿ ಆಶೀರ್ವಾದ ಪಡೆದುಕೊಂಡಿದ್ದಾರೆ.

ಕಾಂಗ್ರೆಸ್ ಪಕ್ಷದಲ್ಲಿ ಆರ್.ಆರ್. ನಗರ ಕ್ಷೇತ್ರದ ಟಿಕೆಟ್​ಗೆ ಸಾಕಷ್ಟು ಪೈಪೋಟಿಯಂತೂ ಇದೆ. ಮಾಗಡಿ ಮಾಜಿ ಶಾಸಕ ಬಾಲಕೃಷ್ಣ, ರಕ್ಷಾ ರಾಮಯ್ಯ, ಕೃಷ್ಣಮೂರ್ತಿ ಮೊದಲಾದವರ ಹೆಸರುಗಳು ಕೇಳಿಬರುತ್ತಿವೆ. ಇನ್ನು, ಡಿಕೆ ರವಿ ಹೆಂಡತಿ ಕುಸುಮಾ ಸ್ಪರ್ಧೆ ಬಗ್ಗೆ ಡಿಕೆ ಸುರೇಶ್ ಅವರನ್ನ ಮಾಧ್ಯಮಗಳು ಕೇಳಿದಾಗ, ಅವರು ತಮಗೆ ಇದರ ಬಗ್ಗೆ ಹೆಚ್ಚು ಮಾಹಿತಿ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: ಉಪ ಚುನಾವಣೆಯಲ್ಲಿ ಮೈತ್ರಿಯ ಪ್ರಶ್ನೆಯೇ ಇಲ್ಲ; ಹೆಚ್​.ಡಿ. ಕುಮಾರಸ್ವಾಮಿ ಸ್ಪಷ್ಟನೆ

ಮುನಿರತ್ನ ಅವರು ಬಿಜೆಪಿ ಟಿಕೆಟ್ ಸಿಗದಿದ್ದರೆ ಕಾಂಗ್ರೆಸ್ ಪಕ್ಷ ಸೇರಿ ಸ್ಪರ್ಧಿಸಬಹುದು ಎಂಬ ವದಂತಿಗಳೂ ಹರಿದಾಡುತ್ತಿವೆ. ಈ ವಿಚಾರದ ಬಗ್ಗೆ ಮಾತನಾಡಿದ ಡಿಕೆ ಸುರೇಶ್, ಮುನಿರತ್ನಗೆ ಟಿಕೆಟ್ ಸಿಗಲ್ಲ ಎಂದು ನಾನು ಹೇಳಲು ಸಾಧ್ಯವಿಲ್ಲ. ಅವರು ರಾಜಕೀಯವಾಗಿ ತನಗೆ ಶತ್ರುವಾದರೂ ವೈಯಕ್ತಿಕವಾಗಿ ಈಗಲೂ ಮಿತ್ರರೇ. ಅವರು ಕಾಂಗ್ರೆಸ್​ಗೆ ವಾಪಸ್ ಬರಲು ಬಯಸಿದರೆ ಸೇರಿಸಿಕೊಳ್ಳಬೇಕಾ ಬೇಡವಾ ಎಂಬುದನ್ನು ಪಕ್ಷ ತೀರ್ಮಾನ ಮಾಡುತ್ತದೆ ಎಂದು ಹೇಳಿದ್ದಾರೆ.

ಆರ್.ಆರ್. ನಗರ ಮತ್ತು ಶಿರಾ ವಿಧಾನಸಭಾ ಕ್ಷೇತ್ರಗಳಿಗೆ ನ. 3ರಂದು ಉಪಚುನಾವಣೆ ನಡೆಯಲಿದೆ. ನ. 10ಕ್ಕೆ ಫಲಿತಾಂಶ ಪ್ರಕಟವಾಗುತ್ತದೆ. ಆರ್.ಆರ್. ನಗರ ಕ್ಷೇತ್ರದ ಶಾಸಕರಾಗಿದ್ದ ಮುನಿರತ್ನ ಅವರು ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿ ಶಾಸಕ ಸ್ಥಾನಕ್ಕೆ ಅನರ್ಹಗೊಂಡ ಬಳಿಕ ಈ ಕ್ಷೇತ್ರ ತೆರವಾಗಿತ್ತು. ಕಳೆದ ವರ್ಷವೇ ಉಪಚುನಾವಣೆ ನಡೆಯಬೇಕಿತ್ತಾದರೂ ಚುನಾವಣಾ ಅಕ್ರಮ ಪ್ರಕರಣದಿಂದಾಗಿ ಸಾಧ್ಯವಾಗಿರಲಿಲ್ಲ. ಈಗ ಪ್ರಕರಣ ಹಿಂಪಡೆದಿರುವ ಕಾರಣ ಉಪಚುನಾವಣೆಗಿದ್ದ ಅಡ್ಡಿ ನಿವಾರಣೆಯಾಗಿತ್ತು.

ವರದಿ: ಸಂಜಯ್ ಎಂ ಹುಣಸನಹಳ್ಳಿ
Published by:Vijayasarthy SN
First published: